Kannada

Fact Check: ಬಾಂಗ್ಲಾದೇಶದಲ್ಲಿ ಹಿಂದೂ ಹುಡುಗಿಯನ್ನು ಮುಸ್ಲಿಮರು ಅಪಹರಿಸಿದ್ದಾರೆ ಎನ್ನಲಾಗುತ್ತಿರುವ ಸುದ್ದಿ ಸುಳ್ಳು

ಕೆಲವರು ಮಹಿಳೆಯನ್ನು ಬಲವಂತವಾಗಿ ಎತ್ತಿಕೊಂಡು ವಾಹನದಲ್ಲಿ ಕರೆದೊಯ್ಯುತ್ತಿರುವ ವೀಡಿಯೊ ವೈರಲ್ ಆಗಿದೆ. ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂ ಕುಟುಂಬದ ಮಗಳನ್ನು ಅಪಹರಿಸಿದ್ದಾರೆ ಎಂದು ಹೇಳುತ್ತಿದ್ದಾರೆ.

Vinay Bhat

ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ಹಠಾತ್ ರಾಜೀನಾಮೆ ನೀಡಿ ಆಗಸ್ಟ್ 5, 2024 ರಂದು ದೇಶವನ್ನು ತೊರೆದ ನಂತರ ಬಾಂಗ್ಲಾದೇಶದಲ್ಲಿ ವ್ಯಾಪಕ ರಾಜಕೀಯ ಅರಾಜಕತೆ ಮತ್ತು ಹಿಂಸಾಚಾರ ನಡೆಯುತ್ತಿದೆ. ಮುಖ್ಯವಾಗಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಗಳು ವರದಿಯಾಗಿವೆ. ಇದೀಗ ಕೆಲವರು ಮಹಿಳೆಯನ್ನು ಬಲವಂತವಾಗಿ ಎತ್ತಿಕೊಂಡು ವಾಹನದಲ್ಲಿ ಕರೆದೊಯ್ಯುತ್ತಿರುವ ಮನಕಲಕುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂ ಕುಟುಂಬದ ಮಗಳನ್ನು ಅಪಹರಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳುತ್ತಿದ್ದಾರೆ.

ಕುಮಾರ್ ಅಭಿನಯ್ ಎಂಬವರು ಆಗಸ್ಟ್ 9, 2024 ರಂದು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಈ ವೀಡಿಯೊ ಹಂಚಿಕೊಂಡಿದ್ದು, 'ಬಾಂಗ್ಲಾದೇಶ: ಹಾಡಹಗಲೇ ಅಪ್ರಾಪ್ತ ಹಿಂದೂ ಹುಡುಗಿಯನ್ನ ಅಪಹರಿಸಿದ ಮುಸಲ್ಮಾನರು. ಬಾಂಗ್ಲಾದೇಶದ ಹಿಂದೂಗಳ ಸ್ಥಿತಿ ಶೋಚನೀಯ.' ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಎಕ್ಸ್ ಖಾತೆಯಲ್ಲಿ ಸಲ್ಮಾನ್ ಸಿಮಾ ಎಂಬ ಬಳಕೆದಾರರು ಇದೇ ವೀಡಿಯೊ ಶೇರ್ ಮಾಡಿ, 'ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯನ್ನು ಹಗಲು ಹೊತ್ತಿನಲ್ಲಿ ಇಸ್ಲಾಮಿಗಳು ಅಪಹರಿಸಿದ್ದಾರೆ. ಇದೇ ರೀತಿಯ ದೃಶ್ಯಗಳನ್ನು ನಾವು ಬೇರೆಲ್ಲಿ ನೋಡಿದ್ದೇವೆ?. IRGC ಭಯೋತ್ಪಾದಕರು ಕೆಚ್ಚೆದೆಯ ಇರಾನಿನ ಮಹಿಳೆಯರ ಮೇಲೆ ದಾಳಿ ಮಾಡಿದಾಗ ಈ ರೀತಿಯ ಘಟನೆ ಕಂಡಿದ್ದೇವೆ. ಹಮಾಸ್, ಐಆರ್‌ಜಿಸಿ, ಐಸಿಸ್, ಹಿಜ್ಬುಲ್ಲಾ, ಹೌತಿಗಳು, ಬಾಂಗ್ಲಾದೇಶದ ಇಸ್ಲಾಮಿಸ್ಟ್‌ಗಳು, ನೈಜೀರಿಯಾದ ಬೊಕೊ ಹರಾಮ್ ಮತ್ತು ಅಲ್ ಖೈದಾ ಇವೆಲ್ಲವೂ ಒಂದೇ ಬೇರುಗಳು. ಸಿಸಿಪಿ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಪಾಕಿಸ್ತಾನದಿಂದ ಬೆಂಬಲಿತವಾಗಿರುವ ಈ ರೀತಿಯ ದಾಳಿಗಳು ಬಾಂಗ್ಲಾದೇಶದ ಭವಿಷ್ಯವನ್ನು ನಾಶಮಾಡುತ್ತವೆ. ಬಾಂಗ್ಲಾದೇಶಿ ಹಿಂದೂಗಳನ್ನು ಉಳಿಸಿ' ಎಂದು ಹೇಳಿದ್ದಾರೆ.

