Top Stories

Fact Check: ಬಾಂಗ್ಲಾದೇಶದ ಮುಸ್ಲಿಮರು ದೋಣಿ ಮೂಲಕ ಪಶ್ಚಿಮ ಬಂಗಾಳ ತಲುಪಿದ್ದಾರೆಯೆ?, ವೈರಲ್ ವೀಡಿಯೊದ ಸತ್ಯ ಇಲ್ಲಿದೆ

ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದು, ಮುಸ್ಲಿಂ ಸಮುದಾಯದ ಜನರು ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ತಲುಪುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

Vinay Bhat

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.ಹೊಸ ವಕ್ಫ್ ಕಾನೂನನ್ನು ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಹಿಂಸಾಚಾರ ನಡೆದಿದೆ. ಇದರಲ್ಲಿ ಹಲವೆಡೆ ಬೆಂಕಿ ಹಚ್ಚಲಾಗಿದ್ದು, ಅನೇಕ ಅಂಗಡಿಗಳು ಸಹ ನಾಶವಾಗಿವೆ. ಈ ಘಟನೆಯ ಮಧ್ಯೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದ್ದು, ಅದರಲ್ಲಿ ಕೆಲವು ಮುಸ್ಲಿಮರು ದೋಣಿಯಲ್ಲಿ ಬರುತ್ತಿರುವುದನ್ನು ಕಾಣಬಹುದು. ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದು, ಮುಸ್ಲಿಂ ಸಮುದಾಯದ ಜನರು ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ತಲುಪುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಏಪ್ರಿಲ್ 19, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಮುಲ್ಲಾಗಳು ಬಾಂಗ್ಲಾದೇಶದಿಂದ ಬಂಗಾಳವನ್ನು ತಲುಪುತ್ತಿದ್ದಾರೆ. ಮೋದಿ ಸರ್ಕಾರ ಈಗ ರಾಷ್ಟ್ರಪತಿ ಆಳ್ವಿಕೆ ಹೇರದಿದ್ದರೆ ಮುಂದಿನ ಭವಿಷ್ಯ ತುಂಬಾ ಕಠಿಣ...’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಪಶ್ಚಿಮ ಬಂಗಾಳಕ್ಕು ಈ ವೀಡಿಯೊಕ್ಕು ಯಾವುದೇ ಸಂಬಂಧವಿಲ್ಲ. ಇದು ಫೆಬ್ರವರಿ 2024 ರದ್ದಾಗಿದ್ದು, ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಬಾಂಗ್ಲಾದೇಶದ ಚಾರ್ ಮೊನೈನಲ್ಲಿ ನಡೆದ ಇಜ್ತೆಮಾಕ್ಕೆ ಹೋಗುತ್ತಿರುವುದಾಗಿದೆ.

ನಿಜಾಂಶವನ್ನು ತಿಳುಯಲು ಮೊದಲಿಗೆ ನಾವು ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಇದರಲ್ಲಿ ಹಳದಿ ಶರ್ಟ್ ಧರಿಸಿದ ವ್ಯಕ್ತಿ ಬಂಗಾಳಿ ಭಾಷೆಯಲ್ಲಿ, ‘ಬಿಸ್ವಾ ಇಜ್ತೆಮಾ ಪ್ರಾರಂಭವಾಗಲಿದೆ, ಆದರೆ ಅದಕ್ಕೂ ಮುಂಚೆಯೇ ಮುಸ್ಲಿಮರ ಗುಂಪು ಬರಲು ಪ್ರಾರಂಭಿಸಿದೆ’ ಎಂದು ಹೇಳುತ್ತಿರುವುದು ಕಾಣಬಹುದು. ಇಜ್ತಿಮಾ ಎಂದರೆ ಒಟ್ಟುಗೂಡುವುದು ಎಂದರ್ಥ. ಇದರಲ್ಲಿ ಮುಸ್ಲಿಂ ಸಮುದಾಯದ ಜನರು ಒಂದೇ ಸ್ಥಳದಲ್ಲಿ ಸೇರಿ ಪ್ರಾರ್ಥಿಸುತ್ತಾರೆ.

