Kannada

Fact Check: ಕಾಸರಗೋಡಿನ ಐಯುಎಂಎಲ್ ರ್ಯಾಲಿಯ ಹಳೆಯ ವೀಡಿಯೊ ಪ್ರಿಯಾಂಕಾ ಗಾಂಧಿ ಪ್ರಚಾರಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ವಯನಾಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿಗಾಗಿ ರ್ಯಾಲಿ ನಡೆದಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. 2019 ರಲ್ಲಿ ಕಾಸರಗೋಡಿನಲ್ಲಿ ಐಯುಎಂಎಲ್ ನಡೆಸಿದ ರ್ಯಾಲಿಯನ್ನು ವೀಡಿಯೊ ಇದಾಗಿದೆ.

vinay bhat

ಹಾಲಿ ಸಂಸದ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ ಯುಪಿಯಲ್ಲಿ ಗೆದ್ದಿದ್ದ ರಾಯ್ ಬರೇಲಿ ಕ್ಷೇತ್ರವನ್ನು ತೆರವು ಮಾಡಿದ ನಂತರ ಕೇರಳದ ವಯನಾಡ್ ಕ್ಷೇತ್ರಕ್ಕೆ ಉಪ ಚುನಾವಣೆಗೆ ಕರೆ ನೀಡಲಾಗಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮೈತ್ರಿಕೂಟವನ್ನು ಪ್ರತಿನಿಧಿಸುತ್ತಿರುವ ಪ್ರಿಯಾಂಕಾ ಗಾಂಧಿ ಅವರು ಪ್ರಮುಖ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ, ಒಕ್ಕೂಟದೊಳಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪ್ರಬಲ ಪಾತ್ರವನ್ನು ವಹಿಸಿದೆ.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡಿನಲ್ಲಿ ಪ್ರಚಾರದ ಸಂದರ್ಭದಲ್ಲಿ IUML ಕಾರ್ಯಕರ್ತರು ಪಕ್ಷದ ಹಸಿರು ಬಾವುಟವನ್ನು ಬೀಸಿದಾಗ ಕಾಂಗ್ರೆಸ್ ವಿವಾದವನ್ನು ಎದುರಿಸಿತು. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಧ್ವಜಗಳನ್ನು ಪಾಕಿಸ್ತಾನದಿಂದ ಎಂದು ತಪ್ಪಾಗಿ ಅರ್ಥೈಸಿದ್ದರು, ಇದು ಬಿಸಿ ಚರ್ಚೆಗೆ ಕಾರಣವಾಗಿತ್ತು. ಬಳಿಕ ಹಸಿರು ಬಾವುಟಗಳು ತಮ್ಮ ಮಿತ್ರ ಪಕ್ಷವಾದ ಐಯುಎಂಎಲ್‌ಗೆ ಸೇರಿದ್ದು, ಅದು ಚಂದ್ರ ಮತ್ತು ನಕ್ಷತ್ರವನ್ನು ಅದರ ಲಾಂಛನವಾಗಿ ಬಳಸುತ್ತದೆ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿತು.

2024 ರಲ್ಲಿ, ವಯನಾಡಿನಲ್ಲಿ ರಾಹುಲ್ ಗಾಂಧಿಯವರ ರೋಡ್‌ಶೋ ಸಮಯದಲ್ಲಿ IUML ನ ಹಸಿರು ಬಾವುಟಗಳು ಮತ್ತೊಂದು ಸುತ್ತಿನ ಚರ್ಚೆಯನ್ನು ಹುಟ್ಟುಹಾಕಿತು. ಜನರ ದೊಡ್ಡ ಗುಂಪು ಹಸಿರು ಬಾವುಟಗಳನ್ನು ಬೀಸುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿ, ಚರ್ಚೆಗೆ ಗ್ರಾಸವಾಯಿತು.

