ಬುಧವಾರ ಬೆಂಗಳೂರಿನಲ್ಲಿ ಸಂಭವಿಸಿದ ಅಗ್ನಿದುರಂತಕ್ಕೆ ಬಾಂಬ್‌ ಬ್ಲಾಸ್ಟ್‌ ಕಾರಣವೆ?

ಬುಧವಾರ ಬೆಂಗಳೂರಿನ ಕೋರಮಂಗಲದ ಕೆಫೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಇದನ್ನು ಬುಧವಾರ ಬೆಂಗಳೂರಿನ ಕೋರಮಂಗಲದ ಕೆಫೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಇದನ್ನು ಬಾಂಬ್‌ ಬ್ಲಾಸ್ಟ್‌ ಎಂದು ಬಿಂಬಿಸಲಾಗಿದ್ದು, ಸುರಕ್ಷತೆಯ ಪ್ರಶ್ನೆಗಳನ್ನು ಎತ್ತಲಾಗಿದೆ. ವಾಸ್ತವವೇನು?
ಬುಧವಾರ ಬೆಂಗಳೂರಿನಲ್ಲಿ ಸಂಭವಿಸಿದ ಅಗ್ನಿದುರಂತಕ್ಕೆ ಬಾಂಬ್‌ ಬ್ಲಾಸ್ಟ್‌ ಕಾರಣವೆ?

ವಾದ

ಬೆಂಗಳೂರಿನಲ್ಲಿ ನಡೆದ ಅಗ್ನಿ ದುರಂತಕ್ಕೆ ಬಾಂಬ್‌ ಬ್ಲಾಸ್ಟ್‌ ಕಾರಣ.

ವಾಸ್ತವ

ಕೆಫೆಯಲ್ಲಿ ಅನಿಲಸೋರಿಕೆಯಿಂದಾಗಿ ಅಗ್ನಿ ಸಂಭವಿಸಿತ್ತು.

ಬುಧವಾರ ಬೆಂಗಳೂರಿನ ಕೋರಮಂಗಲದಲ್ಲಿರುವ ಮಡ್‌ಪೈಪ್ ಎಂಬ ಕೆಫೆಯಲ್ಲಿ ಬಾಂಬ್‌ ಸ್ಫೋಟಿಸಿದ್ದು, ಭಾರತ ಸುರಕ್ಷಿತವಾಗಿಲ್ಲ ಎಂಬರ್ಥದ ಪೋಸ್ಟ್‌ಗಳು ವೈರಲ್‌ ಆಗಿವೆ.

ಕರಾಚಿಯ ಬಿಬಿಸಿ ಪತ್ರಕರ್ತ ಎಂದು ಹೇಳುವ ವಜಾಹತ್ ಕಾಜ್ಮಿ ಎಂಬುವರ ಎಕ್ಸ್‌ ಖಾತೆಯಿಂದ ಈ ಕುರಿತು ಟ್ವೀಟ್‌ ಪ್ರಕಟವಾಗಿದೆ. ಇದರಲ್ಲಿ:

ಬೆಂಗಳೂರಿನಲ್ಲಿ ಸ್ಫೋಟ. ಮತ್ತೆ, ಭಾರತ ಸುರಕ್ಷಿತ ಎಂದು ಹೇಳುತ್ತಾರೆ. ಪಾಕಿಸ್ತಾನದ ಕ್ರಿಕೆಟ್‌ ತಂಡ ಪ್ರಸ್ತುತ ಈ ನಗರದಲ್ಲಿ, ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಪಾಕಿಸ್ತಾನ ಕೂಡಲೇ ತಂಡದ ಭದ್ರತೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಬೇಕಿದೆ' ಎಂದು ಬರೆದಿದ್ದಾರೆ.

ಮಾಜ್‌ ಎಂಬ ಖಾತೆಯೂ ಬೆಂಗಳೂರು ಅಗ್ನಿ ದುರಂತವನ್ನು ಬಾಂಬ್‌ ಬ್ಲಾಸ್ಟ್‌ ಎಂದು ಕರೆದಿದೆ. ಜೊತೆಗೆ ಐಸಿಸಿಗೆ ಉಗ್ರ ದೇಶ ಭಾರತದಿಂದ ವಿಶ್ವಕಪ್‌ಅನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಚಿಂತಿಸಿ. ಆಟಗಾರರ ಭದ್ರತೆಯೇ ಪ್ರಶ್ನೆಯಾಗಿದೆ ಎಂದು ಬರೆದಿದ್ದಾರೆ.

ಫೇಸ್‌ಬುಕ್‌ನಲ್ಲಿ ಅರೂಬಾ ಫಾತಿಮಾ ಎಂಬುವವರು ಸ್ಟೇಡಿಯಂ ಸಮೀಪ ಬಾಂಬ್‌ ಸ್ಪೋಟ. ಎಲ್ಲರು ಸುರಕ್ಷಿತವಾಗಿದ್ದಾರೆ ಎಂದು ಭಾವಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

ಅಮಿರ್‍‌ ಚೌಧರಿ ಎಂಬುವವರು, ಬೆಂಗಳೂರಿನ ಮಂಡ್‌ಪೈಪ್‌ ಕೆಫೆಯಲ್ಲ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಕ್ಕೂ ಮೊದಲು ಬಾಂಬ್‌ ಸ್ಫೋಟ. 'ಅಭ್ಯಾಸ ನಡೆಸಿದ ಪಾಕಿಸ್ತಾನ' ಎಂದು ಬರೆದಿದ್ದಾರೆ.

ಫ್ಯಾಕ್ಟ್‌ಚೆಕ್‌

ಪ್ರಜಾವಾಣಿಯ ಪ್ರಕಾರ, 'ಅನಿಲ ಸೋರಿಕೆಯಿಂದ ಸಿಲಿಂಡರ್‍‌ ಸ್ಫೋಟವಾಗಿದ್ದು, ಒಟ್ಟು 5 ಸಿಲಿಂಡರ್‍‌ಗಳ ಸ್ಫೋಟದಿಂದಾಗಿ ದುರಂತ ಸಂಭವಿಸಿದೆ.' ವರದಿಯ ಲಿಂಕ್‌ ಇಲ್ಲಿದೆ.

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ ಅಧಿಕೃತ ತಾಣದಲ್ಲಿ ಈ ಕುರಿತು ಪ್ರಕಟಿಸುವ ವರದಿಯಲ್ಲಿ, ವೈರಲ್‌ ಪೋಸ್ಟ್‌ಗಳ ವಾದವನ್ನು ತಳ್ಳಿ ಹಾಕಿದ್ದು, ' ಅನಿಲ ಸೋರಿಕೆಯ ಅಗ್ನಿ ದುರಂತಕ್ಕೆ ಕಾರಣ' ಎಂದು ಹೇಳಿದೆ. ಲಿಂಕ್‌ ಇಲ್ಲಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ಕೋರಮಂಗಲದ ಮಡ್‌ಪೈಪ್‌ ಕೆಫೆಯಲ್ಲಿ ನಡೆದಿದ್ದು ಅಗ್ನಿ ದುರಂತವೆ ಹೊರತು, ಬಾಂಬ್‌ ಸ್ಫೋಟವಲ್ಲ. ಹಾಗಾಗಿ ವೈರಲ್‌ ಪೋಸ್ಟ್‌ಗಳ ಪ್ರತಿಪಾದನೆ ಸುಳ್ಳು.

Related Stories

No stories found.
logo
South Check
southcheck.in