Kannada

Fact Check: ಪಶ್ಚಿಮ ಬಂಗಾಳದ ಹೌರಾದಲ್ಲಿ ಬಂಗಾಳ ಪೊಲೀಸರು ಅರೆಸೈನಿಕ ಭದ್ರತಾ ಪಡೆಗಳೊಂದಿಗೆ ಗಲಾಟೆ ನಡೆಸಿದ್ದಾರಾ?, ಇಲ್ಲಿದೆ ಸತ್ಯ

ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೇಂದ್ರ ಪಡೆಗಳ ನಡುವೆ ಘರ್ಷಣೆ ನಡೆದಿದೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಸಮವಸ್ತ್ರದಲ್ಲಿರುವ ಜನರು ಮತ್ತು ಇತರರು ರಸ್ತೆಯಲ್ಲಿ ಓಡುತ್ತಿರುವುದನ್ನು ಕಾಣಬಹುದು.

Vinay Bhat

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಾಗಿ 2,550 ಕೇಂದ್ರ ಪಡೆಗಳ ಕಂಪನಿಗಳನ್ನು ನಿಯೋಜಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಕೇಂದ್ರ ಪಡೆಗಳು ರಾಜ್ಯ ಪೊಲೀಸರ ಸಹಯೋಗದೊಂದಿಗೆ ಗಸ್ತು ತಿರುಗಲಿವೆ. ಏತನ್ಮಧ್ಯೆ, ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೇಂದ್ರ ಪಡೆಗಳ ನಡುವೆ ಘರ್ಷಣೆ ನಡೆದಿದೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಸಮವಸ್ತ್ರದಲ್ಲಿರುವ ಜನರು ಮತ್ತು ಇತರರು ರಸ್ತೆಯಲ್ಲಿ ಓಡುತ್ತಿರುವುದನ್ನು ಕಾಣಬಹುದು. ಒಂದು ಹಂತದಲ್ಲಿ, ಒಬ್ಬ ಪೊಲೀಸ್ ಮತ್ತೊಬ್ಬ ಪೊಲೀಸ್ ಅಧಿಕಾರಿಯನ್ನು ಎಳೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಶ್ಚಿಮ ಬಂಗಾಳದ ಹೌರಾದಲ್ಲಿ, ಬಂಗಾಳ ಪೊಲೀಸರು ಅರೆಸೈನಿಕ ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದರು’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಮಾರ್ಚ್ 10 ರಂದು ನಾಗರಿಕ ರಕ್ಷಣಾ ಮತ್ತು ವಿಪತ್ತು ನಿರ್ವಹಣಾ ಪಡೆಗಳ ಸದಸ್ಯರು ನಡೆಸಿದ ಸೆಕ್ರೆಟರಿಯೇಟ್ ಮಾರ್ಚ್ ಸಮಯದಲ್ಲಿ ನಡೆದ ಘರ್ಷಣೆಯಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ, ಹೌರಾ ನಗರ ಪೊಲೀಸರ ಅಧಿಕೃತ ಎಕ್ಸ್ ಪುಟದಲ್ಲಿ ಇದೇ ರೀತಿಯ ವೀಡಿಯೊವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಇದು ಮಾರ್ಚ್ 10 ರಂದು ರಾಜ್ಯದ ನಾಗರಿಕ ರಕ್ಷಣಾ ಮತ್ತು ವಿಪತ್ತು ನಿರ್ವಹಣಾ ಪಡೆ ನಡೆಸಿದ ಸೆಕ್ರೆಟರಿಯೇಟ್ ಮಾರ್ಚ್‌ನ ವೀಡಿಯೊವಾಗಿದ್ದು, ಈಗ ಅದನ್ನು ತಪ್ಪು ರೀತಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು X ಪೋಸ್ಟ್ ಸ್ಪಷ್ಟಪಡಿಸುತ್ತದೆ. ಇದು ಸೆಕ್ರೆಟರಿಯೇಟ್ ಮಾರ್ಚ್ ಅನ್ನು ಪೊಲೀಸರು ನಿಯಂತ್ರಿಸುತ್ತಿರುವ ದೃಶ್ಯವಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ಹೌರಾ ಪೊಲೀಸ್ ಎಕ್ಸ್-ಪೋಸ್ಟ್‌ನಲ್ಲಿ ಒದಗಿಸಲಾದ ಮಾಹಿತಿಯ ಆಧಾರದ ಮೇಲೆ, ನಾಗರಿಕ ರಕ್ಷಣಾ ಮತ್ತು ವಿಪತ್ತು ನಿರ್ವಹಣಾ ಪಡೆ ಸದಸ್ಯರು ನಬನ್ನಾ ಎಂದೂ ಕರೆಯಲ್ಪಡುವ ಸಚಿವಾಲಯಕ್ಕೆ ನಡೆಸಿದ ಮೆರವಣಿಗೆಯನ್ನು ನಾವು ತನಿಖೆ ಮಾಡಿದ್ದೇವೆ. ಆಗ ಮಾರ್ಚ್ 10 ರಂದು, ಎಬಿಪಿ ಆನಂದ ಇನ್‌ಸ್ಟಾಗ್ರಾಮ್ ಪುಟವು ಘರ್ಷಣೆಯ ಬಗ್ಗೆ ಬಾಂಗ್ಲಾ ಭಾಷೆಯಲ್ಲಿ ವೀಡಿಯೊ ವರದಿಯನ್ನು ಹಂಚಿಕೊಂಡಿರುವುದು ಸಿಕ್ಕಿತು. ವರದಿಯ ಪ್ರಕಾರ, ನಾಗರಿಕ ರಕ್ಷಣಾ ಸದಸ್ಯರು ಸಚಿವಾಲಯಕ್ಕೆ ನಡೆಸಿದ ಮೆರವಣಿಗೆ ಘರ್ಷಣೆಗೆ ಕಾರಣವಾಯಿತು. ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಬಲಪ್ರಯೋಗ ಮಾಡಬೇಕಾಯಿತು ಎಂದು ವರದಿ ಹೇಳುತ್ತದೆ.