ಇದೀಗ ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಮ್ ಬಳಕೆದಾರರು 45 ಸೆಕೆಂಡುಗಳ ವೀಡಿಯೊವನ್ನು ಹಂಚಿಕೊಂಡು, ‘‘ಇದು ಪಾಕಿಸ್ತಾನದು ವಿಡಿಯೋ ಅಲ್ಲ, ಇದು ಕೇರಳದ ಕಾಂಗ್ರೆಸ್ ರ್ಯಾಲಿ. ನಿನ್ನೆ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವಾಗ ಸೇರಿದ ಜನಸಮೂಹ’’ ಎಂದು ಬರೆದುಕೊಂಡಿದ್ದಾರೆ.

Fact Check:

ಸೌತ್ ಚೆಕ್ ಈ ಹಕ್ಕು ಸುಳ್ಳು ಎಂದು ಕಂಡುಹಿಡಿದಿದೆ. 2019ರಲ್ಲಿ ಕಾಸರಗೋಡಿನಲ್ಲಿ ನಡೆದ ರಾಜಕೀಯ ಸಮಾವೇಶವನ್ನು ವೀಡಿಯೊ ಇದಾಗಿದೆ. ಮಲಯಾಳಂನಲ್ಲಿನ ಘೋಷಣೆಗಳನ್ನು ಕೇಳಿದ ನಮಗೆ ಇದು ಕೇರಳದ ವೀಡಿಯೊ ಎಂದು ಸುಳಿವು ನೀಡಿತು. ‘ಸತೀಶ್‌ಚಂದ್ರನ್‌’, ‘ರಾಹುಲ್‌ ಗಾಂಧಿ’ ಮತ್ತು ‘ಉನ್ನಿಥಾನ್‌’ ಎಂಬ ಹೆಸರುಗಳನ್ನು ಹೇಳುತ್ತಾ, ‘ಸಂಸತ್ತು’, ‘ಯುಡಿಎಫ್‌’, ‘ಸಿಪಿಐಎಂ’ ಮುಂತಾದ ಘೋಷಣೆ ನಾವು ಕೇಳುತ್ತಿದ್ದೆವು. ಇದು ರಾಜಕೀಯ ರ್ಯಾಲಿಯ ವೀಡಿಯೊ ಎಂಬುದು ಕಂಡುಬಂತು.

ಕೀವರ್ಡ್ ಹುಡುಕಾಟ ನಡೆಸಿದಾಗ ಅದೇ ದೃಶ್ಯಗಳೊಂದಿಗೆ ಯೂಟ್ಯೂಬ್ ವೀಡಿಯೊ ಒಂದು ನಮಗೆ ಸಿಕ್ಕಿದೆ. ಇದಕ್ಕೆ 'IUML | 2019' ಎಂದು ಟೈಟರ್ ಕೊಡಲಾಗಿದೆ ಮತ್ತು ಜೂನ್ 10, 2019 ರಂದು ಅಪ್‌ಲೋಡ್ ಮಾಡಲಾಗಿದೆ. ವೈರಲ್ ವೀಡಿಯೊ ಕನಿಷ್ಠ ಐದು ವರ್ಷಗಳಷ್ಟು ಹಳೆಯದಾಗಿದೆ ಎಂದು ಇದು ಸೂಚಿಸುತ್ತದೆ. ಜೊತೆಗೆ ವೀಡಿಯೊದಲ್ಲಿರುವ ಹಸಿರು ಧ್ವಜಗಳು ಐಯುಎಂಎಲ್ ಧ್ವಜಗಳು ಎಂಬುದು ಕಂಡುಬಂದಿದೆ.

IUML ಪಕ್ಷದ ಧ್ವಜ ಮತ್ತು ರ್ಯಾಲಿಯಲ್ಲಿ ಕಂಡುಬಂದ ಧ್ವಜಗಳ ಹೋಲಿಕೆ ಇಲ್ಲಿದೆ.

