Kannada

Fact Check: ಪುಣೆಯಲ್ಲಿ ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಸ್ಕೂಟರ್ ಅನ್ನು ಮಾಲೀಕನ ಜೊತೆಯಲ್ಲೇ ಕ್ರೇನ್​ನಲ್ಲಿ ಮೇಲಕ್ಕೆತ್ತಿದ ಪೊಲೀಸರು?, ಸತ್ಯ ಇಲ್ಲಿದೆ

ಕೆಲವರು ಕ್ರೇನ್ ಸಹಾಯದಿಂದ ಸ್ಕೂಟರ್ ಅನ್ನು ಎತ್ತುತ್ತಿರುವುದನ್ನು ಕಾಣಬಹುದು, ಆದರೆ ಒಬ್ಬ ವ್ಯಕ್ತಿ ಆ ಸ್ಕೂಟಿ ಮೇಲೆಯೇ ಕುಳಿತಿದ್ದಾನೆ. ಇದು ಇತ್ತೀಚೆಗೆ ಪುಣೆಯಲ್ಲಿ ನಡೆದ ಘಟನೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

Vinay Bhat

ಕ್ರೇನ್ ಸ್ಕೂಟರ್ ಅನ್ನು ಎತ್ತುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಕೆಲವರು ಕ್ರೇನ್ ಸಹಾಯದಿಂದ ಸ್ಕೂಟರ್ ಅನ್ನು ಎತ್ತುತ್ತಿರುವುದನ್ನು ಕಾಣಬಹುದು, ಆದರೆ ಒಬ್ಬ ವ್ಯಕ್ತಿ ಆ ಸ್ಕೂಟಿ ಮೇಲೆಯೇ ಕುಳಿತಿದ್ದಾನೆ. ಇದು ಇತ್ತೀಚೆಗೆ ಪುಣೆಯಲ್ಲಿ ನಡೆದ ಘಟನೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ನೋ ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಅನ್ನು ಟೋಯಿಂಗ್ ಮಾಡಲು ಬಂದ ಟ್ರಾಫಿಕ್ ಪೊಲೀಸರಿಗೆ ಸ್ಕೂಟರ್ ಬಿಡಲು ಸವಾರ ನಿರಾಕರಿಸಿದ್ದು. ಈ ವೇಳೆ ಪೊಲೀಸರು ಸ್ಕೂಟರ್‌ ಜೊತೆಗೆ ಮಾಲೀಕನನ್ನುೂ ಕ್ರೇನ್ ನಲ್ಲಿ ಮೇಲಕ್ಕೆತ್ತಿರುವ ಘಟನೆ ಪುಣೆಯಲ್ಲಿ ನಡೆದಿದೆ. ಘಟನೆ ವೇಳೆ ಸವಾರ ಗಾಳಿಯಲ್ಲಿ ತೂರಾಡಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಪುಣೆಯಲ್ಲಿ ನಡೆದ ಘಟನೆ ಅಲ್ಲ, ಬದಲಾಗಿ ಈ ವೀಡಿಯೊ 2022 ರಲ್ಲಿ ನಾಗ್ಪುರದಲ್ಲಿ ನಡೆದ ಘಟನೆ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಕೆಲ ಕೀಫ್ರೇಮ್‌ಗಳನ್ನು ಹೊರತೆಗೆದು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಾಟವನ್ನು ನಡೆಸಿದ್ದೇವೆ. ಈ ಸಂದರ್ಭ ABP MAJHA ದ ಅಧಿಕೃತ YouTube ಚಾನೆಲ್‌ನಲ್ಲಿ ವೈರಲ್ ವೀಡಿಯೊಗೆ ಸಂಬಂಧಿಸಿದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊ ವರದಿಯನ್ನು ಜುಲೈ 22, 2022 ರಂದು ಹಂಚಿಕೊಳ್ಳಲಾಗಿದೆ. ಮರಾಠಿ ಭಾಷೆಯ ವರದಿಯ ಪ್ರಕಾರ, ನಾಗ್ಪುರದಲ್ಲಿ ಒಬ್ಬ ವ್ಯಕ್ತಿ ತನ್ನ ಸ್ಕೂಟರ್ ಅನ್ನು ನೋ-ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ. ಪೊಲೀಸರು ಸ್ಕೂಟರ್ ಅನ್ನು ಎಳೆಯಲು ಪ್ರಾರಂಭಿಸಿದಾಗ, ಆ ವ್ಯಕ್ತಿ ಅದರ ಮೇಲೆ ಕುಳಿತಿ. ಇದರ ಹೊರತಾಗಿಯೂ, ಪೊಲೀಸರು ತಮ್ಮ ಕೆಲಸವನ್ನು ನಿಲ್ಲಿಸಲಿಲ್ಲ ಮತ್ತು ಸ್ಕೂಟರ್ ಅನ್ನು ತೆಗೆದುಕೊಂಡು ಹೋದರು ಎಂಬ ಮಾಹಿತಿ ಇದರಲ್ಲಿದೆ.

