Kannada

Fact Check: ನದಿಯಲ್ಲಿರುವ ಕಂಬಗಳ ಮೇಲೆ ಬ್ಯಾಕ್‌ಫ್ಲಿಪ್ ಮಾಡುವ ಯುವತಿಯ ವಿಡಿಯೊ ಎಐ ರಚಿತವಾಗಿದೆ

ನದಿಯಲ್ಲಿರುವ ಕೆಲವು ಕಂಬಗಳ ಮೇಲೆ ಯುವತಿಯೊಬ್ಬಳು ಬ್ಯಾಕ್‌ಫ್ಲಿಪ್ ಮಾಡುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೊದಲ್ಲಿ ನದಿಯೊಂದರಲ್ಲಿ ಹಲವು ಕಂಬಗಳನ್ನು ನಿರ್ಮಿಸಲಾಗಿದ್ದು, ಯುವತಿಯೊಬ್ಬಳು ಅವುಗಳ ಮೇಲೆ ಬ್ಯಾಕ್‌ಫ್ಲಿಪ್ ಮಾಡುತ್ತಿರುವುದನ್ನು ಕಾಣಬಹುದು.

vinay bhat

ನದಿಯಲ್ಲಿರುವ ಕೆಲವು ಕಂಬಗಳ ಮೇಲೆ ಯುವತಿಯೊಬ್ಬಳು ಬ್ಯಾಕ್‌ಫ್ಲಿಪ್ ಮಾಡುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೊದಲ್ಲಿ ನದಿಯೊಂದರಲ್ಲಿ ಹಲವು ಕಂಬಗಳನ್ನು ನಿರ್ಮಿಸಲಾಗಿದ್ದು, ಯುವತಿಯೊಬ್ಬಳು ಅವುಗಳ ಮೇಲೆ ಬ್ಯಾಕ್‌ಫ್ಲಿಪ್ ಮಾಡುತ್ತಿರುವುದನ್ನು ಕಾಣಬಹುದು. ಹಿಂದಕ್ಕೆ ಜಿಗಿಯುತ್ತಾ ಒಂದು ಕಂಬದಿಂದ ಮತ್ತೊಂದು ಕಂಬಕ್ಕೆ ಸಾಗುತ್ತಿದ್ದಾಳೆ. ಸರೋವರದ ಸುತ್ತಲೂ ಕುಳಿತಿದ್ದ ಜನಸಮೂಹ ಅವಳನ್ನು ಹುರಿದುಂಬಿಸುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡು, ‘‘ಸರೋವರದ ಮೇಲಿರುವ ಕಂಬಗಳ ಮೇಲೆ ಯುವತಿಯ ಅದ್ಭುತ ಸಾಹಸ: ಬ್ಯಾಕ್‌ಫ್ಲಿಪ್ ನೋಡಿ ಬೆರಗಾದ ನೆಟ್ಟಿಗರು. ಅತ್ಯುತ್ತಮ ದೈಹಿಕ ಸಾಮರ್ಥ್ಯ, ಸಮತೋಲನ ಮತ್ತು ಸಮಯಪ್ರಜ್ಞೆಯನ್ನು ಪ್ರದರ್ಶಿಸಿರುವ ಆಕೆಯ ಸಾಹಸ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೊವನ್ನು ಕೃತಕ ಬುದ್ಧಿಮತ್ತೆಯ (ಎಐ) ಸಹಾಯದಿಂದ ಸೃಷ್ಟಿಸಲಾಗಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವಿಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಕ್ವಿಕ್ ನ್ಯೂಸ್ 24*7 ನ ಫೇಸ್‌ಬುಕ್ ಪೋಸ್ಟ್‌ ಸಿಕ್ಕಿತು. ಇದರಲ್ಲಿ ನವೆಂಬರ್ 9 ರಂದು ಅದೇ ದೃಶ್ಯವನ್ನು ಅಪ್‌ಲೋಡ್ ಮಾಡಲಾಗಿದೆ, ಅದನ್ನು AI ವಿಷಯ ಎಂದು ಗುರುತಿಸಲಾಗಿದೆ. ಅಲ್ಲದೆ ಈ ಪುಟದಲ್ಲಿ AI ವಿಷಯ ಎಂದು ಲೇಬಲ್ ಮಾಡಲಾದ ಹಲವಾರು ವಿಡಿಯೊಗಳಿವೆ.

