Fact Check: ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂಡಿಯಾ ಒಕ್ಕೂಟದ ಸೋಲನ್ನು ಒಪ್ಪಿಕೊಂಡರೇ?

ಇಂಡಿಯಾ ಒಕ್ಕೂಟವು ಸರಕಾರ ರಚಿಸುವುದಿಲ್ಲ ಎಂಬುದಾಗಿ ಡಿಕೆ ಶಿವಕುಮಾರ್ ಅವರು ಒಪ್ಪಿಕೊಂಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದು ವೈರಲ್ ಆಗಿದೆ.
Fact Check: ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂಡಿಯಾ ಒಕ್ಕೂಟದ ಸೋಲನ್ನು ಒಪ್ಪಿಕೊಂಡರೇ?

ಇಂಡಿಯಾ ಒಕ್ಕೂಟವು ಸರಕಾರ ರಚಿಸುವುದಿಲ್ಲ ಎಂಬುದಾಗಿ ಡಿಕೆ ಶಿವಕುಮಾರ್ ಅವರು ಒಪ್ಪಿಕೊಂಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದು ವೈರಲ್ ಆಗಿದೆ.

ಹೈದರಾಬಾದ್: 2024 ರ ಲೋಕಸಭಾ ಚುನಾವಣೆಯ ನಂತರ ಇಂಡಿಯಾ ಒಕ್ಕೂಟ ಸರ್ಕಾರ ರಚಿಸುವುದಿಲ್ಲ ಎಂದು ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಒಂದು ದಿನ ಮೊದಲು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ ಎನ್ನಲಾದ ವೀಡಿಯೊ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಏಳು ಸೆಕೆಂಡ್ ಅವಧಿಯ ತುಣುಕಿನಲ್ಲಿ ಶಿವಕುಮಾರ್, "ನಾವು ಗೆಲ್ಲುತ್ತೇವೆ ಎಂದು ನಾನು ನಂಬುವುದಿಲ್ಲ, ಇಂಡಿಯಾ ಒಕ್ಕೂಟ ಸರಕಾರದ

ರಚಿಸುತ್ತದೆ" ಎಂದು ಹೇಳುವುದನ್ನು ಕೇಳಬಹುದು.

ಅಕ್ಷಯ್ ಅಕ್ಕಿ ಎಂಬ ಹೆಸರಿನ X ಖಾತೆಯಲ್ಲಿ ANI ಚಾನೆಲ್‌ನ ವೀಡಿಯೋ ತುಣುಕೊಂದನ್ನು ಅಪ್ಲೋಡ್ ಮಾಡಿ, "ಡಿಕೆ ಶಿವಕುಮಾರ್: ಇಂಡಿ ಒಕ್ಕೂಟ ಸರಕಾರ ರಚಿಸುತ್ತದೆ ಎಂಬ ನಂಬಿಕೆ ನನಗಿಲ್ಲ" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ.

ಮಿಸ್ಟರ್ ಸಿನ್ಹ ಎಂಬ ಖಾತೆಯಲ್ಲಿ ಕೂಡ ಇದೇ ವೀಡಿಯೋ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್: ಈ ಪೋಸ್ಟ್ ಅನ್ನು ಸತ್ಯ ಶೋಧನೆಗೆ ಒಳಪಡಿಸಿದಾಗ ಇದು ದಾರಿ ತಪ್ಪಿಸುತ್ತಿದೆ ಎಂದು ಕಂಡು ಕೊಂಡಿದ್ದೇವೆ. ರೀವರ್ಸ್ ಇಮೇಜೆ ಸರ್ಚ್ ಮಾಡಿದಾಗ ಅದು ನಮ್ಮನ್ನು ANI ಮೀಡಿಯಾದ X ಖಾತೆಯಲ್ಲಿ ಹಂಚಲಾದ ವೀಡಿಯೋ ಕಡೆಗೆ ಕರೆದೊಯ್ದಿತು.

ANI ಖಾತೆಯಲ್ಲಿ ಡಿಕೆ ಶಿವಕುಮಾರ್ ಅವರು ಜೂನ್ 4 ರಂದು ಮಾಧ್ಯಮಗಳೊಂದಿಗೆ ಮಾತನಾಡಿದ 14 ಸೆಕೆಂಡುಗಳ ವೀಡಿಯೊ ಒಂದನ್ನು ಹಂಚಲಾಗಿತ್ತು. ಬಿಜೆಪಿ ಪರವಾಗಿ ಬಂದ ಮತಗಟ್ಟೆ ಸಮೀಕ್ಷೆಯ ಬಗ್ಗೆ ಅಭಿಪ್ರಾಯ ಕೇಳಿದಾಗ "ಎಲ್ಲಾ ಏಳು ಚಿತ್ರಗಳನ್ನು ನಾವು ಗೆಲ್ಲುತ್ತೇವೆ. ನಾನು ಇದನ್ನೆಲ್ಲಾ ನಂಬುವುದಿಲ್ಲ,

ನಾವು ಬರುತ್ತೇವೆ, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುತ್ತದೆ" ಎಂದು ಹೇಳಿದ್ದಾರೆ.

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರೇ ಹೊರತು ಬರುವುದಿಲ್ಲ ಎಂದಿಲ್ಲ. ಆದ್ದರಿಂದ ಈ ವಿಡಿಯೋ ತಪ್ಪು ದಾರಿಗೆಳೆಯುತ್ತಿದೆ ಎಂದು ಅರ್ಥೈಸಬಹುದು.

ಜೂನ್ ಒಂದರಂದು ನಡೆದ ಕೊನೆಯ ಹಂತದ ಲೋಕಸಭಾ ಚುನಾವಣೆ ಬಳಿಕ ಮತಗಟ್ಟೆ ಸಮೀಕ್ಷೆಗಳು ಹೊರ ಬಿದ್ದಿದ್ದವು. ಬಹುತೇಕ ಸಮೀಕ್ಷೆಗಳ ಪ್ರಕಾರ ಬಿಜೆಪಿಗೆ ಭರ್ಜರಿ ಬಹುಮತ ಸಿಗುತ್ತದೆ ಎಂದಿದ್ದವು. ಕೆಲವೊಂದು ಸಮೀಕ್ಷೆಗಳು ಎನ್‌ಡಿಎಗೆ 400+ ಸಿಗುತ್ತದೆ ಎಂದಿದ್ದವು.

Related Stories

No stories found.
logo
South Check
southcheck.in