Fact Check: ಇದು ಹಿಂದೂ ರಾಷ್ಟ್ರೀಯವಾದಿಗಳು ಜಂತರ್ ಮಂತರ್​ಗೆ ಪ್ರಯಾಣ ಬೆಳೆಸಿದ ವಿಡಿಯೊ ಅಲ್ಲ

ಕೇಸರಿ ಧ್ವಜಗಳನ್ನು ಹಿಡಿದು ಜನರ ಗುಂಪುಗಳು ಸಾಗುತ್ತಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಿಜೆಪಿಯ ಪ್ರತಿಭಟನೆಯನ್ನು ವಿರೋಧಿಸಲು ಹಿಂದುತ್ವ ಸಂಘಟನೆಗಳು ಪ್ರತಿಭಟನಾ ಸ್ಥಳದತ್ತ ಸಾಗುತ್ತಿವೆ ಎಂದು ಈ ವಿಡಿಯೊಗಳೊಂದಿಗೆ ಹೇಳಿಕೊಳ್ಳಲಾಗುತ್ತಿದೆ.
Fact Check: ಇದು ಹಿಂದೂ ರಾಷ್ಟ್ರೀಯವಾದಿಗಳು ಜಂತರ್ ಮಂತರ್​ಗೆ ಪ್ರಯಾಣ ಬೆಳೆಸಿದ ವಿಡಿಯೊ ಅಲ್ಲ
Published on: 
2 min read

ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಅಕ್ಟೋಬರ್ 10ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಿತು. ಈ ಹಿನ್ನೆಲೆಯಲ್ಲಿ, ಕೇಸರಿ ಧ್ವಜಗಳನ್ನು ಹಿಡಿದು ಜನರ ಗುಂಪುಗಳು ಸಾಗುತ್ತಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಿಜೆಪಿಯ ಪ್ರತಿಭಟನೆಯನ್ನು ವಿರೋಧಿಸಲು ಹಿಂದುತ್ವ ಸಂಘಟನೆಗಳು ಪ್ರತಿಭಟನಾ ಸ್ಥಳದತ್ತ ಸಾಗುತ್ತಿವೆ ಎಂದು ಈ ವಿಡಿಯೊಗಳೊಂದಿಗೆ ಹೇಳಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡು, ‘‘ನಗರ ನಕ್ಸಲರರಿಂದ ಮತ್ತು ಡಿಮಗಿ ನಕ್ಸಲರಿಂದ ದೇಶವನ್ನು ರಕ್ಷಿಸಲು ಸಾವಿರಾರು ಹಿಂದೂ ರಾಷ್ಟ್ರೀಯವಾದಿಗಳು ಜಂತರ್ ಮಂತರ್ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ಮೇಲೆ ಜಿರಳೆಗಳು, ಕಥೆ ಮುಗಿಯಿತು ಜೈ ಶ್ರೀರಾಮ್’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಅಕ್ಟೋಬರ್ 10 ರಂದು ನಡೆಸಿದ ಪ್ರತಿಭಟನೆಗಿಂತ ಹಿಂದಿನದ್ದಾಗಿದೆ.

ನಿಜಾಂಶವನ್ನು ತಿಳಯಲು ನಾವು ವೈರಲ್ ವಿಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಮೇ 6ರಂದು ಪ್ರಕಟವಾದ Purnea Central newsನ ಫೇಸ್‌ಬುಕ್ ಪೋಸ್ಟ್ ಪತ್ತೆಯಾಗಿದೆ. ಈ ಪೋಸ್ಟ್‌ನಲ್ಲಿ ಈಗ ವೈರಲ್ ಆಗಿರುವ ವಿಡಿಯೊದಲ್ಲಿನ ಅದೇ ದೃಶ್ಯಗಳಿವೆ. ಇದಕ್ಕೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಐತಿಹಾಸಿಕ ವಿಜಯದ ಸಂಭ್ರಮಾಚರಣೆಯ ಅಂಗವಾಗಿ, ‘ಜೈ ಶ್ರೀರಾಮ್’ ಘೋಷಣೆಗಳೊಂದಿಗೆ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು ಎಂಬ ಕ್ಯಾಪ್ಶನ್ ನೀಡಲಾಗಿದೆ.

