Kannada

Fact Check: ರಾಹುಲ್-ಪ್ರಿಯಾಂಕಾ ಗಾಂಧಿ ಅವರ ಉಪಾಹಾರ ಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೂರವಿಡಲಾಗಿದೆ? ಸುಳ್ಳು, ಸತ್ಯ ಇಲ್ಲಿದೆ

ಫೋಟೋದಲ್ಲಿ, ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಕೆಲವು ಅಧಿಕಾರಿಗಳೊಂದಿಗೆ ಮೇಜಿನ ಬಳಿ ಕುಳಿತು ಉಪಾಹಾರ ಸೇವಿಸುತ್ತಿದ್ದಾರೆ. ಈ ಮಧ್ಯೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದಿನ ಸೋಫಾದಲ್ಲಿ ಒಬ್ಬಂಟಿಯಾಗಿ ಕುಳಿತಿದ್ದಾರೆ.

vinay bhat

2026 ರ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಉಪಾಹಾರ ಸೇವಿಸುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ, ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಕೆಲವು ಅಧಿಕಾರಿಗಳೊಂದಿಗೆ ಮೇಜಿನ ಬಳಿ ಕುಳಿತು ಉಪಾಹಾರ ಸೇವಿಸುತ್ತಿದ್ದಾರೆ. ಈ ಮಧ್ಯೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದಿನ ಸೋಫಾದಲ್ಲಿ ಒಬ್ಬಂಟಿಯಾಗಿ ಕುಳಿತಿದ್ದಾರೆ. ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ, ರಾಹುಲ್ ಗಾಂಧಿಯನ್ನು ಟೀಕಿಸಲಾಗುತ್ತಿದೆ ಮತ್ತು ಅವರು ದಲಿತರಾಗಿರುವುದರಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹಿಂದೆ ಕೂರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ಫೋಟೋ ಹಂಚಿಕೊಂಡು, ‘‘ಇದು ನಿಜಾನಾ..? ರಾಷ್ಟ್ರೀಯ ಅಧ್ಯಕ್ಷರನ್ನೇ ದೂರ ಒಬ್ಬರನ್ನೇ ಕುಳ್ಳಿರಿಸಿ ಡಿನ್ನರ್ ಮಾಡ್ತಾ ಇದ್ದೀರಾ ಆ ಮನುಷ್ಯ ದಲಿತ ಅಂತ ನಾ ಅಥವಾ ಅಧ್ಯಕ್ಷ ಆಗಿದ್ರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತಾನ?. ಇದು ಅನ್ಯಾಯ ನಾನು ಬಿಜೆಪಿ ಸಪೋರ್ಟ್ ಮಾಡೋನು ಆದ್ರೆ ಆಗ್ತಾ ಇರೋ ಅನ್ಯಾಯ ನೋಡಿ ಸುಮ್ನೆ ಇರೋಕ್ಕೆ ಆಗ್ಲಿಲ್ಲ, ಆದ್ರೆ ಯಾವಾಗ ಯಾಕೆ ನಂಗೆ ಗೊತ್ತಿಲ್ಲ, ಇದು ನಿಜ ಆಗಿದ್ರೆ ಕಾಂಗ್ರೆಸ್ ಪಕ್ಷ ನಾಚಿಕೆ ಪಟ್ಕೋ ಬೇಕು ಅಷ್ಟೇ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಮೂಲ ಫೋಟೋದಲ್ಲಿ ಮಲ್ಲಿಕಾರ್ಜುನ ಖರ್ಗೆ ಕಾಣೆಯಾಗಿದ್ದು, ಹಿನ್ನೆಲೆಯಲ್ಲಿ ಸೋಫಾ ಖಾಲಿಯಾಗಿದೆ. ಚಿತ್ರವನ್ನು ಎಡಿಟ್ ಮಾಡುವ ಮೂಲಕ ಬದಲಾಯಿಸಲಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಫೋಟೋವನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾದ, ಕಾಂಗ್ರೆಸ್ ಪಕ್ಷದ ಅಧಿಕೃತ X ಖಾತೆಯಲ್ಲಿ ನಮಗೆ ಮೂಲ ಚಿತ್ರ ಸಿಕ್ಕಿದೆ. ಈ ಫೋಟೋವನ್ನು ಸೆಪ್ಟೆಂಬರ್ 13 ರಂದು ಅಪ್‌ಲೋಡ್ ಮಾಡಲಾಗಿದೆ. ಮಾಹಿತಿಯ ಪ್ರಕಾರ, ನವದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಉಪಾಹಾರ ಕೂಟದಲ್ಲಿ ಭೇಟಿಯಾದರು.

ಮೂಲ ಛಾಯಾಚಿತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಇರಲಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಇದು ಖರ್ಗೆಯವರ ಚಿತ್ರವನ್ನು ಮೂಲ ಛಾಯಾಚಿತ್ರಕ್ಕೆ ಡಿಜಿಟಲ್ ರೂಪದಲ್ಲಿ ಸೇರಿಸಲಾಗಿದೆ ಎಂದು ದೃಢಪಡಿಸುತ್ತದೆ. ಹೋಲಿಕೆಯನ್ನು ಕೆಳಗೆ ನೋಡಬಹುದು.

