Kannada

Fact Check: ಬಾಂಗ್ಲಾದೇಶದ ಮಸೀದಿಯಲ್ಲಿ ದೇಣಿಗೆ ತೆರೆಯುವ ವೀಡಿಯೊವನ್ನು ಪಂಜಾಬ್ ಪ್ರವಾಹಕ್ಕೆ ಮುಸ್ಲಿಮರು ದೇಣಿಗೆ ನೀಡುತ್ತಿದ್ದಾರೆಂದು ವೈರಲ್

ಮುಸ್ಲಿಂ ಉಡುಪಿನಲ್ಲಿರುವ ಜನರು ದೊಡ್ಡ ಚೀಲದಿಂದ ಹಣವನ್ನು ತೆಗೆದುಹಾಕುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಪಂಜಾಬ್ ಪ್ರವಾಹಕ್ಕೆ ದೇಣಿಗೆ ನೀಡಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

Vinay Bhat

ಆಗಸ್ಟ್ 2025 ರ ಆರಂಭದಿಂದ, ಪಂಜಾಬ್ ಮತ್ತು ಹರಿಯಾಣದಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ, ಪಂಜಾಬ್‌ನಲ್ಲಿ ಮಾತ್ರ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸದ್ಯ ಸೇನೆಯು ರಕ್ಷಣಾ ಕಾರ್ಯಗಳಲ್ಲಿ ತೊಡಗಿದೆ. ಇದಲ್ಲದೆ, ಎರಡೂ ರಾಜ್ಯಗಳಾದ್ಯಂತ ಕೃಷಿಭೂಮಿಗಳು ವ್ಯಾಪಕ ಹಾನಿಗೊಳಗಾಗಿವೆ. ಸೆಲೆಬ್ರಿಟಿಗಳು, ಧಾರ್ಮಿಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಸೇರಿದಂತೆ ಸಮಾಜದ ಅನೇಕ ವರ್ಗಗಳಿಂದ ಪರಿಹಾರ ಹರಿದು ಬರುತ್ತಿದೆ. ಇದರ ಮಧ್ಯೆ ಮುಸ್ಲಿಂ ಉಡುಪಿನಲ್ಲಿರುವ ಜನರು ದೊಡ್ಡ ಚೀಲದಿಂದ ಹಣವನ್ನು ತೆಗೆದುಹಾಕುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಪಂಜಾಬ್ ಪ್ರವಾಹಕ್ಕೆ ದೇಣಿಗೆ ನೀಡಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಂಜಾಬಿನಲ್ಲಿ ಅತಿಯಾದ ಪ್ರವಾಹ ಆಗಿರುವುದರಿಂದ ಹೆಲ್ಪಿಂಗ್ ಹ್ಯಾಂಡ್ಸ್’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಬಾಂಗ್ಲಾದೇಶದ ಕಿಶೋರ್‌ಗಂಜ್‌ನಲ್ಲಿರುವ ಪಾಗ್ಲಾ ಮಸೀದಿಗೆ ಬಂದ ದೇಣಿಗೆಯದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟುಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಆಗಸ್ಟ್ 30, 2025 ರಂದು Somoyer Konthosor ಎಂಬ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಇದೇ ವೈರಲ್ ವೀಡಿಯೊ ಕಂಡುಬಂದಿದೆ. ವೀಡಿಯೊದೊಂದಿಗೆ ನೀಡಲಾದ ಮಾಹಿತಿಯು ಇದು ಬಾಂಗ್ಲಾದೇಶದ ಪಾಗ್ಲಾ ಮಸೀದಿಯದ್ದಾಗಿದೆ ಎಂದು ಹೇಳುತ್ತದೆ.

ಈ ಮಾಹಿತಿಯೊಂದಿಗೆ ಹುಡುಕಿದಾಗ, ಅನೇಕ ಬಾಂಗ್ಲಾದೇಶದ ಸುದ್ದಿ ಸಂಸ್ಥೆಗಳ ವೀಡಿಯೊ ವರದಿಗಳಲ್ಲಿ ಈ ವೀಡಿಯೊ ಕಂಡುಬಂದಿದೆ. ಅವರ ಪ್ರಕಾರ, ಇದು ಕಿಶೋರ್‌ಗಂಜ್‌ನ ಪಾಗ್ಲಾ ಮಸೀದಿಯ ವೀಡಿಯೊವಾಗಿದ್ದು, ಚೀಲದಲ್ಲಿ ಕಂಡುಬರುವ ಹಣಗಳು ಮಸೀದಿಯಿಂದ ಪಡೆದ ದೇಣಿಗೆಗಳಾಗಿವೆ.

