Fact Check: ಬೇಲ್​ನಿಂದ ಹೊರಬಂದ ಬಳಿಕ ಸ್ವತಂತ್ರ ಭಾರದ್ವಾಜ್ ಅಟ್ಟಾಹಸ ಎಂದು ಹಳೆಯ ವಿಡಿಯೊ ವೈರಲ್

1 ನಿಮಿಷ 16 ಸೆಕೆಂಡ್‌ಗಳ ಅವಧಿಯ ಈ ವಿಡಿಯೊದಲ್ಲಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಭಾರದ್ವಾಜ್ ಕಾಣಿಸಿಕೊಳ್ಳುತ್ತಾರೆ. ಆ ವ್ಯಕ್ತಿ ಭಾರದ್ವಾಜ್ ಬಿಡುಗಡೆಯನ್ನು ಹೊಗಳುತ್ತಾ, ಅವರನ್ನು ಸಿಂಹಕ್ಕೆ ಹೋಲಿಸುತ್ತಾನೆ.
Fact Check: ಬೇಲ್​ನಿಂದ ಹೊರಬಂದ ಬಳಿಕ ಸ್ವತಂತ್ರ ಭಾರದ್ವಾಜ್ ಅಟ್ಟಾಹಸ ಎಂದು ಹಳೆಯ ವಿಡಿಯೊ ವೈರಲ್
Published on
2 min read

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ವಿರುದ್ಧ ಸ್ವತಂತ್ರ ಭಾರದ್ವಾಜ್ ಬೆದರಿಕೆ ಮಾತುಗಳನ್ನು ಆಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ವಿದ್ಯಾರ್ಥಿ ಹೋರಾಟಗಾರರೊಬ್ಬರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಮೂರು ವಾರಗಳ ಮಧ್ಯಂತರ ಜಾಮೀನು ನೀಡಿದ ಬಳಿಕ ಭಾರದ್ವಾಜ್ ಸೆಪ್ಟೆಂಬರ್ 17ರ ತಡರಾತ್ರಿ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದರು.

1 ನಿಮಿಷ 16 ಸೆಕೆಂಡ್‌ಗಳ ಅವಧಿಯ ಈ ವಿಡಿಯೊದಲ್ಲಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಭಾರದ್ವಾಜ್ ಕಾಣಿಸಿಕೊಳ್ಳುತ್ತಾರೆ. ಆ ವ್ಯಕ್ತಿ ಭಾರದ್ವಾಜ್ ಬಿಡುಗಡೆಯನ್ನು ಹೊಗಳುತ್ತಾ, ಅವರನ್ನು ಸಿಂಹಕ್ಕೆ ಹೋಲಿಸುತ್ತಾನೆ. ಬಳಿಕ ಭಾರದ್ವಾಜ್, ತಾವು ಜೈಲಿನಲ್ಲಿದ್ದಾಗ ತಮ್ಮ ಬೆಂಬಲಿಗರ ಮೇಲೆ ದಾಳಿ ಮಾಡಿದರೆಂದು ಆರೋಪಿಸಲಾಗಿರುವವರ ವಿರುದ್ಧ ಬೆದರಿಕೆ ಮಾತುಗಳನ್ನು ಆಡುತ್ತಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡು, ‘‘ಕೋರ್ಟ್‌ ನಿಯಮಾವಳಿಗಳನ್ನು ಗಾಳಿಗೆ ತೂರಿದ ಸ್ವತಂತ್ರ ಭಾರದ್ವಾಜ್! ಬೇಲ್‌ ನಿಂದ ಹೊರಬಂದ ಬೆನ್ನಲ್ಲೇ ನಾನೊಬ್ಬ 'ಬ್ರಾಹ್ಮಣ ಶೇರ್' ಎಂದು ಅಟ್ಟಹಾಸ!’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಸೌತ್ ಚೆಕ್ ಪರಿಶೀಲನೆಯ ಪ್ರಕಾರ, ಈ ಹೇಳಿಕೆ ದಾರಿ ತಪ್ಪಿಸುವಂತಿದೆ. ಈ ವಿಡಿಯೊವನ್ನು ಭಾರದ್ವಾಜ್ ಸೆಪ್ಟೆಂಬರ್ 17ರಂದು ಜೈಲಿನಿಂದ ಬಿಡುಗಡೆಯಾದ ಬಳಿಕ ಚಿತ್ರೀಕರಿಸಿಲ್ಲ. ಅವರ ಬಿಡುಗಡೆಯ ಹಲವು ತಿಂಗಳುಗಳ ಹಿಂದೆಯೇ ಈ ವಿಡಿಯೊ ಆನ್‌ಲೈನ್‌ನಲ್ಲಿ ಲಭ್ಯವಿತ್ತು.

