Kannada

Fact Check: ಸಲೂನ್‌ನಲ್ಲಿ ಮಸಾಜ್ ಮಾಡುವಾಗ ವ್ಯಕ್ತಿಯೊಬ್ಬ ಸಾವನ್ನಿಪ್ಪಿರುವುದು ನಿಜವೇ?

ಸೌತ್ ಚೆಕ್ ತನ್ನ ತನಿಖೆಯಲ್ಲಿ ವೈರಲ್ ಹಕ್ಕು ಸುಳ್ಳು ಎಂದು ಕಂಡುಹಿಡಿದಿದೆ. ಇದು ಸ್ಕ್ರಿಪ್ಟ್ ವೀಡಿಯೊ ಆಗಿದ್ದು, ಜಾಗೃತಿ ಉದ್ದೇಶಗಳಿಗಾಗಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

vinay bhat

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ಹೆಚ್ಚು ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬ ಸಲೂನ್‌ಗೆ ಹೋಗಿ ಕುತ್ತಿಗೆಗೆ ಮಸಾಜ್ ಮಾಡಿಸಿಕೊಂಡಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅಷ್ಟರಲ್ಲಿ ವ್ಯಕ್ತಿಯು ಪಾರ್ಶ್ವವಾಯುವಿಗೆ ಒಳಗಾಗುತ್ತಾನೆ ಮತ್ತು ತಾನು ಕುಳಿತಿರುವ ಆಸನದ ಮೇಲೆ ಮೂರ್ಚೆ ಬೀಳುತ್ತಾರೆ. ಬಳಕೆದಾರರು ಈ ವೀಡಿಯೊವನ್ನು ನೈಜ ಘಟನೆ ಎಂದು ಪರಿಗಣಿಸಿ ವೈರಲ್ ಮಾಡುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮಸಾಜ್ ಮಾಡಿಸಿಕೊಂಡು ಸತ್ತ’’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಇನ್ನೂ ಕೆಲ ಬಳಕೆದಾರರು, ಮಸಾಜ್ ಮಾಡಿಸುತ್ತಿರುವ ವ್ಯಕ್ತಿ ಪಾರ್ಶ್ವವಾಯುಗೆ ತುತ್ತಾಗುತ್ತಾರೆ ಎಂದು ಹಂಚಿಕೊಂಡಿದ್ದಾರೆ.

Fact Check:

ಸೌತ್ ಚೆಕ್ ತನ್ನ ತನಿಖೆಯಲ್ಲಿ ವೈರಲ್ ಹಕ್ಕು ಸುಳ್ಳು ಎಂದು ಕಂಡುಹಿಡಿದಿದೆ. ಇದು ಸ್ಕ್ರಿಪ್ಟ್ ವೀಡಿಯೊ ಆಗಿದ್ದು, ಜಾಗೃತಿ ಉದ್ದೇಶಗಳಿಗಾಗಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ನಾವು ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ನಂತರ ವೀಡಿಯೊದ ಕೊನೆಯಲ್ಲಿ "ಶಿಕ್ಷಣದ ಉದ್ದೇಶದಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ವೀಡಿಯೊ ತೆಗೆಯಲಾಗಿದೆ" ಎಂದು ನಮೂದಿಸಿದ್ದು ಕಂಡುಬಂದಿದೆ.

ಹಾಗೆಯೆ ವೀಡಿಯೊದ ಹಲವಾರು ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸಹಾಯದಿಂದ ಹುಡುಕಿದ್ದೇವೆ. ಸಂಜನಾ ಗಲ್ರಾನಿ ಎಂಬ ದಕ್ಷಿಣ ಭಾರತದ ನಟಿಯ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ನಾವು ವೀಡಿಯೊದ ದೀರ್ಘ ಆವೃತ್ತಿಯನ್ನು ಕಂಡುಕೊಂಡಿದ್ದೇವೆ. ವೀಡಿಯೊವನ್ನು 7 ನವೆಂಬರ್ 2024 ರಂದು ಹಂಚಿಕೊಳ್ಳಲಾಗಿದೆ.

ಶೀರ್ಷಿಕೆಯಲ್ಲಿರುವ ಮಾಹಿತಿಯ ಪ್ರಕಾರ, ‘‘ಈ ಪೇಜ್ ಸ್ಕ್ರಿಪ್ಟ್ ಮಾಡಿದ ಡ್ರಾಮಾ, ಜಾಗೃತಿಯ ವಿಡಿಯೋಗಳನ್ನು ಒಳಗೊಂಡಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕಿರುಚಿತ್ರಗಳನ್ನು ಮನರಂಜನೆ, ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ. ವಿಡಿಯೋಗಳಲ್ಲಿ ಚಿತ್ರಿಸಲಾದ ಎಲ್ಲಾ ಪಾತ್ರಗಳು, ಸನ್ನಿವೇಶಗಳು ಕಾಲ್ಪನಿಕವಾಗಿವೆ. ಜಾಗೃತಿ ಮೂಡಿಸಲು, ಮನರಂಜನೆಗಾಗಿ ಉದ್ದೇಶಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ.

ಹೀಗಾಗಿ ಸಲೂನ್‌ನಲ್ಲಿ ವ್ಯಕ್ತಿಯೊಬ್ಬ ಮಸಾಜ್ ಮಾಡುವಾಗ ಕತ್ತು ಮುರಿದು ಸಾವನ್ನಪ್ಪಿದ್ದಾನೆ ಎಂದು ವೈರಲ್ ಆಗುತ್ತಿರುವ ವೀಡಿಯೊ ನಿಜವಲ್ಲ. ಇದನ್ನು ಜಾಗೃತಿಗಾಗಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

Fact Check: Vijay Devarakonda parkour stunt video goes viral? No, here are the facts

Fact Check: ഗോവിന്ദച്ചാമി ജയില്‍ ചാടി പിടിയിലായതിലും കേരളത്തിലെ റോഡിന് പരിഹാസം; ഈ റോഡിന്റെ യാഥാര്‍ത്ഥ്യമറിയാം

Fact Check: ஏவுகணை ஏவக்கூடிய ட்ரோன் தயாரித்துள்ள இந்தியா? வைரல் காணொலியின் உண்மை பின்னணி

Fact Check: ಬುರ್ಖಾ ಧರಿಸಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬನ ಬಾಂಗ್ಲಾದೇಶದ ವೀಡಿಯೊ ಭಾರತದ್ದು ಎಂದು ವೈರಲ್

Fact Check: హైదరాబాద్‌లో ఇంట్లోకి చొరబడి పూజారిపై దాడి? లేదు, నిజం ఇక్కడ తెలుసుకోండి