Kannada

Fact Check: ಮಿಸ್ಟರ್ ಬೀನ್ ಪಾತ್ರದಾರಿ ರೋವನ್ ಅಟ್ಕಿನ್‌ಸನ್ ನಿಜಕ್ಕೂ ಅನಾರೋಗ್ಯದಿಂದ ಬಳಲುತ್ತಿದ್ದಾರೆಯೇ?

ಮಿಸ್ಟರ್ ಬೀನ್‌ನ ಪಾತ್ರಕ್ಕೆ ಹೆಸರುವಾಸಿಯಾದ ರೋವನ್ ಅಟ್ಕಿನ್ಸನ್ ಅವರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಮತ್ತು ಹಾಸಿಗೆ ಹಿಡಿದಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಫೋಟೋ ಹರಿದಾಡುತ್ತಿದೆ.

Southcheck Network

ಮಿಸ್ಟರ್ ಬೀನ್‌ನ ಪಾತ್ರಕ್ಕೆ ಹೆಸರುವಾಸಿಯಾದ ರೋವನ್ ಅಟ್ಕಿನ್ಸನ್ ಅವರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಮತ್ತು ಹಾಸಿಗೆ ಹಿಡಿದಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಫೋಟೋ ಹರಿದಾಡುತ್ತಿದೆ. ಮಿ. ಬೀನ್ ಅವರ 90ರ ದಶಕದ ಫೋಟೋ ಮತ್ತು ಈಗ ಹಾಸಿಗೆಯಲ್ಲಿ ಮಲಗಿರುವ ಫೋಟೋವನ್ನು ಹಂಚಿಕೊಂಡು ಅನೇಕರು ಸಾಮಾಜಿಕ ತಾಣಗಳಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ರಾಜೇಶ್ ಸ್ಟೋರಿಸ್ ಎಂಬ ಫೇಸ್ಬುಕ್ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡಿದ್ದು, ''ನಮ್ಮ ಬಾಲ್ಯದಲ್ಲಿ ನಮ್ಮನ್ನು ರಂಚಿಸಿರುವ ಮಿಸ್ಟರ್ ಬೀನ್ ಈಗ ವೃದ್ಧರಾಗಿದ್ದಾರೆ. ಎಷ್ಟು ಬೇಗ ಮುಗಿದು ಹೋಯಿತು ನಮ್ಮ ಬಾಲ್ಯ,'' ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಭಟ್ಕಳ್ ಟ್ರೋಲರ್ಸ್ ಎಂಬ ಯೂಟ್ಯೂಬ್ ಖಾತೆಯಲ್ಲಿ ಇದೇ ಫೋಟೋವನ್ನು ವೀಡಿಯೊ ರೂಪದಲ್ಲಿ ಅಪ್ಲೋಡ್ ಮಾಡಲಾಗಿದ್ದು, ''ನಮ್ಮ ಲೆಜೆಂಡ್ ಮಿ. ಬೀನ್ ಅವರಗೆ ಅನಾರೋಗ್ಯದ ಸಮಸ್ಯೆಯಿಂದ ಈ ತರ ಆಗಿದೆ. ಅವರು ಆದಷ್ಟು ಬೇಗ ಹುಷಾರಾಗಿ ಬರಬೇಕೆಂದು ಆಶಿಸೋಣ,'' ಎಂದು ಫೋಟೋದ ಮೇಲೆ ಬರೆದುಕೊಂಡಿದ್ದಾರೆ.

ಇದೇರೀತಿಯ ಫೋಟೋಗಳು ಅನೇಕ ಕಡೆಗಳಲ್ಲಿ ವೈರಲ್ ಆಗಿವೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ, ಈ ವೈರಲ್ ಫೋಟೋದ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ಮಿಸ್ಟರ್ ಬೀನ್ ಪಾತ್ರದಾರಿ ರೋವನ್ ಅಟ್ಕಿನ್‌ಸನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿರುವ ಸುದ್ದು ಸುಳ್ಳಾಗಿದ್ದು, ಈ ಫೋಟೋವನ್ನು ಎಡಿಟ್ ಮಾಡಲಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ಫೋಟೋದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಈ ವೇಳೆ ಜನವರಿ 30, 2020ರಂದು ಮಿರರ್ ವೆಬ್‌ಸೈಟ್‌ ಪ್ರಕಟಿಸಿದ ಸುದ್ದಿಯಲ್ಲಿ ವೈರಲ್ ಆಗುತ್ತಿರುವ ಫೋಟೋಕ್ಕೆ ಕೊಂಚ ಹೋಲುವ ಅದೇ ಕೆಂಪು ಟಿ-ಶರ್ಟ್ ಧರಿಸಿರುವ ವ್ಯಕ್ತಿಯ ಫೋಟೋ ಕಂಡು ಬಂದಿದೆ. ಈ ಸುದ್ದಿಯನ್ನು ಓದಿದಾಗ ಇದು ಅಟ್ಕಿನ್‌ಸನ್ ಅವರದ್ದಲ್ಲ ಎಂದು ಗೊತ್ತಾಗಿದೆ.

