Kannada

Fact Check: ಇರಾನಿನ ಬುಶೆಹರ್ ನಗರ ಸೇರಿದಂತೆ 80 ಸ್ಥಳಗಳ ಮೇಲೆ ಅಮೆರಿಕದ ದಾಳಿ ಎಂದು ಹಳೆಯ ವೀಡಿಯೊ ವೈರಲ್

ಇರಾನ್ ಮೇಲೆ ಅಮೆರಿಕದ ದಾಳಿ ಎಂದು ಹೇಳಿಕೊಳ್ಳುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಸ್ಥಾವರವೊಂದು ಬೆಂಕಿ ಜ್ವಾಲೆಯಿಂದ ಹೊತ್ತಿ ಉರಿಯುತ್ತಿರುವುದು ಕಾಣಬಹುದು.

Vinay Bhat

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವು ಮತ್ತೊಮ್ಮೆ ಆರಂಭವಾಗಿದೆ. ಇರಾನ್‌ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರವನ್ನು ಟಾರ್ಗೆಟ್ ಮಾಡಿಕೊಂಡು ಅಮೆರಿಕ ಭೀಕರ ವೈಮಾನಿಕ ದಾಳಿ ನಡೆಸಿದೆ ಎಂದು ವರದಿ ಆಗಿದೆ. ಇದರ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕದ ದಾಳಿ ಎಂದು ಹೇಳಿಕೊಳ್ಳುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಸ್ಥಾವರವೊಂದು ಬೆಂಕಿ ಜ್ವಾಲೆಯಿಂದ ಹೊತ್ತಿ ಉರಿಯುತ್ತಿರುವುದು ಕಾಣಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇರಾನಿನ ಬುಶೆಹರ್ ನಗರ ಸೇರಿದಂತೆ 80 ಸ್ಥಳಗಳ ಮೇಲೆ ಅಮೆರಿಕದ ವಿನಾಶಕಾರಿ ದಾಳಿಯು ಮತ್ತೆ ಯುದ್ಧ ಆರಂಭವಾಗಿದೆ ಎಂದರ್ಥ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಮೇ 2025 ರದ್ದು ಮತ್ತು ಇರಾನ್ ಮತ್ತು ಅಮೆರಿಕ ನಡುವಿನ ಇತ್ತೀಚಿನ ಬೆಳವಣಿಗೆಗಳಿಗೆ ಸಂಬಂಧಿಸಿಲ್ಲ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಮಿಡಲ್ ಈಸ್ಟ್ ಐ ಯೂಟ್ಯೂಬ್ ಚಾನೆಲ್‌ ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡಿರುವುದು ಸಿಕ್ಕಿತು. ಇದನ್ನು ಮೇ 6, 2025 ರಂದು ಅಪ್‌ಲೋಡ್ ಮಾಡಲಾಗಿದೆ. ಇದು ವೀಡಿಯೊ ಹಳೆಯದು ಮತ್ತು ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿಲ್ಲ ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ.

ವಿವರಣೆಯ ಪ್ರಕಾರ, ಈ ವೀಡಿಯೊ ಯೆಮೆನ್‌ನಿಂದ ಬಂದಿದ್ದು, ಅಲ್-ಹುದೈದಾ ಬಂದರು ಮತ್ತು ಬಾಜಿಲ್ ಜಿಲ್ಲೆಯ ಮೇಲೆ ಇಸ್ರೇಲ್ ದಾಳಿ ಮಾಡಿತ್ತು. ಈ ದಾಳಿಯಲ್ಲಿ 30 ಕ್ಕೂ ಹೆಚ್ಚು ಇಸ್ರೇಲಿ ವಿಮಾನಗಳು ಕನಿಷ್ಠ 48 ಬಾಂಬ್‌ಗಳನ್ನು ಬೀಳಿಸಿವೆ. ಅಲ್- ಅರೇಬಿಯಾ ಇಂಗ್ಲಿಷ್ ಕೂಡ ಅದೇ ಮಾಹಿತಿಯೊಂದಿಗೆ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿದೆ.

ಮೇ 6, 2025 ರಂದು Yem News ಕೂಡ ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿದ್ದು, ಇಸ್ರೇಲ್ ಯೆಮೆನ್‌ನಲ್ಲಿರುವ ಹೌತಿ ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ. ವರದಿಗಳ ಪ್ರಕಾರ, ಸುಮಾರು 30 ಯುದ್ಧ ವಿಮಾನಗಳು 50ಕ್ಕೂ ಹೆಚ್ಚು ಬಾಂಬ್‌ಗಳನ್ನು ಬಳಸಿ ದಾಳಿ ನಡೆಸಿದ್ದು, ಕಾಂಕ್ರೀಟ್ (ಸಿಮೆಂಟ್) ಕಾರ್ಖಾನೆಗಳು ಸೇರಿದಂತೆ ಹಲವು ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಬರೆದುಕೊಂಡಿದೆ.

ಮೇ 5, 2025 ರಂದು ರಾಯಿಟರ್ಸ್ ವರದಿಯ ಪ್ರಕಾರ, ಇರಾನ್ ಬೆಂಬಲಿತ ಹೌತಿ ಬಂಡುಕೋರರು ಇಸ್ರೇಲ್‌ನ ಮುಖ್ಯ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆಸಿದರು. ಒಂದು ದಿನದ ನಂತರ ಇಸ್ರೇಲ್ ಯೆಮೆನ್ ಬಂದರಿನ ಮೇಲೆ ವೈಮಾನಿಕ ದಾಳಿ ನಡೆಸುವ ಮೂಲಕ ಪ್ರತಿಕ್ರಿಯಿಸಿತು.

ಇಸ್ರೇಲಿ ಸೇನೆಯು ಹೌತಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಹೇಳಿಕೆ ನೀಡಿದೆ. ವರದಿಗಳ ಪ್ರಕಾರ, ಈ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಕನಿಷ್ಠ 35 ಜನರು ಗಾಯಗೊಂಡಿದ್ದಾರೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಇತ್ತೀಚೆಗೆ ಅಮೆರಿಕ ಇರಾನ್ ಮೇಲೆ ನಡೆಸಿದೆ ಎಂದು ವೈರಲ್ ಆಗುತ್ತಿರುವ ವೀ ವೀಡಿಯೊ ಹಳೆಯದು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Imran Khan’s video after being admitted to hospital goes viral? No, here are the facts

Fact Check: ഇത് മുഖ്യമന്ത്രി വി ഡി സതീശന്റെ വാഹനവ്യൂഹമോ? വീഡിയോയുടെ സത്യമറിയാം

Fact Check: முதல்வர் விஜய்யின் பெற்றோரின் திருமணத்தின் போது அவர் அருகில் இருந்ததாக பரவும் புகைப்படம் உண்மையானதா அல்லது போலியானதா?

Fact Check: ವೃಷಭಾವತಿ‌ ನದಿಯಲ್ಲಿ 500 ರೂ. ಮುಖಬೆಲೆಯ ಕಂತೆ ಕಂತೆ ನೋಟು ಪತ್ತೆ?, ವೈರಲ್ ವೀಡಿಯೊದ ಸತ್ಯ ಇಲ್ಲಿದೆ

Fact Check : ప్రధాని మోదీని దూషించినందుకు తల్లిదండ్రులు కుమార్తెను కొట్టారా? లేదు, వైరల్ వీడియో పాతది