Kannada

Fact Check: ಶಾಲೆಗಳಲ್ಲಿ ಮಕ್ಕಳಿಗೆ ಸ್ಟ್ರಾಬೆರಿ ಕ್ವಿಕ್ ಡ್ರಗ್ಸ್ ಹಂಚಲಾಗುತ್ತಿದೆ ಎಂದು ಸುಳ್ಳು ಸುದ್ದಿ ವೈರಲ್

ಇದು ಸ್ಟ್ರಾಬೆರಿ ಕ್ವಿಕ್ ಎಂಬ ಡಗ್ರ್ಸ್, ಶಾಲೆಗಳಲ್ಲಿ ಇದನ್ನು ನೀಡಲಾಗುತ್ತಿದೆ. ಮಕ್ಕಳು ಇದನ್ನು ಕ್ಯಾಂಡಿ ಎಂದು ಭಾವಿಸಿ ಸೇವಿಸುತ್ತಿದ್ದಾರೆ ಮತ್ತು ಚಿಂತಾ ಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಅನೇಕ ಬಳಕೆದಾರರು ಈ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ

Vinay Bhat

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಜೊತೆಗೆ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಸಣ್ಣ ಪ್ಲಾಸ್ಟಿಕ್ ಕವರ್ ಒಂದರ ಒಳಗಡೆ ಚಾಕ್ಲೆಟ್​ನಂತೆ ಕಾಣುವ ಗುಲಾಬಿ ಬಣ್ಣದ ಟೆಡ್ಡಿ ಬೇರ್‌ಗಳನ್ನು ಹಾಕಲಾಗಿದೆ. ಇದು ಸ್ಟ್ರಾಬೆರಿ ಕ್ವಿಕ್ ಎಂಬ ಡಗ್ರ್ಸ್, ಶಾಲೆಗಳಲ್ಲಿ ಇದನ್ನು ನೀಡಲಾಗುತ್ತಿದೆ. ಮಕ್ಕಳು ಇದನ್ನು ಕ್ಯಾಂಡಿ ಎಂದು ಭಾವಿಸಿ ಸೇವಿಸುತ್ತಿದ್ದಾರೆ ಮತ್ತು ಚಿಂತಾ ಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಅನೇಕ ಬಳಕೆದಾರರು ಈ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಜನವರಿ 31, 2025 ರಂದು ಈ ಫೋಟೋವನ್ನು ಅಪ್ಲೋಡ್ ಮಾಡಿ, ‘‘*ಶಾಲೆಗಳಲ್ಲಿ ಹೊಸ ಡ್ರಗ್ಸ್*- ಈ ಔಷಧಿಯ ಬಗ್ಗೆ ಪೋಷಕರು ತಿಳಿದಿರಬೇಕು. ಇದು 'ಸ್ಟ್ರಾಬೆರಿ ಕ್ವಿಕ್' ಎಂದು ಕರೆಯಲ್ಪಡುವ ಹೊಸ ಡ್ರಗ್ಸ್ ಆಗಿದೆ. ಇದೀಗ ಶಾಲೆಗಳಲ್ಲಿ ಇದನ್ನು ಬಹಳ ಜಾಣತನದಿಂದ ಹಂಚಲಾಗುತ್ತಿದೆ. ಇದು ಒಂದು ರೀತಿಯ ಕ್ರಿಸ್ಟಲ್ ಮೆತ್ ಆಗಿದೆ ಮತ್ತು ನೋಡಲು ಕ್ಯಾಂಡಿ ತರ ಇದೆ. ಇದು ಸ್ಟ್ರಾಬೆರಿ ವಾಸನೆಯಿಂದ ಕೂಡಿದೆ ಮತ್ತು ಇದನ್ನು ಶಾಲೆಯ ಅಂಗಳದಲ್ಲಿ ಮಕ್ಕಳಿಗೆ ಕೊಡಲಾಗುತ್ತಿದೆ. ಮಕ್ಕಳು ಇದನ್ನು ಕ್ಯಾಂಡಿ ಎಂದು ಭಾವಿಸಿ ಸೇವಿಸುತ್ತಿದ್ದಾರೆ ಮತ್ತು ಚಿಂತಾ ಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದು ಚಾಕೊಲೇಟ್, ಕಡಲೆಕಾಯಿ ಬೆಣ್ಣೆ, ಕೋಲಾ, ಚೆರ್ರಿ, ದ್ರಾಕ್ಷಿ ಮತ್ತು ಕಿತ್ತಳೆ Flavour ನಲ್ಲಿ ಕೂಡ ಬರುತ್ತಿದೆ. ದಯವಿಟ್ಟು ನಿಮ್ಮ ಮಕ್ಕಳಿಗೆ ಅಪರಿಚಿತರಿಂದ ಅಥವಾ ನಿಮ್ಮ ಮಕ್ಕಳ ಸ್ನೇಹಿತರಿಂದ ಕೂಡ ಕ್ಯಾಂಡಿಯನ್ನು ಸ್ವೀಕರಿಸದಂತೆ ಎಚ್ಚರಿಸಿ. ಇಂತಹ ವಸ್ತುಗಳು ಶಾಲೆಯ ಆವರಣದಲ್ಲಿ ಯಾರ ಕೈಯಲ್ಲಾದರೂ ಕಂಡರೆ ತಕ್ಷಣವೇ ನಿಮ್ಮ ಶಾಲಾ ಮುಖ್ಯಸ್ಥರನ್ನು ಭೇಟಿ ಮಾಡಿ ಅವರಿಗೆ ಈ ವಿಷಯವನ್ನು ತಪ್ಪದೇ ತಿಳಿಸಿ. ಇದನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರ ಗ್ರೂಪುಗಳಲ್ಲಿ ಶೇರ್ ಮಾಡಿರಿ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್ ಅನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಇದು ಸಂಪೂರ್ಣ ಸುಳ್ಳು ಮಾಹಿತಿ, ಇದರಲ್ಲಿ ಯಾವುದೇ ಸತ್ಯವಿಲ್ಲ ಎಂಬುದು ಕಂಡುಬಂದಿದೆ.

