Fact Check: ಮೈಸೂರಿನ ಮಾಲ್​ನಲ್ಲಿ ಎಸ್ಕಲೇಟರ್ ಕುಸಿದ ಅನೇಕ ಮಂದಿ ಸಾವು? ಇಲ್ಲ, ಇದು ಎಐ ವೀಡಿಯೊ

ಮಾಲ್‌ನೊಳಗಿನ ಅನೇಕ ಎಸ್ಕಲೇಟರ್‌ಗಳು ಹಠಾತ್ತನೆ ಕುಸಿದು ಬಿದ್ದಿದ್ದು, ಅವುಗಳಲ್ಲಿ ಪ್ರಯಾಣಿಸುತ್ತಿದ್ದ ಜನರು ಬಿದ್ದು ಸಾಯುತ್ತಿರುವುದನ್ನು ವೀಡಿಯೊ ತೋರಿಸಿದೆ.
Fact Check: ಮೈಸೂರಿನ ಮಾಲ್​ನಲ್ಲಿ ಎಸ್ಕಲೇಟರ್ ಕುಸಿದ ಅನೇಕ ಮಂದಿ ಸಾವು? ಇಲ್ಲ, ಇದು ಎಐ ವೀಡಿಯೊ
Published on
2 min read

ಮೈಸೂರಿನಲ್ಲಿರುವ ಬಿಎಂ ಹ್ಯಾಬಿಟ್ಯಾಟ್ ಮಾಲ್‌ನಲ್ಲಿ ಎಸ್ಕಲೇಟರ್ ಕುಸಿದು ಹಲವಾರು ಜನರು ಸಾವನ್ನಪ್ಪುತ್ತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಹಂಚಿಕೊಂಡಿರುವ ವೀಡಿಯೊವೊಂದು ಹೇಳಿಕೊಂಡಿದೆ. ಮಾಲ್‌ನೊಳಗಿನ ಅನೇಕ ಎಸ್ಕಲೇಟರ್‌ಗಳು ಹಠಾತ್ತನೆ ಕುಸಿದು ಬಿದ್ದಿದ್ದು, ಅವುಗಳಲ್ಲಿ ಪ್ರಯಾಣಿಸುತ್ತಿದ್ದ ಜನರು ಬಿದ್ದು ಸಾಯುತ್ತಿರುವುದನ್ನು ವೀಡಿಯೊ ತೋರಿಸಿದೆ. (Archive)

Fact Check:

ಈ ಹಕ್ಕು ಸುಳ್ಳು ಎಂದು ಸೌತ್‌ಚೆಕ್ ಕಂಡುಕೊಂಡಿದೆ. ವೈರಲ್ ಆಗಿರುವ ಈ ವೀಡಿಯೊ AI- ರಚಿತವಾಗಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ಸಂದರ್ಭ AI ವೀಡಿಯೊಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅನೇಕ ವ್ಯತ್ಯಾಸಗಳು ಕಂಡುಬಂದಿವೆ. ಇವುಗಳಲ್ಲಿ ಇಬ್ಬರು ವ್ಯಕ್ತಿಗಳು ನಡೆಯುವಾಗ ವಿಲೀನಗೊಳ್ಳುವುದನ್ನು ಕಾಣಬಹಹುದು. ಹಾಗೆಯೆ ಕುಸಿತಗೊಂಡಾಗ ಜನರ ಪ್ರತಿಕ್ರಿಯೆ ನೈಜ್ಯತೆಗೆ ದೂರವಾದಂತಿದೆ.

ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಜೂನ್ 10 ರಂದು ಯೂಟ್ಯೂಬ್ ಚಾನೆಲ್ ಡಿಸಾಸ್ಟರ್ ಸ್ಟ್ರಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಅದೇ ವೈರಲ್ ವೀಡಿಯೊ ಕಂಡುಬಂತು. ಯೂಟ್ಯೂಬ್ ಕ್ರಿಯೇಟರ್ ಹಂಚಿಕೊಂಡ ವಿವರಗಳ ಪ್ರಕಾರ ಇದು AI- ರಚಿತವಾಗಿದೆ ಎಂದು ಸ್ಪಷ್ಟವಾಗಿ ಹೇಳಿವೆ. ಶೀರ್ಷಿಕೆಯಲ್ಲಿ, "ಇದು ನನ್ನಿಂದ ರಚಿಸಲ್ಪಟ್ಟ AI ಕಲೆ" ಎಂದು ಬರೆಯಲಾಗಿದೆ.

