Fact Check: ಮಹಾರಾಷ್ಟ್ರದಲ್ಲಿ ಮುಸ್ಲಿಂ ವ್ಯಕ್ತಿಯ ಮನೆಯಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆಯೇ?

ಮಹಾರಾಷ್ಟ್ರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮನೆಯಿಂದ ಪೊಲೀಸರು ನೂರಾರು ಮಾರಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಹೇಳಿಕೆಯ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತದೆ.
Fact Check: ಮಹಾರಾಷ್ಟ್ರದಲ್ಲಿ ಮುಸ್ಲಿಂ ವ್ಯಕ್ತಿಯ ಮನೆಯಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆಯೇ?
Published on
2 min read

ಮಹಾರಾಷ್ಟ್ರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮನೆಯಿಂದ ಪೊಲೀಸರು ನೂರಾರು ಮಾರಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಹೇಳಿಕೆಯ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತದೆ. ವೀಡಿಯೊದಲ್ಲಿ, ಪೊಲೀಸರು ಶಸ್ತ್ರಾಸ್ತ್ರಗಳನ್ನು ಕೈಯಲ್ಲಿ ಹಿಡಿದು ಪರಿಶೀಲಿಸುವುದು ಕಾಣಬಹುದು. ಜೊತೆಗೆ ಅನೇಕ ಮಾರಾಕಸ್ತ್ರಗಳನ್ನು ಪ್ರದರ್ಶನಕ್ಕೆ ಇಟ್ಟಂತೆ ತೋರಿಸಲಾಗಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ಅಬ್ದುಲ್ ಅವರ ಮನೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಮಹಾರಾಷ್ಟ್ರ ಪೊಲೀಸ್. ಅವರ ತಯಾರಿ ಎಷ್ಟು ದೊಡ್ಡದಾಗಿದೆ ಎಂದು ಊಹಿಸಿ ಹಿಂದುಗಳೇ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಬಾಗಿಯಾಗಿರುವ ವ್ಯಕ್ತಿಯ ಹೆಸರು ಅಶ್ವಂತ್ ಸಿಂಗ್ ಪ್ರಕಾಶ್ ಸಿಂಗ್ ಆಗಿದ್ದಾರೆ.

ನಿಜಾಂಶವನ್ನು ತಿಳಿಯಲು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ ಇದೇ ದೃಶ್ಯಗಳು ಒಳಗೊಂಡ ವರದಿಗಳು ಕಂಡುಬಂದವು. ಮೇ 8 ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರಮ ಮಹಾರಾಷ್ಟ್ರದ ಮರಾಠಾವಾಡ ರೀಜಿಯನ್‌ನಲ್ಲಿರುವ ನಂದೇಡ್ ನಗರದಲ್ಲಿ ಮೇ 6 ರಂದು ಈ ಘಟನೆ ನಡೆದಿದೆ. ಗುರು ರಾಮದಾಸ್ ನಗರದಲ್ಲಿ ಒಂದು ಗೋಡೌನದಿಂದ 43 ಲಕ್ಷ ರೂಪಾಯಿ ಮೌಲ್ಯದ 4796 ಆಯುಧಗಳಿಂದ ಪೋಲೀಸರು ವಶಪಡಿಸಿಕೊಂಡರು. ಅಬ್ಚಲ್ ನಗರ್ ಸ್ವೇದಶಿ ಜಸ್ವಂತ್ ಸಿಂಗ್ ಪ್ರಕಾಶ್ ಸಿಂಗ್ ಸುಖ್ಮಣಿ ಎಂಬವರು ಅಕ್ರಮ ಶಸ್ತ್ರಾಸ್ತ್ರಕಚ್ಚವಟಕ್ಕೆ ಹಿಂದೆ ಬಿದ್ದಿದ್ದಾರೆ ಎಂದು ನಂದೇಡ್ ಎಸ್ ಪಿ ಅಭಿನಾಶ್ ಕುಮಾರ್ ತಿಳಿಸಿದ್ದಾರೆ. ಜಸ್ವಂತ್ ಸಿಂಗ್ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ತಂಡಗಳೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದರು.

ಮೇ 7 ರಂದು ಟೈಮ್ಸ್ ನೌ ಹಿಂದಿ ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟ ಮಾಡಿದ್ದು, ‘‘ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಪೊಲೀಸರು ನಡೆಸಿದ ಪ್ರಮುಖ ಕಾರ್ಯಾಚರಣೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮಾರಕ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಒಟ್ಟು ಮೌಲ್ಯ ಸುಮಾರು 43 ಲಕ್ಷ 50 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು 50 ವರ್ಷದ ಜಸ್ವಂತ್ ಸಿಂಗ್ ಪ್ರಕಾಶ್ ಸಿಂಗ್ ಸುಖಮಣಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಈ ಶಸ್ತ್ರಾಸ್ತ್ರಗಳನ್ನು ಮಾರಾಟಕ್ಕೆ ತಂದಿದ್ದರು ಮತ್ತು ವಿವಿಧ ಸ್ಥಳಗಳಿಗೆ ಸರಬರಾಜು ಮಾಡಲು ಸಿದ್ಧತೆ ನಡೆಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ’’ ಎಂದು ಬರೆಯಲಾಗಿದೆ.

ಇಂಡಿಯಾಟಿವಿ ಕೂಡ ಮೇ 7 ರಂದು ಪ್ರಕಟಿಸಿದ ಸುದ್ದಿಯಲ್ಲಿ, ನಾಂದೇಡ್ ಗ್ರಾಮೀಣ ಪೊಲೀಸ್ ಠಾಣೆ ತಂಡವು ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿತು. ದಾಳಿಯ ಸಮಯದಲ್ಲಿ, ಮನೆಯಿಂದ ಸುಮಾರು 4,796 ಹರಿತವಾದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ, ಇದರಲ್ಲಿ ದೊಡ್ಡ ಸಂಖ್ಯೆಯ ಕತ್ತಿಗಳು, ಕೊಡಲಿಗಳು ಮತ್ತು ಕಠಾರಿಗಳು ಸೇರಿವೆ. ಈ ಪ್ರಕರಣದ ಆರೋಪಿ 50 ವರ್ಷದ ಜಸ್ವಂತ್ ಸಿಂಗ್ ಪ್ರಕಾಶ್ ಸಿಂಗ್ ಸುಖಮಾನಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಬರೆಯಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಮಹಾರಾಷ್ಟ್ರದಲ್ಲಿ ಮುಸ್ಲಿಂ ವ್ಯಕ್ತಿಯ ಮನೆಯಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದು ವೈರಲ್ ವೀಡಿಯೊ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.

logo
South Check
southcheck.in