ಇದಲ್ಲದೆ, ವೀಡಿಯೊದ ಸ್ಥಳವನ್ನು ಖಚಿತಪಡಿಸಲು ನಾವು ಹುಡುಕಿದ್ದೇವೆ. ‘ಅರಮಣ ಸಿಲ್ಕ್ಸ್’ ಎಂಬ ಅಂಗಡಿಯನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ನಾವು ಗೂಗಲ್ ಮ್ಯಾಪ್‌ನಲ್ಲಿ ಇದೇ ಅಂಗಡಿಯನ್ನು ಕಂಡುಕೊಂಡೆದ್ದೇವೆ. ಅದು ಕಾಸರಗೋಡಿನಲ್ಲಿದೆ (ಮುಬಾರಕ್ ಮಸೀದಿ ಹತ್ತಿರ, ಹಳೆಯ ಬಸ್ ನಿಲ್ದಾಣ, ಎಂಜಿ ರಸ್ತೆ, ಕಾಸರಗೋಡು), ವಯನಾಡ್‌ನಿಂದ ಸರಿಸುಮಾರು 200 ಕಿ.ಮೀ ದೂರದಲ್ಲಿದೆ.

ಗೂಗಲ್ ಮ್ಯಾಪ್ಸ್​ನಲ್ಲಿ ಕಂಡುಬರುವ ಅಂಗಡಿ ಮತ್ತು ವೈರಲ್ ವೀಡಿಯೊದಲ್ಲಿರುವ ಅಂಗಡಿಯ ಹೋಲಿಕೆ ಇಲ್ಲಿದೆ.

ಇಲ್ಲಿಯವರೆಗೆ ಸಂಗ್ರಹಿಸಿದ ಮಾಹಿತಿಯನ್ನು ಬಳಸಿಕೊಂಡು, ವೀಡಿಯೋವು ಜೂನ್ 2019 ರಲ್ಲಿ ಕಾಸರಗೋಡಿನಲ್ಲಿ IUML ನಿಂದ ರಾಜಕೀಯ ರ್ಯಾಲಿಯನ್ನು ತೋರಿಸುತ್ತದೆ ಎಂದು ನಾವು ದೃಢಪಡಿಸಿದ್ದೇವೆ. ಸೌತ್ ಚೆಕ್ 2019 ರ ರಾಜಕೀಯ ರ್ಯಾಲಿಯ ನಿಖರವಾದ ದಿನಾಂಕವನ್ನು ನಿರ್ಧರಿಸಲು ಸಾಧ್ಯವಾಗದಿದ್ದರೂ, ವಯನಾಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿಗಾಗಿ ರ್ಯಾಲಿ ನಡೆದಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. 2019 ರಲ್ಲಿ ಕಾಸರಗೋಡಿನಲ್ಲಿ ಐಯುಎಂಎಲ್ ನಡೆಸಿದ ರ್ಯಾಲಿಯನ್ನು ವೀಡಿಯೊ ಇದಾಗಿದೆ.

Fact Check: Vijay’s rally sees massive turnout in cars? No, image shows Maruti Suzuki’s lot in Gujarat

Fact Check: പ്രധാനമന്ത്രി നരേന്ദ്രമോദിയെ ഡ്രോണ്‍ഷോയിലൂടെ വരവേറ്റ് ചൈന? ചിത്രത്തിന്റെ സത്യമറിയാം

Fact Check: தவெக மதுரை மாநாடு குறித்த கேள்விக்கு பதிலளிக்காமல் சென்றாரா எஸ்.ஏ. சந்திரசேகர்? உண்மை அறிக

Fact Check: ಮತ ಕಳ್ಳತನ ವಿರುದ್ಧದ ರ್ಯಾಲಿಯಲ್ಲಿ ಶಾಲಾ ಮಕ್ಕಳಿಂದ ಬಿಜೆಪಿ ಜಿಂದಾಬಾದ್ ಘೋಷಣೆ?

Fact Check: రాహుల్ గాంధీ ఓటర్ అధికార యాత్రను వ్యతిరేకిస్తున్న మహిళ? లేదు, ఇది పాత వీడియో