Kannada

Fact Check: ಯುಎಇ ರಾಷ್ಟ್ರೀಯ ದಿನ ಪಟಾಕಿ ಸಿಡಿಸಿದ ವೀಡಿಯೊ ಸೌದಿ ಅರೇಬಿಯಾದಲ್ಲಿ ಆಚರಿಸಿದ ದೀಪಾವಳಿ ಎಂದು ವೈರಲ್

ಮುಸ್ಲಿಂ ರಾಷ್ಟ್ರದಲ್ಲಿ ಕೂಡ ಈ ಬಾರಿ ಪಟಾಕಿ ಸಿಡಿಸುವ ಮೂಲಕ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಲಾಗಿದೆ ಎಂದು ಹೇಳಲಾಗುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಪಟಾಕಿಗಳು ಆಕಾಶದೆತ್ತರಕ್ಕೆ ಚಿಮ್ಮುತ್ತಿವೆ.

Vinay Bhat

ದೀಪಾವಳಿಯ ಸಮಯದಲ್ಲಿ ಪಟಾಕಿ ಸಿಡಿಸುವ ವೀಡಿಯೊಗಳು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸೌದಿ ಅರೇಬಿಯಾದಂತಹ ಮುಸ್ಲಿಂ ರಾಷ್ಟ್ರದಲ್ಲಿ ಕೂಡ ಈ ಬಾರಿ ಪಟಾಕಿ ಸಿಡಿಸುವ ಮೂಲಕ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಲಾಗಿದೆ ಎಂದು ಹೇಳಲಾಗುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಪಟಾಕಿಗಳು ಆಕಾಶದೆತ್ತರಕ್ಕೆ ಚಿಮ್ಮುತ್ತಿವೆ. ಈ ದೃಶ್ಯವನ್ನು ರಸ್ತೆಯೊಂದರಿಂದ ಚಿತ್ರೀಕರಿಸಲಾಗಿದೆ, ಅಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿ ಈ ಪಟಾಕಿಗಳನ್ನು ವೀಕ್ಷಿಸುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಸೌದಿ ಅರೇಬಿಯಾದಲ್ಲಿ ಶ್ರೀರಾಮನನ್ನ ಕರೆತಂದಿದ್ದರಿಂದ ಅಲ್ಲಿ ಮೊದಲ ದೀಪಾವಳಿ ಈ ರೀತಿ ಆಚರಿಸಿದರೆಂದು ಇಲ್ಲಿನ ಕನ್ವರ್ಟ್ ಗಳಿಗೆ ತಿಳಿಸಿ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಸೌದಿ ಅರೇಬಿಯಾದಿಂದಲ್ಲ, ಡಿಸೆಂಬರ್ 2023 ರಲ್ಲಿ ಆಚರಿಸಲಾದ ಯುಎಇಯ 52 ನೇ ರಾಷ್ಟ್ರೀಯ ದಿನದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಹಿಮ್ಮುಖವಾಗಿ ಹುಡುಕಿದಾಗ, ಈ ವೀಡಿಯೊವನ್ನು ಯೂಟ್ಯೂಬ್​ನಲ್ಲಿ ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಡಿಸೆಂಬರ್ 3, 2023 ರಂದು ಇದೇ ವೀಡಿಯೊವನ್ನು ಹಂಚಿಕೊಳ್ಳುವಾಗ, ಇದು ದುಬೈನಲ್ಲಿ ಆಚರಿಸಲಾದ ಯುಎಇಯ ರಾಷ್ಟ್ರೀಯ ದಿನಾಚರಣೆಯ ವೀಡಿಯೊ ಎಂದು ಬಳಕೆದಾರರು ಬರೆದಿದ್ದಾರೆ.

