Top Stories

Fact Check: ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ ವಿಮಾನ ಪತನ ಎಂದು AI ಫೋಟೋ ವೈರಲ್

ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮುಂದೆ ಏರ್ ಇಂಡಿಯಾ ವಿಮಾನವು ನೆಲದ ಮೇಲೆ ಬೆಂಕಿಯಲ್ಲಿ ಮುಳುಗುತ್ತಿರುವುದನ್ನು ಮತ್ತು ರಕ್ಷಣಾ ತಂಡಗಳ ಸದಸ್ಯರು ಉರಿಯುತ್ತಿರುವ ವಿಮಾನವನ್ನು ನಂದಿಸುವ ಕಾರ್ಯ ಮಾಡುತ್ತಿರುವುದನ್ನು ತೋರಿಸುತ್ತಿದೆ.

Vinay Bhat

242 ಪ್ರಯಾಣಿಕರನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ (AI 171) ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು. ಇದಾದ ಸ್ವಲ್ಪ ಸಮಯದ ನಂತರ, ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮುಂದೆ ಏರ್ ಇಂಡಿಯಾ ವಿಮಾನವು ನೆಲದ ಮೇಲೆ ಬೆಂಕಿಯಲ್ಲಿ ಮುಳುಗುತ್ತಿರುವುದನ್ನು ಮತ್ತು ರಕ್ಷಣಾ ತಂಡಗಳ ಸದಸ್ಯರು ಉರಿಯುತ್ತಿರುವ ವಿಮಾನವನ್ನು ನಂದಿಸುವ ಕಾರ್ಯ ಮಾಡುತ್ತಿರುವುದನ್ನು ತೋರಿಸುತ್ತಿದೆ.

ಇನ್​ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇದು ನಿಜಕ್ಕೂ ತುಂಬಾ ನೋವು ತುಂಬಿದ ಕ್ಷಣ... ಇಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ದುರಂತವಾಗಿ ಪತನಗೊಂಡಿದೆ. ಈ ಭಯಾನಕ ಅಪಘಾತದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ತೀವ್ರ ನೋವು ತಂದಿದೆ’’ ಎಂದು ಬರೆದುಕೊಂಡಿದ್ದಾರೆ.

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಹೇಳಿಕೆ ಸುಳ್ಳು ಎಂದು ಸೌತ್ ಚೆಕ್ ಕಂಡುಕೊಂಡಿದೆ. ಚಿತ್ರವು AI- ರಚಿತವಾಗಿದ್ದು, ನೈಜ ಘಟನೆಯನ್ನು ತೋರಿಸುವುದಿಲ್ಲ.

ಈ ಹೇಳಿಕೆಯನ್ನು ಪರಿಶೀಲಿಸಲು, ನಾವು ಮೊದಲು ಚಿತ್ರವನ್ನು ದೃಶ್ಯ ದೃಢೀಕರಣಕ್ಕಾಗಿ ವಿಶ್ಲೇಷಿಸಿತು. ದೃಶ್ಯವು ನೈಜ್ಯತೆಗೆ ದೂರವಾಗಿದ್ದು, ಶೈಲೀಕೃತವಾಗಿ ಕಂಡುಬಂದಿತು, ಒಂದೇ ಕಡೆ ಬೆಳಕು ಮತ್ತು ಹೊಗೆಯಿಂದ ಕೂಡಿದೆ. ಈ ಫೋಟೊ ಅಸ್ಪಷ್ಟತೆವಾಗಿದ್ದು, ನೈಜ ಅಪಘಾತ ದೃಶ್ಯಗಳಿಗಿಂತ ಭಿನ್ನವಾಗಿದೆ. ಈ ಚಿತ್ರವನ್ನು ಕೃತಕವಾಗಿ ರಚಿಸಲಾಗಿದೆ ಎಂಬ ಅನುಮಾನವನ್ನು ಹುಟ್ಟುಹಾಕಿತು.

ನಂತರ ನಾವು ಚಿತ್ರವನ್ನು ಹೈವ್ ಮಾಡರೇಶನ್ ಮತ್ತು ಸೈಟ್‌ಎಂಜಿನ್ ಮೂಲಕ ತನಿಖೆ ನಡೆಸಿದ್ದೇವೆ, ಇದು AI ಪತ್ತೆ ಸಾಧನವಾಗಿದ್ದು, ಈ ಚಿತ್ರವು AI- ರಚಿತ ಅಥವಾ ಡೀಪ್‌ಫೇಕ್ ಆಗಿರುವ ಸಾಧ್ಯತೆಯನ್ನು ಶೇಕಡಾ 99.9 ರಷ್ಟಿದೆ ಎಂಬ ಫಲಿತಾಂಶ ಕಂಡುಬಂತು.

ಆದ್ದರಿಂದ, ಹಂಚಿಕೊಳ್ಳಲಾಗುತ್ತಿರುವ ಚಿತ್ರವು AI- ರಚಿತವಾಗಿದ್ದು, ನಿಜವಾದ ವಿಮಾನ ಅಪಘಾತದ ಘಟನೆಯನ್ನು ಚಿತ್ರಿಸುವುದಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Hindus vandalise Mother Mary statue during Christmas? No, here are the facts

Fact Check: തിരുവനന്തപുരത്ത് 50 കോടിയുടെ ഫയല്‍ ഒപ്പുവെച്ച് വി.വി. രാജേഷ്? പ്രചാരണത്തിന്റെ സത്യമറിയാം

Fact Check: நாம் தமிழர் கட்சியினர் நடத்திய போராட்டத்தினால் அரசு போக்குவரத்து கழகம் என்ற பெயர் தமிழ்நாடு அரசு போக்குவரத்து கழகம் என்று மாற்றப்பட்டுள்ளதா? உண்மை அறிக

Fact Check: ಇಸ್ರೇಲಿ ಪ್ರಧಾನಿ ನೆತನ್ಯಾಹು ಮುಂದೆ ಅರಬ್ ಬಿಲಿಯನೇರ್ ತೈಲ ದೊರೆಗಳ ಸ್ಥಿತಿ ಎಂದು ಕೋವಿಡ್ ಸಮಯದ ವೀಡಿಯೊ ವೈರಲ್

Fact Check: జగపతి బాబుతో జయసుధ కుమారుడు? కాదు, అతడు WWE రెజ్లర్ జెయింట్ జంజీర్