Kannada

Fact Check: ಇರಾನ್‌ನ ಐಆರ್‌ಜಿಸಿ ಪ್ರಧಾನ ಕಚೇರಿ ಮೇಲೆ ಅಮೆರಿಕ ದಾಳಿ ಎಂದು ಹಾಂಗ್ ಕಾಂಗ್​ನ ವೀಡಿಯೊ ವೈರಲ್

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಮತ್ತೆ ಆರಂಭವಾಗಿದೆ. ಇದಕ್ಕೆ ಸಂಬಂಧಿಸಿದಂತೆ, ಕಟ್ಟಡವೊಂದು ಹೊತ್ತಿ ಉರಿಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

vinay bhat

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಮತ್ತೆ ಆರಂಭವಾಗಿದೆ. ಇದಕ್ಕೆ ಸಂಬಂಧಿಸಿದಂತೆ, ಕಟ್ಟಡವೊಂದು ಹೊತ್ತಿ ಉರಿಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕೆಲವು ಬಳಕೆದಾರರು ಇದನ್ನು ಹಂಚಿಕೊಂಡು, ಟೆಹ್ರಾನ್‌ನಲ್ಲಿರುವ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಪ್ರಧಾನ ಕಛೇರಿ ಮೇಲೆ ಯುಎಸ್ ಬಾಂಬ್ ದಾಳಿ ನಡೆಸಿದೆ ಎಂದು ಹೇಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇರಾನ್‌ನ ಟೆಹ್ರಾನ್‌ನಲ್ಲಿರುವ ಐಆರ್‌ಜಿಸಿ ಪ್ರಧಾನ ಕಚೇರಿಯನ್ನು ಮೇಲೆ ಅಮೆರಿಕ ದಾಳಿ. ಅಮೆರಿಕದ ದಾಳಿಯ ಬಳಿಕ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ IRGC (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ಪ್ರಧಾನ ಕಚೇರಿ ಧ್ವಂಸಗೊಂಡಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ನವೆಂಬರ್ 2025 ರಲ್ಲಿ ಹಾಂಗ್ ಕಾಂಗ್‌ನ ವಸತಿ ಸಂಕೀರ್ಣದಲ್ಲಿ ಸಂಭವಿಸಿದ ಮಾರಕ ಬೆಂಕಿಯ ವೀಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಇದೇ ವೀಡಿಯೊವನ್ನು ಹಾಂಗ್ ಕಾಂಗ್ ಮೂಲದ ಇನ್‌ಮೀಡಿಯಾಎಚ್‌ಕೆ ನವೆಂಬರ್ 26, 2025 ರಂದು ಹಂಚಿಕೊಂಡಿರುವುದು ಇಕ್ಕಿದೆ. ಇದಕ್ಕೆ "ಹಂಗ್ ಫಕ್ ಕೋರ್ಟ್ ಬೆಂಕಿಯ ಪರಿಸ್ಥಿತಿ ನಂತರ ರಾತ್ರಿ" ಎಂಬ ಶೀರ್ಷಿಕೆ ನೀಡಲಾಗಿದೆ. ರಾತ್ರಿ ಆದ ಬಳಿಕವೂ ಬೆಂಕಿಯ ತೀವ್ರತೆ ಮುಂದುವರಿದಿದ್ದು, ಹಲವು ಕಟ್ಟಡಗಳು ಭಾರೀ ಜ್ವಾಲೆಗಳಿಂದ ಆವರಿಸಿಕೊಂಡಿವೆ. ಬೆಂಕಿ ವೇಗವಾಗಿ ಕಟ್ಟಡಗಳ ಮೇಲಿನ ಮಹಡಿಗಳವರೆಗೆ ವ್ಯಾಪಿಸಿದೆ. ಕೆಲವು ಕಟ್ಟಡಗಳ ಮೇಲ್ಛಾವಣಿಯಿಂದ ಹಲವು ಬಾರಿ ಸ್ಫೋಟದ ಶಬ್ದಗಳು ಕೇಳಿಬಂದಿದೆ. ಸರ್ಕಾರದ ಮಾಹಿತಿ ಪ್ರಕಾರ, ಸಂಜೆ 6 ಗಂಟೆಯವರೆಗೆ ಈ ಅಗ್ನಿ ಅವಘಡದಲ್ಲಿ ಒಟ್ಟು 9 ಮಂದಿ ಅಸ್ವಸ್ಥರಾಗಿದ್ದು, ಅವರನ್ನು ಆಲಿಸ್ ಹೋ ಮಿಯು ಲಿಂಗ್ ನಥನ್ಸನ್ ಆಸ್ಪತ್ರೆ ಹಾಗೂ ಪ್ರಿನ್ಸ್ ಆಫ್ ವೇಲ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇವರಲ್ಲಿ 4 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದೆ.

