Fact Check: ಲಿಫ್ಟ್‌ನ ಹೊರಗೆ ವ್ಯಕ್ತಿಯೊಬ್ಬ ಹುಡುಗಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸುವ ಈ ವೀಡಿಯೊ ಸ್ಕ್ರಿಪ್ಟ್ ಮಾಡಿದ್ದಾಗಿದೆ

ವ್ಯಕ್ತಿಯೊಬ್ಬ ಹುಡುಗಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊ ಸಿಸಿಟಿವಿ ದೃಶ್ಯಾವಳಿಯಂತೆ ಕಾಣುತ್ತಿದೆ. ಲಿಫ್ಟ್ ನಿಂದ ಹೊರಬರುವಾಗ ಪುರುಷನೊಬ್ಬ ಮಹಿಳೆಗೆ ಡಿಕ್ಕಿ ಹೊಡೆಯುವುದನ್ನು ವೀಡಿಯೊ ತೋರಿಸುತ್ತದೆ.
Fact Check: ಲಿಫ್ಟ್‌ನ ಹೊರಗೆ ವ್ಯಕ್ತಿಯೊಬ್ಬ ಹುಡುಗಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸುವ ಈ ವೀಡಿಯೊ ಸ್ಕ್ರಿಪ್ಟ್ ಮಾಡಿದ್ದಾಗಿದೆ
Published on
2 min read

ವ್ಯಕ್ತಿಯೊಬ್ಬ ಹುಡುಗಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊ ಸಿಸಿಟಿವಿ ದೃಶ್ಯಾವಳಿಯಂತೆ ಕಾಣುತ್ತಿದೆ. ಲಿಫ್ಟ್ ನಿಂದ ಹೊರಬರುವಾಗ ಪುರುಷನೊಬ್ಬ ಮಹಿಳೆಗೆ ಡಿಕ್ಕಿ ಹೊಡೆಯುವುದನ್ನು ವೀಡಿಯೊ ತೋರಿಸುತ್ತದೆ. ನಂತರ ಜಗಳ ನಡೆದು ಮಹಿಳೆ ಆತನಿಗೆ ಕಪಾಳಮೋಕ್ಷ ಮಾಡುತ್ತಾಳೆ. ಪ್ರತಿಯಾಗಿ, ಆ ವ್ಯಕ್ತಿ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ಮಾಡುತ್ತಾನೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಸಿಸಿಟಿವಿ ಇಲ್ಲದಿದ್ದರೆ ಸತ್ಯವೇ ಮರೆಯಾಗುತ್ತಿತ್ತಾ?. ಎಲಿವೇಟರ್‌ನಲ್ಲಿ ಹುಡುಗನ ಕೈ ತಪ್ಪಾಗಿ ಮಹಿಳೆಗೆ ತಗುಲಿತು. ಆದರೆ ಮಹಿಳೆ ಅದನ್ನು ದೊಡ್ಡ ವಿಷಯವನ್ನಾಗಿ ಮಾಡಿಕೊಂಡು ಅವನನ್ನು ಅವಮಾನ ಮಾಡುತ್ತಾ ಕೊನೆಗೆ ಕಪಾಳಮೋಕ್ಷ ಮಾಡಿದಳು. ಇದರಿಂದ ಕೋಪಗೊಂಡ ಹುಡುಗ ಕೂಡ ತೀವ್ರವಾಗಿ ಪ್ರತಿಕ್ರಿಯಿಸಿ ಜಗಳಕ್ಕೆ ಇಳಿದನು. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿರಲಿಲ್ಲದಿದ್ದರೆ, ನಿಜವಾದ ಘಟನೆ ಬದಲಾಗಿಬಿಟ್ಟು ಮಹಿಳೆ ತಾನೇ ಪೀಡಿತೆ ಎಂದು ತೋರಿಸಿಕೊಳ್ಳುವ ಸಾಧ್ಯತೆಯೂ ಇತ್ತು’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಯಾವುದೇ ನೈಜ ಘಟನೆಯದ್ದಲ್ಲ, ಬದಲಾಗಿ ಇದೊಂದು ಸ್ಕ್ರಿಪ್ಟ್ ಮಾಡಿದ ವೀಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೀಡಿಯೊದ ಪ್ರಮುಖ ಚೌಕಟ್ಟುಗಳನ್ನು ಹಿಮ್ಮುಖವಾಗಿ ಹುಡುಕಿದಾಗ, ವಿಪಿನ್ ಚೌಹಾಣ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರ ಖಾತೆಯಲ್ಲಿ ಉತ್ತಮ ಕ್ವಾಲಿಟಿಯ ಪೂರ್ಣ ವೀಡಿಯೊ ಕಂಡುಬಂದಿದೆ. ವೀಡಿಯೊದ ಶೀರ್ಷಿಕೆಯು 'ನಟನೆ' ಮತ್ತು 'ಕುಸ್ತಿ' ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಒಳಗೊಂಡಿದೆ. ಜೊತೆಗೆ Planned Video ಎಂದು ಕೂಡ ಬರೆಯಲಾಗಿದೆ.

