Kannada

Fact Check: ಶ್ರೀಲಂಕಾದ ಪ್ರವಾಹದ ಮಧ್ಯೆ ಆನೆ ಚಿರತೆಯನ್ನು ರಕ್ಷಿಸುತ್ತಿರುವ ಈ ವೀಡಿಯೊ AI- ರಚಿತವಾಗಿವೆ

ಶ್ರೀಲಂಕಾ ಪ್ರವಾದ ಮಧ್ಯೆ ಆನೆಯೊಂದು ಚಿರತೆಯನ್ನು ಪ್ರವಾಹದ ನೀರಿನಿಂದ ರಕ್ಷಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

Vinay Bhat

ದಿಟ್ವಾ ಚಂಡಮಾರುತವು ಶ್ರೀಲಂಕಾವನ್ನು ಅಪ್ಪಳಿಸಿದ್ದು, ಅನೇಕ ಪ್ರದೇಶಗಳು ತೀವ್ರ ಪ್ರವಾಹಕ್ಕೆ ಒಳಗಾಗಿವೆ. ವರದಿಗಳ ಪ್ರಕಾರ, 200 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ, ಸುಮಾರು 20,000 ಮನೆಗಳು ನಾಶವಾಗಿವೆ ಮತ್ತು ಸುಮಾರು 108,000 ಜನರನ್ನು ರಾಜ್ಯ-ನಿರ್ವಹಣೆಯ ತಾತ್ಕಾಲಿಕ ಆಶ್ರಯಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ. ಈ ಪರಿಸ್ಥಿತಿಯ ನಡುವೆ, ಆನೆಯೊಂದು ಚಿರತೆಯನ್ನು ಪ್ರವಾಹದ ನೀರಿನಿಂದ ರಕ್ಷಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಶ್ರೀ ಲಂಕಾ: ಪ್ರಾಣ ಉಳಿಸಿಕೊಳ್ಳಲು ಆನೆ ಮೇಲೆ ಕುಳಿತ ಚಿರತೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ಹರಿದಾಡುತ್ತಿದೆ ಎಂಬುದು ಕಂಡುಬಂದಿದೆ. ಇದು ನಿಜವಾದ ಘಟನೆ ಅಲ್ಲ ಬದಲಾಗಿ ಇದನ್ನು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. ಆಗ ಇದರಲ್ಲಿ ಹಲವಾರು ಅಸಂಗತತೆಗಳನ್ನು ಗಮನಿಸಿದ್ದೇವೆ. ಉದಾಹರಣೆಗೆ, ಚಿರತೆ ಆನೆಯ ಮೇಲೆ ಹತ್ತಲು ಪ್ರಯತ್ನಿಸಿದಾಗ, ಅದರ ದೇಹದ ಭಾಗಗಳು ಸ್ವಲ್ಪ ಸಮಯದವರೆಗೆ ಕಣ್ಮರೆಯಾಗುತ್ತವೆ ಮತ್ತು ಅದರ ಆಕಾರವು ಅಸ್ವಾಭಾವಿಕವಾಗಿ ಕಾಣುತ್ತದೆ. ಈ ದೃಶ್ಯ ವಿರೂಪಗಳು ವೀಡಿಯೊವು AI- ರಚಿತವಾಗಿದೆ ಎಂದು ಸ್ಪಷ್ಟವಾಗಿ ಸೂಚಿಸುತ್ತವೆ.

ವೀಡಿಯೊ AI- ರಚಿತವಾಗಿದೆಯೇ ಎಂದು ಪರಿಶೀಲಿಸಲು, ನಾವು ಕ್ಲಿಪ್‌ ಅನ್ನು ಹೈವ್‌ನ AI ಪತ್ತೆ ಉಪಕರಣದ ಮೂಲಕ ರನ್ ಮಾಡಿದ್ದೇವೆ, ಅದು ಅವುಗಳನ್ನು AI- ರಚಿತ ವಿಷಯವೆಂದು ಫ್ಲ್ಯಾಗ್ ಮಾಡಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಶ್ರೀಲಂಕಾದ ಪ್ರವಾಹದ ನಡುವೆ ಆನೆಯೊಂದು ಚಿರತೆಯನ್ನು ರಕ್ಷಿಸುತ್ತಿರುವುದನ್ನು ತೋರಿಸುವ ಈ ವೀಡಿಯೊಗಳು AI- ರಚಿತವಾಗಿವೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Massive protest in Iran under lights from phones? No, video is AI-generated

Fact Check: ഇറാനില്‍ ഇസ്ലാമിക ഭരണത്തിനെതിരെ ജനങ്ങള്‍ തെരുവില്‍? വീഡിയോയുടെ സത്യമറിയാം

Fact Check: கேரளாவில் ஆண், பெண்களுக்கு தனித்தனி கேபின் கொண்ட புதிய பேருந்து அறிமுகமா? உண்மை என்ன

Fact Check: ICE protest in US leads to arson, building set on fire? No, here are the facts

Fact Check: ಜಮ್ಮು-ಕಾಶ್ಮೀರದ ದೋಡಾ ಘಟನೆಯಲ್ಲಿ 10 ಸೈನಿಕರು ಹುತಾತ್ಮರಾಗಿದ್ದಾರೆಂದು ಹೇಳುವ ವೈರಲ್ ವೀಡಿಯೊ ನೇಪಾಳದ್ದು