ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ತಮ್ಮ ಮನೆಯಲ್ಲಿ ಔತಣ ಏರ್ಪಡಿಸುವುದಾಗಿ ಕೊಹ್ಲಿ ಹೇಳಿದ್ದಾರಾ?

ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ತಮ್ಮ ಮನೆಯಲ್ಲಿ ಔತಣ ಏರ್ಪಡಿಸುವುದಾಗಿ ಕೊಹ್ಲಿ ಹೇಳಿದ್ದಾರಾ?

ಭಾರತ ಕ್ರಿಕೆಟ್‌ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ತಮ್ಮ ಎಕ್ಸ್‌ ಖಾತೆಯಲ್ಲಿ ಪಾಕಿಸ್ತಾನ ತಂಡವನ್ನು ಆತ್ಮೀಯವಾಗಿ ಸ್ವಾಗತಿಸಿದ್ದು, ತಮ್ಮ ಮನೆಯಲ್ಲಿ ಔತಣ ನೀಡುವುದಕ್ಕೆ ಹೇಳಿದ್ದಾರೆ. ಇದು ನಿಜವೆ?
Published on

ವಾದ

ರಾಟ್‌ ಕೊಹ್ಲಿ ತಮ್ಮ ಎಕ್ಸ್‌ ಖಾತೆಯಲ್ಲಿ ಪಾಕಿಸ್ತಾನ ತಂಡವನ್ನು ಆತ್ಮೀಯವಾಗಿ ಸ್ವಾಗತಿಸಿದ್ದು, ತಮ್ಮ ಮನೆಯಲ್ಲಿ ಔತಣ ನೀಡುವುದಕ್ಕೆ ಹೇಳಿದ್ದಾರೆ.

ವಾಸ್ತವ

ಪಾಕಿಸ್ತಾನವನ್ನು ಸ್ವಾಗತಿಸಿ, ಔತಣ ಕೂಟ ನೀಡುವುದಕ್ಕೆ ಘೋಷಿಸಿರುವ ಟ್ವಿಟರ್‍‌ ಖಾತೆಯು ಕೊಹ್ಲಿಯದ್ದಲ್ಲ.

ಸೆಪ್ಟೆಂಬರ್‍‌ 27ರಂದು ವಿರಾಟ್‌ ಕೊಹ್ಲಿ ಹೆಸರಿನಲ್ಲಿ ಪಾಕಿಸ್ತಾನ ತಂಡವನ್ನು ಸ್ವಾಗತಿಸಿ ಟ್ವೀಟ್‌ ಮಾಡಿದೆ.

@amivkohli ಎಂಬ ಖಾತೆಯಲ್ಲಿಮ, " ಏಳು ದೀರ್ಘ ವರ್ಷಗಳ ನಂತರ ಭಾರತಕ್ಕೆ ಆಗಮಿಸುತ್ತಿರುವ ಪಾಕಿಸ್ತಾನ ತಂಡವನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ನನ್ನ ಸ್ನೇಹಿತರಿಗೆ, ವಿಶೇಷವಾಗಿ ಶಾಬಾದ್‌ಗೆ ನನ್ನ ಮನೆಯಲ್ಲಿ ಔತಣಕೂವನ್ನು ಏರ್ಪಡಿಸುತ್ತೇನೆ. ಎಲ್ಲರಿಗೂ ನನ್ನ ಪ್ರೀತಿ. ಪ್ರೀತಿ ಮತ್ತು ಸಂತೋಷವನ್ನು ಹರಡಿ" ಎಂದು ಬರೆದಿದೆ.

ಈ ಟ್ವೀಟ್‌ ಇದುವರೆಗೆ 14 ಲಕ್ಷ ಬಾರಿ ನೋಡಲ್ಪಟ್ಟಿದ್ದು, 1500 ಬಾರಿ ರೀಟ್ವಿಟ್‌ ಮಾಡಲಾಗಿದೆ.

