Kannada

Fact Check: ಭಾರತದ ಶಿಥಿಲಗೊಂಡ ಸೇತುವೆ ಎಂದು ಬಾಂಗ್ಲಾದೇಶದ ಫೋಟೋ ವೈರಲ್

ಭಾರತದಲ್ಲಿ ಮೋದಿ ಸರ್ಕಾರದಲ್ಲಿ ನಿರ್ಮಾಣಗೊಂಡಿರುವ ರಸ್ತೆ ಎಂಬ ಹೇಳಿಕೆಯೊಂದಿಗೆ ಫೋಟೋ ವೈರಲ್ ಆಗುತ್ತಿದೆ. ಈ ಫೋಟೋ ಬಿಹಾರ, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಲಿಂಕ್ ಮಾಡಿದ ಹಕ್ಕುಗಳೊಂದಿಗೆ ಎಲ್ಲ ಕಡೆ ಹರಿದಾಡುತ್ತಿದೆ.

vinay bhat

ಶಿಥಿಲಗೊಂಡ ಸೇತುವೆಯ ಫೋಟೋವೊಂದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ಭಾರತದಲ್ಲಿ ಮೋದಿ ಸರ್ಕಾರದಲ್ಲಿ ನಿರ್ಮಾಣಗೊಂಡಿರುವ ರಸ್ತೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿದೆ. ಈ ಫೋಟೋ ಬಿಹಾರ, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಲಿಂಕ್ ಮಾಡಿದ ಹಕ್ಕುಗಳೊಂದಿಗೆ ಎಲ್ಲ ಕಡೆ ಹರಿದಾಡುತ್ತಿದೆ.

ಸುದರ್ಶನ್ ಜಯರಾಮು ಎಂಬ ಎಕ್ಸ್ ಖಾತೆಯಲ್ಲಿ ಸೆಪ್ಟೆಂಬರ್ 19, 2024 ರಂದು ಈ ಫೋಟೋ ಅಪ್ಲೋಡ್ ಆಗಿದ್ದು. ‘‘ಮೋದಿ ಹೇಳಿದರು ನಾವು #SpaceTechnology ಬಳಸಿ ರಸ್ತೆ ಹಾಗೂ ಸೇತುವೆಗಳನ್ನು ನಿರ್ಮಾಣ ಮಾಡುತ್ತೇವೆಂದು. ಜನರಿಗೆ ಅವರ ಮಾತು ಸರಿಯಾಗಿ ಅರ್ಥವಾಗಿರಲಿಲ್ಲ. ಈ ಚಿತ್ರ ನೋಡಿ ಸ್ಪೇಸ್ ಅಂದರೆ ಏನೂ ಅಂತ ನೀವೇ ತಿಳಿದುಕೊಳ್ಳಿ.’’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಕುಲ್ದೀಪ್ ದಿವಾಕರ್ ಎಂಬ ಫೇಸ್​ಬುಕ್ ಖಾತೆಯಿಂದ ಕೂಡ ಇದೇ ಫೋಟೋ ಹಂಚಿಕೊಳ್ಳಲಾಗಿದೆ. ‘‘ಚೀನೀ ಜನರು ನಮ್ಮೊಂದಿಗೆ ಹೇಗೆ ಹೋಲಿಸಬಹುದು, ಅಲ್ಲಿ ಗಾಜಿನ ಸೇತುವೆ ಇದೆ ಮತ್ತು ಇಲ್ಲಿ ನಮಗೆ ಜಾಲರಿ ಸೇತುವೆ ಇದೆ’’ ಎಂ ಶೀರ್ಷಿಕೆ ನೀಡಿದ್ದಾರೆ.

ಬೇರೆ ಬೇರೆ ರಾಜ್ಯದಲ್ಲಿ ಇದೇ ಫೋಟೋ ವೈರಲ್ ಆಗುತ್ತಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಚಿತ್ರಕ್ಕೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ವಾಸ್ತವವಾಗಿ ವೈರಲ್ ಫೋಟೋ ಬಾಂಗ್ಲಾದೇಶದ ಬರ್ಗುನಾ ಜಿಲ್ಲೆಯದ್ದಾಗಿದೆ.

ವೈರಲ್ ಫೋಟೋ ಸತ್ಯಾಸತ್ಯತೆ ತಿಳಿಯಲು, ನಾವು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸಹಾಯದಿಂದ ಫೋಟೋವನ್ನು ಸರ್ಚ್ ಮಾಡಿದೆವು. ಆಗ ಬಾಂಗ್ಲಾದೇಶದ Follow Medeya ಫೇಸ್‌ಬುಕ್ ಖಾತೆಯಲ್ಲಿ ಇದೇ ವೈರಲ್ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಜೂನ್ 27, 2024 ರಂದು ಹಂಚಿಕೊಂಡ ಫೋಟೋಕ್ಕೆ ‘‘ಅಪರಿಚಿತ ರಸ್ತೆಗಳಲ್ಲಿ ಬೈಕ್ ಓಡಿಸುವಾಗ ಹೆಚ್ಚಿನ ಕಾಳಜಿ ವಹಿಸಿ. ಇದ್ದಕ್ಕಿದ್ದಂತೆ ಇಂತಹ ಸೇತುವೆ ಎದುರು ಬರಬಹುದು’’ ಎಂದು ಬೆಂಗಾಳಿ ಭಾಷೆಯಲ್ಲಿ ಕ್ಯಾಪ್ಶನ್ ನೀಡಲಾಗಿದೆ.

