Kannada

Fact Check: ಅನೇಕ ಸಾಧುಗಳು ಎದೆಯ ಆಳದವರೆಗೆ ಹಿಮದಲ್ಲಿ ನಿಂತು ಓಂ ನಮಃ ಶಿವಾಯ ಮಂತ್ರ ಜಪಿಸುತ್ತಿರುವುದು ನಿಜವೇ?

ವೀಡಿಯೊ ಒಂದು ವೈರಲ್ ಆಗುತ್ತಿದ್ದು ನೂರಾರು ಸಾಧುಗಳು ಹಿಮದಿಂದ ಆವೃತವಾದ ಪರ್ವತದ ಮೇಲೆ ಎದೆಯ ಆಳದ ವರೆಗೆ ಹಿಮದಲ್ಲಿ ನಿಂತು 'ಓಂ ನಮಃ ಶಿವಾಯ' ಮಂತ್ರವನ್ನು ಜಪಿಸುತ್ತಿರುವುದನ್ನು ತೋರಿಸಲಾಗಿದೆ. ಅನೇಕ ಜನರು ಈ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

Vinay Bhat

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು ನೂರಾರು ಸಾಧುಗಳು ಹಿಮದಿಂದ ಆವೃತವಾದ ಪರ್ವತದ ಮೇಲೆ ಎದೆಯ ಆಳದ ವರೆಗೆ ಹಿಮದಲ್ಲಿ ನಿಂತು 'ಓಂ ನಮಃ ಶಿವಾಯ' ಮಂತ್ರವನ್ನು ಜಪಿಸುತ್ತಿರುವುದನ್ನು ತೋರಿಸಲಾಗಿದೆ. ಅನೇಕ ಜನರು ಈ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊವನ್ನು AI ಅಥವಾ ಕೃತಕ ಬುದ್ಧಿಮತ್ತೆಯಿಂದ ರಚಿಸಲಾಗಿದೆ. ಇದು ನಿಜವಾದ ಘಟನೆಯಲ್ಲ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಗೂಗಲ್​ನಲ್ಲಿ ಕೀವರ್ಸ್ ಸಹಾಯದಿಂದ ಹುಡುಕಿದ್ದೇವೆ. ಇಂತಹ ಘಟನೆ ನಿಜವಾಗಿಯೂ ನಡೆದಿದ್ದರೆ, ಅದು ಮಾಧ್ಯಮಗಳಲ್ಲಿ ವರದಿಯಾಗುತ್ತಿತ್ತು. ಆದರೆ ಯಾವುದೇ ವಿಶ್ವಾಸಾರ್ಹ ಮಾಧ್ಯಮದಿಂದ ನಮಗೆ ಈ ಕುರಿತು ಸುದ್ದಿ ಕಂಡುಬಂದಿಲ್ಲ. ಪರಿಣಾಮವಾಗಿ, ವೀಡಿಯೊವನ್ನು AI ರಚಿಸಿರಬಹುದು ಎಂಬ ಅನುಮಾನ ಮೂಡಿತು.

ನಂತರ ನಾವು ಎಐ ಮತ್ತೆ ಸಾಧನ Sightengine ​ನಲ್ಲಿ ಪರೀಕ್ಷಿಸಿದಾಗ ಇದನ್ನು ಶೇ. 99 ರಷ್ಟು ಎಐಯಿಂದ ಸೃಷ್ಟಿಸಲಾಗಿದೆ ಎಂದು ಹೇಳಿದೆ. Hive Moderation ನಲ್ಲಿ ಪರೀಕ್ಷಿಸಿದಾಗ ಇದು ಶೇ. 99 ರಷ್ಟು ಎಐಯಿಂದ ರಚಿತವಾಗಿದೆ ಎಂದು ಹೇಳಿದೆ. WasitAI ಕೂಡ ಇದನ್ನು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ ಎಂದು ಹೇಳಿದೆ.

ಇನ್ನು ವೈರಲ್ ಆಗಿರುವ ವೀಡಿಯೊದ ಪ್ರಮುಖ ಕೀಫ್ರೇಮ್​ಗಳನ್ನು ಗೂಗಲ್ ಲೆನ್ಸ್​ನಲ್ಲಿ ಹುಡುಕಿದಾಗ, ಮೂಲ ವೀಡಿಯೊ ಆಶಿಶ್ ಸಕ್ಸೇನಾ ಎಂಬ ವ್ಯಕ್ತಿಯ ಇನ್‌ಸ್ಟಾಗ್ರಾಮ್ ಪುಟದಲ್ಲಿರುವುದು ಸಿಕ್ಕಿತು. ಇದರ ಶೀರ್ಷಿಕೆಯಲ್ಲಿ #sora2 ಮತ್ತು #sora ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದ್ದಾರೆ. ಸೋರಾ ಓಪನ್ AI ಯ ವೀಡಿಯೊ ಜನರೇಷನ್ ಪ್ಲಾಟ್‌ಫಾರ್ಮ್ ಆಗಿದ್ದು, ಇದು AI- ರಚಿತ ವೀಡಿಯೊಗಳನ್ನು ರಚಿಸಲು ಅನುಮತಿಸುತ್ತದೆ.

ಇವರು ತಮ್ಮ ಪ್ರೊಫೈಲ್ ಬಯೋದಲ್ಲಿ ತನ್ನನ್ನು AI ಸೃಷ್ಟಿಕರ್ತ ಎಂದು ಉಲ್ಲೇಖಿಸಿದ್ದಾರೆ. ಇದರೊಂದಿಗೆ, AI ಯಿಂದ ರಚಿಸಿದ ಹಲವಾರು ಇದೇ ರೀತಿಯ ವೀಡಿಯೊಗಳನ್ನು ಅವರ ಪ್ರೊಫೈಲ್‌ನಲ್ಲಿ ಕಾಣಬಹುದು. ಅದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಅನೇಕ ಜನರು AI- ರಚಿತವಾದ ವೀಡಿಯೊವನ್ನು ನೈಜ ಘಟನೆ ಎಂದು ಭಾವಿಸಿ ಪೋಸ್ಟ್ ಮಾಡಿದ್ದಾರೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Hindus vandalise Mother Mary statue during Christmas? No, here are the facts

Fact Check: തിരുവനന്തപുരത്ത് 50 കോടിയുടെ ഫയല്‍ ഒപ്പുവെച്ച് വി.വി. രാജേഷ്? പ്രചാരണത്തിന്റെ സത്യമറിയാം

Fact Check: தமிழக துணை முதல்வர் உதயநிதி ஸ்டாலின் நடிகர் விஜய்யின் ஆசிர்வாதத்துடன் பிரச்சாரம் மேற்கொண்டாரா?

Fact Check: మంచులో ధ్యానం చేస్తున్న నాగ సాధువులు? లేదు, నిజం ఇక్కడ తెలుసుకోండి...

Fact Check: இந்திய அரசு 'பட்டர் சிக்கன்' சுவை கொண்ட ஆணுறைகளை அறிமுகப்படுத்தியதா? உண்மை அறிக