Top Stories

Fact Check: ಉ. ಪ್ರದೇಶದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ ಮಾಡಿದವರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್? ಇಲ್ಲಿ, ಇದು 2019ರ ವೀಡಿಯೊ

ವಕ್ಫ್ ಮಸೂದೆ ಅಂಗೀಕರಿಸಿದ ಮರುದಿನ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ಎಂದು ಹೇಳುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

Vinay Bhat

12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ನಂತರ, ಏಪ್ರಿಲ್ 3, 2025 ರಂದು ಬೆಳಿಗ್ಗೆ ಲೋಕಸಭೆಯು ವಕ್ಫ್ ಅಭಿವೃದ್ಧಿ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಿತು. ದೇಶಾದ್ಯಂತ ಮಸೂದೆಯ ಬಗ್ಗೆ ಅನೇಕ ವಿವಾದಗಳು ಮತ್ತು ಚರ್ಚೆಗಳು ನಡೆದಿದ್ದವು. ಈ ವಿಷಯದಲ್ಲಿ ಪ್ರತಿಪಕ್ಷಗಳು ಕೂಡ ಟೀಕೆ ವ್ಯಕ್ತಪಡಿಸಿದವು. ಮಸೂದೆ ಅಂಗೀಕಾರದ ವಿರುದ್ಧ ಹಲವು ಪ್ರತಿಭಟನೆಗಳು ನಡೆದವು. ಆದಾಗ್ಯೂ, ಮಸೂದೆ ಅಂಗೀಕರಿಸಿದ ಮರುದಿನ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ಎಂದು ಹೇಳುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಫೇಸ್​ಬುಕ್ ಬಳಕೆದಾರರು ಏಪ್ರಿಲ್ 4, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಉತ್ತರ ಪ್ರದೇಶದಲ್ಲಿ ವಕ್ಫ್ ಮಸೂದೆಯ ವಿರುದ್ಧ ಒಂದು ನಿರ್ದಿಷ್ಟ ಸಮುದಾಯದ ಜನರು ಗುಂಪುಗೂಡಿದರು. ತಕ್ಷಣ ಚಿಕಿತ್ಸೆ ಮಾಡಲಾಯಿತು. ದೀರ್ಘಕಾಲದ ಬೆನ್ನು ನೋವು, ಸೊಂಟ ನೋವು, ಕಾಲು ನೋವಿನಿಂದ ತ್ವರಿತ ಪರಿಹಾರಕ್ಕಾಗಿ....ಬೋಲ್ಡ್ಸರ್ ಬಾಬಾ’’ ಎಂದು ಬರೆದುಕೊಂಡಿದ್ದಾರೆ.

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಕ್ಲಿಪ್ ಇತ್ತೀಚಿನದ್ದಲ್ಲ. ಇದು ಡಿಸೆಂಬರ್ 2019 ರಲ್ಲಿ ಗೋರಖ್‌ಪುರದಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುವ ವೀಡಿಯೊ ಆಗಿದೆ.

ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಜನವರಿ 2020 ರಂದು ಫೇಸ್‌ಬುಕ್​ನಲ್ಲಿ ಉತ್ತಮ ರೆಸಲ್ಯೂಶನ್‌ನಲ್ಲಿರುವ ಇದೇ ವೀಡಿಯೊ ನಮಗೆ ಸಿಕ್ಕಿತು. ಈ 2020 ರ ಪೋಸ್ಟ್ ಉತ್ತರ ಪ್ರದೇಶದಲ್ಲಿ CAA (ಪೌರತ್ವ ತಿದ್ದುಪಡಿ ಕಾಯ್ದೆ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸ್ ಲಾಠಿ ಚಾರ್ಜ್ ಅನ್ನು ತೋರಿಸುತ್ತದೆ ಎಂದು ಹೇಳುತ್ತದೆ.

ಫೇಸ್‌ಬುಕ್ ಪೋಸ್ಟ್‌ನಲ್ಲಿನ ವಿವರಣೆಯಿಂದ ಸುಳಿವುಗಳನ್ನು ತೆಗೆದುಕೊಂಡು ನಾವು ಗೂಗಲ್ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಆಗ 20 ಡಿಸೆಂಬರ್ 2019 ರಂದು ಲೈವ್ ಹಿಂದೂಸ್ತಾನ್ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ಸುದ್ದಿ ವರದಿ ನಮಗೆ ಕಂಡಿದೆ. ಇದಕ್ಕೆ ‘‘ಗೋರಖ್‌ಪುರ: ಸಿಎಎ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಕಲ್ಲು ತೂರಾಟ, ಲಾಠಿ ಚಾರ್ಜ್‌ನಲ್ಲಿ ಇಬ್ಬರು ಗಾಯಗೊಂಡರು.’’ ಎಂಬ ಶೀರ್ಷಿಕೆ ನೀಡಲಾಗಿದೆ. ವರದಿಯ ಪ್ರಕಾರ, 2019 ರ ಡಿಸೆಂಬರ್ 20 ರಂದು ಗೋರಖ್‌ಪುರದ ನಖಾಸ್ ಚೌಕ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಕಲ್ಲುಗಳನ್ನು ಎಸೆದ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ಲಾಠಿ ಚಾರ್ಜ್ ನಡೆಸಿದರು. ಈ ಸಂದರ್ಭ ನಡೆದ ಪೊಲೀಸ್ ಲಾಠಿ ಚಾರ್ಜ್​ನ ವೀಡಿಯೊವನ್ನು ವಿಭಿನ್ನ ಕೋನದಿಂದ ಇಲ್ಲಿ ತೋರಿಸಲಾಗಿದೆ.

