Fact Check: ಸ್ಮಿತ್ ಮಚ್ಚಾರ್‌ ಸಾಹಸಕ್ಕೆ ಸಂಬಂಧಿಸಿದ್ದೆಂದು 2025ರ ಹಳೆಯ ವಿಮಾನ ತುರ್ತು ದೃಶ್ಯ ವೈರಲ್

ಫ್ಲೈದುಬೈ ಫ್ಲೈಟ್ FZ1073 ನಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ದಾಳಿ ಮಾಡಿದ ಸಹ ಪೈಲಟ್‌ನನ್ನು ಯುಎಇಗೆ ಬಿಡುಗಡೆ ಮಾಡಲಾಗಿದೆ. ದಾಳಿಯಲ್ಲಿ ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಈಗ, ಈ ಘಟನೆಗೆ ಸಂಬಂಧಿಸಿದೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Fact Check: ಸ್ಮಿತ್ ಮಚ್ಚಾರ್‌ ಸಾಹಸಕ್ಕೆ ಸಂಬಂಧಿಸಿದ್ದೆಂದು 2025ರ ಹಳೆಯ ವಿಮಾನ ತುರ್ತು ದೃಶ್ಯ ವೈರಲ್
Published on: 
2 min read

ಫ್ಲೈದುಬೈ ಫ್ಲೈಟ್ FZ1073 ನಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ದಾಳಿ ಮಾಡಿದ ಸಹ ಪೈಲಟ್‌ನನ್ನು ಯುಎಇಗೆ ಬಿಡುಗಡೆ ಮಾಡಲಾಗಿದೆ. ದಾಳಿಯಲ್ಲಿ ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಈಗ, ಈ ಘಟನೆಗೆ ಸಂಬಂಧಿಸಿದೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಕೆಲವರು ವಿಮಾನದ ತುರ್ತು ಸ್ಲೈಡ್‌ನಿಂದ ಹೊರಬರುತ್ತಿರುವುದನ್ನು ಕಾಣಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಹುದೊಡ್ಡ ವೈಮಾನಿಕ ದುರಂತವೊಂದು ಭಾರತೀಯ ಪೈಲಟ್‌ ಒಬ್ಬರ ಸಾಹಸದಿಂದ ತಪ್ಪಿದೆ. ಇಸ್ರೇಲ್‌ ಪ್ರಯಾಣಿಕರಿದ್ದ ವಿಮಾನವನ್ನು ಅಪಹರಿಸಿ 9/11 ಮಾದರಿಯಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಭಯೋತ್ಪಾದಕರ ಸಂಚು ವಿಪಲವಾಗಿದೆ. ಹೌದು, ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಿ 9/11 ಮಾದರಿಯ ಭೀಕರ ಭಯೋತ್ಪಾದನಾ ದಾಳಿ ನಡೆಸಲು ಯತ್ನಿಸಿದ್ದ ಕೋ-ಪೈಲಟ್‌ನ ಸಂಚನ್ನು ವಿಫಲಗೊಳಿಸಿ ಭಾರತೀಯ ಮೂಲದ ಪೈಲಟ್‌ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ 180 ಪ್ರಯಾಣಿಕರ ಪ್ರಾಣ ಉಳಿಸಿ ಸಾಹಸ ಮೆರೆದಿದ್ದಾರೆ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಈ ವೀಡಿಯೊ ಜುಲೈ 2025 ರದ್ದಾಗಿದೆ ಎಂದು ಕಂಡುಬಂದಿದೆ, ಆ ಸಮಯದಲ್ಲಿ ಅಮೆರಿಕದ ಡೆನ್ವರ್‌ನಲ್ಲಿ ತುರ್ತು ಪರಿಸ್ಥಿತಿಯಿಂದಾಗಿ ವಿಮಾನದ ಟೇಕ್-ಆಫ್ ಅನ್ನು ನಿಲ್ಲಿಸಲಾಯಿತು ಮತ್ತು ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ ಜುಲೈ 27, 2025 ರ ಎಬಿಸಿ ನ್ಯೂಸ್ ಪೋಸ್ಟ್ ನಮಗೆ ಸಿಕ್ಕಿತು. ಇದು ಹಳೆಯ ವೀಡಿಯೊ ಮತ್ತು ಇತ್ತೀಚಿನ ಫ್ಲೈದುಬೈ ಘಟನೆಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ.

