Fact Check: ಇರಾನ್​ನ ಅಣ್ವಸ್ತ್ರ ಘಟಕವನ್ನು ದ್ವಂಸ ಮಾಡಿದ ಇಸ್ರೇಲ್ ಎಂದು ಹಳೆಯ ವೀಡಿಯೊ ವೈರಲ್

ಸ್ಫೋಟವನ್ನು ಚಿತ್ರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೀಡಿಯೊವನ್ನು ಹಂಚಿಕೊಳ್ಳುತ್ತಿರುವ ಬಳಕೆದಾರರು, ಇಸ್ರೇಲ್ ದಾಳಿಯಿಂದ ಇರಾನಿನ ಅಣ್ವಸ್ತ್ರ ಘಟನ ಸ್ಫೋಟಗೊಂಡ ದೃಶ್ಯವನ್ನು ಈ ವೀಡಿಯೊ ತೋರಿಸುತ್ತದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
Fact Check: ಇರಾನ್​ನ ಅಣ್ವಸ್ತ್ರ ಘಟಕವನ್ನು ದ್ವಂಸ ಮಾಡಿದ ಇಸ್ರೇಲ್ ಎಂದು ಹಳೆಯ ವೀಡಿಯೊ ವೈರಲ್
Published on
1 min read

ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ, ಎರಡೂ ಕಡೆಯಿಂದ ಡ್ರೋನ್ ಮತ್ತು ವೈಮಾನಿಕ ದಾಳಿಗಳು ನಡೆಯುತ್ತಿವೆ. ಈ ಮಧ್ಯೆ, ಸ್ಫೋಟವನ್ನು ಚಿತ್ರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೀಡಿಯೊವನ್ನು ಹಂಚಿಕೊಳ್ಳುತ್ತಿರುವ ಬಳಕೆದಾರರು, ಇಸ್ರೇಲ್ ದಾಳಿಯಿಂದ ಇರಾನಿನ ಅಣ್ವಸ್ತ್ರ ಘಟನ ಸ್ಫೋಟಗೊಂಡ ದೃಶ್ಯವನ್ನು ಈ ವೀಡಿಯೊ ತೋರಿಸುತ್ತದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇರಾನಲ್ಲಿ ಅಣ್ವಸ್ತ್ರ ಘಟಕವನ್ನು ದ್ವಂಸ ಮಾಡಿದ ಇಸ್ರೇಲ್’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:

ಈ ಹೇಳಿಕೆ ದಾರಿತಪ್ಪಿಸುವಂತಿದೆ ಎಂದು ಸೌತ್ ಚೆಕ್ ಕಂಡುಕೊಂಡಿದೆ. ಈ ವೀಡಿಯೊ ಕನಿಷ್ಠ 2015 ರಿಂದ ಅಂತರ್ಜಾಲದಲ್ಲಿ ಲಭ್ಯವಿದೆ.

ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ನವೆಂಬರ್ 2015 ರಲ್ಲಿ ಹಲವಾರು ಯೂಟ್ಯೂಬ್ ಚಾನೆಲ್‌ಗಳು (ಲಿಂಕ್‌ಗಳು ಇಲ್ಲಿ , ಇಲ್ಲಿ ಮತ್ತು ಇಲ್ಲಿ ) ಇದನ್ನು ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ, ಈ ವೀಡಿಯೊ ಚೀನಾದಲ್ಲಿನ ರಾಸಾಯನಿಕ ಸ್ಥಾವರದ ಸ್ಫೋಟವನ್ನು ಚಿತ್ರಿಸುತ್ತದೆ ಎಂದು ಹೇಳಿಕೊಂಡಿದೆ.

2016 ರಲ್ಲಿ ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ಇದು ದಕ್ಷಿಣ ಚೀನಾ ಸಮುದ್ರದಲ್ಲಿನ ತೈಲ ನಿಕ್ಷೇಪದಲ್ಲಿ ಭಾರಿ ಸ್ಫೋಟವನ್ನು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

Military.com ಎಂಬ ವೆಬ್‌ಸೈಟ್ ಕೂಡ ನವೆಂಬರ್ 2015 ರಲ್ಲಿ ಈ ವೀಡಿಯೊವನ್ನು ಪ್ರಕಟಿಸಿದ್ದು, ಈ ವೀಡಿಯೊ ಚೀನಾದ ರಾಸಾಯನಿಕ ಸ್ಥಾವರದಲ್ಲಿ ಸ್ಫೋಟವನ್ನು ತೋರಿಸುತ್ತದೆ ಎಂದು ಹೇಳಿದೆ.

ಆದಾಗ್ಯೂ, ವೀಡಿಯೊದ ಸ್ಥಳವನ್ನು ಸೌತ್ ಚೆಕ್ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ, ಆದರೆ ವೀಡಿಯೊ ಕನಿಷ್ಠ 2015 ರಿಂದ ಅಂತರ್ಜಾಲದಲ್ಲಿ ಲಭ್ಯವಿದೆ ಎಂದು ನಾವು ಖಚಿತಪಡಿಸುತ್ತೇವೆ.

Related Stories

No stories found.
logo
South Check
southcheck.in