Kannada

Fact Check: ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂ ಮಹಿಳಾ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದರೇ? ಸುಳ್ಳು, ಸತ್ಯ ಇಲ್ಲಿದೆ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಒಂದು ವೀಡಿಯೊದಲ್ಲಿ ಬಾಂಗ್ಲಾದೇಶದ ಹಿಂದೂ ಮಹಿಳಾ ಶಿಕ್ಷಕಿಯೊಬ್ಬರ ಮೇಲೆ ಇಸ್ಲಾಮಿಸ್ಟ್ಗಳು ಹಲ್ಲೆ ನಡೆಸುತ್ತಿರುವ ದೃಶ್ಯವಿದೆ ಎಂಬ ಹೇಳಿಕೆ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊವನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆದ ಕೋಮು ದಾಳಿಯೆಂದು ಪ್ರಸಾರ ಮಾಡಲಾಗುತ್ತಿದೆ.

vinay bhat

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಒಂದು ವೀಡಿಯೊದಲ್ಲಿ ಬಾಂಗ್ಲಾದೇಶದ ಹಿಂದೂ ಮಹಿಳಾ ಶಿಕ್ಷಕಿಯೊಬ್ಬರ ಮೇಲೆ ಇಸ್ಲಾಮಿಸ್ಟ್​ಗಳು ಹಲ್ಲೆ ನಡೆಸುತ್ತಿರುವ ದೃಶ್ಯವಿದೆ ಎಂಬ ಹೇಳಿಕೆ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊವನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆದ ಕೋಮು ದಾಳಿಯೆಂದು ಪ್ರಸಾರ ಮಾಡಲಾಗುತ್ತಿದೆ.

ವೈರಲ್ ಕ್ಲಿಪ್‌ನಲ್ಲಿ ಗುಲಾಬಿ ಬಣ್ಣದ ಉಡುಪು ಧರಿಸಿರುವ ಮಹಿಳೆಯೊಬ್ಬರ ಮೇಲೆ ಪುರುಷರ ಗುಂಪೊಂದು ಹಲ್ಲೆ ನಡೆಸುತ್ತಿರುವುದು ಕಾಣಿಸುತ್ತದೆ. ಪೊಲೀಸರು ಆಕೆಯನ್ನು ಸುರಕ್ಷಿತವಾಗಿ ಅಲ್ಲಿಂದ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿರುವಾಗ, ಜನಸಮೂಹದಲ್ಲಿದ್ದ ಹಲವರು ಆಕೆಗೆ ಒದೆಯುತ್ತಿರುವುದು ಕಂಡುಬರುತ್ತದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳಾ ಶಿಕ್ಷಕಿಯ ಮೇಲೆ ಇಸ್ಲಾಮಿಸ್ಟ್‌ಗಳಿಂದ ಹಲ್ಲೆ. ಬಾಂಗ್ಲಾದೇಶ ಹಿಂದೂಗಳಿಗೆ ಪ್ರತಿದಿನ ನರಕ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಹೇಳಿಕೆ ಸುಳ್ಳು ಎಂದು ಸೌತ್ ಚೆಕ್ ಪರಿಶೀಲನೆಯಲ್ಲಿ ಕಂಡುಬಂದಿದೆ. ವೈರಲ್ ವಿಡಿಯೊದಲ್ಲಿರುವ ಮಹಿಳೆ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ವ್ಯಾಪಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆದಲ್ಲಿ ಅವರ ಮೇಲೆ ಹಲ್ಲೆ ನಡೆದಿದೆ. ಈ ಘಟನೆಗೆ ಯಾವುದೇ ಕೋಮು ಸಂಬಂಧವಿಲ್ಲ.

