Top Stories

Fact Check: ನೇಪಾಳಕ್ಕೆ ಮೋದಿ ಬರಬೇಕೆಂದು ಪ್ರತಿಭಟನೆ ನಡೆಯುತ್ತಿದೆಯೇ? ಇಲ್ಲ, ಸತ್ಯ ಇಲ್ಲಿದೆ

ಭಾರತದ ಧ್ವಜ ಹಿಡಿದುಕೊಂಡು ಕೆಲ ಜನರು ನಿಂತಿದ್ದು, ಪ್ರಧಾನಿ ನರೇಂದ್ರ ಮೋದಿ ಜಿಂದಾಬಾದ್ ಎಂಬ ಘೋಷಣೆ ಕೂಡಗುತ್ತಿದ್ದಾರೆ. ಜೊತೆಗೆ ‘Honouring Enduring Partnership-Welcome Prime Misinter Modi’ ಎಂದು ಬರೆದಿರುವ ಬ್ಯಾನರ್ ಕಾಣಿಸತ್ತಿದೆ.

Vinay Bhat

ನೇಪಾಳದಲ್ಲಿ ನಡೆದ ಹಿಂಸಾತ್ಮಕ ಚಳವಳಿಯ ನಂತರ, ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲಾಗಿದೆ. ಕರ್ಕಿ ನೇಪಾಳದ ಮಧ್ಯಂತರ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ನೇಪಾಳದಲ್ಲಿನ ರಾಜಕೀಯ ಪ್ರಕ್ಷುಬ್ಧತೆಯ ನಡುವೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಭಾರತದ ಧ್ವಜ ಹಿಡಿದುಕೊಂಡು ಕೆಲ ಜನರು ನಿಂತಿದ್ದು, ಪ್ರಧಾನಿ ನರೇಂದ್ರ ಮೋದಿ ಜಿಂದಾಬಾದ್ ಎಂಬ ಘೋಷಣೆ ಕೂಡಗುತ್ತಿದ್ದಾರೆ. ಜೊತೆಗೆ ‘Honouring Enduring Partnership-Welcome Prime Misinter Modi’ ಎಂದು ಬರೆದಿರುವ ಬ್ಯಾನರ್ ಕಾಣಿಸತ್ತಿದೆ.

ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನ ಹಂಚಿಕೊಂಡು, ‘‘ನೇಪಾಳಿಗಳು ಮೋದಿ ಬನ್ನಿ ಅಂತಿದ್ದಾರೆ. ನಮ್ಮವರಿಗೆ ಇನ್ನು ಬುದ್ಧಿ ಬಂದಿಲ್ಲ, ಇಡಿಜಗತ್ತು ಮೋದಿ ಬೇಕು ಅಂದ್ರೆ ಭಾರತದಲ್ಲಿ ಮೋದಿ ವಿರೋಧಿಗಳಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ನೇಪಾಳಕ್ಕೂ ಈ ವೀಡಿಯೊಕ್ಕು ಯಾವುದೇ ಸಂಬಂಧವಿಲ್ಲ. ಇದು ಮಾಲ್ಡೀವ್ಸ್​ನ ವೀಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ANI ಸುದ್ದಿ ಸಂಸ್ಥೆ ತನ್ನ ಎಕ್ಸ್ ಖಾತೆಯಲ್ಲಿ ಜುಲೈ 25 ರಂದು ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡಿರುವುದು ಸಿಕ್ಕಿದೆ. ಇದಕ್ಕೆ ‘‘ಮಾಲ್ಡೀವ್ಸ್: ಮಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನರು ಆತ್ಮೀಯವಾಗಿ ಸ್ವಾಗತಿಸುತ್ತಿದ್ದಂತೆ "ನರೇಂದ್ರ ಮೋದಿ ಜಿಂದಾಬಾದ್" ಎಂಬ ಘೋಷಣೆ ಪ್ರತಿಧ್ವನಿಸಿತು.’’ ಎಂಬ ಶೀರ್ಷಿಕೆ ನೀಡಲಾಗಿದೆ.