ನಿಜವಾದ ಫೋಟೋದಲ್ಲಿ ಕಂಡುಬರುವ ವ್ಯಕ್ತಿ ಇಂಗ್ಲೆಂಡ್‌ನ ಬೋಲಿಂಗ್ಟನ್‌ನ ಸಿವಿಲ್ ಇಂಜಿನಿಯರ್ ಬ್ಯಾರಿ ಬಾಲ್ಡರ್‌ಸ್ಟೋನ್. ಇವರು ಪಾರ್ಕಿನ್ಸನ್ ಕಾಯಿಲೆಯಿಂದ ಅಕ್ಟೋಬರ್ 2019 ರಲ್ಲಿ ನಿಧನರಾದರು. ವರದಿಗಳ ಪ್ರಕಾರ, ಅವರು ಅನೇಕ ತೊಂದರೆಗಳಿಂದ ಬಳಲುತ್ತಿದ್ದರು. ಸೂಕ್ತ ವೈದ್ಯಕೀಯ ನೆರವು ದೊರೆಯದ ಕಾರಣ 45 ಕೆಜಿ ತೂಕದ ಬ್ಯಾರಿ ಎಂಬ ವೃದ್ಧ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅವರು ಸಾಯುವ ಮೊದಲು ಈ ಫೋಟೋ ತೆಗೆಯಲಾಗಿದೆ ಎಂದು ವರದಿಯಾಗಿದೆ. ಸದ್ಯ ಬ್ಯಾರಿ ಅವರ ಈ ಫೋಟೋವನ್ನು ಡಿಜಿಟಲ್ ಎಡಿಟ್ ಮಾಡಿ ಮಿಸ್ಟರ್ ಬೀನ್ ನಟ ರೋವನ್ ಅಟ್ಕಿನ್ಸನ್ ಅವರಂತೆ ಕಾಣುವಂತೆ ಮತ್ತು ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹರಡಿದ್ದಾರೆ.

ಮಿಸ್ಟರ್ ಬೀನ್ ಆರೋಗ್ಯ ಹೇಗಿದೆ?:

ನಾವು ಮಿಸ್ಟರ್ ಬೀನ್ ಅವರ ಆರೋಗ್ಯದ ಕುರಿತು ಏನಾದರು ಸುದ್ದಿ ಪ್ರಕಟವಾಗಿದೆಯೆ ಎಂಬುದನ್ನು ಕೂಡ ಹುಡುಕಿದೆವು. ಆದರೆ, ಅವರ ಆನಾರೋಗ್ಯದ ಬಗ್ಗೆ ಎಲ್ಲೂ ವರದಿ ಪ್ರಕಟವಾಗಿಲ್ಲ. ಅಲ್ಲದೆ ಮೊನ್ನೆಯಷ್ಟೆ ಜುಲೈ 11 ರಂದು ರೋವನ್ ಅಟ್ಕಿನ್ಸನ್ F1 ಮೊಮೆಂಟ್ಸ್ ಯೂಟ್ಯೂಬ್ ಚಾನೆಲ್ ಅಪ್ಲೋಡ್ ಮಾಡಿದ ಫಾರ್ಮುಲಾ 1 ರೇಸ್ ಸಮಯದಲ್ಲಿ ಮಾರ್ಟಿನ್ ಬ್ರೆಂಡೆಲ್ ಅವರೊಂದಿಗಿನ ಸಂದರ್ಶನದಲ್ಲಿ ಆರೋಗ್ಯವಾಗಿ ಕಾಣಿಸಿಕೊಂಡಿದ್ದಾರೆ.

ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೋವನ್ನು ಜನಪ್ರಿಯ ಹಾಸ್ಯ ನಟ ಮಿಸ್ಟರ್ ಬೀನ್‌ನ ನಾಯಕ ರೋವನ್ ಅಟ್ಕಿನ್ಸನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲು ಎಡಿಟ್ ಮಾಡಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Bihar polls – Kharge warns people against Rahul, Tejashwi Yadav? No, video is edited

Fact Check: ശബരിമല സന്ദര്‍ശനത്തിനിടെ രാഷ്ട്രപതി പങ്കുവെച്ചത് അയ്യപ്പവിഗ്രഹത്തിന്റെ ചിത്രമോ? വാസ്തവമറിയാം

Fact Check: விநாயகர் உருவத்துடன் குழந்தை பிறந்துள்ளதா? உண்மை அறிக

Fact Check: ಅಯೋಧ್ಯೆಯ ದೀಪಾವಳಿ 2025 ಆಚರಣೆ ಎಂದು ಕೃತಕ ಬುದ್ಧಿಮತ್ತೆಯಿಂದ ರಚಿಸಿದ ಫೊಟೋ ವೈರಲ್

Fact Check: తాలిబన్ శైలిలో కేరళ విద్య సంస్థ? లేదు నిజం ఇక్కడ తెలుసుకోండి