ಎರಡು ವೀಡಿಯೊಗಳನ್ನು ಹೋಲಿಸಿದಾಗ, ವೈರಲ್ ವೀಡಿಯೊ ಮತ್ತು ಸುದ್ದಿ ವರದಿ ಎರಡರಲ್ಲೂ ಕಾಣಿಸಿಕೊಂಡಿರುವ ಸ್ಥಳದಲ್ಲಿ ನಾವು ಹೋಲಿಕೆಗಳನ್ನು ಗಮನಿಸಿದ್ದೇವೆ, ಅದನ್ನು ಕೆಳಗೆ ನೋಡಬಹುದು.

ವೀಡಿಯೊದಲ್ಲಿ, ನಾವು ಹಲವಾರು ಅಂಗಡಿಗಳನ್ನು ಮತ್ತು ಅವುಗಳ ಹೆಸರನ್ನು ಬೋರ್ಡ್‌ಗಳಲ್ಲಿ ಕಾಣಬಹುದು. ನಾವು ಗೂಗಲ್ ಮ್ಯಾಪ್ಸ್​ನಲ್ಲಿ ಈ ಹೆಸರುಗಳನ್ನು ಹುಡುಕಿದೆವು ಮತ್ತು ವೀಡಿಯೊ ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯದ್ದು, ಇದು ಸಂಭಾಲ್‌ನಿಂದ 650 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿದೆ ಎಂಬುದು ಖಚಿತವಾಯಿತು. ಗೂಗಲ್ ನಕ್ಷೆಗಳಲ್ಲಿ ತೋರಿಸಿರುವ ಪ್ರಕಾರ ಈ ಪ್ರದೇಶವು ಗೋರಖ್‌ಪುರದ ನಖಾಸ್ ಚೌಕ್ ಆಗಿದೆ. ವೈರಲ್ ಕ್ಲಿಪ್ ಮತ್ತು ಗೂಗಲ್ ಮ್ಯಾಪ್ಸ್ ಸ್ಟ್ರೀಟ್ ವ್ಯೂನಲ್ಲಿ ಕಂಡುಬರುವ ಅಂಗಡಿಯ ಹೋಲಿಕೆಯನ್ನು ಕೆಳಗೆ ನೋಡಬಹುದು.

ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ ನಂತರ ಗೋರಖ್‌ಪುರದಲ್ಲಿ ಪೊಲೀಸರ ಕ್ರಮದ ಕುರಿತು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಅಂತಹ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವೈರಲ್ ಆಗುತ್ತಿರುವ ವೀಡಿಯೊ ವಕ್ಫ್ ಮಸೂದೆಯ ವಿರುದ್ಧದ ಪ್ರತಿಭಟನೆಯದ್ದಲ್ಲ, ಬದಲಾಗಿ 2019 ರ ಡಿಸೆಂಬರ್‌ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯದ್ದು ಎಂಬುದು ಸ್ಪಷ್ಟವಾಗಿದೆ.

Fact Check: Iran strikes Central Israel with missile? No, here’s the truth

Fact Check: സ‍ഞ്ജു സാംസണിന് കേരള പൊലീസില്‍ ജോലി? പ്രചരിക്കുന്ന ചിത്രത്തിന്റെ സത്യമറിയാം

Fact Check: தனது வாடிக்கையாளர்களுக்கு பரிசு அறிவித்துள்ளதா டி மார்ட்? உண்மை என்ன

Fact Check: ಇಸ್ರೇಲ್​ನ ಪ್ರಜೆಗಳು ದೇಶ ಬಿಟ್ಟು ಒಡಲು ವಿಮಾನ ನಿಲ್ದಾಣದಲ್ಲಿ ಟಿಕೆಟ್​ಗಾಗಿ ಹೊಡೆದಾಡಿದ್ದಾರಾ?

Fact Check: దుబాయ్ అపార్ట్‌మెంట్ నుంచి మహిళ లైవ్ స్ట్రీమ్ సమయంలో ఇరాన్ క్షిపణి దాడి? లేదు, ఇదే అసలు నిజం