ವೈರಲ್ ವೀಡಿಯೊದ ಪ್ರಮುಖ ದೃಶ್ಯಗಳನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಪರಿಶೀಲಿಸಿದಾಗ, ಬಾಂಗ್ಲಾದೇಶದ ಹಲವು ಸುದ್ದಿ ಮಾಧ್ಯಮಗಳ ವರದಿಗಳಲ್ಲಿ ಇದೇ ವೀಡಿಯೊದ ಸ್ಕ್ರೀನ್‌ಶಾಟ್‌ಗಳು ಪ್ರಕಟವಾಗಿರುವುದು ಕಂಡುಬಂದಿತು. ಆ ವರದಿಗಳಲ್ಲಿನ ಚಿತ್ರಗಳನ್ನು ವೈರಲ್ ವೀಡಿಯೊದೊಂದಿಗೆ ಹೋಲಿಕೆ ಮಾಡಿದಾಗ, ಗುಲಾಬಿ ಬಣ್ಣದ ಉಡುಪು ಧರಿಸಿರುವ ಅದೇ ಮಹಿಳೆ ಹಾಗೂ ಅವರ ಸುತ್ತಮುತ್ತ ನಿಂತಿರುವ ಪೊಲೀಸ್ ಅಧಿಕಾರಿಗಳು ಎರಡೂ ದೃಶ್ಯಗಳಲ್ಲಿಯೂ ಒಂದೇ ರೀತಿಯಾಗಿ ಕಾಣಿಸಿಕೊಂಡರು.

ಅಂತಹ ಒಂದು ವರದಿಯನ್ನು ಢಾಕಾ ಮೂಲದ ದಿ ಡೈಲಿ ಸ್ಟಾರ್ ಆಗಸ್ಟ್ 30ರಂದು ಪ್ರಕಟಿಸಿತ್ತು. ಅದರ ಪ್ರಕಾರ, ಮಹಿಳೆಯ ಹೆಸರು ಝಾಕಿಯಾ ಸುಲ್ತಾನಾ. ಅವರು ರಾಜ್ಬಾರಿ ಪಟ್ಟಣದ ಕಪೋರ್ ಬಜಾರ್ ಪ್ರದೇಶದಲ್ಲಿರುವ ಕಡೆಯರಿಯಾ ಮಾರುಕಟ್ಟೆಯಲ್ಲಿ ಬಟ್ಟೆ ಅಂಗಡಿಯ ಮಾಲೀಕರಾಗಿದ್ದಾರೆ.

ವರದಿಯ ಪ್ರಕಾರ, ವ್ಯಾಪಾರಕ್ಕೆ ಸಂಬಂಧಿಸಿದ ವಿವಾದದ ವೇಳೆ ಸಾರ್ವಜನಿಕವಾಗಿ ಅವರ ಮೇಲೆ ಹಲ್ಲೆ ನಡೆದಿದೆ.

ಬಾಂಗ್ಲಾದೇಶದ ಮತ್ತೊಂದು ಸುದ್ದಿ ಸಂಸ್ಥೆಯಾದ ಜಾಗೋ ನ್ಯೂಸ್ 24 ವರದಿಯ ಪ್ರಕಾರ, ಝಾಕಿಯಾ ಸುಲ್ತಾನಾ ಮತ್ತು ಅವರ ಅಂಗಡಿಯಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿ ಶಾಜನಾಜ್ ಪರ್ವಿನ್ ಬ್ರಿಷ್ಠಿ ಅವರ ನಡುವಿನ ವಿವಾದ ಈ ಘಟನೆಗೆ ಕಾರಣವಾಗಿತ್ತು.