ಜುಲೈ 26, 2022 ರಂದು NDTV ಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, "ಇಂಟರ್ನೆಟ್‌ನಲ್ಲಿ ತಮಾಷೆಯ ಒಂದು ವೀಡಿಯೊ ವೇಗವಾಗಿ ವೈರಲ್ ಆಗುತ್ತಿದೆ, ಇದರಲ್ಲಿ ನೋ ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಲಾದ ಸ್ಕೂಟರ್ ಅನ್ನು ಕ್ರೇನ್ ಸಹಾಯದಿಂದ ಗಾಳಿಯಲ್ಲಿ ನೇತುಹಾಕಲಾಗಿದೆ. ವಿಶೇಷ ಎಂದರೆ ಆ ಸ್ಕೂಟರ್​ನ ಮಾಲೀಕ ಕೂಡ ಆ ಗಾಡಿಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಈ ವೀಡಿಯೊ ನಾಗ್ಪುರದಿಂದ ಬಂದಿದೆ.’’

2022 ರಲ್ಲಿ ABPLive ಪ್ರಕಟಿಸಿರುವ ವರದಿಯ ಪ್ರಕಾರ ಈ ಘಟನೆ ನಾಗ್ಪುರದ ಸದರ್ ಬಜಾರ್‌ನ ಅಂಜುಮನ್ ಕಾಂಪ್ಲೆಕ್ಸ್ ಬಳಿಯ ನೋ-ಪಾರ್ಕಿಂಗ್ ವಲಯದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಸ್ಕೂಟರ್ ಮೇಲೆ ಕುಳಿತಿರುವುದನ್ನು ಕಾಣಬಹುದು, ಅದು ಗಾಳಿಯಲ್ಲಿ ತೇಲಾಡುತ್ತಿದೆ. ಟೋಯಿಂಗ್ ಟ್ರಕ್ ಸ್ಕೂಟರ್ ಅನ್ನು ಎಳೆಯುತ್ತಿದ್ದರೆ, ಆ ವ್ಯಕ್ತಿ ಸ್ಕೂಟರ್‌ನಲ್ಲಿಯೇ ಇರುತ್ತಾನೆ. ರಿಕವರಿ ಟ್ರಕ್‌ನಲ್ಲಿ ಮುಟ್ಟುಗೋಲು ಹಾಕಿಕೊಳ್ಳುವಾಗ ವಾಹನವನ್ನು ತೆಗೆದುಕೊಂಡು ಹೋಗಲು ಅವರು ನಿರಾಕರಿಸಿದರು ಎಂದು ಬರೆಯಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಸ್ಕೂಟರ್ ಅನ್ನು ಎಳೆದುಕೊಂಡು ಹೋಗುತ್ತಿರುವ ವೈರಲ್ ವೀಡಿಯೊ ಪುಣೆಯದ್ದಲ್ಲ ಇದು ನಾಗ್ಪುರದ್ದಾಗಿದೆ. ಹಾಗೆಯೆ ಇದು ವಾಸ್ತವವಾಗಿ 2022 ರಲ್ಲಿ ನಡೆದ ಘಟನೆ ಆಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: People break idols, convert to Islam over Nepal floods? No, video is from South Korea

Fact Check: നേപ്പാളില്‍ പ്രളയത്തിനിടെ ഡാം തകരുന്ന ദൃശ്യം? വീഡിയോയുടെ സത്യമറിയാം

Fact Check: முதல்வர் விஜய் பாணியில் விநாயகர் சிலை செய்யப்பட்டதாகப் பரவும் படம்: உண்மை என்ன?

Fact Check: ನೇಪಾಳದ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಆನೆಯೊಂದು ರಕ್ಷಿಸಿತೇ? ಸುಳ್ಳು, ಸತ್ಯ ಇಲ್ಲಿದೆ

Fact Check: ‘బాంబు పరీక్ష’లో మదర్సా టీచర్, కుటుంబం మృతి? కాదు, వీడియోలో కనిపించింది సిలిండర్ పేలుడు