ನಿಜಾಂಶವನ್ನು ತಿಳಿಯಲು ನಾವು ಗೂಗಲ್ನಲ್ಲಿ ‘ಸ್ಟ್ರಾಬೆರಿ ಕ್ವಿಕ್’ ಎಂಬ ಕೀವರ್ಡ್ ಬಳಸಿ ಇತ್ತೀಚಿನ ಸುದ್ದಿಗಳನ್ನು ಹುಡುಕಿದ್ದೇವೆ. ಆಗ ಜನವರಿ 31, 2025 ರಂದು ದಿ ಪ್ರಿಂಟ್ ನಲ್ಲಿ ಪ್ರಕಟವಾದ ಲೇಖನ ಕಂಡುಬಂತು. "ಸ್ಟ್ರಾಬೆರಿ ಮೆಥ್" ಅಥವಾ "ಸ್ಟ್ರಾಬೆರಿ ಕ್ವಿಕ್" ಎಂಬ ಮಾದಕ ದ್ರವ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ ಮತ್ತು ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿದೆ ಎಂಬ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ರಾಜ್‌ಬೀರ್ ಸಿಂಗ್ ಸ್ಪಷ್ಟಪಡಿಸಿದೆ ಎಂದು ವರದಿಯಲ್ಲಿದೆ.

‘‘ವೈರಲ್ ಆಗಿರುವ ಪೋಸ್ಟ್‌ಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ರಾಜ್‌ಬೀರ್ ಸಿಂಗ್ ಅವರು ಹೇಳಿದ್ದಾರೆ. ಇದು ಹಲವು ವರ್ಷಗಳಿಂದ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ನಕಲಿ ಸುದ್ದಿ. ಇದನ್ನು ಮೊದಲು 2007 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾರ್ವಜನಿಕರಿಗೆ ಪರಿಚಯಿಸಲಾಯಿತು. ಅಮೆರಿಕದ ಮಾದಕ ದ್ರವ್ಯ ಜಾರಿ ಆಡಳಿತ (DEA) ಸೇರಿದಂತೆ ಹಲವಾರು ಸಂಸ್ಥೆಗಳು ಮಕ್ಕಳನ್ನು ಗುರಿಯಾಗಿಸಿಕೊಂಡು ಇಂತಹ ವದಂತಿಗಳನ್ನು ಹರಡಿವೆ. ಈ ವದಂತಿಗಳನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ’’ ಎಂದು ಪೊಲೀಸರು ನೀಡಿರುವ ಹೇಳಿಕೆಯನ್ನು ದಿ ಪ್ರಿಂಟ್ ವರದಿ ಮಾಡಿದೆ.