ಮತ್ತಷ್ಟು ಪರಿಶೀಲಿಸಲು, ನಾವು ವೈರಲ್ ವೀಡಿಯೊವನ್ನು AI ಡಿಟೆಕ್ಟರ್ ಉಪಕರಣವಾದ ಹೈವ್‌ನೊಂದಿಗೆ ಪರಿಶೀಲಿಸಿದ್ದೇವೆ ಮತ್ತು ವೀಡಿಯೊ AI- ರಚಿತವಾಗಿದೆ ಎಂದು ಕಂಡುಕೊಂಡಿದ್ದೇವೆ. ವೀಡಿಯೊ 99% AI- ರಚಿತ ವಿಷಯವನ್ನು ತೋರಿಸುತ್ತದೆ.

ಇದಲ್ಲದೆ, ನಾವು ಸೂಕ್ತ ಕೀವರ್ಡ್‌ಗಳೊಂದಿಗೆ ಪರಿಶೀಲಿಸಿದಾಗ, ಮೈಸೂರಿನ ಮಾಲ್‌ನಲ್ಲಿ ಲಿಫ್ಟ್‌ಗಳು ಕುಸಿದುಬಿದ್ದ ಯಾವುದೇ ಘಟನೆ ನಡೆದಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ.

ಆದಾಗ್ಯೂ, ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ BM ಹ್ಯಾಬಿಟ್ಯಾಟ್ ಮಾಲ್‌ನಲ್ಲಿ ಸೆಪ್ಟೆಂಬರ್ 08, 2025 ರಂದು ಒಂದು ದುರಂತ ಅಪಘಾತ ಸಂಭವಿಸಿದೆ ಎಂದು ಹೇಳುವ ಬಹು ವರದಿಗಳನ್ನು ನಾವು ಕಂಡುಕೊಂಡೆವು. ಮಾಲ್​ನಲ್ಲಿ ಟೆಕ್ನೀಷಿಯನ್ ಆಗಿದ್ದ ಸುನೀಲ್ ಸಂಜೆ 5 ಗಂಟೆ ಸಮಯದಲ್ಲಿ ಮಾಲ್ ಒಳ ಆವರಣದಲ್ಲಿ 60 ಅಡಿ ಎತ್ತರದಲ್ಲಿ ಅಳವಡಿಕೆಯಾಗಿದ್ದ ಬ್ಯಾನರ್ ತೆರವುಗೊಳಿಸುವ ಕಾರ್ಯದಲ್ಲಿದ್ದರು. ಈ ವೇಳೆ ಪಿಒಪಿ ಬಾರ್ ಮೇಲೆ ಕಾಲಿಟ್ಟಿದ್ದಾರೆ. ತಕ್ಷಣವೇ ಬಾರ್ ಕುಸಿದು ಸುನೀಲ್ ಕೆಳಗೆಬಿದ್ದಿದ್ದಾರೆ. ಈ ವೇಳೆ ಚಲನಚಿತ್ರ ವೀಕ್ಷಣೆಗೆ ಆಗಮಿಸಿದ್ದ ಚಂದ್ರು ಕೂಡ ಸ್ಥಳದಲ್ಲಿಯೇ ಇದ್ದು ರಕ್ಷಣೆಗೆ ಮುಂದಾಗಿ ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದಿದೆ. ಇದೇ ವರದಿಯಲ್ಲಿ ಹುಣಸೂರು ತಾಲ್ಲೂಕಿನ ನೇರಳಕುಪ್ಪೆ ಗ್ರಾಮದ ಸುನೀಲ್ (35) ಮೃತಪಟ್ಟವರು. ಅವರನ್ನು ರಕ್ಷಿಸಲು ಮುಂದಾದ ಗೋಕುಲಂ ನಿವಾಸಿ ಚಂದ್ರು (22) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದೆ.

ಆದ್ದರಿಂದ, ವೈರಲ್ ಆಗಿರುವ ಈ ಹಕ್ಕು ಸುಳ್ಳು ಎಂದು ನಾವು ಖಚಿತಪಡಿಸಿಕೊಳ್ಳಬಹುದು.

Related Stories

No stories found.
logo
South Check
southcheck.in