Kannada

Fact Check: ಭೂಕಂಪದ ಸಮಯದಲ್ಲಿ ನರ್ಸ್‌ಗಳು ಶಿಶುಗಳನ್ನು ರಕ್ಷಿಸುವ ಈ ವೀಡಿಯೊ ಮ್ಯಾನ್ಮಾರ್‌ನದ್ದಲ್ಲ, ಇದು ಚೀನಾದ್ದು

ಭೂಕಂಪದಿಂದ ಆಸ್ಪತ್ರೆ ನಡುಗಿದಾಗ ನರ್ಸ್‌ಗಳು ಶಿಶುಗಳನ್ನು ರಕ್ಷಿಸುತ್ತಿರುವ ದೃಶ್ಯ ಕಾಣಬಹುದು. ಮ್ಯಾನ್ಮಾರ್‌ನಲ್ಲಿರುವ ಆಸ್ಪತ್ರೆಯಲ್ಲಿ ನವಜಾತ ಶಿಶುಗಳನ್ನು ರಕ್ಷಿಸುವ ನರ್ಸ್‌ಗಳ ಎಂದು ಅನೇಕರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

Vinay Bhat

ಕಳೆದ ಮಾರ್ಚ್ 28 ರಂದು ಮ್ಯಾನ್ಮಾರ್ -ಥೈಲ್ಯಾಂಡ್ ಮತ್ತು ಚೀನಾ ಸೇರಿದಂತೆ ಅಲ್ಲಿನ ನೆರೆಯ ದೇಶಗಳಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಭೂಕಂಪದಿಂದ ಆಸ್ಪತ್ರೆ ನಡುಗಿದಾಗ ನರ್ಸ್‌ಗಳು ಶಿಶುಗಳನ್ನು ರಕ್ಷಿಸುತ್ತಿರುವ ದೃಶ್ಯ ಕಾಣಬಹುದು. ಮ್ಯಾನ್ಮಾರ್‌ನಲ್ಲಿರುವ ಆಸ್ಪತ್ರೆಯಲ್ಲಿ ನವಜಾತ ಶಿಶುಗಳನ್ನು ರಕ್ಷಿಸುವ ನರ್ಸ್‌ಗಳ ಎಂದು ಅನೇಕರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಮಾರ್ಚ್ 29, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ನಿನ್ನೆ ಮಯೂನ್ಮರ್ ನಲ್ಲಿ ಬೃಹತ್ ಭೂಕಂಪದಲ್ಲಿ ನವಜಾತಾ ಶಿಶು ವಿನ ರಕ್ಷಣೆಗೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ನರ್ಸ್. ಮಹಾಮಾತೆಯರು’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ವಾಸ್ತವವಾಗಿ ಚೀನಾದ ಯುನ್ನಾನ್ ಪ್ರಾಂತ್ಯದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಆಗ ಈ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಅನೇಕ ಮಾಧ್ಯಮಗಳು ಸುದ್ದಿ ಪ್ರಕಟಿಸಿರುವುದು ನಮಗೆ ಸಿಕ್ಕಿದೆ. ಮಾರ್ಚ್ 31, 2025 ರಂದು ಇಂಡಿಯಾ ಟುಡೆ ‘‘ಚೀನಾದಲ್ಲಿ ಭೂಕಂಪದ ಸಮಯದಲ್ಲಿ ಶಿಶುಗಳನ್ನು ರಕ್ಷಿಸಲು ನರ್ಸ್‌ಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟರು’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ.

ವರದಿಯ ಪ್ರಕಾರ, ಚೀನಾ-ಮ್ಯಾನ್ಮಾರ್ ಗಡಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಸಮಯದಲ್ಲಿ ನವಜಾತ ಶಿಶುಗಳನ್ನು ರಕ್ಷಿಸಲು ಚೀನಾದಲ್ಲಿ ಇಬ್ಬರು ವೀರ ದಾದಿಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ಭಯಾನಕ ಸಿಸಿಟಿವಿ ದೃಶ್ಯಗಳು ಹೊರಬಂದಿವೆ ಎಂದು ಬರೆಯಲಾಗಿದೆ.

ಇದೇ ಸಮಯದಲ್ಲಿ ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್‌ನ (CGTN) ಅಧಿಕೃತ ಯೂಟ್ಯೂಬ್ ಹ್ಯಾಂಡಲ್‌ನಲ್ಲಿ ಇದೇ ವೈರಲ್ ವೀಡಿಯೊ ಉತ್ತಮ ಕ್ವಾಲಿಟಿಯಲ್ಲಿ ಕಂಡುಬಂದಿದೆ. ಮಾರ್ಚ್ 30, 2025 ರ ದಿನಾಂಕದ ವರದಿಯ ಶೀರ್ಷಿಕೆ ಹೀಗಿದೆ: ‘‘ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದ ಸಮಯದಲ್ಲಿ ನೈಋತ್ಯ ಚೀನಾದಲ್ಲಿನ ದಾದಿಯರು ನವಜಾತ ಶಿಶುಗಳನ್ನು ರಕ್ಷಿಸಿದ್ದಾರೆ’’ ವರದಿಯ ಪ್ರಕಾರ, ಈ ಘಟನೆ ಮಾರ್ಚ್ 28 ರಂದು ನಡೆದಿದ್ದು, ಆ ಸ್ಥಳವನ್ನು ಚೀನಾದ ರುಯಿಲಿ ನಗರ ಎಂದು ಗುರುತಿಸಲಾಗಿದೆ.

ಶುಕ್ರವಾರ (ಮಾರ್ಚ್ 28, 2025) ನೆರೆಯ ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದಾಗ, ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿರುವ ಜಿಂಗ್‌ಚೆಂಗ್ ಆಸ್ಪತ್ರೆಯ ಹೆರಿಗೆ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ನವಜಾತ ಶಿಶುಗಳನ್ನು ರಕ್ಷಿಸಲು ಇಬ್ಬರು ನರ್ಸ್‌ಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವುದು ಸೆರೆಯಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್, ಹಿಂದೂಸ್ತಾನ್ ಟೈಮ್ಸ್ ಮತ್ತು ಬಿಬಿಸಿ ವರದಿಗಳನ್ನು ನೀವು ನೋಡಬಹುದು. ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆಯೇ ಇಲ್ಲಿ ವರದಿ ಮಾಡಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವೈರಲ್ ವೀಡಿಯೊ ಚೀನಾದ ಯುನ್ನಾನ್ ಪ್ರಾಂತ್ಯದ್ದು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Pro-Palestine march in Kerala? No, video shows protest against toll booth

Fact Check: ഓണം ബംപറടിച്ച സ്ത്രീയുടെ ചിത്രം? സത്യമറിയാം

Fact Check: கரூர் கூட்ட நெரிசலில் பாதிக்கப்பட்டவர்களை பனையூருக்கு அழைத்தாரா விஜய்?

Fact Check: Christian church vandalised in India? No, video is from Pakistan

Fact Check: ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ರಶ್ಮಿಕಾ ರಿಯಾಕ್ಷನ್ ಎಂದು 2022ರ ವೀಡಿಯೊ ವೈರಲ್