ಇಂಡಿಯಾ ಟುಡೆ ಕೂಡ ಜನವರಿ 31, 2025 ರಂದು ‘ಶಾಲಾ ಮಕ್ಕಳಲ್ಲಿ ಸ್ಟ್ರಾಬೆರಿ ಮೆತ್ ಕ್ಯಾಂಡಿ ಹರಡುತ್ತಿದೆ ಎಂಬ ಆರೋಪಗಳನ್ನು ಅರುಣಾಚಲ ಪೊಲೀಸರು ತಳ್ಳಿಹಾಕಿದ್ದಾರೆ’ ಎಂದು ಸುದ್ದಿ ಪ್ರಕಟಿಸಿದೆ.

ಬಳಿಕ ನಾವು ವೈರಲ್ ಫೋಟೋವನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಆಗ ಅಮೆರಿಕಾದ ಪ್ರಸಿದ್ಧ ಫ್ಯಾಕ್ಟ್ ಚೆಕ್ ವವೆಬ್ ಸೈಟ್ Snopes.com ಏಪ್ರಿಲ್ 29, 2007 ರಂದು ಪ್ರಕಟಿಸಿದ ಲೇಖನವೊಂದು ಕಂಡುಕೊಂಡೆವು. ಈ ಲೇಖನದ ಪ್ರಕಾರ, 2007 ರ ಆರಂಭದಲ್ಲಿ, ಸ್ಟ್ರಾಬೆರಿ ಕ್ವಿಕ್ ಎಂಬ ಮೆಥಾಂಫೆಟಮೈನ್-ರುಚಿಯ ಮಿಠಾಯಿಗಳ ಬಗ್ಗೆ ಅನೇಕ ಸುದ್ದಿಗಳು ಹರಡಿದ್ದವು. ಸ್ಟ್ರಾಬೆರಿ ಕ್ವಿಕ್ ಬಗ್ಗೆ ಸುದ್ದಿಗಳು ಮೊದಲು ಜನವರಿ 2007 ರಲ್ಲಿ ಪಶ್ಚಿಮ ರಾಜ್ಯಗಳಲ್ಲಿ ಕಾಣಿಸಿಕೊಂಡವು. ಇದು ಮಕ್ಕಳು ಮತ್ತು ಹದಿಹರೆಯದವರ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಭಯವನ್ನು ಹುಟ್ಟುಹಾಕಿತ್ತು. ಆದಾಗ್ಯೂ, ಫೆಡರಲ್ ಔಷಧ ಅಧಿಕಾರಿಗಳು ನಂತರ ಈ ವದಂತಿಗಳು ಆಧಾರರಹಿತವೆಂದು ಸ್ಪಷ್ಟಪಡಿಸಿದರು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಶಾಲೆಗಳಲ್ಲಿ ಸ್ಟ್ರಾಬೆರಿ ಕ್ವಿಕ್ ಎಂಬ ಡಗ್ರ್ಸ್ ಅನ್ನು ಮಕ್ಕಳಿಗೆ ನೀಡಲಾಗುತ್ತಿದೆ ಎಂಬ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಈ ವೈರಲ್ ಪೋಸ್ಟ್ ಹಲವು ವರ್ಷಗಳಿಂದ ಸಾಮಾಜಿಕ ಮಾಧ್ಯಮದಲ್ಲಿದೆ. ಈ ಹಕ್ಕನ್ನು ಪೊಲೀಸ್ ಅಧಿಕಾರಿಗಳು ಸಹ ತಿರಸ್ಕರಿಸಿದ್ದಾರೆ.

Fact Check: Joe Biden serves Thanksgiving dinner while being treated for cancer? Here is the truth

Fact Check: അസദുദ്ദീന്‍ ഉവൈസി ഹനുമാന്‍ വിഗ്രഹത്തിന് മുന്നില്‍ പൂജ നടത്തിയോ? വീഡിയോയുടെ സത്യമറിയാം

Fact Check: அமித்ஷா, சி.பி. ராதாகிருஷ்ணனை அவமதித்தாரா? சமூக வலைதளங்களில் வைரலாகும் புகைப்படம் உண்மையா

Fact Check: ವ್ಲಾಡಿಮಿರ್ ಪುಟಿನ್ ವಿಮಾನದಲ್ಲಿ ಭಗವದ್ಗೀತೆಯನ್ನು ಓದುತ್ತಿರುವುದು ನಿಜವೇ?

Fact Check: శ్రీలంక వరదల్లో ఏనుగు కుక్కని కాపాడుతున్న నిజమైన దృశ్యాలా? కాదు, ఇది AI-జనరేటెడ్ వీడియో