Kannada

Fact Check: Operation Sindoor- ಪಾಕಿಸ್ತಾನದ ಫೈಟರ್ ಜೆಟ್ಗಳನ್ನು ಭಾರತೀಯ ಸೇನೆ ಗಾಳಿಯಲ್ಲಿ ಹೊಡೆದುರುಳಿಸಿದೆ ಎಂದು ಗೇಮಿಂಗ್ ವೀಡಿಯೊ ವೈರಲ್

ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಫೈಟರ್ ಜೆಟ್ ಒಂದನ್ನು ಹೊಡೆದುರಿಳಿಸುವುದು ಇದರಲ್ಲಿ ಕಾಣಬಹುದು, ಬಳಿಕ ಗುಂಡಿನ ಸುರಿಮಳೆ ಪ್ರಾರಂಭವಾಗುತ್ತದೆ.

vinay bhat

ಮೇ 7 ರ ಮುಂಜಾನೆ, ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಿತು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಈ ಕ್ರಮ ಕೈಗೊಂಡಿದೆ. ಈ ಸಂದರ್ಭದಲ್ಲಿ, ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಫೈಟರ್ ಜೆಟ್​ ಒಂದನ್ನು ಹೊಡೆದುರಿಳಿಸುವುದು ಇದರಲ್ಲಿ ಕಾಣಬಹುದು, ಬಳಿಕ ಗುಂಡಿನ ಸುರಿಮಳೆ ಪ್ರಾರಂಭವಾಗುತ್ತದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಾಕಿಸ್ತಾನದ ಫೈಟರ್ ಜೆಟ್ ಗಳನ್ನು ಗಾಳಿಯಲ್ಲಿಯೇ ಹೊಡೆದು ಉರುಳಿಸಿದ ಭಾರತೀಯ ಸೇನೆ’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊದಲ್ಲಿರುವ ದೃಶ್ಯ ನೈಜ್ಯವಾದೂದಲ್ಲ, ಇದು ಗೇಮಿಂಗ್ ವೀಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ Coffin Gaming ಎಂಬ ಫೇಸ್​ಬುಕ್ ಖಾತೆಯಲ್ಲಿ 19 ಏಪ್ರಿಲ್ 2025 ರಂದು ಇದೇ ವೈರಲ್ ವೀಡಿಯೊ ಉತ್ತಮ ಕ್ವಾಲಿಟಿಯಲ್ಲಿ ಹಂಚಿಕೊಂಡಿರುವುದು ಸಿಕ್ಕಿದೆ. ಇದಕ್ಕೆ ‘‘S-401 Air Defense Targeted FPV Drone! Ep 115’’ ಎಂದು ಕ್ಯಾಪ್ಶನ್ ನೀಡಲಾಗಿದೆ. ಈ ಮೂಲಕ ಇದು ಹಳೆಯ ವೀಡಿಯೊ ಎಂಬುದು ಸ್ಪಷ್ಟವಾಯಿತು.

Coffin Gaming ಒಂದು ಗೇಮಿಗೆ ಸಂಬಂಧಿಸಿದ ವೀಡಿಯೊವನ್ನು ಹಂಚಿಕೊಳ್ಳುವ ಪೇಜ್ ಆಗಿದೆ. ಮಿಲಿಟರಿಗೆ ಸಂಬಂಧಿಸಿದ ಅನೇಕ ವೀಡಿಯೊಗಳಿವೆ. ಈ ಪೇಜ್​ನ ಬಯೋದಲ್ಲಿ ಕೂಡ ಗೇಮಿಂಗ್ ವೀಡಿಯೊ ಕ್ರಿಯೇಟರ್ ಎಂದು ನಮೋದಿಸಲಾಗಿದೆ. ಅಲ್ಲದೆ ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ರಿಯಾಲಿಟಿಗೆ ದೂರವಾದಂತಿದೆ. ಹೀಗಾಗಿ ಇದು ಗೇಮಿಂಗ್ ವೀಡಿಯೊ ಎಂಬುದು ಸ್ಪಷ್ಟವಾಗಿದೆ.

ಈ ಮಾಹಿತಿಯ ಆಧಾರದ ಮೇಲೆ, ಪಾಕಿಸ್ತಾನದ ಫೈಟರ್ ಜೆಟ್​ಗಳನ್ನು ಭಾರತೀಯ ಸೇನೆ ಗಾಳಿಯಲ್ಲಿ ಹೊಡೆದುರುಳಿಸಿದೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಮತ್ತು ಇದು ಗೇಮಿಂಗ್ ವೀಡಿಯೊ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Potholes on Kerala road caught on camera? No, viral image is old

Fact Check: ഗോവിന്ദച്ചാമി ജയില്‍ ചാടി പിടിയിലായതിലും കേരളത്തിലെ റോഡിന് പരിഹാസം; ഈ റോഡിന്റെ യാഥാര്‍ത്ഥ്യമറിയാം

Fact Check: ஏவுகணை ஏவக்கூடிய ட்ரோன் தயாரித்துள்ள இந்தியா? வைரல் காணொலியின் உண்மை பின்னணி

Fact Check: ಬುರ್ಖಾ ಧರಿಸಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬನ ಬಾಂಗ್ಲಾದೇಶದ ವೀಡಿಯೊ ಭಾರತದ್ದು ಎಂದು ವೈರಲ್

Fact Check: హైదరాబాద్‌లో ఇంట్లోకి చొరబడి పూజారిపై దాడి? లేదు, నిజం ఇక్కడ తెలుసుకోండి