ಇದೇ ಹೇಳಿಕೆಯೊಂದಿಗೆ ಅನೇಕ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸೌತ್ ಚೆಕ್ ನ್ಯೂಸ್ ಮೀಟರ್ ಪರಿಶೋಧಿಸಿದಾಗ, ಇದು ಸುಳ್ಳು ಸುದ್ದಿ ಎಂದು ಕಂಡುಬಂದಿದೆ. ಹಿಂದೂ ವ್ಯಕ್ತಿಯೊಬ್ಬ ತನ್ನ ಸ್ನೇಹಿತರ ಜೊತೆ ಸೇರಿ ತನ್ನ ಮಾಜಿ ಹಿಂದೂ ಪತ್ನಿಯನ್ನು ಅಪಹರಿಸುವ ವೀಡಿಯೊ ಇದಾಗಿದೆ. ಇದು ಕುಟುಂಬದ ವಿಷಯವಾದ್ದು, ಈ ಘಟನೆಯಲ್ಲಿ ಯಾವುದೇ ಕೋಮುವಾದ ಕಂಡುಬಂದಿಲ್ಲ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಬಾಂಗ್ಲಾದೇಶದ Prothomalo ಡಿಜಿಟಲ್ ಮಾಧ್ಯಮ ಆಗಸ್ಟ್ 9, 2024 ರಂದು ಈ ಬಗ್ಗೆ 'ಕೌಟುಂಬಿಕ ಕಲಹದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ 'ಕೋಮುಗಲಭೆ' ಎಂದು ತಪ್ಪಾಗಿ ಬಿಂಬಿಸಲಾಗಿದೆ' ಎಂಬ ಶೀರ್ಷಿಕೆಯೊಂದಿಗೆ ವಿಸ್ತಾರವಾಗಿ ವರದಿ ಮಾಡಿರುವುದು ಕಂಡುಬಂತು.

ವರದಿಯಲ್ಲಿ ಹೀಗೆ ಹೇಳಲಾಗಿದೆ: 'ನೊವಾಖಾಲಿಯ ಸೆನ್‌ಬಾಗ್‌ನಲ್ಲಿ ಆಗಸ್ಟ್ 8 ರಂದು ಈ ಘಟನೆ ನಡೆದಿದ್ದು, ಹಿಂದೂ ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಹೆಂಡತಿಯನ್ನು ಅಪಹರಿಸಲು ಸಂಚು ಹೂಡಿದ್ದಾನೆ. ಆದರೆ, ಇದು ಯಶಸ್ವಿಯಾಗಲಿಲ್ಲ. ಆಕೆಯ ಪತಿ ಕೆಲವು ಸಹಚರರೊಂದಿಗೆ ಬಲವಂತವಾಗಿ ಮೈಕ್ರೋಬಸ್‌ನಲ್ಲಿ ಕರೆದೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಮಹಿಳೆ ಸಹಾಯಕ್ಕಾಗಿ ಕೂಗುತ್ತಿದ್ದಂತೆ, ಸ್ಥಳೀಯರು ಮುಂದೆ ಬಂದು ಮೈಕ್ರೋಬಸ್ ಅನ್ನು ಧ್ವಂಸಗೊಳಿಸಿದರು. ಬಳಿಕ ಮೂವರನ್ನು ಪೊಲೀಸರಿಗೆ ಒಪ್ಪಿಸಲಾದರೆ ಉಳಿದವರು ಪರಾರಿಯಾಗಿದ್ದಾರೆ' ಎಂದು ಬರೆಯಲಾಗಿದೆ.

Prothomalo ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿ.

ಹಾಗೆಯೆ ಬಾಂಗ್ಲಾದೇಶದ ನಿವಾಸಿ ಸಂಕರ್ ದಾಸ್ ಎಂಬವರು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಈ ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ. 'ಬಕ್ಸ್‌ಗಂಜ್ ಪಕ್ಕದಲ್ಲಿರುವ ಮೈಶೈ ಕುಮೋ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮಾಜಿ ಪತಿ ಕೆಲವು ಜನರೊಂದಿಗೆ ಕಾರ್‌ನಲ್ಲಿ ಬಂದು ಹಿಂದೂ ಕುಟುಂಬದ ಮಗಳನ್ನು ಬಲವಂತವಾಗಿ ಕರೆದುಕೊಂಡು ಹೋಗಲು ಪ್ರಯತ್ನಿಸಿದಾಗ, ಆ ಪ್ರದೇಶದ ಜನರು ಅವರನ್ನು ವಶಪಡಿಸಿಕೊಂಡು ಸೇನೆಗೆ ಹಸ್ತಾಂತರಿಸಿದರು. ಗಮನಿಸಿ: ಇಲ್ಲಿ ಯಾವುದೇ ಮುಸ್ಲಿಂ/ಇತರ ರಾಜಕೀಯ ಪಕ್ಷದ ಪಾಲ್ಗೊಳ್ಳುವಿಕೆ ಇಲ್ಲ.' ಎಂದು ಬರೆದುಕೊಂಡಿದ್ದಾರೆ.

ಈ ಮೂಲಕ ಬಾಂಗ್ಲಾದೇಶದಲ್ಲಿ ಹಿಂದೂ ಹುಡುಗಿಯನ್ನು ಮುಸ್ಲಿಮರು ಅಪಹರಿಸಿದ್ದಾರೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಸುಳ್ಳಾಗಿದೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕು ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ.

Fact Check: Pro-Palestine march in Kerala? No, video shows protest against toll booth

Fact Check: ഓണം ബംപറടിച്ച സ്ത്രീയുടെ ചിത്രം? സത്യമറിയാം

Fact Check: கரூர் கூட்ட நெரிசலில் பாதிக்கப்பட்டவர்களை பனையூருக்கு அழைத்தாரா விஜய்?

Fact Check: Christian church vandalised in India? No, video is from Pakistan

Fact Check: ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ರಶ್ಮಿಕಾ ರಿಯಾಕ್ಷನ್ ಎಂದು 2022ರ ವೀಡಿಯೊ ವೈರಲ್