ಮಾರ್ಚ್ 11 ರಂದು, ಎಬಿಪಿ ಆನಂದ ಯೂಟ್ಯೂಬ್ ಚಾನೆಲ್​ನಲ್ಲಿಯೂ ಸೆಕ್ರೆಟರಿಯೇಟ್ ಮಾರ್ಚ್‌ಗೆ ಸಂಬಂಧಿಸಿದ ವರದಿಯನ್ನು ಹಂಚಿಕೊಂಡಿದೆ. ಈ ವರದಿಯಲ್ಲಿ, ವೈರಲ್ ವೀಡಿಯೊ ರೆಕಾರ್ಡ್ ಮಾಡಿದ ಅದೇ ಸ್ಥಳದಲ್ಲಿ ನಾಗರಿಕ ರಕ್ಷಣಾ ಸ್ವಯಂಸೇವಕರೊಬ್ಬರು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವುದನ್ನು ಕಾಣಬಹುದು. ವೀಡಿಯೊದ ವಿವರಣೆಯ ಪ್ರಕಾರ, ಈ ಘಟನೆ ಹೌರಾದ ತೆಲ್ಕಲ್ ಘಾಟ್ ಬಳಿ ನಡೆದಿದೆ.

ಮಾರ್ಚ್ 11 ರಂದು, EKHON DIGANTA PATRIKA ತನ್ನ ಫೇಸ್‌ಬುಕ್ ಮತ್ತು ಯೂಟ್ಯೂಬ್ ಚಾನೆಲ್​ನಲ್ಲಿ ವೈರಲ್ ವೀಡಿಯೊದಂತೆಯೇ ಇರುವ ದೃಶ್ಯಗಳನ್ನು ಹೊಂದಿರುವ ದೀರ್ಘ ವೀಡಿಯೊಗಳನ್ನು ಹಂಚಿಕೊಂಡಿದೆ. ಐದು ನಿಮಿಷಗಳಿಗಿಂತ ಹೆಚ್ಚು ಅವಧಿಯ ವೀಡಿಯೊದ 2.57 ನಿಮಿಷಗಳಲ್ಲಿ ವೈರಲ್ ವೀಡಿಯೊ ಪ್ರಾರಂಭವಾಗುತ್ತದೆ. ವೀಡಿಯೊದ ಶೀರ್ಷಿಕೆಯ ಪ್ರಕಾರ, ನಾಗರಿಕ ರಕ್ಷಣಾ ಮತ್ತು ವಿಪತ್ತು ನಿರ್ವಹಣಾ ಪಡೆಯ ಸ್ವಯಂಸೇವಕರು ವೇತನ ಹೆಚ್ಚಳ ಮತ್ತು ಉದ್ಯೋಗ ಕ್ರಮಬದ್ಧಗೊಳಿಸುವಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಚಿವಾಲಯಕ್ಕೆ ಮೆರವಣಿಗೆ ನಡೆಸಿದರು. ಮೆರವಣಿಗೆ ಸಚಿವಾಲಯ ತಲುಪುವ ಮೊದಲು ಪೊಲೀಸರು ಪ್ರತಿಭಟನಾಕಾರರನ್ನು ತಡೆದರು ಎಂದು ವೀಡಿಯೊದ ಶೀರ್ಷಿಕೆ ಹೇಳುತ್ತದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಪ್ರಸಾರವಾಗುತ್ತಿರುವ ವೀಡಿಯೊ ನಾಗರಿಕ ರಕ್ಷಣಾ ಮತ್ತು ವಿಪತ್ತು ನಿರ್ವಹಣಾ ಪಡೆಗಳ ಸದಸ್ಯರು ನಡೆಸಿದ ಸಚಿವಾಲಯದ ಮೆರವಣಿಗೆಯ ಸಮಯದಲ್ಲಿ ನಡೆದ ಘರ್ಷಣೆಯದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Nepal floods–Rescue operation saves stranded man? No, video is from Mexico

Fact Check: നേപ്പാളില്‍ പ്രളയത്തിനിടെ ഡാം തകരുന്ന ദൃശ്യം? വീഡിയോയുടെ സത്യമറിയാം

Fact Check: முதல்வர் விஜய் பாணியில் விநாயகர் சிலை செய்யப்பட்டதாகப் பரவும் படம்: உண்மை என்ன?

Fact Check: ನೇಪಾಳದಲ್ಲಿ ಪ್ರವಾಹ ನಂತರ ಮುಸ್ಲಿಮರಿಂದ ಕುರಾನ್ ಪಠಿಸಿ ಪ್ರಾರ್ಥನೆ ಮಾಡಲಾಗುತ್ತಿದೆಯೇ? ಸುಳ್ಳು, ಸತ್ಯ ಇಲ್ಲಿದೆ

Fact Check: ‘బాంబు పరీక్ష’లో మదర్సా టీచర్, కుటుంబం మృతి? కాదు, వీడియోలో కనిపించింది సిలిండర్ పేలుడు