Kannada

Fact Check: ಇರಾನ್ ಮೇಲೆ ದಾಳಿ ಮಾಡಲು ಸಿದ್ದವಾದ ಅಮೇರಿಕಾದ ಫೈಟರ್ ಜೆಟ್​ಗಳು ಎಂದು ಹಳೆಯ ವೀಡಿಯೊ ವೈರಲ್

ಇರಾನ್‌ನಲ್ಲಿ ಬೃಹತ್ ವೈಮಾನಿಕ ದಾಳಿಗೆ ಸಿದ್ಧವಾಗಿರುವ ಅಮೆರಿಕದ ಯುದ್ಧ ವಿಮಾನಗಳನ್ನು ರನ್‌ವೇಯಲ್ಲಿ ಸಾಲಾಗಿ ನಿಲ್ಲಿಸಿರುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

vinay bhat

ಇರಾನ್‌ನಲ್ಲಿ ಬೃಹತ್ ವೈಮಾನಿಕ ದಾಳಿಗೆ ಸಿದ್ಧವಾಗಿರುವ ಅಮೆರಿಕದ ಯುದ್ಧ ವಿಮಾನಗಳನ್ನು ರನ್‌ವೇಯಲ್ಲಿ ಸಾಲಾಗಿ ನಿಲ್ಲಿಸಿರುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇರಾನ್​ಗೆ 48 ಗಂಟೆ ಟೈಮ್ ಕೊಟ್ಟಿದ್ದ ಟ್ರಂಪ್. ಇರಾನ್ ಮೇಲೆ ದಾಳಿ ಮಾಡಲು ಸಿದ್ದವಾಗಿರುವ ಅಮೇರಿಕಾದ ಫೈಟರ್ ಜಟ್ ಗಳು’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಡಿಸೆಂಬರ್ 2012 ರಲ್ಲಿ ದಕ್ಷಿಣ ಕೊರಿಯಾದ ಕುನ್ಸನ್ ಏರ್‌ಬೇಸ್‌ನಲ್ಲಿ ಅಮೆರಿಕ, ದಕ್ಷಿಣ ಕೊರಿಯಾಗಳು ಸಂಯುಕ್ತವಾಗಿ ನಡೆಸಿದ ಮಿಲಿಟರಿ ಪ್ರದರ್ಶನ ದೃಶ್ಯಗಳನ್ನು ತೋರಿಸುತ್ತದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ, ಹನ್ನೆರಡು ವರ್ಷಗಳ ಹಿಂದೆಯೇ ಯೂಟ್ಯೂಬ್‌ನಲ್ಲಿ ಈ ವೀಡಿಯೊ ಇದೆ ಎಂದು ತಿಳಿದುಬಂದಿದೆ. ಏಪ್ರಿಲ್ 20, 2013 ರಂದು AiirSource Military ಎಂಬ ಯೂಟ್ಯೂಬ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ವೀಡಿಯೊ "ದಕ್ಷಿಣ ಕೊರಿಯಾದ ಕುನ್ಸನ್ ವಾಯುನೆಲೆಯಲ್ಲಿ ಬೃಹತ್ USAF F-16 ಆನೆಗಳ ನಡಿಗೆ" ಎಂಬ ಶೀರ್ಷಿಕೆ ನೀಡಿದೆ.

ವೀಡಿಯೊದ ವಿವರಣೆಯಲ್ಲಿ, "F-16 ಫೈಟಿಂಗ್ ಫಾಲ್ಕನ್ ಫೈಟರ್‌ಗಳು ಕುನ್ಸನ್ ಏರ್ ಬೇಸ್‌ನಲ್ಲಿ ರನ್‌ವೇಯಲ್ಲಿ ಟ್ಯಾಕ್ಸಿ ಮಾಡುವಾಗ ಆನೆ ನಡಿಗೆ ದೃಶ್ಯ ಪ್ರದರ್ಶಿಸುತ್ತವೆ" ಎಂದು ಬರೆದುಕೊಂಡಿದೆ.

ಆನೆ ನಡಿಗೆ ಎಂದರೆ ಅಮೆರಿಕದ ವಾಯುಪಡೆ (ಯುಎಸ್ಎಎಫ್) ಮಿಲಿಟರಿ ವಿಮಾನಗಳು ಟೇಕ್ ಆಫ್ ಆಗುವ ಮೊದಲು ನಿಕಟ ರಚನೆಯಲ್ಲಿದ್ದಾಗ ಬಳಸುವ ಪದ. ಇದು ಸಾಮಾನ್ಯವಾಗಿ ಕನಿಷ್ಠ ಮಧ್ಯಂತರ ಟೇಕ್ ಆಫ್ ಆಗುವ ಮೊದಲು ಸಂಭವಿಸುತ್ತದೆ.