ಫ್ಯಾಕ್ಟ್‌ಚೆಕ್‌

'ಸೌತ್‌ ಚೆಕ್‌' ಕೊಹ್ಲಿ ಹೆಸರಿನ ಈ ಖಾತೆಯಲ್ಲಿ ಪ್ರಕಟವಾದ ಟ್ವೀಟ್‌ ಅನ್ನು ಗೂಗಲ್‌ ಸರ್ಚ್‌ ಮೂಲಕ ಹುಡುಕಿದಾಗ ನಮಗೆ ಅಂತಹ ಯಾವುದೇ ಪೋಸ್ಟ್‌ ಪ್ರಕಟವಾದ ವಿವರಗಳು ದೊರೆಯಲಿಲ್ಲ. ಬದಲಿಗೆ ಕೊಹ್ಲಿ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಈ ಖಾತೆ ನಕಲಿ ಎಂಬುದು ತಿಳಿದು ಬಂದಿತು.

ವಿರಾಟ್‌ ಕೊಹ್ಲಿ ಹೆಸರಿನಲ್ಲಿ ಪಾಕ್‌ ತಂಡವನ್ನು ಸ್ವಾಗತಿಸಿದ ಈ ಎಕ್ಸ್‌ ಖಾತೆ ವಾಸ್ತವದಲ್ಲಿ ಕೊಹ್ಲಿಯವರ ಅಧಿಕೃತ ಖಾತೆಯಲ್ಲ.

ಕೊಹ್ಲಿಯವರ ಸೋಗಿನಲ್ಲಿರುವ ಖಾತೆಯು @amivkohli ಎಂದಿದೆ. ಇದು ವೆರಿಫೈ ಆಗಿಲ್ಲ. ಕೇವಲ 990 ಫಾಲೋವರ್‍‌ಗಳಿರುವ ಈ ಖಾತೆಯು 2023ರ ಆಗಸ್ಟ್‌ನಿಂದ ಸಕ್ರಿಯವಾಗಿದೆ. ಇದರಲ್ಲಿ ಕೇವಲ 30 ಟ್ವೀಟ್‌ಗಳಿವೆ.

ವಿರಾಟ್‌ ಕೊಹ್ಲಿ ಹೆಸರಿನ ನಕಲಿ ಖಾತೆ
ವಿರಾಟ್‌ ಕೊಹ್ಲಿ ಹೆಸರಿನ ನಕಲಿ ಖಾತೆ

ಆದರೆ ಕೊಹ್ಲಿಯವರ ಅಧಿಕೃತ ಖಾತೆ @imVkohli ಎಂದಿದ್ದು 58.3 ಮಿಲಿಯನ್‌ ಫಾಲೋವರ್‍‌ಗಳನ್ನು ಹೊಂದಿದೆ. ಈ ಖಾತೆ 2009ರ ಸೆಪ್ಟೆಂಬರ್‍‌ನಿಂದ ಸಕ್ರಿಯವಾಗಿದೆ. 2900ಕ್ಕೂ ಹೆಚ್ಚು ಟ್ವೀಟ್‌ಗಳಿವೆ.

ವಿರಾಟ್‌ ಕೊಹ್ಲಿಯವರ ಅಸಲಿ ಖಾತೆ
ವಿರಾಟ್‌ ಕೊಹ್ಲಿಯವರ ಅಸಲಿ ಖಾತೆ

ಕೊಹ್ಲಿಯವರ ಅಧಿಕೃತ ತಾಣದಲ್ಲಿ ಎಲ್ಲೂ ಪಾಕಿಸ್ತಾನ ತಂಡವನ್ನು ಸ್ವಾಗತಿಸಿದ ಟ್ವೀಟ್‌ ಸಿಗಲಿಲ್ಲ.

ಕೊಹ್ಲಿಯವರ ಇತರ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲೂ ನಾವು ಹುಡುಕಾಡಿದೆವು. ಆದರೆ ಎಲ್ಲೂ ಕೊಹ್ಲಿ ಪಾಕಿಸ್ತಾನವನ್ನು ಸ್ವಾಗತಿಸಿ ಯಾವುದೇ ಪೋಸ್ಟ್‌ ಹಾಕಿದ್ದು ಕಾಣಲಿಲ್ಲ.

ಕೊಹ್ಲಿ, ಪಾಕಿಸ್ತಾನ ತಂಡ, ಔತಣ ಎಂಬ ಕೀವರ್ಡ್ಗಳನ್ನು ಬಳಸಿ ಗೂಗಲ್‌ನಲ್ಲಿ ಮಾಡಿದಾಗಲೂ ನಮಗೆ ಯಾವುದೇ ವರದಿ ಅಥವಾ ಪೋಸ್ಟ್‌ಗಳು ದೊರೆಯಲಿಲ್ಲ.

logo
South Check
southcheck.in