ಈ ಮಾಹಿತಿಯ ಜೊತೆಗೆ, “ದುಬೈ ವಾಕರ್” ಹೆಸರಿನ ಫೇಸ್‌ಬುಕ್ ಪುಟವು ಈ ವೀಡಿಯೊವನ್ನು ಡಿಸೆಂಬರ್ 2023 ರಲ್ಲಿ ಹಂಚಿಕೊಂಡಿದೆ. ಯುಎಇಯ ರಾಷ್ಟ್ರೀಯ ದಿನವನ್ನು ಪ್ರತಿ ವರ್ಷ ಡಿಸೆಂಬರ್ 2 ರಂದು ಆಚರಿಸಲಾಗುತ್ತದೆ. ಈ ವಿಡಿಯೋ ಈ ವರ್ಷದ ದೀಪಾವಳಿಯದ್ದಾಗಿರಲು ಸಾಧ್ಯವಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿದೆ.

ಇದಲ್ಲದೆ, ನಾವು ಈ ವೀಡಿಯೊವನ್ನು ಟಿಕ್‌ಟಾಕ್‌ನಲ್ಲಿಯೂ ಕಂಡುಕೊಂಡಿದ್ದೇವೆ. ಡಿಸೆಂಬರ್ 3, 2023 ರಂದು ಹಂಚಿಕೊಂಡ ವೀಡಿಯೊಕ್ಕೆ ಯುಎಇಯ ರಾಷ್ಟ್ರೀಯ ದಿನ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ ಅನ್ನು ಒಂದು ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

ಇದಲ್ಲದೆ, ಈ ವೈರಲ್ ವೀಡಿಯೊ ಯುಎಇಯ ರಾಷ್ಟ್ರೀಯ ದಿನದ್ದು ಎಂದು ಸಾಬೀತುಪಡಿಸುವ ಕೆಲವು ಪುರಾವೆಗಳನ್ನು ನಾವು ಅಂತರ್ಜಾಲದಲ್ಲಿ ಕಂಡುಕೊಂಡಿದ್ದೇವೆ. 2-4 ಡಿಸೆಂಬರ್ 2023 ರ ನಡುವೆ, ಯೂಟ್ಯೂಬ್ ಮತ್ತು ಎಕ್ಸ್​ನಲ್ಲಿನ ಅನೇಕ ಬಳಕೆದಾರರು ಯುಎಇಯ ರಾಷ್ಟ್ರೀಯ ದಿನವನ್ನು ಆಚರಿಸುವ ವಿಭಿನ್ನ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಸೌದಿಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಿಡಿಸುವ ಮೂಲಕ ದೀಪಾವಳಿ ಆಚರಿಸಲಾಗಿದೆ ಎಂಬ ಅಧಿಕೃತ ಸುದ್ದಿ ಎಲ್ಲೂ ಇಲ್ಲ. ಹೀಗೇ ನಡೆದಿದ್ದರೆ ಖಂಡಿತಾ ಈ ಬಗ್ಗೆ ಸುದ್ದಿ ಪ್ರಕಟವಾಗುತ್ತಿತ್ತು. ಹೀಗಾಗಿ ಸೌದಿ ಅರೇಬಿಯಾದಲ್ಲಿ ಮೊದಲ ದೀಪಾವಳಿ ಆಚರಣೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಸುಮಾರು ಒಂದು ವರ್ಷದ ಹಳೆಯ ಯುಎಇಯ ರಾಷ್ಟ್ರೀಯ ದಿನದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Pro-Palestine march in Kerala? No, video shows protest against toll booth

Fact Check: ഓണം ബംപറടിച്ച സ്ത്രീയുടെ ചിത്രം? സത്യമറിയാം

Fact Check: யோகி ஆதித்யநாத்தை ஆதரித்து தீப்பந்தத்துடன் பேரணி நடத்தினரா பொதுமக்கள்? உண்மை என்ன

Fact Check: Christian church vandalised in India? No, video is from Pakistan

Fact Check: ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ರಶ್ಮಿಕಾ ರಿಯಾಕ್ಷನ್ ಎಂದು 2022ರ ವೀಡಿಯೊ ವೈರಲ್