Kannada

Fact Check: ಸಿಜೆಪಿ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಮಹಿಳೆಯರನ್ನು ಥಳಿಸಿದ್ದಾರೆಯೇ? ಸುಳ್ಳು, ಸತ್ಯ ಇಲ್ಲಿದೆ

ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರೊಟೆಸ್ಟ್ ವೇಳೆ ದೆಹಲಿ ಪೊಲೀಸರು ಮಹಿಳಾ ಪ್ರತಿಭಟನಾಕಾರರನ್ನು ಥಳಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ವೀಡಿಯೊವು ಟ್ರಕ್ ಬಳಿ ಕೆಲವು ಮಹಿಳೆಯರು ಮತ್ತು ಪೊಲೀಸ್ ಸಿಬ್ಬಂದಿಗಳ ನಡುವೆ ನಡೆದ ಘರ್ಷಣೆ ಮತ್ತು ದೈಹಿಕ ವಾಗ್ವಾದವನ್ನು ತೋರಿಸುತ್ತದೆ.

vinay bhat

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊವೊಂದರಲ್ಲಿ, ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರೊಟೆಸ್ಟ್ ವೇಳೆ ದೆಹಲಿ ಪೊಲೀಸರು ಮಹಿಳಾ ಪ್ರತಿಭಟನಾಕಾರರನ್ನು ಥಳಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ವೀಡಿಯೊವು ಟ್ರಕ್ ಬಳಿ ಕೆಲವು ಮಹಿಳೆಯರು ಮತ್ತು ಪೊಲೀಸ್ ಸಿಬ್ಬಂದಿಗಳ ನಡುವೆ ನಡೆದ ಘರ್ಷಣೆ ಮತ್ತು ದೈಹಿಕ ವಾಗ್ವಾದವನ್ನು ತೋರಿಸುತ್ತದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಜಂತರ್ ಮಂತರ್‌ ಪ್ರೊಟೆಸ್ಟ್​ನಲ್ಲಿ ಮಹಿಳೆಯರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ | ಖಾಕಿ ವರ್ತನೆಗೆ ಆಕ್ರೋಶ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೋ ವಾಸ್ತವವಾಗಿ 2025 ರ ಅಕ್ಟೋಬರ್‌ನಲ್ಲಿ ಉತ್ತರಾಖಂಡದಲ್ಲಿ ನಡೆದ ಘಟನೆಯದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಇನ್​ಸ್ಟಾಗ್ರಾಮ್ ಖಾತೆಯೊಂದರಲ್ಲಿ ಈ ಹಕ್ಕಿಗೆ ಸಂಬಂಧಿಸಿದ ಪೋಸ್ಟ್ ಕಂಡುಕೊಂಡಿದ್ದೇವೆ. ಈ ಪೋಸ್ಟ್ ಅನ್ನು ಅಕ್ಟೋಬರ್ 15, 2025 ರಂದು ಹಂಚಿಕೊಳ್ಳಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ವೀಡಿಯೊ ಉತ್ತರಾಖಂಡದ ಡೆಹ್ರಾಡೂನ್‌ನದ್ದಾಗಿದೆ. ಈ ಘಟನೆಯು ಟ್ರಕ್ ಒಂದು ಮನೆಗೆ ಡಿಕ್ಕಿ ಹೊಡೆದ ವಿವಾದಕ್ಕೆ ಸಂಬಂಧಿಸಿದೆ.

ETV Bharat ಅಕ್ಟೋಬರ್ 15, 2025 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ಜೊತೆಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದ್ದು, ವರದಿಯ ಪ್ರಕಾರ, ‘‘ಡೆಹ್ರಾಡೂನ್‌ನ ಪಟೇಲ್ ನಗರ ಪೊಲೀಸ್ ಠಾಣೆ ಪ್ರದೇಶದಲ್ಲಿ, ಆಶಾರೋಡಿಯಿಂದ ಡೆಹ್ರಾಡೂನ್ ಕಡೆಗೆ ಟ್ರಕ್ ಒಂದು ಹೋಗುತ್ತಿದ್ದಾಗ, ಅದು ನಿಯಂತ್ರಣ ತಪ್ಪಿ ಮನೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ನಂತರ ಬಲಿಪಶುವಿನ ಕುಟುಂಬದ ಮಹಿಳೆಯರು ಗಲಾಟೆ ಮಾಡಲು ಪ್ರಾರಂಭಿಸಿದರು ಮತ್ತು ಟ್ರಕ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಅವರು ಹಾಗೆ ಮಾಡುವುದನ್ನು ತಡೆಯಲು ಪ್ರಯತ್ನಿಸಿದಾಗ, ಮಹಿಳೆಯರು ಪೊಲೀಸರೊಂದಿಗೆ ಜಗಳವಾಡಲು ಪ್ರಾರಂಭಿಸಿದರು’’ ಎಂದು ಬರೆಯಲಾಗಿದೆ.

