Kannada

Fact Check: ಬರೇಲಿಯಲ್ಲಿ ಪೊಲೀಸರ ಕ್ರಮಕ್ಕೆ ಹೆದರಿ ಓಡಿ ಹೋಗುತ್ತಿರುವ ಮುಸ್ಲಿಮರು? ಇಲ್ಲ, ಇದು ಹಳೆಯ ವೀಡಿಯೊ

ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮುಸ್ಲಿಮರ ದೊಡ್ಡ ಗುಂಪು ರೈಲಿಗಾಗಿ ಕಾಯುತ್ತಿರುವುದನ್ನು ಕಾಣಬಹುದು. ಯುಪಿ ಪೊಲೀಸರ ಕ್ರಮಕ್ಕೆ ಹೆದರಿ ಮುಸ್ಲಿಮರು ಭಯದಿಂದ ಬರೇಲಿಯಿಂದ ಪಲಾಯನ ಮಾಡುತ್ತಿದ್ದಾರೆ ಎಂದು ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

Vinay Bhat

ಉತ್ತರ ಪ್ರದೇಶದ ಬರೇಲಿಯಲ್ಲಿ "ಐ ಲವ್ ಮುಹಮ್ಮದ್" ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗಳ ನಂತರ ಪೊಲೀಸರು ನಡೆಸುತ್ತಿರುವ ಕ್ರಮಗಳ ನಡುವೆ, ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊವೊಂದು ಹರಿದಾಡುತ್ತಿದೆ. ಇದರಲ್ಲಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮುಸ್ಲಿಮರ ದೊಡ್ಡ ಗುಂಪು ರೈಲಿಗಾಗಿ ಕಾಯುತ್ತಿರುವುದನ್ನು ಕಾಣಬಹುದು. ಯುಪಿ ಪೊಲೀಸರ ಕ್ರಮಕ್ಕೆ ಹೆದರಿ ಮುಸ್ಲಿಮರು ಭಯದಿಂದ ಬರೇಲಿಯಿಂದ ಪಲಾಯನ ಮಾಡುತ್ತಿದ್ದಾರೆ ಎಂದು ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಅಪ್ಲೋಡ್ ಮಾಡಿ, ‘‘ಬರೇಲಿಯ ತೌಕೀರ್ ರಝಾ ಅವರ ಪ್ರಭಾವದಿಂದ ದೇಶಾದ್ಯಂತದ ಮುಸ್ಲಿಮರು ಬರೇಲಿಯಲ್ಲಿ ಜಮಾಯಿಸಿದ್ದರು. ಈಗ #ಯುಪಿ ಪೊಲೀಸರು ಕ್ಯಾಮೆರಾಗಳ ಮೂಲಕ ಅವರನ್ನು ಗುರುತಿಸಿ ಕ್ರಮ ಕೈಗೊಳ್ಳಲು ಆದೇಶಿಸಿರುವುದರಿಂದ, ಅವರೆಲ್ಲರೂ ಬರೇಲಿಯಿಂದ ಓಡಿಹೋಗುತ್ತಿದ್ದಾರೆ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಆಗಸ್ಟ್ ತಿಂಗಳಿನದ್ದಾಗಿದ್ದು, ಬರೇಲಿಯಲ್ಲಿ ಇತ್ತೀಚೆಗೆ ನಡೆದ ಘಟನೆಗೆ ಸುಮಾರು ಒಂದು ತಿಂಗಳ ಮೊದಲು, ಆಲಾ ಹಜರತ್‌ನ ಉರುಸ್‌ಗೆ ಹಾಜರಾದ ನಂತರ ಭಕ್ತರು ತಮ್ಮ ಊರಿಗೆ ಹಿಂತಿರುಗುತ್ತಿರುವುದನ್ನು ತೋರಿಸುತ್ತದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್​ನಲ್ಲಿ ಹುಡುಕಿದಾಗ, ಆಗಸ್ಟ್ 21 ರಂದು ಬರೇಲಿ ಮೂಲದ ಡಿಜಿಟಲ್ ಸುದ್ದಿ ಚಾನೆಲ್ ದಿ ಲೀಡರ್ ಹಿಂದಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಒಂದೇ ರೀತಿಯ ವೀಡಿಯೊ ಕಂಡುಬಂದಿದೆ. ಉರ್ಸ್-ಎ-ರಜಾವಿ ನಂತರ ಬರೇಲಿ ಜಂಕ್ಷನ್‌ನಲ್ಲಿ ಜನಸಮೂಹ ಸೇರಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ.

ಉರ್ಸ್-ಎ-ರಝಾವಿ ಎಂಬುದು ಬರೇಲಿಯ ದರ್ಗಾ ಆಲಾ ಹಜರತ್‌ನಲ್ಲಿ ಇಮಾಮ್ ಅಹ್ಮದ್ ರಝಾ ಖಾನ್ (ಆಲಾ ಹಜರತ್) ಅವರ ಪುಣ್ಯತಿಥಿಯಂದು ನಡೆಯುವ ಮೂರು ದಿನಗಳ ವಾರ್ಷಿಕ ಉತ್ಸವವಾಗಿದೆ. ಆಲಾ ಹಜರತ್ ಒರ್ವ ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸ ಮತ್ತು ಸೂಫಿ ಸಂತರಾಗಿದ್ದರು. ಇದು ಆಚರಣೆಗಳು, ಪ್ರಾರ್ಥನೆಗಳು, ನಾತ್ ಮುಷೈರಾಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿದೆ ಮತ್ತು ಪ್ರಪಂಚದಾದ್ಯಂತದ ಲಕ್ಷಾಂತರ ಯಾತ್ರಿಕರು ಇದರಲ್ಲಿ ಪಾಲ್ಗೊಳ್ಳುತ್ತಾರೆ.