ಇದೇವೇಳೆ ಜುಲೈ 25 ರಂದು ನ್ಯೂಸ್ 18 ಹಿಂದಿ ಕೂಡ, ‘‘ಪ್ರಧಾನಿ ನರೇಂದ್ರ ಮೋದಿ ಮಾಲ್ಡೀವ್ಸ್ ರಾಜಧಾನಿ ಮಾಲೆ ತಲುಪಿದ ತಕ್ಷಣ, ಅಭೂತಪೂರ್ವ ದೃಶ್ಯ ಕಂಡುಬಂದಿತು. ಸಾವಿರಾರು ಜನರು ಬೀದಿಗಳಲ್ಲಿ ನೆರೆದಿದ್ದರು. ಕೈಯಲ್ಲಿ ಭಾರತೀಯ ಧ್ವಜಗಳು ಮತ್ತು ಅವರ ಬಾಯಿಯಿಂದ ನರೇಂದ್ರ ಮೋದಿ ಜಿಂದಾಬಾದ್ ಎಂಬ ಘೋಷಣೆಗಳು ಹೊರಬಂದವು.’’ ಎಂಬ ಮಾಹಿತಿಯೊಂದಿಗೆ ವೀಡಿಯೊ ಸುದ್ದಿ ಪ್ರಕಟಿಸಿದೆ. ಇದರಲ್ಲೂ ಅದೇ ವೈರಲ್ ವೀಡಿಯೊವನ್ನು ಕಾಣಬಹುದು.

Republic World ಕೂಡ ಜುಲೈ 25 ರಂದು ವೈರಲ್ ವೀಡಿಯೊದೊಂದಿಗೆ ಸುದ್ದಿ ಪ್ರಕಟಿಸಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಮಾಲೆಯಲ್ಲಿ ಹೊಸದಾಗಿ ನಿರ್ಮಿಸಲಾದ ಮಾಲ್ಡೀವ್ಸ್ ರಕ್ಷಣಾ ಸಚಿವಾಲಯದ ಕಟ್ಟಡವಾದ ಧೋಶಿಮೆಯ್ನಾ ಕಟ್ಟಡವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಿದಾಗ ಅವರಿಗೆ ಮಾಲೆಯ ಬೀದಿಗಳಲ್ಲಿ "ನರೇಂದ್ರ ಮೋದಿ ಜಿಂದಾಬಾದ್" ಘೋಷಣೆಗಳು ಪ್ರತಿಧ್ವನಿಸಿದವು.’’

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ನೇಪಾಳಿಗರು ಮೋದಿ ಬರಬೇಕೆಂದು ಹೇಳುತ್ತಿದ್ದಾರೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು ಮಾಲ್ಡೀವ್ಸ್​ನ ವೀಡಿಯೊ ಆಗಿದೆ.

Fact Check: Bihar polls – Kharge warns people against Rahul, Tejashwi Yadav? No, video is edited

Fact Check: KSRTC യുടെ പുതിയ വോള്‍വോ ബസ് - അവകാശവാദങ്ങളുടെ സത്യമറിയാം

Fact Check: அமெரிக்க இந்துக்களிடம் பொருட்கள் வாங்கக்கூடாது என்று இஸ்லாமியர்கள் புறக்கணித்து போராட்டத்தில் ஈடுபட்டனரா?

Fact Check: ಹಿಜಾಬ್ ಕಾನೂನು ರದ್ದುಗೊಳಿಸಿದ್ದಕ್ಕೆ ಇರಾನಿನ ಮಹಿಳೆಯರು ಹಿಜಾಬ್‌ಗಳನ್ನು ಸುಟ್ಟು ಸಂಭ್ರಮಿಸಿದ್ದಾರೆಯೇ? ಸುಳ್ಳು, ಸತ್ಯ ಇಲ್ಲಿದೆ

Fact Check: వాట్సాప్, ఫోన్ కాల్ కొత్త నియమాలు త్వరలోనే అమల్లోకి? లేదు, నిజం ఇక్కడ తెలుసుకోండి