Fact Check: ಬಾಂಗ್ಲಾದೇಶದ ಮುಸ್ಲಿಮರು ಹಿಂದೂಗಳ ಭೂಮಿಯನ್ನು ವಶಪಡಿಸಲು ದಾಳಿ ಎಂದು ಅಸ್ಸಾಂನ ವೀಡಿಯೊ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ನಿರ್ಮಾಣ ಹಂತದ ಕಟ್ಟಡವನ್ನು ಕೆಡವಿ, ತಡೆಯಲು ಯತ್ನಿಸುವವರ ಮೇಲೆ ಗುಂಪೊಂದು ಹಲ್ಲೆ ನಡೆಸುತ್ತಿರುವುದು ಕಾಣಬಹುದು. ಧ್ವಂಸವನ್ನು ತಡೆಯಲು ಯತ್ನಿಸಿದ ಗುಂಪಿನಲ್ಲಿ ಮಹಿಳೆಯರು ಕೂಡ ಇದ್ದು, ಅವರಲ್ಲಿ ಒಬ್ಬಳು ಮಗುವನ್ನು ಎತ್ತಿಕೊಂಡಿದ್ದಳು.
Fact Check: ಬಾಂಗ್ಲಾದೇಶದ ಮುಸ್ಲಿಮರು ಹಿಂದೂಗಳ ಭೂಮಿಯನ್ನು ವಶಪಡಿಸಲು ದಾಳಿ ಎಂದು ಅಸ್ಸಾಂನ ವೀಡಿಯೊ ವೈರಲ್
Published on
2 min read

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ನಿರ್ಮಾಣ ಹಂತದ ಕಟ್ಟಡವನ್ನು ಕೆಡವಿ, ತಡೆಯಲು ಯತ್ನಿಸುವವರ ಮೇಲೆ ಗುಂಪೊಂದು ಹಲ್ಲೆ ನಡೆಸುತ್ತಿರುವುದು ಕಾಣಬಹುದು. ಧ್ವಂಸವನ್ನು ತಡೆಯಲು ಯತ್ನಿಸಿದ ಗುಂಪಿನಲ್ಲಿ ಮಹಿಳೆಯರು ಕೂಡ ಇದ್ದು, ಅವರಲ್ಲಿ ಒಬ್ಬಳು ಮಗುವನ್ನು ಎತ್ತಿಕೊಂಡಿದ್ದಳು. ಈ ವೀಡಿಯೊ ಬಾಂಗ್ಲಾದೇಶದ್ದಾಗಿದ್ದು, ಮುಸ್ಲಿಂ ಪುರುಷರ ಗುಂಪೊಂದು ಹಿಂದೂ ಕುಟುಂಬದ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶದ ಇಸ್ಲಾಮಿಸ್ಟ್‌ಗಳು ಹಿಂದೂಗಳ ಭೂಮಿಯನ್ನು ವಶಪಡಿಸಿಕೊಳ್ಳಲು ಅವರ ಮೇಲೆ ದಾಳಿ ಮಾಡಿದರು, ಮಹಿಳೆಯರನ್ನಾಗಲಿ ಅಥವಾ ಮಕ್ಕಳನ್ನಾಗಲಿ ಉಳಿಸಲಿಲ್ಲ. ಹಿಂದೂಗಳು ಅಲ್ಪಸಂಖ್ಯಾತರಾದಾಗ ಹೀಗಾಗುತ್ತದೆ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಅಸ್ಸಾಂನ ಗೋಸೈಗಾಂವ್‌ನಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಮುಸ್ಲಿಂ ಗುಂಪುಗಳ ನಡುವೆ ನಡೆದ ಘರ್ಷಣೆಯ ವೀಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಜುಲೈ 29 ರಂದು ಅಸ್ಸಾಂ ಮೂಲದ ಫೇಸ್‌ಬುಕ್ ಪುಟದಲ್ಲಿ ಇದೇ ವೈರಲ್ ವೀಡಿಯೊ ಮತ್ತೊಂದು ಆ್ಯಂಗಲ್​ನಿಂದ ತೆಗೆದ ಪೋಸ್ಟ್ ಕಂಡುಬಂದಿದೆ. ಶೀರ್ಷಿಕೆಯ ಪ್ರಕಾರ, ಅಸ್ಸಾಂನ ಗೋಸ್ಸೈಗಾಂವ್ ಉಪವಿಭಾಗದ ಉಚತಾರಿ ಗ್ರಾಮದಲ್ಲಿ ನೂರುಲ್ ಖಾನ್ ಮತ್ತು ಗನಿ ಶೇಖ್ ನೇತೃತ್ವದ ಎರಡು ಗುಂಪುಗಳ ನಡುವಿನ ದೀರ್ಘಕಾಲದ ಭೂ ವಿವಾದದ ಕುರಿತು ಘರ್ಷಣೆ ಭುಗಿಲೆದ್ದಿತು.

ಮತ್ತಷ್ಟು ಕೀವರ್ಡ್ ಹುಡುಕಾಟ ನಡೆಸಿದಾಗ ಹೆಡ್‌ಲೈನ್ 8, ಪ್ರತಿಬಿಂಬ ಲೈವ್ ಮತ್ತು ಅಸ್ಸಾಂ ಟಾಕ್ಸ್ ಲೈವ್ ಸೇರಿದಂತೆ ಸ್ಥಳೀಯ ಸುದ್ದಿ ಮಾಧ್ಯಮಗಳು ಇದೇ ವೈರಲ್ ವೀಡಿಯೊ ಜೊತೆಗೆ ವರದಿ ಪ್ರಕಟಿಸಿರುವುದು ಸಿಕ್ಕಿತು. ಈ ವರದಿಗಳ ಪ್ರಕಾರ, ಗನಿ ಶೇಖ್ ಅವರ ಗುಂಪು ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣ ಅಡಿಯಲ್ಲಿ ನಿರ್ಮಿಸಲಾದ ನೂರುಲ್ ಖಾನ್ ಅವರ ನಿರ್ಮಾಣ ಹಂತದಲ್ಲಿರುವ ಮನೆಯನ್ನು ಕೆಡವಲು ಪ್ರಯತ್ನಿಸಿತು.

ಗಣಿ ಶೇಖ್ ಮತ್ತು ಅವರ ಗುಂಪು ನಿರ್ಮಾಣ ಹಂತದಲ್ಲಿರುವ ತಮ್ಮ ಮನೆಯ ಮೇಲೆ ದಾಳಿ ಮಾಡಿ, ದೈಹಿಕವಾಗಿ ಹಲ್ಲೆ ನಡೆಸಿ, ತಮ್ಮ ಭೂಮಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದೆ ಎಂದು ನೂರುಲ್ ಖಾನ್ ಅವರ ಕುಟುಂಬ ಆರೋಪಿಸಿದೆ. ಶೇಖ್ ಮತ್ತು ಅವರ ಸಹಚರರ ವಿರುದ್ಧ ತನಿಖೆ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಕುಟುಂಬ ಒತ್ತಾಯಿಸಿದೆ. ಘಟನೆಯ ನಂತರ, ಪೊಲೀಸರು ಶೇಖ್ ಮತ್ತು ಅವರ ಗುಂಪಿನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಅಸ್ಸಾಂನ ವೀಡಿಯೊ ಬಾಂಗ್ಲಾದೇಶದ್ದು ಎಂದು ಸುಳ್ಳು ಕೋಮುಕೋನದೊಂದಿಗೆ ವೈರಲ್ ಮಾಡಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

logo
South Check
southcheck.in