Fact Check: ಗುಜರಾತ್​ನಲ್ಲಿ ಮನೆಯ ಹೊರಗೆ ಮಲಗಿದ್ದ ವ್ಯಕ್ತಿಯನ್ನು ಸಿಂಹ ಮೂಸಿ ಹೋದ ವೀಡಿಯೊದ ಸತ್ಯಾಂಶ ಏನು?

ಬೀದಿಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಸಿಂಹವೊಂದು ಮೂಸಿ ನೋಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಗುಜರಾತ್ನಲ್ಲಿ ನಡೆದಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
Fact Check: ಗುಜರಾತ್​ನಲ್ಲಿ ಮನೆಯ ಹೊರಗೆ ಮಲಗಿದ್ದ ವ್ಯಕ್ತಿಯನ್ನು ಸಿಂಹ ಮೂಸಿ ಹೋದ ವೀಡಿಯೊದ ಸತ್ಯಾಂಶ ಏನು?
Published on
2 min read

ಬೀದಿಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಸಿಂಹವೊಂದು ಮೂಸಿ ನೋಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಗುಜರಾತ್​ನಲ್ಲಿ ನಡೆದಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಕಥಿಯಾವರ್ ಗುಜರಾತ್, ಒಬ್ಬ ವ್ಯಕ್ತಿ ಮನೆಯ ಹೊರಗೆ ಮಲಗಿದ್ದ ರಾತ್ರಿಯಲ್ಲಿ ಒಂದು ಸಿಂಹ ಬಂದು, ಆ ವ್ಯಕ್ತಿಯನ್ನು ಮೂಸಿ ನೋಡಿ, ಹೇ ಇದು ಮನುಷ್ಯ ಎಂದು ಭಾವಿಸಿ ಸದ್ದಿಲ್ಲದೆ ಹೊರಟುಹೋಯಿತು’’ ಎಂದು ಬರೆದುಕೊಂಡಿದ್ದಾರೆ.

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ವೈರಲ್ ಆಗಿರುವ ಈ ಹಕ್ಕು ಸುಳ್ಳು ಎಂದು ಸೌತ್ ಚೆಕ್ ಕಂಡುಕೊಂಡಿದೆ. ಈ ವೀಡಿಯೊವನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾಗಿದೆ.

ನಾವು ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ AI ಬಳಕೆಯನ್ನು ಸೂಚಿಸುವ ಹಲವಾರು ರೆಡ್ ಫ್ಲ್ಯಾಗ್​ಗಳು ಕಂಡುಬಂದವು: ವೀಡಿಯೊದಲ್ಲಿನ ಸೈನ್‌ಬೋರ್ಡ್‌ಗಳಲ್ಲಿನ ಅಕ್ಷರವು ಗೊಂದಲಮಯವಾಗಿ ಕಾಣುತ್ತದೆ ಮತ್ತು ಯಾವುದೇ ನೈಜ- ಭಾಷೆಗೆ ಹೋಲುವಂತಿಲ್ಲ. ಇದು AI-ರಚಿತ ದೃಶ್ಯಗಳಲ್ಲಿ ಸಾಮಾನ್ಯ ದೋಷವಾಗಿದೆ. ಅಲ್ಲದೆ ನಿದ್ರಿಸುತ್ತಿರುವ ಮನುಷ್ಯನ ಭಂಗಿಯು ಅಸ್ವಾಭಾವಿಕ, ಮತ್ತು ವಿಚಿತ್ರವಾಗಿ ಕಾಣುತ್ತದೆ. ಹೀಗಾಗಿ ಇದು AI ಯಿಂದ ಮೂಡಿರುವ ದೃಶ್ಯ ಎಂಬ ಅನುಮಾನ ಮೂಡಿತು.

ನಿಜಾಂಶವನ್ನು ತಿಳಿಯಲು ನಾವು ವೀಡಿಯೊದ ಕೀಫ್ರೇಮ್‌ಗಳನ್ನು ಹೊರತೆಗೆದು, ಅವುಗಳನ್ನು ವಾಸಿಟ್‌ಎಐ, ಐಎಸ್‌ಐಟಿಎಐ ಮತ್ತು ಎಐ ಅಥವಾ ನಾಟ್‌ನಂತಹ ಎಐ ಪತ್ತೆ ಪರಿಕರಗಳನ್ನು ಬಳಸಿಕೊಂಡು ವಿಶ್ಲೇಷಿಸಿದ್ದೇವೆ. ಈ ಮೂರು ಪರಿಕರಗಳು ವಿಷಯವು ಎಐ-ರಚಿತವಾಗಿದೆ ಎಂದು ದೃಢಪಡಿಸಿವೆ.

ಇನ್ನು ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಜೂನ್ 6 ರಂದು ಅಪ್‌ಲೋಡ್ ಮಾಡಲಾದ ಮೂಲ ವೀಡಿಯೊವನ್ನು ನಾವು ಯೂಟ್ಯೂಬ್​ನಲ್ಲಿ ಕಂಡುಕೊಂಡಿದ್ದೇವೆ. ಅಲ್ಲಿ ವೀಡಿಯೊದ ಕೆಳಗೆ ಹಕ್ಕು ನಿರಾಕರಣೆ ಇದೆ, "ಧ್ವನಿ ಅಥವಾ ದೃಶ್ಯಗಳನ್ನು ಎಐಯಿಂದ ರಚಿಸಲಾಗಿದೆ" ಎಂದು ಬರೆದಿರುವುದು ಕಂಡುಬಂತು. ಈ ದೃಶ್ಯಾವಳಿ ಅಧಿಕೃತವಲ್ಲ ಎಂದು ಇದರಲ್ಲಿ ಹೇಳಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಭಾರತದಲ್ಲಿ ಒಬ್ಬ ವ್ಯಕ್ತಿ ಬೀದಿಯಲ್ಲಿ ಮಲಗಿದ್ದಾಗ ಸಿಂಹ ಅವರನನ್ನು ಸಿಂಹ ಮೂಸಿ ಹೋಯಿತು ಎಂಬ ಹೇಳಿಕೆ ಸುಳ್ಳು. ಈ ವೀಡಿಯೊ AI- ರಚಿತವಾಗಿದ್ದು, ನಿಜ ಜೀವನದ ಘಟನೆ ಅಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Related Stories

No stories found.
logo
South Check
southcheck.in