Kannada

Fact Check: ಆರ್​ಬಿಐ 5000 ರೂಪಾಯಿಯ ಹೊಸ ನೋಟು ಬಿಡುಗಡೆ ಮಾಡಿದೆಯೇ? ಇಲ್ಲ, ಇದು ಸುಳ್ಳು ಸುದ್ದಿ

ಭಾರತೀಯ ರಿಸರ್ವ್ ಬ್ಯಾಂಕ್ 5000 ರೂಪಾಯಿಯ ಯಾವುದೇ ನೋಟನ್ನು ಬಿಡುಗಡೆ ಮಾಡಿಲ್ಲ. ನಮ್ಮ ತನಿಖೆಯಲ್ಲಿ ವೈರಲ್ ಪೋಸ್ಟ್ ನಕಲಿ ಎಂದು ಕಂಡುಬಂದಿದೆ.

Vinay Bhat

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಐದು ಸಾವಿರ ರೂಪಾಯಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಲಾಗುತ್ತಿದೆ. ಅನೇಕ ಬಳಕೆದಾರರು ಹಸಿರು ಬಣ್ಣದಲ್ಲಿರುವ 5000 ರೂಪಾಯಿ ನೋಟಿನ ಚಿತ್ರದೊಂದಿಗೆ ಇದನ್ನು ನಿಜವೆಂದು ನಂಬಿ ಹಂಚಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಅಪ್ಲೋಡ್ ಮಾಡಿ, ‘‘BIG NEWS: 5000 ರೂಪಾಯಿಯ ಹೊಸ ನೋಟು ಬಿಡುಗಡೆ: RBI ನೀಡಿದೆ ಈ ಮಾಹಿತಿ|5000 New Note’’ ಎಂದು ಬರೆದುಕೊಂಡಿದ್ದಾರೆ.

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಇದು ಸುಳ್ಳು ಎಂಬುದು ತಿಳುದುಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಂತಹ ಯಾವುದೇ ನೋಟನ್ನು ಬಿಡುಗಡೆ ಮಾಡಿಲ್ಲ. ನಮ್ಮ ತನಿಖೆಯಲ್ಲಿ ವೈರಲ್ ಪೋಸ್ಟ್ ನಕಲಿ ಎಂದು ಕಂಡುಬಂದಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಗೂಗಲ್ ನಲ್ಲಿ ಈ ಕುರಿತು ಸರ್ಚ್ ಮಾಡಿದ್ದೇವೆ. ಆದರೆ, ಆರ್‌ಬಿಐ ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಖಚಿತಪಡಿಸಲು ನಾವು ಒಂದೇ ಒಂದು ಸುದ್ದಿಯನ್ನು ನೋಡಿಲ್ಲ. ಆರ್​ಬಿಐ ಅಥವಾ ಸರ್ಕಾರ 5000 ರೂ. ನೋಟುಗಳ ಬಿಡುಗಡೆ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ನೀಡಲಿಲ್ಲ.

ಬಳಿಕ ನಾವು ಆರ್​ಬಿಐಯ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿದ್ದೇವೆ. ಇಲ್ಲೂ 5000 ಮುಖಬೆಲೆಯ ಕುರಿತು ಯಾವುದೇ ಅಧಿಸೂಚನೆ ಅಥವಾ ಅಪ್‌ಡೇಟ್ ಕಾಣಿಸಲಿಲ್ಲ. ಆರ್‌ಬಿಐ ವೆಬ್‌ಸೈಟ್ ಪ್ರಕಾರ, ಮಹಾತ್ಮ ಗಾಂಧಿ (ಹೊಸ) ಸರಣಿ ಎಂದು ಕರೆಯಲ್ಪಡುವ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳನ್ನು 2016 ರಲ್ಲಿ ಹಳೆಯ 500 ಮತ್ತು 1,000 ರೂ. ನೋಟುಗಳ ಅಮಾನ್ಯೀಕರಣದ ನಂತರ ಪರಿಚಯಿಸಲಾಯಿತು.

ಈ ಸರಣಿಯಲ್ಲಿ ರೂ. 2,000, ರೂ. 500, ರೂ. 200 , ರೂ. 100, ರೂ. 50, ರೂ. 20 ಮತ್ತು ರೂ. 10 ನೋಟುಗಳನ್ನು ಒಳಗೊಂಡಿದೆ. ಆದರೆ, ಮೇ 2023 ರಲ್ಲಿ, ಕೇಂದ್ರ ಸರ್ಕಾರವು ಚಲಾವಣೆಯಿಂದ ಎರಡು ಸಾವಿರ ರೂಪಾಯಿ ನೋಟುಗಳನ್ನು ಹಿಂತೆಗೆದುಕೊಂಡಿತು. ಪ್ರಸ್ತುತ 10, 20, 50, 100, 200, 500 ರೂಪಾಯಿ ನೋಟುಗಳು ಚಲಾವಣೆಯಲ್ಲಿವೆ.

ಹಾಗೆಯೆ ಸರ್ಕಾರದ ಸಂವಹನ ವಿಭಾಗವಾದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಕೂಡ ಈ ಹಕ್ಕನ್ನು ಸುಳ್ಳು ಎಂದು ಸ್ಪಷ್ಟೀಕರಣವನ್ನು ನೀಡಿದೆ. ‘‘5000 ರೂಪಾಯಿಯ ಹೊಸ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಳ್ಳಲಾಗುತ್ತಿದೆ. ಪಿಐಬಿ ಈ ಹಕ್ಕು ಸಂಪೂರ್ಣ ನಕಲಿ ಎಂದು ಹೇಳುತ್ತದೆ. ಅಂತಹ ಯಾವುದೇ ನಿರ್ಧಾರವನ್ನು ರಿಸರ್ವ್ ಬ್ಯಾಂಕ್ ತೆಗೆದುಕೊಂಡಿಲ್ಲ’’ ಎಂದು ಬರೆದುಕೊಂಡಿದೆ.

ಹೀಗಾಗಿ 5000 ರೂಪಾಯಿ ನೋಟುಗಳನ್ನು ಆರ್​ಬಿಐ ಬಿಡುಗಡೆ ಮಾಡಿದೆ ಎಂದು ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಅಂತಹ ಯಾವುದೇ ನಿರ್ಧಾರವನ್ನು ಸರ್ಕಾರ ಅಥವಾ ಆರ್‌ಬಿಐ ತೆಗೆದುಕೊಂಡಿಲ್ಲ.

Fact Check: Pro-Palestine march in Kerala? No, video shows protest against toll booth

Fact Check: ഓണം ബംപറടിച്ച സ്ത്രീയുടെ ചിത്രം? സത്യമറിയാം

Fact Check: யோகி ஆதித்யநாத்தை ஆதரித்து தீப்பந்தத்துடன் பேரணி நடத்தினரா பொதுமக்கள்? உண்மை என்ன

Fact Check: Christian church vandalised in India? No, video is from Pakistan

Fact Check: ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ರಶ್ಮಿಕಾ ರಿಯಾಕ್ಷನ್ ಎಂದು 2022ರ ವೀಡಿಯೊ ವೈರಲ್