ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಪ್ರಧಾನಿ ಮೋದಿ ಅವರದ್ದೇ ಎಂದು ಹೇಳಲಾದ ಪತ್ರದ ವೈರಲ್ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಪತ್ರದ ವೈರಲ್ ಚಿತ್ರ ನಕಲಿಯಾಗಿದ್ದು, 2016 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಪ್ರಧಾನಿ ಮೋದಿ ಅವರು ನಾಗರಿಕರಿಗೆ ಅಂತಹ ಯಾವುದೇ ಘೋಷಣೆ ಮಾಡಿಲ್ಲ.ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ ಎಂದು ಹೇಳಲಾಗುವ ಪತ್ರದ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ದೀಪಾವಳಿಗೆ ಎಲ್ಲಾ ನಾಗರಿಕರು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕೆಂದು ಒತ್ತಾಯಿಸುವ ಪತ್ರವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಬಳಕೆದಾರರು, ‘‘ನೀವು ಈ ಸಂದೇಶವನ್ನು 3 ಜನರಿಗೆ ಕಳುಹಿಸಬೇಕು. ಇಡೀ ದೇಶವು ಸಂಕರ್ಕಗೊಳ್ಳುತ್ತದೆ’’ ಎಂದು ಬರೆದುಕೊಂಡಿದ್ದಾರೆ. (Archive)
ಪತ್ರದಲ್ಲಿ ಏನಿದೆ?
‘‘ನನ್ನ ಪ್ರೀತಿಯ ಭಾರತೀಯ ನಾಗರಿಕರೇ, ಈ ಬಾರಿ ನೀವೆಲ್ಲರೂ ಇದನ್ನೇ ಮಾಡಬೇಕು ಅಂದರೆ ಮುಂಬರುವ ದೀಪಾವಳಿ ಹಬ್ಬದಂದು, ನಿಮ್ಮ ನೆಗಳಲ್ಲಿ ದೀಪ ಹಚ್ಚುವುದು, ಅಲಂಕಾರ, ಸಿಹಿತಿಂಡಿಗಳು ಇತ್ಯಾದಿಗಳಲ್ಲಿ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನೇ ಬಳಸಿ. ನೀವು ಖಂಡಿತವಾಗಿ ಪ್ರಧಾನ ಮಂತ್ರಿಯ ಮಾತುಗಳನ್ನು ಕೇಳುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಸಣ್ಣ ಹೆಜ್ಜೆಗಳೊಂದಿಗೆ ನನಗೆ ಬೆಂಬಲ ನೋಡಿದರೆ, ನಮ್ಮ ಭಾರತವನ್ನು ವಿಶ್ವದ ಮೊದಲ ಸಾಲಿನಲ್ಲಿ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ನಿಮಗೆ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ.’’ ಎಂದಿದೆ. ಇದರ ಕೊನೆಯಲ್ಲಿ ನರೇಂದ್ರ ಮೋದಿಯವರ ಸಹಿ ಇದೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಆಗಿರುವ ಪತ್ರದ ಫೋಟೋ ನಕಲಿಯಾಗಿದ್ದು, 2016 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಪ್ರಧಾನಿ ಮೋದಿ ದೇಶವಾಸಿಗಳಿಗೆ ಅಂತಹ ಯಾವುದೇ ಘೋಷಣೆ ಮಾಡಿಲ್ಲ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಗೂಗಲ್ನಲ್ಲಿ ಪ್ರಧಾನಿ ಮೋದಿ ಈರೀತಿಯ ಘೋಷಣೆ ಮಾಡಿದ್ದಾರೆಯೇ ಎಂದು ಸರ್ಚ್ ಮಾಡಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಪ್ರಧಾನಿ ಮೋದಿ ಅವರು ಇಂತಹ ಕರೆ ನೀಡಿದ್ದರೆ ಅದು ದೊಡ್ಡ ಸುದ್ದಿ ಆಗುತ್ತಿತ್ತು. ಆದರೆ, ಈ ಕುರಿತು ಯಾವುದೇ ವರದಿ ಕಂಡುಬಂದಿಲ್ಲ.
ಆ ನಂತರ ನಾವು ವೈರಲ್ ಆದ ಸಂದೇಶದ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಹಿಂದಿಭಾಷೆಯಲ್ಲೂ ಇಂತಹುದೇ ಪೋಸ್ಟ್ ಗಳನ್ನು ನೋಡಿದ್ದೇವೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಇದು 2016 ಮತ್ತು 2020ರ ಪೋಸ್ಟ್ ಆಗಿದೆ.
