Fact Check: ಟಿಕೆಟ್ ತೆಗೆದುಕೊಳ್ಳದೆ ಬಸ್ ಏರಲು ಹೊರಟಾಗ ಮೆನ್ ಗೆಟ್​ನಲ್ಲಿ ಸಿಕ್ಕಿಹಾಕಿಕೊಂಡ ಪಾಕಿಸ್ತಾನ ಮಹಿಳೆ? ಸುಳ್ಳು, ಸತ್ಯ ಇಲ್ಲಿದೆ

ಟಿಕೆಟ್ ಇಲ್ಲದೆ ಪ್ರಯಾಣಿಸಲು ಪ್ರಯತ್ನಿಸುತ್ತಿರುವಾಗ ಪಾಕಿಸ್ತಾನ ಮಹಿಳೆ ಪ್ರವೇಶ ದ್ವಾರದಲ್ಲಿ ಸಿಲುಕಿಕೊಂಡಿರುವುದನ್ನು ತೋರಿಸುವ ವೀಡಿಯೊವನ್ನು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ.
Fact Check: ಟಿಕೆಟ್ ತೆಗೆದುಕೊಳ್ಳದೆ ಬಸ್ ಏರಲು ಹೊರಟಾಗ ಮೆನ್ ಗೆಟ್​ನಲ್ಲಿ ಸಿಕ್ಕಿಹಾಕಿಕೊಂಡ ಪಾಕಿಸ್ತಾನ ಮಹಿಳೆ? ಸುಳ್ಳು, ಸತ್ಯ ಇಲ್ಲಿದೆ
Published on
2 min read

ಟಿಕೆಟ್ ಇಲ್ಲದೆ ಪ್ರಯಾಣಿಸಲು ಪ್ರಯತ್ನಿಸುತ್ತಿರುವಾಗ ಪಾಕಿಸ್ತಾನ ಮಹಿಳೆ ಪ್ರವೇಶ ದ್ವಾರದಲ್ಲಿ ಸಿಲುಕಿಕೊಂಡಿರುವುದನ್ನು ತೋರಿಸುವ ವೀಡಿಯೊವನ್ನು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊದೊಂದಿಗೆ, ‘‘ನಿಲೋಫರ್ ಬೇಗಂ ಅಂತ ಪಾಕಿಸ್ತಾನದ ಮಹಿಳೆ ಟಿಕೆಟ್ ತೆಗೆದುಕೊಳ್ಳದೆ ಓಡಿ ಹೊರಟಿದ್ದಳು ಆದ್ರೆ ಮೆನ್ ಗೆಟ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ. ಎಲ್ಲೋದ್ರು ಎಲ್ಲಿ ಬಂದ್ರು ಇವರು ಕಳ್ಳತನ ಮಾಡೋದೇ ಇವರ ಕೆಲಸ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಹಳೇಯದ್ದಾಗಿದ್ದು ಕೊಲಂಬಿಯಾದ ರಾಜಧಾನಿ ಬೊಗೋಟಾದಿಂದ ಬಂದಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಇದೇ ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್​ನೊಂದಿಗೆ ಜನವರಿ 17, 2024 ರಂದು ಸ್ಪ್ಯಾನಿಷ್ ಮಾಧ್ಯಮ ಮಾಡಿರುವ ವರದಿ ಸಿಕ್ಕಿತು. ಇದು ಕೊಲಂಬಿಯಾದ ಬೊಗೋಟಾದಿಂದ ಬಂದಿದ್ದು, ಅಲ್ಲಿ ಸ್ಥಳೀಯ ಪ್ರಯಾಣಿಕರೊಬ್ಬರು ಬಸ್ ರಾಪಿಡ್ ಟ್ರಾನ್ಸಿಟ್ (BRT) ವ್ಯವಸ್ಥೆಯಾದ ಟ್ರಾನ್ಸ್‌ಮಿಲೆನಿಯೊದಲ್ಲಿನ ನಿಲ್ದಾಣದಲ್ಲಿನ ತಡೆಗೋಡೆಯ ಮೂಲಕ ನುಸುಳಲು ಪ್ರಯತ್ನಿಸುತ್ತಿದ್ದರು ಎಂದು ಹೇಳುತ್ತದೆ.

ಜನವರಿ 24, 2024 ರಂದು ಡೈಲಿ ಮೇಲ್ ಕೂಡ ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡು, "ಕಳೆದ ವಾರ ಟ್ರಾನ್ಸ್‌ಮಿಲೆನಿಯೊ ಹಬ್‌ನಲ್ಲಿ ಗಾಜಿನ ಪ್ರವೇಶ ದ್ವಾರದ ಕೆಳಗೆ ತೆವಳಲು ಪ್ರಯತ್ನಿಸುತ್ತಿದ್ದ ಮಹಿಳೆಯೊಬ್ಬರು ಸಿಕ್ಕಿಹಾಕಿಕೊಂಡರು. 75 ಸೆಂಟ್ ಶುಲ್ಕವನ್ನು ಪಾವತಿಸದ ಕಾರಣ ಅವರು ಮುಂದೆ ಸಾಗಲು ಹೆಣಗಾಡುತ್ತಿರುವುದನ್ನು ತೋರಿಸುವ ದೃಶ್ಯಗಳು ವೈರಲ್ ಆಗಿವೆ" ಎಂದು ವರದಿಯಲ್ಲಿ ಹೇಳಲಾಗಿದೆ.

Oem.com ಕೂಡ ಜನವರಿ 14, 2024 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ, ‘‘ಕೊಲಂಬಿಯಾದ ಮಹಿಳೆಯೊಬ್ಬರು ಮೆಟ್ರೋದಂತೆಯೇ ಟ್ರಾನ್ಸ್‌ಮಿಲೆನಿಯೊ ಸಾರಿಗೆ ವ್ಯವಸ್ಥೆಯಲ್ಲಿ ಹಣ ಪಾವತಿಸದೆ ದಾಟಲು ಪ್ರಯತ್ನಿಸುವಾಗ ಬಾಗಿಲಿನಲ್ಲಿ ಸಿಲುಕಿಕೊಂಡಾಗ ಮುಜುಗರದ ಪರಿಸ್ಥಿತಿಯನ್ನು ಅನುಭವಿಸಿದ ನಂತರ ವೈರಲ್ ಆಗಿದೆ.’’ ಎಂದು ಸುದ್ದಿ ಪ್ರಕಟಿಸಿದೆ.

ಕೊಲಂಬಿಯಾದ ಮಹಿಳೆ ಎಂಬ ಹೇಳಿಕೆಯೊಂದಿಗೆ ಜನವರಿ 2024 ರಲ್ಲಿ ಇತರೆ ಮಾಧ್ಯಮ ಸುದ್ದಿ ಪ್ರಕಟಿಸಿರುವುದನ್ನು ನೀವು ಇಲ್ಲಿ, ಇಲ್ಲಿ ಓದಬಹುದು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಪಾಕಿಸ್ತಾನ ಮಹಿಳೆ ಟಿಕೆಟ್ ತೆಗೆದುಕೊಳ್ಳದೆ ಬಸ್ ಏರಲು ಹೊರಟಾಗ ಮೆನ್ ಗೆಟ್​ನಲ್ಲಿ ಸಿಲುಕಿಕೊಂಡಿರುವುದನ್ನು ತೋರಿಸುವ ವೀಡಿಯೊ ಹಳೇಯದು ಮತ್ತು ಬೊಗೋಟಾದಿಂದ ಬಂದಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

logo
South Check
southcheck.in