ಮುಂದಿನ ಪರಿಶೀಲನೆಯಲ್ಲಿ, ಮಾರ್ಚ್ 29ರಂದು ಜಾಟ್ ಅಸೋಸಿಯೇಷನ್‌ನ ಎಕ್ಸ್ ಖಾತೆಯಲ್ಲಿ ಪ್ರಕಟವಾಗಿದ್ದ ಪೋಸ್ಟ್ ಕೂಡ ಪತ್ತೆಯಾಗಿದೆ. ಇದು ಉತ್ತರ ಪ್ರದೇಶವಲ್ಲ, ಮಧ್ಯಪ್ರದೇಶವೂ ಅಲ್ಲ, ಸಹೋದರಾ, ಇದು ದೇವಭೂಮಿ ಉತ್ತರಾಖಂಡವೂ ಅಲ್ಲ, ಇದು ಭಕ್ತರ ಭದ್ರಕೋಟೆ ಎಂದೇ ಹೆಸರಾದ ಪಶ್ಚಿಮ ಬಂಗಾಳ, ಈಗ ಹಿಂದೂಗಳ ಏಕತೆಗೆ ಮಾದರಿಯಾಗಲು ಸಜ್ಜಾಗಿದೆ ಎಂದು ಇದಕ್ಕೆ ಕ್ಯಾಪ್ಶನ್ ನೀಡಲಾಗಿದೆ.

ಇದರಿಂದ, ಈ ವಿಡಿಯೊ ಪ್ರಸ್ತುತ ಪ್ರತಿಭಟನೆಯ ಕರೆಯ ಮೊದಲು ಪ್ರಕಟವಾಗಿದ್ದವು ಮತ್ತು ಅಕ್ಟೋಬರ್ 10ರ ಪ್ರತಿಭಟನೆಗೆ ಸಂಬಂಧಿಸಿಲ್ಲ ಎಂಬುದು ದೃಢಪಟ್ಟಿದೆ. ಆದರೆ, ಈ ವಿಡಿಯೊಗಳಲ್ಲಿನ ಇತರ ವಿವರಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ನಮಗೆ ಸಾಧ್ಯವಾಗಿಲ್ಲ.

ಗಮನಾರ್ಹವಾಗಿ, ಇಂತಹ ಹಿಂದುತ್ವ ಸಂಘಟನೆಗಳಲ್ಲಿ ಒಂದಾದ ಬಜರಂಗ ದಳವು, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಸಿಜೆಪಿ ನೀಡಿರುವ ಪ್ರತಿಭಟನೆಯ ಕರೆಗೆ ಪ್ರತಿಕ್ರಿಯೆಯಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸಭೆ ಸೇರಲು ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಹೀಗಾಗಿ ಪರಿಶೀಲನೆಯ ಪ್ರಕಾರ, ವೈರಲ್ ಆಗಿರುವ ವಿಡಿಯೊ ಅಕ್ಟೋಬರ್ 10ರಂದು ನಿಗದಿಯಾಗಿದ್ದ ಸಿಜೆಪಿ ಪ್ರತಿಭಟನೆಗೂ ಹಲವು ತಿಂಗಳುಗಳ ಮೊದಲೇ ಅಂತರ್ಜಾಲದಲ್ಲಿ ಲಭ್ಯವಿದ್ದವು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ನಡೆಸಲಿರುವ ಪ್ರತಿಭಟನೆಯನ್ನು ವಿರೋಧಿಸಲು ಹಿಂದುತ್ವ ಸಂಘಟನೆಗಳ ಸದಸ್ಯರು ಜಂತರ್ ಮಂತರ್‌ಗೆ ಆಗಮಿಸುತ್ತಿರುವುದನ್ನು ಈ ವಿಡಿಯೊಗಳು ತೋರಿಸುವುದಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

logo
South Check
southcheck.in