Kannada

Fact Check: ಕೇರಳದಲ್ಲಿ ತಂದೆ ತನ್ನ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕೆ ಹೆಣ್ಣುಮಕ್ಕಳೇ ದಾಳಿ ನಡೆಸಿದ್ದಾರೆಯೇ? ಇಲ್ಲ, ಸತ್ಯ ಇಲ್ಲಿದೆ

ರಕ್ತಸಿಕ್ತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ನೋವಿನಿಂದ ಕಿರುಚುತ್ತಾ ಓಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಹಂಚಿಕೊಳ್ಳುತ್ತಿರುವ ಕೆಲವರು, ಕೇರಳದ ವ್ಯಕ್ತಿ ತನ್ನ ಮೂವರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ, ಅವರೇ ಸೇರಿ ಆತನ ಜನನಾಂಗವನ್ನು ಕತ್ತರಿಸಿದ್ದಾರೆ ಎಂದು ಹೇಳುತ್ತಿದ್ದಾರೆ.

Vinay Bhat

(ಎಚ್ಚರಿಕೆ: ಈ ಸುದ್ದಿಯಲ್ಲಿ ಹಿಂಸಾತ್ಮಕ ಘಟನೆಯ ವಿವರಗಳಿವೆ. ಓದುಗರ ವಿವೇಚನೆಗೆ ಬಿಡಲಾಗಿದೆ.)

ರಕ್ತಸಿಕ್ತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ನೋವಿನಿಂದ ಕಿರುಚುತ್ತಾ ಓಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಹಂಚಿಕೊಳ್ಳುತ್ತಿರುವ ಕೆಲವರು, ಕೇರಳದ ವ್ಯಕ್ತಿಯೊಬ್ಬ ತನ್ನ ಮೂವರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ, ಅವರೇ ಸೇರಿ ಆತನ ಜನನಾಂಗವನ್ನು ಕತ್ತರಿಸಿದ್ದಾರೆ ಎಂದು ಹೇಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಕೇರಳದಲ್ಲಿ ನಡೆದ ಅಸಹ್ಯಕಾರಿ ಘಟನೆ ಇದು! ನೀವು ಅವರ ಧರ್ಮವನ್ನು ಊಹಿಸಿದರೆ ನಿಮಗೆ ಯಾವುದೇ ಬಹುಮಾನ ಕೊಡುವುದಿಲ್ಲ. ಅವನು ತನ್ನ ಮೂವರು ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದನು. ಈ ಬಾರಿ ಅವನು ತನ್ನ ನಾಲ್ಕನೇ ವರ್ಷದ ಮಗಳು‌ ಹಾಗೂ ಆರೂವರೆ ವರ್ಷದ ಮಗಳ ಮೇಲೂ ಅತ್ಯಾಚಾರ ಮಾಡಲು ಪ್ರಯತ್ನಿಸಿದನು. ಆದರೆ, ಆಕ್ರೋಶಗೊಂಡ ಆ ಮೂವರು ಹೆಣ್ಣುಮಕ್ಕಳು ಸೇರಿ ಅವನ ಶಿಶ್ನವನ್ನು ಕತ್ತರಿಸಿ, ಬಿಸಾಕಿದರು’’ ಎಂದು ಬರೆಯಲಾಗಿದೆ. (Archive)

Fact Check

ಈ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಸೌತ್ ಚೆಕ್ ಪರಿಶೀಲನೆಯಲ್ಲಿ ತಿಳಿದುಬಂದಿದೆ. ವೈರಲ್ ಆಗುತ್ತಿರುವ ವೀಡಿಯೊ ಕೇರಳದದ್ದಲ್ಲ. ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆ.

ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದರಲ್ಲಿ ಬಾಂಗ್ಲಾದೇಶದ ಸುದ್ದಿ ವಾಹಿನಿಯ ಲೋಗೋ ಕಾಣಿಸುತ್ತದೆ. ಈ ಸುಳಿವಿನ ಆಧಾರದ ಮೇಲೆ ನಡೆಸಿದ ಹುಡುಕಾಟದಲ್ಲಿ, ಜೂನ್ 30ರಂದು ನ್ಯೂಸ್ 21 ಬಾಂಗ್ಲಾ ಟಿವಿ ತನ್ನ ಫೇಸ್‌ಬುಕ್ ಪುಟದಲ್ಲಿ ಇದೇ ವೀಡಿಯೊವನ್ನು ಪ್ರಕಟಿಸಿರುವುದು ಕಂಡುಬಂದಿತು.

