Fact Check: ಇದು ಅಯತೊಲ್ಲ ಅಲಿ ಖಮೇನಿ ಅವರ ಕೊನೆಯ ಫೋಟೋವೇ? ಸುಳ್ಳು, ಸತ್ಯ ಇಲ್ಲಿದೆ

ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ವೈರಲ್ ಆಗುತ್ತಿದೆ. ಅವಶೇಷಗಳ ಅಡಿಯಲ್ಲಿ ಮೃತದೇಹವೊಂದನ್ನು ಹಂಚಿಕೊಂಡು, ಇದು ಅಯತೊಲ್ಲ ಅಲಿ ಖಮೇನಿ ಎಂದು ಹೇಳುತ್ತಿದ್ದಾರೆ.
Fact Check: ಇದು ಅಯತೊಲ್ಲ ಅಲಿ ಖಮೇನಿ ಅವರ ಕೊನೆಯ ಫೋಟೋವೇ? ಸುಳ್ಳು, ಸತ್ಯ ಇಲ್ಲಿದೆ
Published on
2 min read

ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಸಮರ ಸಾರುತ್ತಿವೆ. ಕಳೆದ ಕೆಲ ದಿನಗಳಿಂದ ದಾಳಿ, ಪ್ರತಿದಾಳಿಗಳು ನಡೆಯುತ್ತಿವೆ. ಅಮೆರಿಕ ಹಾಗೂ ಇಸ್ರೇಲ್ ಸೇನೆಯು ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿಯನ್ನು ಹತ್ಯೆ ಮಾಡಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ವೈರಲ್ ಆಗುತ್ತಿದೆ. ಅವಶೇಷಗಳ ಅಡಿಯಲ್ಲಿ ಮೃತದೇಹವೊಂದನ್ನು ಹಂಚಿಕೊಂಡು, ಇದು ಅಯತೊಲ್ಲ ಅಲಿ ಖಮೇನಿ ಎಂದು ಹೇಳುತ್ತಿದ್ದಾರೆ.

ಇನ್​ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ಆಯಾತುಲ್ಲ ಅಲಿ ಕಮೇನಿ ಕೊನೆಯ ಬಾರಿಗೆ ಒಂದು ಸರಿ ನೋಡ್ಕೊಂಡ್ಬಿಡಿ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ನಿಜವಾದ ಫೋಟೋ ಅಲ್ಲ, ಬದಲಾಗಿ ಇದನ್ನು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ, ಅಲಿ ಖಮೇನಿಯವರ ಮರಣದ ನಂತರದ ಅವರ ದೇಹ" ಎಂಬ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದೇವೆ. ಆದರೆ, ಅವರ ದೇಹದ ಯಾವುದೇ ಅಧಿಕೃತ ಚಿತ್ರಗಳು ಸಿಗಲಿಲ್ಲ. ಅವರ ಸಾವು ದೃಢಪಟ್ಟಿದ್ದರೂ ಸಹ, ಅವರ ದೇಹದ ಯಾವುದೇ ಫೋಟೋಗಳು ಇನ್ನೂ ಅಸ್ತಿತ್ವದಲ್ಲಿಲ್ಲ.

ಬಳಿಕ ನಾವು ಫೋಟೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. ಆಗ ಇದರಲ್ಲಿ AI ವಿಷಯದ ವಿಶಿಷ್ಟವಾದ ಅಸಂಗತತೆಗಳನ್ನು ನಾವು ಗಮನಿಸಿದೆವು. ಉದಾಹರಣೆಗೆ ಮೃತದೇಹದ ಪಕ್ಕದಲ್ಲಿ ನಿಂತಿರುವ ರಕ್ಷಕರ ಕೈಗಳು ವಿರೂಪಗೊಂಡಿದೆ. ಅವುಗಳಲ್ಲಿ ಬೆಸುಗೆ ಹಾಕಿದ ಬೆರಳುಗಳು, ಅನಿಯಮಿತ ಆಕಾರಗಳು ಅಥವಾ ಅಸಮಂಜಸ ಸಂಖ್ಯೆ ಸೇರಿವೆ. ಅಷ್ಟೇ ಅಲ್ಲದೆ ರಕ್ಷಕರ ಹೆಡ್‌ಲ್ಯಾಂಪ್‌ಗಳಿಂದ ಬರುವ ಬೆಳಕು ಪ್ರತಿಫಲನಗಳನ್ನು ಉಂಟುಮಾಡುವುದಿಲ್ಲ. ಹಿನ್ನೆಲೆಯಲ್ಲಿ ಬೆಂಕಿ ಕೂಡ ಕಾಣುತ್ತಿದ್ದು ಇದು ನೈಜ್ಯತೆಗೆ ದೂರವಾದಂತೆ ಕಾಣುತ್ತದೆ.

ಇನ್ನಷ್ಟು ಮುಂದೆವರೆದು ನಾವು ಎಐ ಪತ್ತೆ ಸಾಧನದಲ್ಲಿ ಫೋಟೋವನ್ನು ಪರೀಕ್ಷಿಸಿದ್ದೇವೆ. ಹೈವ್ ಮಾಡರೇಶನ್​ ಈ ಫೋಟೋ ಶೇ. 99.9 ರಷ್ಟು ಎಐಯಿಂದ ರಚಿಸಲಾಗಿದೆ ಎಂದು ಹೇಳಿದೆ. ಹಾಗೆಯೆ ಸೈಟ್​ಇಂಜಿನ್ ಕೂಡ ಇದು ಎಐ ಫೋಟೋ ಎಂದು ಸೂಚಿಸಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಳೆ ಇರಾನ್ ವಿರುದ್ಧ ಅಮೆರಿಕ-ಇಸ್ರೇಲಿ ದಾಳಿಯ ಸಮಯದಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಸಾವು ಸಂಭವಿಸಿರುವುದು ನಿಜವಾದರೂ ವೈರಲ್ ಆಗುತ್ತಿರುವ ಫೋಟೋ ಎಐಯಿಂದ ರಚಿಸಿರುವುದು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Related Stories

No stories found.
logo
South Check
southcheck.in