ಈ ಮಾಹಿತಿಯ ಆಧಾರದ ಮೇಲೆ, ನಾವು ‘bangladesh Dilapidated bridge photo’ ಎಂದು ಬೆಂಗಾಳಿ ಭಾಷೆಯಲ್ಲಿ ಗೂಗಲ್​ನಲ್ಲಿ ಕೀವರ್ಡ್‌ ಸರ್ಚ್ ಮಾಡಿದೆವು. ಆಗ ಬಾಂಗ್ಲಾದೇಶದ ವೆಬ್‌ಸೈಟ್ mzamin ನಲ್ಲಿ ಇದಕ್ಕೆ ಸಂಬಂಧಿಸಿದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. 30 ಜೂನ್ 2024 ರಂದು ಈ ಲೇಖನ ಪ್ರಕಟವಾಗಿದ್ದು, ‘ಅಮತಾಲಿಯಲ್ಲಿ 19 ಅಪಾಯಕಾರಿ ಸೇತುವೆಗಳು, ಭೀತಿಯಲ್ಲಿ ಲಕ್ಷಾಂತರ ಜನರು’ ಎಂದು ಹೆಡ್ಡಿಂಗ್ ನೀಡಲಾಗಿದೆ. ಬಂಗಾಳಿ ಭಾಷೆಯಲ್ಲಿ ಬರೆದ ವರದಿಯ ಪ್ರಕಾರ, ವೈರಲ್ ಸೇತುವೆಯ ಚಿತ್ರವು ಬಾಂಗ್ಲಾದೇಶದ ಬರ್ಗುನಾ ಜಿಲ್ಲೆಯದ್ದಾಗಿದೆ.

ಇದರ ಜೊತೆಗೆ, ಬಾಂಗ್ಲಾದೇಶದ BTC ನ್ಯೂಸ್‌ನ ವೆಬ್‌ಸೈಟ್‌ನಲ್ಲಿ ಕೂಡ ಮತ್ತೊಂದು ವರದಿಯನ್ನು ನಾವು ಕಂಡುಕೊಂಡಿದ್ದೇವೆ. 1 ಜುಲೈ 2024 ರಂದು ಈ ಸುದ್ದು ಪ್ರಕಟವಾಗಿದ್ದು, ಈ ಸೇತುವೆ ಬರ್ಗುನಾ ಜಿಲ್ಲೆಯ ತೇಪುರ ಗ್ರಾಮದ ಬಳಿ ಇದೆ. ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವ ಈ ಸೇತುವೆಯಲ್ಲಿ ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿವೆ ಎಂದು ಬರೆಯಲಾಗಿದೆ. ಈ ಸೇತುವೆಯ ಕಾರಣದಿಂದಾಗಿ ಜೂನ್‌ನಲ್ಲಿ ಒಂದು ಬಸ್ ಕಾಲುವೆಗೆ ಬಿದ್ದು ದೊಡ್ಡ ಅಪಘಾತ ಸಂಭವಿಸಿತ್ತು. ಇದರಿಂದಾಗಿ ಸುಮಾರು ಒಂಬತ್ತು ಜನರು ಸಾವನ್ನಪ್ಪಿದ್ದರು ಎಂದು ವರದಿಯಲ್ಲಿದೆ.

ಕಲರ್‌ಕಾಂತೋ ಅವರ ವೆಬ್‌ಸೈಟ್‌ನಲ್ಲಿ ಜುಲೈ 1, 2024 ರಂದು ಪ್ರಕಟವಾದ ವರದಿಯ ಪ್ರಕಾರ, ಈ ಸೇತುವೆಯನ್ನು 2004 ರಲ್ಲಿ ತೇಪುರ ಗ್ರಾಮದ ಬಳಿ ಎಲ್ಜಿಇಡಿ ನಿಧಿ ಸಹಾಯದಿಂದ ನಿರ್ಮಿಸಲಾಗಿದೆ. 2019 ರಲ್ಲಿ, ಈ ಸೇತುವೆಯ ಸ್ಥಿತಿಯು ಕಳಪೆ ಮಟ್ಟಕ್ಕೆ ತಲುಪಿ ಅನೇಕ ಬಿರುಕುಗಳು ಕಂಡುಬಂದವು. ಅಂದಿನಿಂದ ಈ ಸೇತುವೆಯ ಸ್ಥಿತಿ ಹದಗೆಟ್ಟಿದೆ ಎಂದು ಬರೆಯಲಾಗಿದೆ.

ಹೀಗಾಗಿ, ಬಾಂಗ್ಲಾದೇಶದ ಬರ್ಗುನಾ ಜಿಲ್ಲೆಯ ತೇಪುರ ಗ್ರಾಮದ ಶಿಥಿಲಗೊಂಡ ಸೇತುವೆಯ ಫೋಟೋವನ್ನು ಭಾರತದ್ದು ಮತ್ತು ಮೋದಿ ಸರ್ಕಾರದಲ್ಲಿ ಮಾಡಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Vijay Devarakonda parkour stunt video goes viral? No, here are the facts

Fact Check: ഗോവിന്ദച്ചാമി ജയില്‍ ചാടി പിടിയിലായതിലും കേരളത്തിലെ റോഡിന് പരിഹാസം; ഈ റോഡിന്റെ യാഥാര്‍ത്ഥ്യമറിയാം

Fact Check: ஏவுகணை ஏவக்கூடிய ட்ரோன் தயாரித்துள்ள இந்தியா? வைரல் காணொலியின் உண்மை பின்னணி

Fact Check: ಬುರ್ಖಾ ಧರಿಸಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬನ ಬಾಂಗ್ಲಾದೇಶದ ವೀಡಿಯೊ ಭಾರತದ್ದು ಎಂದು ವೈರಲ್

Fact Check: హైదరాబాద్‌లో ఇంట్లోకి చొరబడి పూజారిపై దాడి? లేదు, నిజం ఇక్కడ తెలుసుకోండి