ಎಬಿಸಿ ನ್ಯೂಸ್‌ನ ಈ ಪೋಸ್ಟ್‌ನ ಪ್ರಕಾರ, ಈ ವೀಡಿಯೊ ಅಮೆರಿಕದ ಡೆನ್ವರ್‌ನಿಂದ ಬಂದಿದೆ, ಅಲ್ಲಿ ಅಮೇರಿಕನ್ ಏರ್‌ಲೈನ್ಸ್ ವಿಮಾನದ ಟೇಕ್-ಆಫ್ ಅನ್ನು ರದ್ದುಗೊಳಿಸಬೇಕಾಯಿತು ಮತ್ತು ಇದರ ನಂತರ, ಪ್ರಯಾಣಿಕರನ್ನು ತುರ್ತು ಸ್ಲೈಡ್ ಮೂಲಕ ನೇರವಾಗಿ ರನ್‌ವೇಯಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

ಎನ್‌ಬಿಸಿ ನ್ಯೂಸ್ ಕೂಡ ಜುಲೈ 27, 2025 ರಂದು ಇದೇ ವೀಡಿಯೊ ಜೊತೆಗೆ ಸುದ್ದಿ ಪ್ರಕಟಿಸಿದ್ದು, ವರದಿಯ ಪ್ರಕಾರ, ಅಮೇರಿಕನ್ ಏರ್‌ಲೈನ್ಸ್ ಜೆಟ್‌ನ ಲ್ಯಾಂಡಿಂಗ್ ಗೇರ್ ಬೆಂಕಿಗೆ ಆಹುತಿಯಾಗಿದ್ದು, ಕಪ್ಪು ಹೊಗೆ ಆವರಿಸಿತು. ನಂತರ ಟೇಕ್ ಆಫ್ ಅನ್ನು ಸ್ಥಗಿತಗೊಳಿಸಲಾಯಿತು ಮತ್ತು ಪ್ರಯಾಣಿಕರನ್ನು ತುರ್ತು ಸ್ಲೈಡ್‌ಗಳ ಮೂಲಕ ಸ್ಥಳಾಂತರಿಸಲಾಯಿತು.

ವಿಮಾನವು ಡೆನ್ವರ್‌ನಿಂದ ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿತ್ತು. ವಿಮಾನದಲ್ಲಿ ಒಟ್ಟು 173 ಪ್ರಯಾಣಿಕರಿದ್ದರು. ತುರ್ತು ನಿರ್ಗಮನದ ಸಮಯದಲ್ಲಿ ಒಬ್ಬ ಪ್ರಯಾಣಿಕನಿಗೆ ಸ್ವಲ್ಪ ಗಾಯಗಳಾಗಿದ್ದು, ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂಬ ಮಾಹಿತಿ ಇದರಲ್ಲಿದೆ.

ಸ್ಕೈ ನ್ಯೂಸ್ ಕೂಡ ವೈರಲ್ ವೀಡಿಯೊದ ಜೊತೆಗೆ ಸುದ್ದಿ ಪ್ರಕಟಿಸಿದ್ದು, ತುರ್ತು ಸ್ಲೈಡ್ ಬಳಸಿ ಡೆನ್ವರ್ ವಿಮಾನದಿಂದ ಪ್ರಯಾಣಿಕರ ಸ್ಥಳಾಂತರ. ಲ್ಯಾಂಡಿಂಗ್ ಗೇರ್‌ನಲ್ಲಿ ಸಂಭವಿಸಿದ ಸಮಸ್ಯೆಯಿಂದ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ, ಡೆನ್ವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲೇ ಪ್ರಯಾಣಿಕರನ್ನು ತುರ್ತು ಸ್ಲೈಡ್‌ ಬಳಸಿ ವಿಮಾನದಿಂದ ಹೊರಗೆ ಸ್ಥಳಾಂತರಿಸಲಾಯಿತು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಫ್ಲೈದುಬೈ ವಿಮಾನ ಘಟನೆಗೆ ಹಳೆಯ ವೀಡಿಯೊವನ್ನು ಲಿಂಕ್ ಮಾಡುವ ಮೂಲಕ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

logo
South Check
southcheck.in