ಅಕ್ಟೋಬರ್ 15, 2025 ರಂದು ಎಬಿಪಿ ನ್ಯೂಸ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯಲ್ಲಿ ನಾವು ವೀಡಿಯೊವನ್ನು ಕಂಡುಕೊಂಡಿದ್ದೇವೆ. ವರದಿಯ ಪ್ರಕಾರ, ಉತ್ತರಾಖಂಡದ ಡೆಹ್ರಾಡೂನ್‌ನ ಮೊಹಬೆವಾಲಾ ಪ್ರದೇಶದಲ್ಲಿ ಟ್ರಕ್ ಒಂದು ಮನೆಗೆ ಡಿಕ್ಕಿ ಹೊಡೆದಿದ್ದು, ಆಸ್ತಿಗೆ ಗಮನಾರ್ಹ ಹಾನಿಯಾಗಿದೆ. ಮನೆಮಾಲೀಕರ ಕಡೆಯವರನ್ನು ಪ್ರತಿನಿಧಿಸುವ ಮಹಿಳೆಯೊಬ್ಬರು ಹಾನಿಗೆ ಪರಿಹಾರವನ್ನು ಕೋರುತ್ತಾ ಆಕ್ರೋಶಗೊಂಡು ಟ್ರಕ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ, ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರನ್ನು ತಡೆಯಲು ಪ್ರಯತ್ನಿಸಿದರು. ಈ ಪ್ರಕ್ರಿಯೆಯಲ್ಲಿ, ಮಹಿಳೆ ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.

ನಮ್ಮ ತನಿಖೆಯ ಸಮಯದಲ್ಲಿ, ಅಕ್ಟೋಬರ್ 15, 2025 ರಂದು 'ರೈಸಿಂಗ್ ಸ್ಟೇಟ್' ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಅದೇ ವೀಡಿಯೊವನ್ನು ಸಹ ಕಂಡುಕೊಂಡಿದ್ದೇವೆ. ಪೋಸ್ಟ್ ಪ್ರಕಾರ, ವೇಗವಾಗಿ ಬಂದ ಟ್ರಕ್ ಡೆಹ್ರಾಡೂನ್‌ನಲ್ಲಿ ಮನೆಯೊಂದಕ್ಕೆ ಡಿಕ್ಕಿ ಹೊಡೆದಿದೆ; ಪರಿಹಾರದ ವಿವಾದ ಉಂಟಾಯಿತು, ಮತ್ತು ಕೋಪಗೊಂಡ ಮಹಿಳೆಯೊಬ್ಬರು ಟ್ರಕ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಮಹಿಳೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ತಡೆಯಲು ಪ್ರಯತ್ನಿಸಿದಾಗ ಅವರ ನಡುವೆ ಮಾತಿನ ಚಕಮಕಿ ನಡೆಯಿತು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಜಂತರ್ ಮಂತರ್‌ನಲ್ಲಿ ಪೊಲೀಸರು ಮಹಿಳಾ ಪ್ರತಿಭಟನಾಕಾರರನ್ನು ಥಳಿಸುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊ ದೆಹಲಿಯದ್ದಲ್ಲ, ಇದು ಡೆಹ್ರಾಡೂನ್‌ನಲ್ಲಿ ನಡೆದ ಹಳೆಯ ಘಟನೆಗೆ ಸಂಬಂಧಿಸಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Houthis attack Israeli oil pipeline? No, here are the facts

Fact Check: പ്രധാനമന്ത്രി നരേന്ദ്രമോദിയുടെ 76-ാം ജന്മദിനത്തില്‍ ബുര്‍ജ് ഖലീഫയില്‍ ആശംസ? വീഡിയോയുടെ സത്യമറിയാം

Fact Check: ನಂದಿ ವಿಗ್ರಹಕ್ಕೆ ಬಾಳೆಹಣ್ಣು ತಿನ್ನಿಸುತ್ತಿರುವ ಕೋತಿ ಎಂದು ಎಐ ವೀಡಿಯೊ ವೈರಲ್

Fact Check: இரு கைகளும் இல்லாத பெண் ஜிம்னாஸ்டிக்ஸ் செய்யும் வைரல் காணொலி உண்மையா?

Fact Check: జముయి వేధింపుల కేసు నిందితులను ఎన్‌కౌంటర్‌లో అరెస్ట్ చేశారా? కాదు, వీడియో ముజఫర్‌నగర్‌కు చెందినది