ಇದಲ್ಲದೆ, ವೈರಲ್ ವಿಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹಲವು ದೃಶ್ಯ ದೋಷಗಳು ಕಂಡುಬಂದವು. ಉದಾಹರಣೆಗೆ, ಕೆಲವು ಫ್ರೇಮ್‌ಗಳಲ್ಲಿ ಯುವತಿಯ ಕೈ ವಿರೂಪಗೊಂಡಿರುವುದು ಕಂಡುಬಂದಿದೆ. ಹಿನ್ನೆಲೆಯಲ್ಲಿರುವ ಜನರ ಗುಂಪಿನ ಸಂಯೋಜನೆಯೂ ಸಹಜವಾಗಿಲ್ಲದಂತೆ ಕಾಣುತ್ತದೆ. ಕೆಲವು ವ್ಯಕ್ತಿಗಳ ಪಾದಗಳು ವಿರೂಪಗೊಂಡಿರುವಂತೆ ಕಂಡುಬಂದರೆ, ಮತ್ತೊಬ್ಬ ವ್ಯಕ್ತಿಗೆ ಮೂರನೇ ಕೈ ಇರುವಂತೆ ಕಾಣುತ್ತದೆ. ಇದಲ್ಲದೆ, ಹಿನ್ನೆಲೆಯಲ್ಲಿರುವ ಜನರ ಮುಖಗಳು ಮಸುಕಾಗಿ ಕಾಣಿಸುತ್ತವೆ. ಇಂತಹ ದೃಶ್ಯ ದೋಷಗಳು ಎಐ ಮೂಲಕ ಸೃಷ್ಟಿಸಲಾದ ವಿಡಿಯೊಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

ಈ ವಿಡಿಯೊವನ್ನು ಎಐ ಸಹಾಯದಿಂದ ನಿರ್ಮಿಸಲಾಗಿದೆಯೇ ಎಂಬುದನ್ನು ತಿಳಿಯಲು UncovAi ಪತ್ತೆ ಸಾಧನದ ನೆರವು ಪಡೆದೆವು. ಈ ಸಾಧನದ ವಿಶ್ಲೇಷಣೆಯಲ್ಲಿ ವೈರಲ್ ವಿಡಿಯೊ ಶೇ 100ರಷ್ಟು ಭಾಗ ಎಐ ಮೂಲಕ ಸೃಷ್ಟಿಯಾಗಿದೆ ಎಂದು ಹೇಳಿದೆ.

ಮತ್ತೊಂದು ಎಐ ಪತ್ತೆ ಸಾಧನ Sightengine ಮೂಲಕ ಪರಿಶೀಲಿಸಿದೆವು. ಈ ಸಾಧನವು ಪ್ರಮುಖ ಫ್ರೇಮ್‌ಗಳು ಶೇ 99ರಷ್ಟು ಎಐ ನಿರ್ಮಿತವಾಗಿರುವ ಸಾಧ್ಯತೆಯಿದೆ ಎಂದು ಸೂಚಿಸಿತು. ಹೈವ್ ಮಾಡರೇಶನ್‌ನಲ್ಲಿ ಕೂಡ ದೃಶ್ಯಗಳನ್ನು ವಿಶ್ಲೇಷಿಸಿದ್ದೇವೆ, ಅದು AI- ರಚಿತ ಅಥವಾ ಡೀಪ್‌ಫೇಕ್ ವಿಷಯವಾಗಿರಬಹುದು ಎಂದು ಗುರುತಿಸಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ನದಿಯಲ್ಲಿರುವ ಕೆಲವು ಕಂಬಗಳ ಮೇಲೆ ಬ್ಯಾಕ್‌ಫ್ಲಿಪ್ ಮಾಡುತ್ತಿರುವ ಯುವತಿಯ ವೈರಲ್ ವಿಡಿಯೊ ಎಐ ನಿರ್ಮಿತ ಎಂಬುದು ಖಚಿತವಾಗಿ ಹೇಳುತ್ತೇವೆ.

Fact Check: Muslim youth attacks Hindu schoolgirl in Bangladesh? No, here are the facts.

Fact Check: കൊല്‍ക്കത്തയില്‍ വിമാനത്താവളത്തിനായി മുസ്ലിം പള്ളി പൊളിക്കുന്ന ദൃശ്യങ്ങള്‍? വീഡിയോയുടെ സത്യമറിയാം

Fact Check: ஆந்திர துணை முதல்வர் பவன் கல்யாணை விமர்சித்தவரை காவல் துறையினர் தாக்கியதாகப் பரவும் காணொலி? உண்மை அறிக

Fact Check: భారత స్వదేశీ బుల్లెట్ రైలు వీడియో? కాదు, ఇది తైవాన్‌కు చెందినది

Fact Check: തെലങ്കാന മുഖ്യമന്ത്രിയെ അപമാനിച്ച് സോണിയ ഗാന്ധിയുടെ സെക്യൂരിറ്റി? വീഡിയോയുടെ സത്യമറിയാം