Kannada

Fact Check: ಭಾರೀ ಮಳೆಯಿಂದ ಜಲಾವೃತವಾದ ಚೆನ್ನೈ ಮರೀನಾ ಬೀಚ್?: ವೈರಲ್ ವೀಡಿಯೊದ ಸತ್ಯಾಂಶ ಇಲ್ಲಿದೆ

ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮರೀನಾ ಬೀಚ್ ಹತ್ತಿರದ ದೃಶ್ಯ’’ ಎಂದು ಬರೆದುಕೊಂಡಿದ್ದಾರೆ.

Vinay Bhat

ಫೆಂಗಲ್ ಚಂಡಮಾರುತದಿಂದ ಉಂಟಾದ ಭಾರೀ ಮಳೆಯಿಂದಾಗಿ ಡಿಸೆಂಬರ್ 1, 2024 ರಂದು ಚೆನ್ನೈನ ಹೆಚ್ಚಿನ ಪ್ರದೇಶ ಜಲಾವೃತಗೊಂಡಿತು. ಹಲವಾರು ರಸ್ತೆಗಳು ಮತ್ತು ಸುರಂಗಮಾರ್ಗಗಳು ಮುಳುಗಿ ಹೋಗಿವೆ. ಈ ಹಿನ್ನೆಲೆಯಲ್ಲಿ, ಚೆನ್ನೈನ ಮರೀನಾ ಬೀಚ್‌ನಲ್ಲಿನ ಪರಿಸ್ಥಿತಿಯನ್ನು ಬಿಂಬಿಸುವುದಾಗಿ ಹೇಳಿಕೊಂಡು ಪ್ರವಾಹ ಪ್ರದೇಶವನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮರೀನಾ ಬೀಚ್ ಹತ್ತಿರದ ದೃಶ್ಯ’’ ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಸೆಪ್ಟೆಂಬರ್‌ನಿಂದಲೇ ಇಂಟರ್ನೆಟ್‌ನಲ್ಲಿದ್ದು, ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಭಾರೀ ಮಳೆಯಿಂದ ರಸ್ತೆ ಮುಳುಗಿದ ಘಟನೆ ಇದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೀಡಿಯೊದ ಸ್ಕ್ರೀನ್ ಶಾಟ್ ತೆಗೆದು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಫೇಸ್‌ಬುಕ್‌ನಲ್ಲಿ ಸೆಪ್ಟೆಂಬರ್ 3, 2024 ರಂದು ಇದೇ ವೀಡಿಯೊ ಪೋಸ್ಟ್ ಮಾಡಿರುವುದು ಸಿಕ್ಕಿತು. ಇದಕ್ಕೆ ‘‘02-09-2024 ಜೆಡ್ಡಾ ನಗರದಲ್ಲಿ ಭಾರೀ ಮಳೆ’’ ಎಂದು ಶೀರ್ಷಿಕೆ ನೀಡಲಾಗಿದೆ.

ಮತ್ತಷ್ಟು ಹುಡುಕಿದಾಗ, ನಾವು ನ್ಯೂಸ್‌ಫ್ಲೇರ್‌ನಲ್ಲಿ ಸೆಪ್ಟೆಂಬರ್ 3, 2024 ರಂದು ‘‘ಸೌದಿ ಅರೇಬಿಯಾ: ಭಾರೀ ಮಳೆಯು ಜೆಡ್ಡಾದ ಬೀದಿಗಳಲ್ಲಿ ಪ್ರವಾಹವನ್ನು ಉಂಟುಮಾಡಿದೆ’’ ಎಂಬ ಶೀರ್ಷಿಕೆಯೊಂದಿಗೆ ಅದೇ ವೀಡಿಯೊವನ್ನು ಕಂಡುಕೊಂಡಿದ್ದೇವೆ.

ಸೌದಿ ಅರೇಬಿಯಾ ಮೂಲದ ಯೂಟ್ಯೂಬ್ ಚಾನೆಲ್ ಕೂಡ ಸೆಪ್ಟೆಂಬರ್ 3 ರಂದು ಅದೇ ವೀಡಿಯೊವನ್ನು ಹಂಚಿಕೊಂಡಿದೆ. ಸೆಪ್ಟೆಂಬರ್ 2 ರಂದು ಭಾರೀ ಮಳೆಯ ನಂತರ ಬೀದಿಗಳು ಮುಳುಗಿರುವುದನ್ನು ಇದು ದೃಢಪಡಿಸಿದೆ.

ಇನ್ನು ಈ ವೀಡಿಯೊಗೂ ಚೆನ್ನೈಗೆ ಯಾವುದೇ ಸಂಬಂಧಿಸಿಲ್ಲ, ಇದು ಸೌದಿ ಅರೇಬಿಯಾಕ್ಕೆ ಸೇರಿದೆ ವೀಡಿಯೊ ಎಂದು ತಮಿಳುನಾಡು ಸರ್ಕಾರದ ಫ್ಯಾಕ್ಟ್ ಚೆಕ್ ಟೀಂ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿ ಈ ವೀಡಿಯೊವನ್ನು ತೆಗೆಯಲಾಗಿದ್ದು, ಚೆನ್ನೈನ ಮರೀನಾ ಬೀಚ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬರೆಯಲಾಗಿದೆ.

ವೀಡಿಯೊದ ಸ್ಥಳವನ್ನು ಸ್ವತಂತ್ರವಾಗಿ ಪರಿಶೀಲಿಸಲು ನಮಗೆ ಸಾಧ್ಯವಾಗಲಿಲ್ಲ. ಆದಾಗ್ಯೂ, ಇದು ಸೌದೀ ಅರೇಬಿಯಾದ ಕ್ಲಿಪ್ ಆಗಿದೆ ಮತ್ತು ಚೆನ್ನೈನಲ್ಲಿನ ಇತ್ತೀಚಿನ ಪ್ರವಾಹಕ್ಕೆ ಸಂಬಂಧಿಸಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Humayun Kabir’s statement on Babri Masjid leads to protest, police action? Here are the facts

Fact Check: താഴെ വീഴുന്ന ആനയും നിര്‍ത്താതെ പോകുന്ന ലോറിയും - വീഡിയോ സത്യമോ?

Fact Check: சென்னையில் அரசு சார்பில் ஹஜ் இல்லம் ஏற்கனவே உள்ளதா? உண்மை அறிக

Fact Check: ಜಪಾನ್‌ನಲ್ಲಿ ಭೀಕರ ಭೂಕಂಪ ಎಂದು ವೈರಲ್ ಆಗುತ್ತಿರುವ ವೀಡಿಯೊದ ಹಿಂದಿನ ಸತ್ಯವೇನು?

Fact Check: శ్రీలంక వరదల్లో ఏనుగు కుక్కని కాపాడుతున్న నిజమైన దృశ్యాలా? కాదు, ఇది AI-జనరేటెడ్ వీడియో