Kannada

Fact Check: ‘ಉಚಿತ ಗುಂಡಿ ಭಾಗ್ಯ' ಎಂದು ವೈರಲ್ ಆಗಿರುವ ವೀಡಿಯೊ ಕರ್ನಾಟಕದ್ದಲ್ಲ, ಇದು ಗುಜರಾತ್‌ನಲ್ಲಿ ನಡೆದ ಘಟನೆ

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಮಳೆ ನೀರಿನಿಂದ ತುಂಬಿರುವ ರಸ್ತೆಯಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ದಂಪತಿ ದೊಡ್ಡ ಗುಂಡಿಗೆ ಬಿದ್ದು ಅಪಘಾತಕ್ಕೀಡಾಗುವ ದೃಶ್ಯ ಕಾಣಬಹುದು. ಹಲವರು ಇದನ್ನು ಕರ್ನಾಟಕದ ರಸ್ತೆ ಎಂದು ಹೇಳಿ ಹಂಚಿಕೊಳ್ಳುತ್ತಿದ್ದಾರೆ.

vinay bhat

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಮಳೆ ನೀರಿನಿಂದ ತುಂಬಿರುವ ರಸ್ತೆಯಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ದಂಪತಿ ದೊಡ್ಡ ಗುಂಡಿಗೆ ಬಿದ್ದು ಅಪಘಾತಕ್ಕೀಡಾಗುವ ದೃಶ್ಯ ಕಾಣಬಹುದು. ಹಲವರು ಇದನ್ನು ಕರ್ನಾಟಕದ ರಸ್ತೆ ಎಂದು ಹೇಳಿ ಹಂಚಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಅಪ್ಲೋಡ್ ಮಾಡಿ, ‘‘ನಮ್ಮ ಸರ್ಕಾರ ಉಚಿತವಾಗಿ ಗುಂಡಿ ಭಾಗ್ಯಗಳನ್ನು ಕೊಟ್ಟಿದೆ ಆ ಕರ್ಮಕ್ಕೆ ನೀವು ಹುಷಾರಾಗಿರಿ, ಇಂತ ಗುಂಡಿ ಕಂಡಲ್ಲಿ ಅದರ ಸುತ್ತ ಕಲ್ಲಿಡಿ ಜನಜಾಗೃತಿ ಮಾಡಿ. ಕರ್ನಾಟಕ ಗಂಧದಗುಡಿ ಅಲ್ಲ ಗುಂಡಿಗಳ ಗುಡಿ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಕರ್ನಾಟಕದಲ್ಲಿ ನಡೆದ ಘಟನೆ ಅಲ್ಲ, ಬದಲಾಗಿ ಗುಜರಾತ್​ನ ಜುನಾಗಢ್​ನಲ್ಲಿ ಸಂಭವಿಸಿದೆ.

ವೈರಲ್ ವಿಡಿಯೊದ ಪ್ರಮುಖ ಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಜುಲೈ 3 ರಂದು ಇಂಡಿಯಾ ಟುಡೆ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ಈ ಘಟನೆ ಗುಜರಾತ್‌ನ ಜುನಾಗಢ್​ನಲ್ಲಿ ನಡೆದಿದೆ. ಮಳೆ ನೀರಿನಿಂದ ಸಂಪೂರ್ಣ ಮುಚ್ಚಿಹೋಗಿದ್ದ ದೊಡ್ಡ ಗುಂಡಿ ಕಾಣಿಸದೇ ಹೋಗಿದ್ದರಿಂದ ಬೈಕ್‌ನ ಮುಂಭಾಗದ ಚಕ್ರ ಅದರಲ್ಲಿ ಸಿಲುಕಿದ್ದು, ದಂಪತಿ ರಸ್ತೆಗೆ ಎಸೆಯಲ್ಪಟ್ಟಿದ್ದರು. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಬರೆಯಲಾಗಿದೆ.

ಟೈಮ್ಸ್ ನೌ ಕೂಡ ಜುಲೈ 2 ರಂದು ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿದ್ದು, ಗುಜರಾತ್‌ನ ಜುನಾಗಢ ಜಿಲ್ಲೆಯ ಆಜಾದ್ ಚೌಕ್ ಪ್ರದೇಶದಲ್ಲಿ ದಂಪತಿಯೊಬ್ಬರು ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ ತೆರೆದ ಒಳಚರಂಡಿ ಹೊಂಡಕ್ಕೆ ಬಿದ್ದು, ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಮಳೆಗಾಲಕ್ಕೂ ಮುನ್ನ ನಾಗರಿಕ ಸುರಕ್ಷತೆ ಮತ್ತು ಪುರಸಭೆಯ ಮುಚ್ಚದ ಚರಂಡಿಗಳನ್ನು ನಿರ್ವಹಿಸುವ ಬಗ್ಗೆ ಮತ್ತೊಮ್ಮೆ ಕಳವಳ ವ್ಯಕ್ತವಾಗಿದೆ ಎಂದು ಬರೆಯಲಾಗಿದೆ.

ET Now ಜುಲೈ 4 ರಂದು ತನ್ನ ಫೇಸ್​ಬುಕ್ ಪೇಜ್​ನಲ್ಲಿ ವೈರಲ್ ವೀಡಿಯೊವನ್ನು ಹಂಚಿಕೊಂಡು, ಗುಜರಾತ್‌ನ ಜುನಾಗಢ್‌ನಲ್ಲಿ ಮಳೆಯ ನಂತರ ರಸ್ತೆ ಮೇಲೆ ನೀರು ತುಂಬಿದ್ದ ದೊಡ್ಡ ಗುಂಡಿಗೆ ದ್ವಿಚಕ್ರ ವಾಹನ ಬಿದ್ದ ಪರಿಣಾಮ 35 ವರ್ಷದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.

ಈ ಘಟನೆ ಗುಜರಾತ್‌ನ ಜುನಾಗಢ್‌ನಲ್ಲಿ ನಡೆದಿದೆ ಎಂದು ಹೇಳುವ ಇನ್ನೂ ಅನೇಕ ವರದಿಗಳನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು. ಹಾಗೆಯೆ ಕರ್ನಾಟಕದಲ್ಲಿ ಈ ಘಟನೆ ನಡೆದಿದೆ ಎಂಬ ಬಗ್ಗೆ ಯಾವುದೇ ವಿಶ್ವಾಸರ್ಹ ಮಾಧ್ಯಮ ಸುದ್ದಿ ವರದಿ ಪ್ರಕಟಿಸಿಲ್ಲ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬೈಕ್ ಸವಾರಿ ಮಾಡುತ್ತಿದ್ದ ದಂಪತಿ ದೊಡ್ಡ ಗುಂಡಿಗೆ ಬಿದ್ದು ಅಪಘಾತಕ್ಕೀಡಾಗುವ ದೃಶ್ಯ ಕರ್ನಾಟಕದ್ದಲ್ಲ ಇದು ಗುಜರಾತ್​ನದ್ದು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Video shows Ukraine’s recent strike on Russia’s Kuibyshev oil refinery? No, here are the facts

Fact Check: പ്രധാനമന്ത്രി നരേന്ദ്രമോദിയുടെ 76-ാം ജന്മദിനത്തില്‍ ബുര്‍ജ് ഖലീഫയില്‍ ആശംസ? വീഡിയോയുടെ സത്യമറിയാം

Fact Check: இரு கைகளும் இல்லாத பெண் ஜிம்னாஸ்டிக்ஸ் செய்யும் வைரல் காணொலி உண்மையா?

Fact Check: ದೆಹಲಿಯಲ್ಲಿ ಮಳೆಯ ನಡುವೆಯೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ? ಇಲ್ಲ, ಇದು ಹಳೆಯ ವಿಡಿಯೊ

Fact Check: ఢిల్లీలో సీఈసీ జ్ఞానేశ్ కుమార్‌కు వ్యతిరేకంగా నిరసనా? కాదు, పాత వీడియో వైరల్