ಬಳಿಕ ನಾವು ವೈರಲ್ ಫೋಟೋವನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, 2016 ರಲ್ಲಿ ಬಿಸಿನೆಸ್ ಸ್ಟ್ಯಾಂಡರ್ಡ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಈ ಹಕ್ಕಿಗೆ ಸಂಬಂಧಿಸಿದ ವರದಿಯನ್ನು ನಾವು ಕಂಡುಕೊಂಡೆವು. ವರದಿಯ ಪ್ರಕಾರ, ‘‘ಪ್ರಧಾನಿ ಮೋದಿ ದೀಪಾವಳಿಗೆ ಭಾರತೀಯ ನಿರ್ಮಿತ ಉತ್ಪನ್ನಗಳನ್ನು ಮಾತ್ರ ಖರೀದಿಸುವಂತೆ ಜನರನ್ನು ಒತ್ತಾಯಿಸಲಿಲ್ಲ. ವೈರಲ್ ಆದ ಪತ್ರವು ನಕಲಿ ಮತ್ತು ಕಂಪ್ಯೂಟರ್ ರಚಿತವಾಗಿದೆ’’ ಎಂದು ಇದರಲ್ಲಿ ಬರೆಯಲಾಗಿದೆ.
ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ಸೇರಿದಂತೆ ಇತರ ಹಲವು ವೆಬ್‌ಸೈಟ್‌ಗಳು 2016 ರಲ್ಲಿ ಇದೇ ಸುದ್ದಿಯನ್ನು ಪ್ರಕಟಿಸಿರುವುದು ನಾವು ಗಮನಿಸಿದ್ದೇವೆ. ಇದರಲ್ಲಿ ಕೂಡ, ಪ್ರಧಾನಿ ಮೋದಿ ಅವರದ್ದು ಎಂದು ಹೇಳಲಾದ ವೈರಲ್ ಪತ್ರವು ನಕಲಿಯಾಗಿದೆ. ದೀಪಾವಳಿಗೆ ಭಾರತೀಯ ನಿರ್ಮಿತ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಪ್ರಧಾನಿ ಮನವಿ ಮಾಡಲಿಲ್ಲ ಎಂದು ಹೇಳಲಾಗಿದೆ.
ನಮ್ಮ ತನಿಖೆಯ ಸಮಯದಲ್ಲಿ, ಪ್ರಧಾನ ಮಂತ್ರಿ ಕಚೇರಿಯ (PMO) ಅಧಿಕೃತ X ಖಾತೆಯಲ್ಲಿ ಈ ಹೇಳಿಕೆಯನ್ನು ಒಳಗೊಂಡಿರುವ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಸೆಪ್ಟೆಂಬರ್ 27, 2016 ರಂದು, PMO ವೈರಲ್ ಪತ್ರದ ಫೋಟೋವನ್ನು ಹಂಚಿಕೊಂಡಿದ್ದು, ಅದು ನಕಲಿ ಎಂದು ಕರೆದಿದೆ. ಈ ಟ್ವೀಟ್ ವೈರಲ್ ಪತ್ರಕ್ಕೆ ಹೊಂದಿಕೆಯಾಗುವ ಮಸುಕಾದ ಚಿತ್ರವನ್ನು ಬಳಸಿದೆ.
ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ನಮಗೆ ಸಂಬಂಧಿತ ಟ್ವೀಟ್ ಕೂಡ ಸಿಕ್ಕಿತು. ಸೆಪ್ಟೆಂಬರ್ 27, 2016 ರಂದು, ಕಿರಣ್ ಬೇಡಿ ಪತ್ರವನ್ನು ನಿಜವೆಂದು ನಂಬಿ ಹಂಚಿಕೊಂಡರು. ಸ್ವಲ್ಪ ಸಮಯದ ನಂತರ, ಅವರು ಕ್ಷಮೆಯಾಚಿಸಿ ಟ್ವೀಟ್ ಮಾಡಿ ಪತ್ರವನ್ನು ನಕಲಿ ಎಂದು ತಳ್ಳಿಹಾಕಿದರು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಪ್ರಧಾನಿ ಮೋದಿ ಅವರದ್ದೇ ಎಂದು ಹೇಳಲಾದ ಪತ್ರದ ವೈರಲ್ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಪತ್ರದ ವೈರಲ್ ಚಿತ್ರ ನಕಲಿಯಾಗಿದ್ದು, 2016 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಪ್ರಧಾನಿ ಮೋದಿ ಅವರು ನಾಗರಿಕರಿಗೆ ಅಂತಹ ಯಾವುದೇ ಘೋಷಣೆ ಮಾಡಿಲ್ಲ.