Kannada

Fact Check: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಬಂದ ನಂತರ ಮುನಾವರ್ ಫಾರುಕಿ ಕ್ಷಮೆಯಾಚಿಸಿದ್ದು ನಿಜವೇ?

ಕೆಲವು ಬಳಕೆದಾರರು ಈ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಬಂದ ನಂತರ ಮುನಾವರ್ ಈ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

Vinay Bhat

ಎನ್‌ಸಿಪಿ (ಅಜಿತ್ ಪವಾರ್ ಬಣ) ನಾಯಕ ಬಾಬಾ ಸಿದ್ದಿಕಿ ಹತ್ಯೆಯ ನಂತರ, ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಅವರ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಮುನವ್ವರ್ ಅವರು, “ಸ್ವಲ್ಪ ಸಮಯದ ಹಿಂದೆ ನಡೆದ ಒಂದು ಶೋನಲ್ಲಿ ತಮಾಷೆಯಾಗಿ ಪ್ರೇಕ್ಷಕರ ನಗಿಸುವ ಕೆಲಸ ನಾನು ಮಾಡುತ್ತಿದ್ದೆ. ಆಗ ಕೊಂಕಣದ ಬಗ್ಗೆ ನಾನು ಮಾತನಾಡಿದ್ದೆ. ಆದರೆ ಅದು ಸ್ವಲ್ಪ ಜನರಿಗೆ ಸರಿ ಅನಿಸಲಿಲ್ಲ. ನಾನು ಕೊಂಕಣದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೇನೆ ಎಂದು ಭಾವಿಸಿದ್ದಾರೆ. ಕೊಂಕಣವನ್ನು ಗೇಲಿ ಮಾಡಿದ್ದಾರೆ ಎಂದು ಗ್ರಹಿಸಿದ್ದಾರೆ. ಆದರೆ, ಅದು ನನ್ನ ಉದ್ದೇಶವೇ ಆಗಿರಲಿಲ್ಲ. ನಾನು ನಿಮಗೆ ನೋವು ಮಾಡಿದ್ದರೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಜೈ ಹಿಂದ್, ಜೈ ಮಹಾರಾಷ್ಟ್ರ,’’ ಎಂದು ಹೇಳಿದ್ದಾರೆ.

ಈಗ ಕೆಲವು ಬಳಕೆದಾರರು ಈ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಬಂದ ನಂತರ ಮುನಾವರ್ ಈ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಅಕ್ಟೋಬರ್ 19, 2024 ರಂದು ಹಂಚಿಕೊಂಡು, ‘‘ಈತನಿಗೆ ಈಗ ಬುದ್ದಿ ಬಂದಿದೆ. ಪ್ರಾಣ ಭಯ ಶುರುವಾಗಿದೆ. ಈ ಭಯ ಯಾವತ್ತೂ ಇರಬೇಕು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಬೆದರಿಕೆ ಬಂದ ನಂತರ ಮುನ್ನಾವರ್ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಜೈ ಲಾರೆನ್ಸ್,’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಹಳೇಯ ವೀಡಿಯೊ ಆಗಿದೆ.

ನಿಜಾಂವನ್ನು ತಿಳಿಯಲು ನಾವು ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದ್ದೇವೆ. ಆಗ ದೈನಿಕ್ ಜಾಗರಣ್ ಅವರ ವೆಬ್‌ಸೈಟ್‌ನಲ್ಲಿನ ವರದಿಯಲ್ಲಿ ನಾವು ವೀಡಿಯೊಗೆ ಸಂಬಂಧಿಸಿದ ಸುದ್ದಿಯನ್ನು ಪಡೆದುಕೊಂಡಿದ್ದೇವೆ. 13 ಆಗಸ್ಟ್ 2024 ರಂದು ಈ ಸುದ್ದಿ ಪ್ರಕಟಿಸಲಾಗಿದೆ. ನೀಡಿರುವ ಮಾಹಿತಿಯ ಪ್ರಕಾರ, “ಬಿಗ್ ಬಾಸ್ ವಿಜೇತ ಮತ್ತು ಹಾಸ್ಯನಟ ಮುನಾವರ್ ಫರುಕಿ ಅವರು ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರದ ಕೊಂಕಣ ಸಮುದಾಯದ ಮೇಲೆ ಕಾಮೆಂಟ್ ಮಾಡಿದ್ದಾರೆ ಮತ್ತು ನಿಂದನೀಯ ಭಾಷೆಯನ್ನು ಬಳಸಿದ್ದಾರೆ. ನಂತರ ಕೊಂಕಣ ಸಮುದಾಯವು ಮುನವ್ವರ್ ಅನ್ನು ವಿರೋಧಿಸಿದ ಪರಿಣಾಮ ಕ್ಷಮೆ ಕೇಳಿದ್ದಾರೆ,’’ ಎಂದು ಬರೆಯಲಾಗಿದೆ.