Battlefield Sources ಎಂಬ ಯೂಟ್ಯೂಬ್ ಖಾತೆಯಲ್ಲಿ ಕೂಡ ಇದೇ ವೀಡಿಯೊವನ್ನು 2023 ರಲ್ಲಿ ಹಂಚಿಕೊಳ್ಳಲಾಗಿದ್ದು, ದಕ್ಷಿಣ ಕೊರಿಯಾದ ಕುನ್ಸನ್ ಏರ್‌ಬೇಸ್‌ನಲ್ಲಿ ರನ್ ವೇಪೈ ಹಾರಾಡಲು ಸಿದ್ಧವಾಗಿರುವ F-16 ಯುದ್ಧ ವಿಮಾನವನ್ನು ಈ ವೀಡಿಯೊ ತೋರಿಸುತ್ತದೆ ಎಂದು ವಿವರಣೆಯಲ್ಲಿ ಹೇಳಲಾಗಿದೆ. ಇದನ್ನು ಆಧರಿಸಿ 2026 ಇರಾನ್ ಯುದ್ಧಕ್ಕೆ ಈ ವೀಡಿಯೊದೊಂದಿಗೆ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಇನ್ನು, ನಮ್ಮ ಹುಡುಕಾಟದ ಸಂದರ್ಭ ವೈರಲ್ ವೀಡಿಯೊಕ್ಕೆ ಹೊಂದಿಕೆಯಾಗುವ ಹಲವು ಸುದ್ದಿ ವರದಿಗಳ ಜೊತೆಗೆ ಅಮೇರಿಕನ್ ಏರ್ ಫೋರ್ಸ್ ವೆಬ್‌ಸೈಟ್‌ನಲ್ಲಿ ಇದಕ್ಕೆ ಸಂಬಂಧಿಸಿದ ವಿವರಗಳು ಲಭ್ಯವಾದವು. ಇದರ ಪ್ರಕಾರ, 14 ಡಿಸೆಂಬರ್ 2012 ರಂದು ದಕ್ಷಿಣ ಕೊರಿಯಾದ ಕುನ್ಸನ್ ಏರ್‌ಬೇಸ್‌ನಲ್ಲಿ ಅಮೆರಿಕ, ದಕ್ಷಿಣ ಕೊರಿಯಾಗಳು ಸಂಯುಕ್ತವಾಗಿ ಮಿಲಿಟರಿ ಪ್ರದರ್ಶನವನ್ನು ನಡೆಸಲಾಯಿತು. ಇದರಲ್ಲಿ ಭಾಗವಾಗಿ, F-16 ಯುದ್ಧ ವಿಮಾನಗಳು ಒಂದರ ಹಿಂದೆ ಒಂದರಂತೆ ಅನುಕ್ರಮವಾಗಿ ನೆಲದ ಮೇಲೆ ನಿಧಾನವಾಗಿ ಹೋಗಿ ಪ್ರದರ್ಶನ ಮಾಡಲಾಗಿದೆ. ಇದನ್ನು ಮಿಲಿಟರಿ ಪರಿಭಾಷೆಯಲ್ಲಿ ‘ಆನೆ ನಡಿಗೆ' ಎನ್ನುತ್ತಾರೆ. ತಮ್ಮ ಮಿಲಿಟರಿ ಶಕ್ತಿ, ಸಂಸಿದ್ಧತೆ, ಹೊಂದಾಣಿಕೆಯು ಎಷ್ಟು ಬಲಶಾಲಿಯಾಗಿದೆ ಎಂಬುದನ್ನು ತೋರಿಸಲು ವಿವಿಧ ದೇಶಗಳು ಈ ರೀತಿಯ ಪ್ರದರ್ಶನಗಳನ್ನು ಮಾಡುತ್ತವೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಇರಾನ್‌ ಮೇಲೆ ದಾಳಿ ಮಾಡಲು ಅಮೆರಿಕದ ಯುದ್ಧ ವಿಮಾನಗಳು ಸಿದ್ಧವಾಗಿವೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಹಳೆಯದು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Video shows Ukraine’s recent strike on Russia’s Kuibyshev oil refinery? No, here are the facts

Fact Check: പ്രധാനമന്ത്രി നരേന്ദ്രമോദിയുടെ 76-ാം ജന്മദിനത്തില്‍ ബുര്‍ജ് ഖലീഫയില്‍ ആശംസ? വീഡിയോയുടെ സത്യമറിയാം

Fact Check: இரு கைகளும் இல்லாத பெண் ஜிம்னாஸ்டிக்ஸ் செய்யும் வைரல் காணொலி உண்மையா?

Fact Check: ದೆಹಲಿಯಲ್ಲಿ ಮಳೆಯ ನಡುವೆಯೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ? ಇಲ್ಲ, ಇದು ಹಳೆಯ ವಿಡಿಯೊ

Fact Check: ఢిల్లీలో సీఈసీ జ్ఞానేశ్ కుమార్‌కు వ్యతిరేకంగా నిరసనా? కాదు, పాత వీడియో వైరల్