ವರದಿಯ ಪ್ರಕಾರ, ಈ ಘಟನೆ ಬಾಂಗ್ಲಾದೇಶದ ಫರೀದ್‌ಪುರ ಜಿಲ್ಲೆಯ ಭಂಗಾ ಪ್ರದೇಶದಲ್ಲಿ ನಡೆದಿದೆ. ಮಹಿಳೆಯೊಬ್ಬಳು ತನ್ನ ಪತಿ ನಿದ್ರಿಸುತ್ತಿದ್ದ ವೇಳೆ ಆತನ ಜನನಾಂಗವನ್ನು ಕತ್ತರಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

ಇದೇ ಘಟನೆ ಕುರಿತು ಬಾಂಗ್ಲಾದೇಶದ ಮತ್ತೊಂದು ಸುದ್ದಿ ಸಂಸ್ಥೆಯೂ ಇದೇ ವೀಡಿಯೊ ಮತ್ತು ವಿವರಗಳೊಂದಿಗೆ ವರದಿ ಪ್ರಕಟಿಸಿದೆ.

ದಾಳಿಗೆ ಕಾರಣ ಕೌಟುಂಬಿಕ ಕಲಹ

ಬಾಂಗ್ಲಾದೇಶದ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಈ ಘಟನೆ ಜೂನ್ 29ರ ಮುಂಜಾನೆ ನಡೆದಿದೆ. ಆರೋಪಿ ಸುಮಯಾ ಅಕ್ತರ್ ಸುಮಿ ಎಂಬ ಮಹಿಳೆ ತನ್ನ ಪತಿ ಹನೀಫ್ ಶೇಖ್ ಮೇಲೆ ದಾಳಿ ನಡೆಸಿದ್ದಾಳೆ ಎಂದು ವರದಿಯಾಗಿದೆ.

ಮಹಿಳೆಯ ಆರೋಪದಂತೆ, ಪತಿ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದನು ಹಾಗೂ ದೀರ್ಘಕಾಲದಿಂದ ತನ್ನ ಮೇಲೆ ದೈಹಿಕ ಕಿರುಕುಳ ನೀಡುತ್ತಿದ್ದನು. ಈ ಹಿನ್ನೆಲೆ, ಪತಿ ನಿದ್ರಿಸುತ್ತಿದ್ದ ವೇಳೆ ಬ್ಲೇಡ್ ಬಳಸಿ ದಾಳಿ ನಡೆಸಿದ್ದಾಗಿ ಆಕೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ ಎಂದು ವರದಿಗಳು ತಿಳಿಸಿವೆ.

ಪ್ರಮುಖವಾಗಿ, ಯಾವುದೇ ವಿಶ್ವಾಸಾರ್ಹ ವರದಿಯಲ್ಲೂ ಈ ಘಟನೆ ಕೇರಳದಲ್ಲಿ ನಡೆದಿದೆ ಅಥವಾ ತಂದೆಯ ಮೇಲೆ ಅವನ ಹೆಣ್ಣುಮಕ್ಕಳೇ ದಾಳಿ ನಡೆಸಿದ್ದಾರೆ ಎಂಬ ಉಲ್ಲೇಖವಿಲ್ಲ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಆಗಿರುವ ವೀಡಿಯೊ ಕೇರಳದಲ್ಲಿ ನಡೆದ ಘಟನೆಯದ್ದಲ್ಲ. ಇದು ಬಾಂಗ್ಲಾದೇಶದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ಘಟನೆಯ ವೀಡಿಯೊ ಆಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Asaduddin Owaisi attends Jantar Mantar protest in support of CJP? No, here is the truth

Fact Check: ജന്തര്‍ മന്ദറില്‍ CJP സമരത്തിനിടെ പലസ്തീന്‍ പതാകയുമായി യുവതി? വീഡിയോയുടെ വാസ്തവം

Fact Check: ஒன்றிய கல்வி அமைச்சர் தர்மேந்திர பிரதான் தனது பதவியை ராஜினாமா செய்தாரா? உண்மை என்ன

Fact Check: ಸಿಜೆಪಿ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಮಹಿಳೆಯರನ್ನು ಥಳಿಸಿದ್ದಾರೆಯೇ? ಸುಳ್ಳು, ಸತ್ಯ ಇಲ್ಲಿದೆ

Fact Check: వరదలో కొట్టుకుపోతున్న పులిని ఏనుగు కాపాడిందా? కాదు, వైరల్ వీడియో AIతో రూపొందించినది