ಹಾಗೆಯೆ ನವೆಂಬರ್ 26, 2025 ರಂದು ರಾಯಿಟರ್ಸ್ ವೈರಲ್ ಕ್ಲಿಪ್‌ಗೆ ಹೊಂದಿಕೆಯಾಗುವ ದೃಶ್ಯಗಳೊಂದಿಗೆ ವರದಿ ಮಾಡಿದೆ. ಹಾಂಗ್ ಕಾಂಗ್‌ನ ತೈ ಪೊದಲ್ಲಿರುವ ಹಂಗ್ ಫಕ್ ಕೋರ್ಟ್ ವಸತಿ ಸಂಕೀರ್ಣದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಕಾಣೆಯಾಗಿದ್ದಾರೆ ಎಂದು ಬರೆದುಕೊಂಡಿದೆ. 32 ಅಂತಸ್ತಿನ ವಸತಿ ಗೋಪುರಗಳನ್ನು ಆವರಿಸಿರುವ ಜ್ವಾಲೆಗಳು ಮತ್ತು ದಟ್ಟ ಹೊಗೆ ವೈರಲ್ ವೀಡಿಯೊದಲ್ಲಿ ಕಂಡುಬರುವ ದೃಶ್ಯಗಳಿಗೆ ಹೊಂದಿಕೆಯಾಗುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

Wio News ಕೂಡ ವೈರಲ್ ವೀಡಿಯೊಕ್ಕೆ ಹೋಲುವ ಸ್ಕ್ರೀನ್ ಶಾಟ್​ನೊಂದಿಗೆ ನವೆಂಬರ್ 26, 2025 ರಂದು ಸುದ್ದಿ ಪ್ರಕಟಿಸಿದ್ದು, ಹಾಂಗ್ ಕಾಂಗ್‌ನ 35 ಮಹಡಿಗಳ ವಸತಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೆಂಕಿ ಕಟ್ಟಡದ ಹಲವು ಮಹಡಿಗಳಿಗೆ ವೇಗವಾಗಿ ವ್ಯಾಪಿಸಿದ್ದು, ಅನೇಕ ನಿವಾಸಿಗಳು ಒಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಹಲವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಬೆಂಕಿ ಕಾಣಿಸಿಕೊಂಡ ಕಾರಣ ಇನ್ನೂ ತಿಳಿದುಬಂದಿಲ್ಲ. ಅಧಿಕಾರಿಗಳು ತನಿಖೆ ಆರಂಭಿಸಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಬರೆದುಕೊಂಡಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ವೀಡಿಯೊವು ಟೆಹ್ರಾನ್‌ನಲ್ಲಿರುವ IRGC ಪ್ರಧಾನ ಕಚೇರಿಗೆ ಬೆಂಕಿ ಬಿದ್ದಿರುವುದನ್ನು ತೋರಿಸುತ್ತಿಲ್ಲ, ಇದು ವಾಸ್ತವವಾಗಿ ನವೆಂಬರ್ 2025 ರಿಂದ ಹಾಂಗ್ ಕಾಂಗ್‌ನಲ್ಲಿ ಹಂಗ್ ಫಕ್ ಕೋರ್ಟ್ ಎತ್ತರದ ಬೆಂಕಿಯನ್ನು ಚಿತ್ರಿಸುತ್ತದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Video shows Ukraine’s recent strike on Russia’s Kuibyshev oil refinery? No, here are the facts

Fact Check: പ്രധാനമന്ത്രി നരേന്ദ്രമോദിയുടെ 76-ാം ജന്മദിനത്തില്‍ ബുര്‍ജ് ഖലീഫയില്‍ ആശംസ? വീഡിയോയുടെ സത്യമറിയാം

Fact Check: இரு கைகளும் இல்லாத பெண் ஜிம்னாஸ்டிக்ஸ் செய்யும் வைரல் காணொலி உண்மையா?

Fact Check: ದೆಹಲಿಯಲ್ಲಿ ಮಳೆಯ ನಡುವೆಯೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ? ಇಲ್ಲ, ಇದು ಹಳೆಯ ವಿಡಿಯೊ

Fact Check: ఢిల్లీలో సీఈసీ జ్ఞానేశ్ కుమార్‌కు వ్యతిరేకంగా నిరసనా? కాదు, పాత వీడియో వైరల్