ಸ್ಥಳೀಯ ವ್ಯಾಪಾರಿಗಳ ಹೇಳಿಕೆಯಂತೆ, ಬ್ರಿಷ್ಠಿ ಅವರ ಉದ್ಯೋಗ ಹಾಗೂ ನಂತರ ಅವರು ಪಕ್ಕದ ಅಂಗಡಿಗೆ ಕೆಲಸಕ್ಕೆ ಸೇರಿದ್ದ ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ತಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳನ್ನು ಝಾಕಿಯಾ ತಳ್ಳಿಹಾಕಿದ್ದು, ಇತರ ಕೆಲವು ವ್ಯಾಪಾರಿಗಳು ತಮ್ಮ ವ್ಯವಹಾರಕ್ಕೆ ಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸ್ಥಳೀಯ ಪೊಲೀಸರ ಪ್ರಕಾರ, ಈ ಘಟನೆ ಸಂಪೂರ್ಣವಾಗಿ ವ್ಯಾಪಾರಕ್ಕೆ ಸಂಬಂಧಿಸಿದ ವಿವಾದದಿಂದಲೇ ಉಂಟಾಗಿದೆ. ಗಲಾಟೆ ನಡೆಯುತ್ತಿರುವ ಮಾಹಿತಿ ಪಡೆದ ಪೊಲೀಸರು ಮಾರುಕಟ್ಟೆಗೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ವರದಿ ಪ್ರಕಟವಾದ ವೇಳೆಗೆ ಈ ಸಂಬಂಧ ಯಾವುದೇ ಲಿಖಿತ ದೂರು ದಾಖಲಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ಕುರಿತು ಪ್ರಕಟವಾದ ಹಲವು ಮಾಧ್ಯಮ ವರದಿಗಳನ್ನು ನಾವು ಪರಿಶೀಲಿಸಿದ್ದೇವೆ. ಅವುಗಳೆಲ್ಲವೂ ಈ ಘಟನೆ ವ್ಯಾಪಾರ ಸಂಬಂಧಿತ ವಿವಾದದಿಂದ ನಡೆದಿದೆ ಎಂದು ತಿಳಿಸಿವೆ. ಇದು ಕೋಮು ದಾಳಿಯಾಗಿತ್ತು ಎಂಬುದನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ವರದಿ ನಮಗೆ ದೊರಕಿಲ್ಲ.

ವೈರಲ್ ವಿಡಿಯೊದಲ್ಲಿರುವ ಮಹಿಳೆ ಹಿಂದೂ ಶಿಕ್ಷಕಿಯಲ್ಲ. ಅವರು ಬಾಂಗ್ಲಾದೇಶದ ಮುಸ್ಲಿಂ ವ್ಯಾಪಾರ ಮಹಿಳೆ ಝಾಕಿಯಾ ಸುಲ್ತಾನಾ ಎಂದು ಗುರುತಿಸಲಾಗಿದೆ. ಹೀಗಾಗಿ, ವೈರಲ್ ಹೇಳಿಕೆ ಸುಳ್ಳು ಎಂದು ನಾವು ತೀರ್ಮಾನಿಸುತ್ತೇವೆ.

Fact Check: Video shows fire at Riyadh Airport after Houthi missile attack? No, video is unrelated

Fact Check: കൊല്‍ക്കത്തയില്‍ വിമാനത്താവളത്തിനായി മുസ്ലിം പള്ളി പൊളിക്കുന്ന ദൃശ്യങ്ങള്‍? വീഡിയോയുടെ സത്യമറിയാം

Fact Check: அபிஜீத் தீப்கே அமைதியைக் காப்பதாகக் கூறி சட்டப்பூர்வமான பிணைப்பத்திரத்தில் கையெழுத்திட்டாரா? உண்மை அறிக

Fact Check: ಸಿಜೆಪಿ ಪ್ರತಿಭಟನೆಯಲ್ಲಿ ಸಿಖ್ ವೇಷ ಧರಿಸಿ ಸಿಕ್ಕಿಬಿದ್ದ ಮುಸ್ಲಿಂ ವ್ಯಕ್ತಿ? ಸುಳ್ಳು, ಸತ್ಯ ಇಲ್ಲಿದೆ

Fact Check: ఢిల్లీలో సీఈసీ జ్ఞానేశ్ కుమార్‌కు వ్యతిరేకంగా నిరసనా? కాదు, పాత వీడియో వైరల్