Fact Check: ಆಂಬ್ಯುಲೆನ್ಸ್‌ ಬಾಗಿಲಿನಿಂದ ಸ್ಟ್ರೆಚರ್‌ ಜೊತೆಗೆ ರಸ್ತೆಗೆ ಬಿದ್ದ ರೋಗಿ ಎಂದು ಎಐ ವೀಡಿಯೊ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ, ರೋಗಿಯೊಬ್ಬರು ವೇಗವಾಗಿ ಚಲಿಸುತ್ತಿರುವ ಆಂಬ್ಯುಲೆನ್ಸ್‌ನಿಂದ ಅದರ ಸ್ಟ್ರೆಚರ್‌ನೊಂದಿಗೆ ಹೊರ ಬೀಳುತ್ತಿರುವುದನ್ನು ಕಾಣಬಹುದು. ವೈರಲ್ ಆಗಿರುವ ಈ ವೀಡಿಯೊ ಕ್ಯಾಲಿಫೋರ್ನಿಯಾದ ಸಾಲಿಡಾದ್ದು ಎಂದು ಹೇಳಲಾಗುತ್ತಿದೆ.
Fact Check: ಆಂಬ್ಯುಲೆನ್ಸ್‌ ಬಾಗಿಲಿನಿಂದ ಸ್ಟ್ರೆಚರ್‌ ಜೊತೆಗೆ ರಸ್ತೆಗೆ ಬಿದ್ದ ರೋಗಿ ಎಂದು ಎಐ ವೀಡಿಯೊ ವೈರಲ್
Published on
2 min read

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ, ರೋಗಿಯೊಬ್ಬರು ವೇಗವಾಗಿ ಚಲಿಸುತ್ತಿರುವ ಆಂಬ್ಯುಲೆನ್ಸ್‌ನಿಂದ ಅದರ ಸ್ಟ್ರೆಚರ್‌ನೊಂದಿಗೆ ಹೊರ ಬೀಳುತ್ತಿರುವುದನ್ನು ಕಾಣಬಹುದು. ವೈರಲ್ ಆಗಿರುವ ಈ ವೀಡಿಯೊ ಕ್ಯಾಲಿಫೋರ್ನಿಯಾದ ಸಾಲಿಡಾದ್ದು ಎಂದು ಹೇಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಸಾಲಿಡಾ, ಕ್ಯಾಲಿಫೋರ್ನಿಯಾ: ಚಲಿಸುತ್ತಿದ್ದ ಆಂಬ್ಯುಲೆನ್ಸ್‌ನಿಂದ ರೋಗಿಯು ಸ್ಟ್ರೆಚರ್ ಜೊತೆಗೆ ಬೀಳುತ್ತಿರುವುದು ಕಂಡುಬಂದಿದೆ. ಆಘಾತಕಾರಿ ಸಂಗತಿಯೆಂದರೆ, ಚಾಲಕ ಇದನ್ನು ಗಮನಿಸಲಿಲ್ಲ ಮತ್ತು ಹಲವಾರು ಮೀಟರ್‌ಗಳಷ್ಟು ಚಾಲನೆಯನ್ನು ಮುಂದುವರಿಸಿದನು. ಈ ವೀಡಿಯೊ ಸಾರ್ವಜನಿಕರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ನೈಜ್ಯವಾಗಿ ನಡೆದ ಘಟನೆ ಅಲ್ಲ ಬದಲಾಗಿ ಇದು ಕೃತಕ ಬುದ್ದಿಮತ್ತೆಯಿಂದ ರಚಿಸಿದ ವೀಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ಮೊದಲಿಗೆ ನಾವು ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ವೀಡಿಯೊ ಪ್ರಸಾರ ಮಾಡುವಾಗ, ಸಲಿಡಾ 13 ಮತ್ತು ಟೋ ಬಾಜಾ 1 ಕಿಮೀ ಎಂದು ಬರೆದಿರುವ ಸೈನ್‌ಬೋರ್ಡ್ ಅನ್ನು ನಾವು ಗಮನಿಸಿದ್ದೇವೆ.