ಇದೇ ವೀಡಿಯೊವನ್ನು ಆಗಸ್ಟ್ 21 ರಂದು ದಿ ಲೀಡರ್ ಹಿಂದಿ ಇನ್‌ಸ್ಟಾಗ್ರಾಮ್‌ನಲ್ಲಿ ಕೂಡ ಪೋಸ್ಟ್ ಮಾಡಿದೆ. "ಬರೇಲಿಗೆ ವಿದಾಯ, ಈಗ ನಾವು ನಮ್ಮ ಮನೆಗಳಿಗೆ ಹೋಗುತ್ತಿದ್ದೇವೆ" ಎಂಬ ಪಠ್ಯವನ್ನು ಇದು ಒಳಗೊಂಡಿದೆ.

ಉರುಸ್-ಎ-ರಜಾವಿಗೆ ಸಂಬಂಧಿಸಿದ ಹಲವಾರು ವೀಡಿಯೊಗಳನ್ನು ಲೀಡರ್ ಹಿಂದಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಕಂಡುಕೊಂಡಿದ್ದೇವೆ. ಉರುಸ್‌ಗೆ ಹಾಜರಾಗಲು ಜನರು ಬರೇಲಿ ನಿಲ್ದಾಣಕ್ಕೆ ಆಗಮಿಸುತ್ತಿರುವುದು, ಉರುಸ್ ಸಮಯದಲ್ಲಿ ಬರೇಲಿ ಪೊಲೀಸರು ಮಾಡಿದ ಸಿದ್ಧತೆಗಳು ಮತ್ತು ದರ್ಗಾದಲ್ಲಿ ನಡೆದ ಸಿದ್ಧತೆಗಳನ್ನು ತೋರಿಸುತ್ತದೆ. ಈ ಎಲ್ಲಾ ವೀಡಿಯೊಗಳನ್ನು ಆಗಸ್ಟ್ 19 ಮತ್ತು 22 ರ ನಡುವೆ ಪೋಸ್ಟ್ ಮಾಡಲಾಗಿದೆ.

ಬರೇಲಿಯಲ್ಲಿ ಮೂರು ದಿನಗಳ ಉರ್ಸ್-ಎ-ರಜಾವಿ ಆಗಸ್ಟ್ 18 ರಂದು ಪ್ರಾರಂಭವಾಗಿ ಆಗಸ್ಟ್ 20 ರಂದು ಮುಕ್ತಾಯಗೊಂಡಿತು. ಇದರ ಬಗ್ಗೆ ಹಲವಾರು ಸುದ್ದಿ ವರದಿಗಳು ನಮಗೆ ಸಿಕ್ಕವು. ಆಗಸ್ಟ್ 20, 2025 ರ ಅಮರ್ ಉಜಾಲಾ ವರದಿಯ ಪ್ರಕಾರ, 107 ನೇ ಉರ್ಸ್ ಆಗಸ್ಟ್ 20 ರಂದು ಮುಕ್ತಾಯಗೊಂಡಿತು. ಭಾರತ ಮತ್ತು ವಿದೇಶಗಳಿಂದ ಲಕ್ಷಾಂತರ ಜನರು ಭಾಗವಹಿಸಲು ಆಗಮಿಸಿದ್ದರು. ಮೂರು ದಿನಗಳ ಉರ್ಸ್ ಕುಲ್ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು. ಇದರ ನಂತರ, ಯಾತ್ರಿಕರು ಹಿಂತಿರುಗಲು ಪ್ರಾರಂಭಿಸಿದರು, ಇದು ನಗರದ ಬೀದಿಗಳಲ್ಲಿ ಜನಸಾಗರವೇ ತುಂಬಿತು. ದೈನಿಕ್ ಭಾಸ್ಕರ್ ಮತ್ತು ಜಾಗರಣ್ ಸೇರಿದಂತೆ ಹಲವಾರು ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಆಗಸ್ಟ್‌ನಲ್ಲಿ ಬರೇಲಿಯಲ್ಲಿ ನಡೆದ ಉರ್ಸ್-ಎ-ರಜಾವಿ ಉತ್ಸವ ಮುಗಿದ ನಂತರ ಜನರು ತಮ್ಮ ಊರಿಗೆ ಮರಳುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಸೆಪ್ಟೆಂಬರ್ 26 ರಂದು ಸಂಭವಿಸಿದ ಬರೇಲಿ ಹಿಂಸಾಚಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

Fact Check: Netanyahu attacked by anti-Israeli protester? No, claim is false

Fact Check: ബെഞ്ചമിന്‍ നെതന്യാഹുവിനെ ജനങ്ങള്‍ ആക്രമിക്കുന്ന ദൃശ്യങ്ങള്‍? വീഡിയോയുടെ സത്യമറിയാം

Fact Check: Christian church vandalised in India? No, video is from Pakistan

Fact Check: கிரேட்டா தன்பெர்க் சென்ற கப்பல் தாக்கப்பட்டதை அறிந்து அழுததாரா கிம் ஜாங் உன்? உண்மை அறிக

Fact Check: చంద్రుడిని ఢీకొట్టిన మర్మమైన వస్తువా? నిజం ఇదే