ವಿಡಿಯೋದಲ್ಲಿರುವ ಹುಡುಗನ ಹೆಸರು ವಿಪಿನ್ ಚೌಹಾಣ್. ಅವರ ಇನ್‌ಸ್ಟಾಗ್ರಾಮ್ ಬಯೋ ಪ್ರಕಾರ, ಅವರು ಒಬ್ಬ ಕುಸ್ತಿಪಟು. ಅವರ ಖಾತೆಯಲ್ಲಿರುವ ಹಲವಾರು ಇತರ ವೀಡಿಯೊಗಳು "CWE ಅಕಾಡೆಮಿ" ಗಾಗಿ ಬ್ಯಾನರ್ ಅನ್ನು ಒಳಗೊಂಡಿವೆ. CWE ಪಂಜಾಬ್‌ನಲ್ಲಿರುವ ಪ್ರಸಿದ್ಧ ಕುಸ್ತಿಪಟು ಖಲಿಯ ಕುಸ್ತಿ ಅಕಾಡೆಮಿಯಾಗಿದೆ. ವೈರಲ್ ವೀಡಿಯೊದಲ್ಲಿ ಕಂಡುಬರುವ ಅದೇ ಹುಡುಗಿ ಸೇರಿದಂತೆ ಅವರ ಖಾತೆಯು ಇದೇ ರೀತಿಯ ಇತರ ವೀಡಿಯೊಗಳನ್ನು ಸಹ ಒಳಗೊಂಡಿದೆ.

ಹೆಚ್ಚಿನ ಮಾಹಿತಿಗಾಗಿ ನಾವು ವಿಪಿನ್ ಚೌಹಾಣ್ ಅವರೊಂದಿಗೆ ಮಾತನಾಡಿದೆವು. ವೀಡಿಯೊದಲ್ಲಿರುವ ಹುಡುಗಿ ಅವರ ಪತ್ನಿ ರುಚಿಕಾ ಶಾ ಎಂದು ಅವರು ಬಹಿರಂಗಪಡಿಸಿದರು. ಕೆಲವು ದಿನಗಳ ಹಿಂದೆ ಈ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ಮಾಡಲು ಪ್ರಾರಂಭಿಸಿದೆ ಎಂದು ಅವರು ಸೌತ್ ಚೆಕ್​ಗೆ ವಿವರಿಸಿದರು. ಈ ವೀಡಿಯೊಗಳು ಬಹಳಷ್ಟು ವೀಕ್ಷಣೆಗಳು ಮತ್ತು ಇಷ್ಟಗಳನ್ನು ಪಡೆದಿವೆ ಮತ್ತು ಅವರು ಅಂತಹ ವೀಡಿಯೊಗಳನ್ನು ಇನ್ನಷ್ಟು ಮಾಡಲು ನಿರ್ಧರಿಸಿದ್ದಾರಂತೆ.

ಅವರು ಮತ್ತು ಅವರ ಪತ್ನಿ ವೃತ್ತಿಪರ ಕುಸ್ತಿಪಟುಗಳು ಮತ್ತು ಯಾರಿಗೂ ನೋವುಂಟು ಮಾಡದೆ ಅಂತಹ ವೀಡಿಯೊಗಳನ್ನು ಮಾಡಬಹುದು ಎಂದು ಅವರು ವಿವರಿಸಿದರು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಯುವತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ವ್ಯಕ್ತಿ ಆಕೆಯ ಪತಿ ಎಂಬುದು ಸ್ಪಷ್ಟವಾಗಿದೆ. ಈ ವೀಡಿಯೊ ಕೂಡ ನಿಜವಾದ ಘಟನೆಯದ್ದಲ್ಲ. ವೀಡಿಯೊದಲ್ಲಿರುವ ಇಬ್ಬರೂ ಪುರುಷರು ಕುಸ್ತಿಪಟುಗಳಾಗಿದ್ದು, ಇದೊಂದು ಸ್ಕ್ರಿಪ್ಟ್ ಮಾಡಿದ ವೀಡಿಯೊ ಎಂದು ನಾವು ಖಚಿತವಾಗಿ ಹೇಳುತ್ತೇವೆ.

logo
South Check
southcheck.in