ಢಾಕಾ ಟ್ರಿಬ್ಯೂನ್ ವರದಿಯ ಪ್ರಕಾರ, ಆಗಸ್ಟ್ 30, 2025 ರಂದು ಪಗ್ಲಾ ಮಸೀದಿಯಲ್ಲಿ ದೇಣಿಗೆ ಹಣವನ್ನು ಎಣಿಸಲಾಯಿತು. ಒಟ್ಟು 13 ದೇಣಿಗೆ ಪೆಟ್ಟಿಗೆಗಳ ಎಣಿಕೆಯಲ್ಲಿ, ಮಸೀದಿಗೆ 12 ಕೋಟಿ ಟಕಾ (ಬಾಂಗ್ಲಾದೇಶದ ಕರೆನ್ಸಿ) ದೇಣಿಗೆಯಾಗಿ ಬಂದಿರುವುದು ಕಂಡುಬಂದಿದೆ. ನಗದು ಜೊತೆಗೆ, ಚಿನ್ನ, ಬೆಳ್ಳಿ ಮತ್ತು ವಿದೇಶಿ ಕರೆನ್ಸಿ ಕೂಡ ದೇಣಿಗೆಯಲ್ಲಿ ಕಂಡುಬಂದಿದೆ.

ಪಗ್ಲಾ ಮಸೀದಿಯಲ್ಲಿ ಪ್ರತಿ 4 ತಿಂಗಳಿಗೊಮ್ಮೆ ದೇಣಿಗೆ ಹಣವನ್ನು ಎಣಿಸಲಾಗುತ್ತದೆ. ಇದಕ್ಕೂ ಮೊದಲು ಈ ಎಣಿಕೆಯನ್ನು ಏಪ್ರಿಲ್ 2025 ರಲ್ಲಿ ಮಾಡಲಾಗಿತ್ತು, ಇದರಲ್ಲಿ ಮಸೀದಿಗೆ 9 ಕೋಟಿ 17 ಲಕ್ಷ ಟಕಾ ದೇಣಿಗೆಯಾಗಿ ಬಂದಿತು.

ಅದಾಗ್ಯೂ, ಪಂಜಾಬ್‌ನಲ್ಲಿನ ಪ್ರವಾಹ ಸಂದರ್ಭದಲ್ಲಿ ಹಲವಾರು ಮುಸ್ಲಿಂ ಸಂಘಟನೆಗಳು ಪೀಡಿತ ಪ್ರದೇಶಗಳಲ್ಲಿ ಆಹಾರ, ಬಟ್ಟೆ ಮತ್ತು ಹಣವನ್ನು ಸಂಗ್ರಹಿಸಿ ವಿತರಿಸಿದೆ. ಆದರೆ, ವೈರಲ್ ಆಗಿರುವ ವೀಡಿಯೊ ಈ ಪರಿಹಾರ ಕಾರ್ಯಗಳಿಗೆ ಸಂಬಂಧಿಸಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಮಸೀದಿಯಲ್ಲಿ ದೇಣಿಗೆ ತೆರೆಯಲಾಗುತ್ತಿರುವ ವೀಡಿಯೊವನ್ನು ಪಂಜಾಬ್ ಪ್ರವಾಹಕ್ಕೆ ಮುಸ್ಲಿಮರು ದೇಣಿಗೆ ನೀಡುತ್ತಿದ್ದಾರೆ ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

Fact Check: Hindu temple attacked in Bangladesh? No, claim is false

Fact Check: തദ്ദേശ തിരഞ്ഞെടുപ്പില്‍ ഇസ്‍ലാമിക മുദ്രാവാക്യവുമായി യുഡിഎഫ് പിന്തുണയോടെ വെല്‍ഫെയര്‍ പാര്‍ട്ടി സ്ഥാനാര്‍ത്ഥി? പോസ്റ്ററിന്റെ വാസ്തവം

Fact Check: ராஜ்நாத் சிங் காலில் விழுந்த திரௌபதி முர்மு? உண்மை என்ன

Fact Check: ಬಿರಿಯಾನಿಗೆ ಕೊಳಚೆ ನೀರು ಬೆರೆಸಿದ ಮುಸ್ಲಿಂ ವ್ಯಕ್ತಿ?, ವೈರಲ್ ವೀಡಿಯೊದ ಸತ್ಯಾಂಶ ಇಲ್ಲಿದೆ

Fact Check: బంగ్లాదేశ్‌లో హిజాబ్ ధరించనందుకు క్రైస్తవ గిరిజన మహిళపై దాడి? లేదు, నిజం ఇక్కడ తెలుసుకోండి