ಮೂಲ ವಿಡಿಯೊದಲ್ಲಿ ಏನಿದೆ?

ವೈರಲ್ ವಿಡಿಯೊದ ಪ್ರಮುಖ ದೃಶ್ಯಗಳನ್ನು ಬಳಸಿ ನಾವು ರಿವರ್ಸ್ ಇಮೇಜ್ ಸರ್ಚ್ ನಡೆಸಿದೆವು. ಈ ವೇಳೆ ಸುಮಾರು ಒಂದು ವಾರದ ಹಿಂದೆ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದ ವಿಡಿಯೊವೊಂದು ಪತ್ತೆಯಾಯಿತು.

ಸೆಪ್ಟೆಂಬರ್ 7, 2026ರಿಂದಲೇ ಇದೇ ವಿಡಿಯೊ ಯೂಟ್ಯೂಬ್‌ನಲ್ಲಿ ಲಭ್ಯವಿರುವುದನ್ನು ನಾವು ಕಂಡುಕೊಂಡೆವು.

ಇದೇ ವಿಡಿಯೊದ ಮತ್ತೊಂದು ಆವೃತ್ತಿಯನ್ನು ವೈಭವ್ ಕುಮಾರ್ ಎಂಬವರು ಜೂನ್ 26, 2026ರಂದು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಅಪ್‌ಲೋಡ್ ಭಾರದ್ವಾಜ್ ಸೆಪ್ಟೆಂಬರ್ 17ರಂದು ತಿಹಾರ್ ಜೈಲಿನಿಂದ ಬಿಡುಗಡೆಯಾಗುವುದಕ್ಕಿಂತ ಹಲವು ತಿಂಗಳುಗಳ ಹಿಂದಿನದ್ದಾಗಿದೆ. ಹೀಗಾಗಿ, ಈ ವಿಡಿಯೊವನ್ನು ಅವರು ಜೈಲಿನಿಂದ ಬಿಡುಗಡೆಯಾದ ಬಳಿಕ ಚಿತ್ರೀಕರಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ವರದಿಗಳ ಪ್ರಕಾರ, ಭಾರದ್ವಾಜ್ ಅವರಿಗೆ ಸೆಪ್ಟೆಂಬರ್ 15ರಂದು ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರಾಗಿತ್ತು. ಬಳಿಕ ಸೆಪ್ಟೆಂಬರ್ 17ರ ತಡರಾತ್ರಿ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದರು.

ಈ ವಿಡಿಯೊದ ಹಿಂದಿನ ಆವೃತ್ತಿಗಳು, ದೃಶ್ಯಗಳನ್ನು ಭಾರದ್ವಾಜ್ ಅವರ ಬಿಡುಗಡೆಯ ನಂತರ ಚಿತ್ರೀಕರಿಸಲಾಗಿಲ್ಲ ಎಂಬುದನ್ನು ತೋರಿಸುತ್ತವೆ. ಈ ಹೇಳಿಕೆ ದಾರಿ ತಪ್ಪಿಸುವಂತಿದೆ.

logo
South Check
southcheck.in