ಹಾಗೆಯೆ ಇದೇ ವೈರಲ್ ವೀಡಿಯೊ ಮಿಡ್ ಡೇ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಕಂಡುಬಂದಿದೆ. "ಮುನಾವರ್ ಫಾರುಕಿ ಅವರು ತಮ್ಮ ಸ್ಟ್ಯಾಂಡ್-ಅಪ್ ಸೆಟ್‌ನಲ್ಲಿ ಕೊಂಕಣಿಗರ ಬಗ್ಗೆ ಅವಹೇಳನಕಾರಿ ಹಾಸ್ಯ ಮಾಡಿದ ನಂತರ ಕ್ಷಮೆಯಾಚಿಸಿದ್ದಾರೆ" ಎಂದು ಆಗಸ್ಟ್ 13, 2024 ರಂದು ವೀಡಿಯೊ ಅಪ್ಲೋಡ್ ಮಾಡಲಾಗಿದೆ.

ಮುನಾವರ್ ಫಾರುಕಿ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಕೂಡ ಇದೇ ವೀಡಿಯೊವನ್ನು ಆಗಸ್ಟ್ 12, 2024 ರಂದು ‘‘ಕೊಂಕಣಕ್ಕೆ ನನ್ನ ಪ್ರೀತಿ ಮತ್ತು ಕ್ಷಮೆ’’ ಎಂಬ ಶೀರ್ಷಿಕೆಯೊಂದಿಗೆ ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ಅವರು ಕೊಂಕಣ ಸಮುದಾಯದ ಬಗ್ಗೆ ಮಾತನಾಡುವ ನಿಂದನೀಯ ಭಾಷೆಗೆ ಕ್ಷಮೆಯಾಚಿಸುವುದನ್ನು ಕಾಣಬಹುದು.

ಹೀಗಾಗಿ ಮುನಾವರ್ ಫರುಕಿ ಅವರ ವೈರಲ್ ವೀಡಿಯೊ ಇತ್ತೀಚಿನದ್ದಲ್ಲ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಬಂದ ನಂತರ ಮುನಾವರ್ ಈ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ ಎಂಬುದು ಸುಳ್ಳು. ಅವರು ಕಾರ್ಯಕ್ರಮವೊಂದರಲ್ಲಿ ಕೊಂಕಣಿ ಸಮುದಾಯದ ವಿರುದ್ಧ ನಿಂದನೀಯ ಭಾಷೆಯನ್ನು ಬಳಸಿದ ಕಾರಣಕ್ಕೆ ಆಗಸ್ಟ್ 2024 ರಲ್ಲಿ ಕ್ಷಮೆ ಕೇಳಿರುವ ವೀಡಿಯೊ ಇದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Video of family feud in Rajasthan falsely viral with communal angle

Fact Check: ഫ്രാന്‍സില്‍ കൊച്ചുകു‍ഞ്ഞിനെ ആക്രമിച്ച് മുസ്ലിം കുടിയേറ്റക്കാരന്‍? വീഡിയോയുടെ വാസ്തവം

Fact Check: “தமிழ்தாய் வாழ்த்து தமிழர்களுக்கானது, திராவிடர்களுக்கானது இல்லை” என்று கூறினாரா தமிழ்நாடு ஆளுநர்?

ఫ్యాక్ట్ చెక్: హైదరాబాద్‌లోని దుర్గా విగ్రహం ధ్వంసమైన ఘటనను మతపరమైన కోణంతో ప్రచారం చేస్తున్నారు

Fact Check: Photo of journalist falsely linked to communal violence in Bahraich, UP