ಪಾಕಿಸ್ತಾನ ಜಿಂದಾಬಾದ್‌ ಎಂದು ಕರ್ನಾಟಕದ ಕಾಂಗ್ರೆಸ್‌ ಮುಖಂಡ ಘೋಷಣೆ ಕೂಗಿದ್ದು ನಿಜವೆ?

ಕರ್ನಾಟಕದ ಕಾಂಗ್ರೆಸ್‌ ಮುಖಂಡರೊಬ್ಬರು ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿದಾಗ ತಡೆಯಲು ಹೋದ ಪೊಲೀಸರ ವಿರುದ್ಧ ಹರಿಹಾಯ್ದ ವಿಡಿಯೋ ವೈರಲ್‌ ಆಗಿದೆ. ಇದು ನಿಜಕ್ಕೂ ಕರ್ನಾಟಕದ ವಿಡಿಯೋನಾ?
ಪಾಕಿಸ್ತಾನ ಜಿಂದಾಬಾದ್‌ ಎಂದು ಕರ್ನಾಟಕದ ಕಾಂಗ್ರೆಸ್‌ ಮುಖಂಡ ಘೋಷಣೆ ಕೂಗಿದ್ದು ನಿಜವೆ?
Published on
2 min read

ವಾದ

ಕಾಂಗ್ರೆಸ್‌ ಮುಖಂಡರೊಬ್ಬರ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು, ತಡೆಯಲು ಬಂದ ಪೊಲೀಸರಿಗೆ ಬೆದರಿಕೆ ಒಡ್ಡಿದ್ದಾರೆ.

ವಾಸ್ತವ

ವಿಡಿಯೋ ಕರ್ನಾಟಕದಲ್ಲ. ದೆಹಲಿಯದ್ದಾಗಿದ್ದು, ವಿಡಿಯೋದಲ್ಲಿರುವ ವ್ಯಕ್ತಿ ದೆಹಲಿ ಮಾಜಿ ಶಾಸಕ ಆಸಿಫ್‌ ಮೊಹಮ್ಮದ್ ಖಾನ್‌.

" ಕರ್ನಾಟಕದ ಕಾಂಗ್ರೆಸ್‌ ಮುಖಂಡರೊಬ್ಬರು ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದು, ಅದನ್ನು ತಡೆಯಲು ಹೋದ ಪೊಲೀಸರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಪ, ಅವರಿಗೆ ಜೀವ ಬೆದರಿಕೆಯನ್ನು ಹಾಕಿದ್ದಾರೆ.

ಯೋಚಿಸಿ, ದೇಶದಲ್ಲಿ ಮತ್ತುರಾಜ್ಯದಲ್ಲಿ ತಪ್ಪಿಯೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಆಹಾಕಾರ ಉಂಟಾಗಿ ಬಿಡುವುದು ಎಂದು ಹೇಳುವ ಪೋಸ್ಟ್‌ ವೈರಲ್‌ ಆಗಿದೆ."

45 ಸೆಕೆಂಡ್‌ಗಳ ವಿಡಿಯೋ ತುಣುಕಿನೊಂದಿಗೆ ಕರ್ನಾಟಕದಲ್ಲಿ ನಡೆದಿದ್ದು ಎಂದು ಪ್ರತಿಪಾದಿಸುವ ಎಕ್ಸ್‌ ತಾಣದಲ್ಲಿ ಹಾಗೂ ಫೇಸ್‌ಬುಕ್‌ ವೈರಲ್‌ ಆಗಿದೆ.

ಕೆಲವರು 1.45 ನಿಮಿಷಗಳ ವಿಡಿಯೋವನ್ನೂ ಹಂಚಿಕೊಂಡಿದ್ದು, ಪೊಲೀಸರೊಂದಿಗೆ ವಾಗ್ವಾದ ದೃಶ್ಯಗಳು ಇದರಲ್ಲಿವೆ.

ಫ್ಯಾಕ್ಟ್‌ಚೆಕ್‌

'ಸೌತ್‌ ಚೆಕ್‌', ವೈರಲ್‌ ವಿಡಿಯೋದಿಂದ ಪಡೆದ ಸ್ಕ್ರೀನ್‌ ಶಾಟ್‌ಗಳನ್ನು ಆಧರಿಸಿ ಗೂಗಲ್‌ನಲ್ಲಿ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದಾಗ ಕೆಲವು ವರದಿಗಳು ಲಭ್ಯವಾದವು. ಈ ವರದಿಗಳ ಆಧಾರದ ಮೇಲೆ ವೈರಲ್‌ ವಿಡಿಯೋಕ್ಕೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಯಿತು.

ವೈರಲ್‌ ಆಗಿರುವ ಪೋಸ್ಟ್‌ನಲ್ಲಿರುವ ವಿಡಿಯೋದಲ್ಲಿರುವುದು ದೆಹಲಿಯ ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಆಸಿಫ್ ಮೊಹಮ್ಮದ್ ಖಾನ್‌ ಅವರು. ಪಾಕಿಸ್ತಾರ ಪರ ಘೋಷಣೆ ಕೂಗಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಈ ಘಟನೆ ನಡೆದಿದ್ದು 2022ರ ನವೆಂಬರ್ 26ರಂದು. ಜಾಮಿಯಾ ನಗರದಲ್ಲಿ ಈ ಘಟನೆ ನಡೆದ ನಂತರ ಪೊಲೀಸ್‌ ಅಧಿಕಾರಿಗಳೊಂದಿಗೆ ದುವರ್ತನೆ ಹಿನ್ನೆಲೆಯಲ್ಲಿ ಮೊಹಮ್ಮದ್ ಖಾನ್‌ ಅವರು ಬಂಧನಕ್ಕೂ ಒಳಗಾಗಿದ್ದರು.

ಈ ಘಟನೆಯ ಕುರಿತು ನವೆಂಬರ್‍‌ 27ರಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವರದಿಯ ಲಿಂಕ್‌ ಇಲ್ಲಿದೆ.

ಶಾಹೀನ್‌ ಬಾಗ್‌ ಪ್ರದೇಶದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗದ ಅನುಮತಿಯಿಲ್ಲದೆ ಸಾರ್ವಜನಿಕ ಸಭೆ ನಡೆಸಲಾಗಿತ್ತು. ಇದನ್ನು ಪ್ರಶ್ನಿಸಿದ ಪೊಲೀಸ್‌ ಅಧಿಕಾರಿಗಳ ಹಲ್ಲೆ ನಡೆಸಿದ್ದರು ಎಂದು ಇಂಡಿಯಾ ಟುಡೆ ನವೆಂಬರ್‍‌ 26ರಂದು ವರದಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ವೈರಲ್‌ ಆಗಿರುವ ಪೋಸ್ಟ್‌ ಪ್ರತಿಪಾದಿಸುತ್ತಿರುವಂತೆ ವಿಡಿಯೋದಲ್ಲಿರುವುದು ಕರ್ನಾಟಕ ಕಾಂಗ್ರೆಸ್‌ ಮುಖಂಡರಲ್ಲ, ಕರ್ನಾಟಕಕ್ಕೂ ಈ ವಿಡಿಯೋಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ವಿಡಿಯೋ ಪ್ರತಿಪಾದನೆ ಸುಳ್ಳು ಎಂಬುದು ದೃಢಪಡುತ್ತದೆ.

Related Stories

No stories found.
logo
South Check
southcheck.in