ಮಲೇಷ್ಯಾ ಪ್ರಧಾನಿಯವರ ಭೇಟಿಯನ್ನು ತೋರಿಸುವ ದಿನದ ವೀಡಿಯೊವನ್ನು ಕಾಂಗ್ರೆಸ್ ಹಂಚಿಕೊಂಡಿತ್ತು. ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ಇರಲಿಲ್ಲ ಎಂಬುದು ದೃಶ್ಯಗಳಿಂದ ಸ್ಪಷ್ಟವಾಗಿದೆ.

ಹೆಚ್ಚಿನ ತನಿಖೆಯಲ್ಲಿ ಮೂಲ ಛಾಯಾಚಿತ್ರವನ್ನು ಒಳಗೊಂಡ ಆಜ್ ತಕ್, ಹಿಂದೂಸ್ತಾನ್ ಮತ್ತು ದಿ ಎಕನಾಮಿಕ್ ಟೈಮ್ಸ್ ಮಾಧ್ಯಮ ವರದಿಗಳು ಕಂಡುಬಂದಿವೆ. ಈ ವರದಿಗಳು ಖರ್ಗೆ ಚಿತ್ರದಲ್ಲಿ ಇರಲಿಲ್ಲ ಎಂದು ತೋರಿಸುತ್ತವೆ. ಆಜ್ ತಕ್ ವರದಿಯ ಪ್ರಕಾರ, "ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಲೇಷ್ಯಾ ಪ್ರಧಾನಿ ಡಾಟೋ'ಸೆರಿ ಅನ್ವರ್ ಇಬ್ರಾಹಿಂ ಅವರನ್ನು ಭೇಟಿಯಾದರು. ಉಪಾಹಾರ ಸಭೆಯಲ್ಲಿ ಇಬ್ಬರು ನಾಯಕರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು."

ಫೋಟೋದಲ್ಲಿ AI ಬಳಸಲಾಗಿದೆಯೇ ಎಂದು ತಿಳಿಯಲು, ನಾವು ಹೈವ್ ಮಾಡರೇಶನ್ ಮತ್ತು ಸೈಟ್ ಎಂಜಿನ್ ಎಂಬ AI ಪತ್ತೆ ಸಾಧನವನ್ನು ಬಳಸಿಕೊಂಡು ಹುಡುಕಿದೆವು. ಈ ಉಪಕರಣವು ಫೋಟೋದಲ್ಲಿ AI ಬಳಸುವ ಸಾಧ್ಯತೆಯನ್ನು ಸುಮಾರು 99.9 ರಷ್ಟಿದೆ ಎಂಬ ಫಲಿತಾಂಶ ನೀಡಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಬ್ಬಂಟಿಯಾಗಿ ಸೋಫಾದಲ್ಲಿ ಕುಳಿತಿರುವ ವೈರಲ್ ಫೋಟೋ ಎಡಿಟ್ ಮಾಡಲ್ಪಟ್ಟಿದೆ ಎಂದು ಕಂಡುಬಂದಿದೆ. ಮೂಲ ಫೋಟೋದಲ್ಲಿ ಖರ್ಗೆ ಇಲ್ಲ. ಇದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮಾತ್ರ ಮಲೇಷ್ಯಾ ಪ್ರಧಾನಿ ಮತ್ತು ಅಧಿಕಾರಿಗಳೊಂದಿಗೆ ಉಪಾಹಾರ ಸೇವಿಸುತ್ತಿರುವುದನ್ನು ತೋರಿಸುತ್ತದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Video shows fire at Riyadh Airport after Houthi missile attack? No, video is unrelated

Fact Check: കൊല്‍ക്കത്തയില്‍ വിമാനത്താവളത്തിനായി മുസ്ലിം പള്ളി പൊളിക്കുന്ന ദൃശ്യങ്ങള്‍? വീഡിയോയുടെ സത്യമറിയാം

Fact Check: அபிஜீத் தீப்கே அமைதியைக் காப்பதாகக் கூறி சட்டப்பூர்வமான பிணைப்பத்திரத்தில் கையெழுத்திட்டாரா? உண்மை அறிக

Fact Check: ಸಿಜೆಪಿ ಪ್ರತಿಭಟನೆಯಲ್ಲಿ ಸಿಖ್ ವೇಷ ಧರಿಸಿ ಸಿಕ್ಕಿಬಿದ್ದ ಮುಸ್ಲಿಂ ವ್ಯಕ್ತಿ? ಸುಳ್ಳು, ಸತ್ಯ ಇಲ್ಲಿದೆ

Fact Check: ఢిల్లీలో సీఈసీ జ్ఞానేశ్ కుమార్‌కు వ్యతిరేకంగా నిరసనా? కాదు, పాత వీడియో వైరల్