ಹೆಚ್ಚಿನ ತನಿಖೆಯ ನಂತರ, ಸಲಿಡಾ ಎಂಬುದು ಎಕ್ಸಿಟ್ ಎಂದು ಬಳಸಲಾಗುವ ಸ್ಪ್ಯಾನಿಷ್ ಪದ ಎಂದು ನಾವು ಕಂಡುಕೊಂಡಿದ್ದೇವೆ. ಈರೀತಿಯ ಸೈನ್ ಬೋರ್ಡ್ ಸಾಮಾನ್ಯವಾಗಿ ರಸ್ತೆಯಲ್ಲಿ ಬಳಸಲಾಗುವುದಿಲ್ಲ. ಇನ್ನು ಟೋವಾ ಬಾಜಾ ಎಂಬುದು ಯುನೈಟೆಡ್ ಸ್ಟೇಟ್ಸ್‌ನ ಪ್ರದೇಶವಾದ ಪೋರ್ಟೊ ರಿಕೊದಲ್ಲಿರುವ ಒಂದು ನಗರ ಮತ್ತು ಪುರಸಭೆಯ ಪ್ರದೇಶದ ಹೆಸರು. ಇದು ರಾಜಧಾನಿ ಸ್ಯಾನ್ ಜುವಾನ್ ಬಳಿಯ ಉತ್ತರ ಪ್ರದೇಶದಲ್ಲಿದೆ ಮತ್ತು ಇದು ಕಡಲತೀರಗಳು ಮತ್ತು ಇಸ್ಲಾ ಡಿ ಕ್ಯಾಬ್ರಾಸ್ ಮತ್ತು ಎಲ್ ಕ್ಯಾನುಯೆಲೊದಂತಹ ಐತಿಹಾಸಿಕ ತಾಣಗಳಿಗೆ ಹೆಸರುವಾಸಿಯಾಗಿದೆ.

ಇದರ ಜೊತೆಗೆ ವೀಡಿಯೋವು ನೈಜ್ಯತೆಗೆ ದೂರವಾದಂತೆ ಕಂಡುಬಂತು. ಉದಾಹರಣೆಗೆ, ಕಾಣುವ ಪರಿಸರ ಸರಿಯಾಗಿಲ್ಲದಿರುವುದು, ಸ್ಟ್ರಚರ್ ಕೆಳಗೆ ಬೀಳುವಾಗ ಅದರಲ್ಲಿರುವ ವ್ಯಕ್ತಿಯ ಕೈ ವಿರೂಪಗೊಂಡಂತೆ ಕಾಣುವ ದೃಶ್ಯಗಳಲ್ಲಿ ಒಟ್ಟಾರೆಯಾಗಿ ಸಂಶಯಕ್ಕೆ ಕಾರಣವಾಯಿತು. ಇದು ಎಐನಿಂದ ಮಾಡಿದ್ದು ಎನ್ನುವ ಸಂಶಯ ಮೂಡಿತು.

ಇದನ್ನು ದೃಢೀಕರಿಸಲು, ಕ್ಲಿಪ್‌ನ ಫ್ರೇಮ್‌ಗಳನ್ನು ಮೂರು AI-ಪತ್ತೆ ಸಾಧನಗಳಾದ ಹೈವ್ ಮಾಡರೇಶನ್, ವಾಸ್‌ಐಟ್‌ಎಐ ಮತ್ತು ಸೈಟ್‌ಇಂಜೈನ್ ನಲ್ಲಿ ಪರೀಕ್ಷಿಸಿದ್ದೇವೆ. ಇವೆಲ್ಲವೂ ವೀಡಿಯೋವನ್ನು ಎಐಯಿಂದ ರಚಿತವಾಗಿದ ಎಂದು ಸೂಚಿಸಿದೆ.

ಬಳಿಕ ನಾವು ವೀಡಿಯೊದ ಮೂಲವನ್ನು ಹುಡುಕಲು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಈ ಸಂದರ್ಭ, ನಾವು ಇನ್​ಸ್ಟಾಗ್ರಾಮ್​ನಲ್ಲಿ ಮೂಲ ವೀಡಿಯೊವನ್ನು ಕಂಡುಕೊಂಡಿದ್ದೇವೆ. ವೀಡಿಯೊವನ್ನು aicriollapr ಎಂಬ ಪರಿಶೀಲಿಸಿದ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ವೀಡಿಯೊಗೆ ಸ್ಪ್ಯಾನಿಷ್ ಶೀರ್ಷಿಕೆ ಹೀಗಿದೆ, "ಪೋರ್ಟೊ ರಿಕೊದಲ್ಲಿ ಆಂಬ್ಯುಲೆನ್ಸ್ ರೋಗಿಯನ್ನು ಮರೆತುಬಿಡುವಷ್ಟು ಆತುರದಲ್ಲಿದ್ದಾಗ..." ಎಂದು ಹಾಸ್ಯಮಯವಾಗಿ ಬರೆಯಲಾಗಿದೆ. ಈ ಪೇಜ್ ನಲ್ಲಿ ‘‘ಎಐ-ನಿಂದ ಮಾಡಿರುವ ವಿಡಂಬನೆಗಳನ್ನು’’ ನಿರ್ಮಿಸುತ್ತೇವೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ವೀಡಿಯೊದೊಂದಿಗೆ ಮಾಡಲಾದ ಹಕ್ಕು ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು AI- ರಚಿತವಾದ ವೀಡಿಯೊ ಆಗಿದೆ.

Related Stories

No stories found.
logo
South Check
southcheck.in