ಗೂಗಲ್‌ನಲ್ಲಿ ಬಿಸ್ವಾ ಇಜ್ತೆಮಾವನ್ನು ಹುಡುಕಿದಾಗ ಎಬಿಪಿ ನ್ಯೂಸ್‌ನ ವರದಿ ಕಂಡುಬಂದಿದೆ. ಅದರಲ್ಲಿ ಈ ಇಜ್ತೆಮಾ ಬಾಂಗ್ಲಾದೇಶದ ತುರಗ್ ನದಿಯ ದಡದಲ್ಲಿ ಜನವರಿ 31, 2025 ರಂದು ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.

ಬಳಿಕ ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಮಾರ್ಚ್ 26, 2024 ರಂದು ಇದೇ ವೈರಲ್ ವೀಡಿಯೊ ಮತ್ತೊಂದು ಆ್ಯಂಗಲ್​ನಿಂದ ಚಿತ್ರೀಕರಿಸಿರುವುದು ಸಿಕ್ಕಿದೆ. ಇದನ್ನು 'ಚಾರ್ ಮೊನೈ' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ವರದಿಗಳ ಪ್ರಕಾರ, ಚಾರ್ ಮೊನೈ ಬಾಂಗ್ಲಾದೇಶದ ಬಾರಿಸಲ್ ಜಿಲ್ಲೆಯ ಒಂದು ಪ್ರದೇಶವಾಗಿದ್ದು, ಅಲ್ಲಿ ಪ್ರತಿ ವರ್ಷ ಚಾರ್ ಮೊನೈ ಇಜ್ತೆಮಾ ನಡೆಯುತ್ತದೆ. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯ ಮುಸ್ಲಿಮರು ನದಿಯಲ್ಲಿ ದೋಣಿಯ ಮೂಲಕ ಬರುತ್ತಾರೆ. 2024 ರಲ್ಲಿ, ಈ ಇಜ್ತೆಮಾ ಫೆಬ್ರವರಿ 26 ರಿಂದ 28 ರವರೆಗೆ ನಡೆಯಿತು.

ಬಾಂಗ್ಲಾ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ, ಫೆಬ್ರವರಿ 28, 2024 ರಂದು ಹಂಚಿಕೊಂಡ ಕೆಲವು ಪೋಸ್ಟ್‌ಗಳಲ್ಲಿ ವೈರಲ್ ವೀಡಿಯೊಕ್ಕೆ ಹೋಲುವ ದೀರ್ಘ ಆವೃತ್ತಿಯನ್ನು ಕಂಡುಕೊಂಡಿದ್ದೇವೆ. ಎಲ್ಲಾ ಪೋಸ್ಟ್‌ಗಳಲ್ಲಿ, ಈ ದೋಣಿಗಳು ಬಾಂಗ್ಲಾದೇಶದ ಚಾರ್ ಮೊನೈನದ್ದು ಎಂದು ಹೇಳಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಮುಸ್ಲಿಮರು ದೋಣಿಯ ಮೇಲೆ ಬರುತ್ತಿರುವ ವೈರಲ್ ವೀಡಿಯೊ ಹಳೆಯದು. ಪಶ್ಚಿಮ ಬಂಗಾಳಕ್ಕು ಇದಕ್ಕು ಯಾವುದೇ ಸಂಬಂಧವಿಲ್ಲ. ಬಾಂಗ್ಲಾದೇಶದ ಇಜ್ತೆಮಾಗೆ ಹೋಗುವ ಹಳೆಯ ವೀಡಿಯೊವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Elephant hurls guard who obstructed ritual in Tamil Nadu? No, here’s what happened

Fact Check: ശബരിമല മകരവിളക്ക് തെളിയിക്കുന്ന പഴയകാല ചിത്രമോ ഇത്? സത്യമറിയാം

Fact Check: இந்துக் கடவுளுக்கு தீபாராதனை காட்டினாரா அசாதுதீன் ஓவைசி? உண்மை அறிக

Fact Check: ಮೋದಿ ಸೋಲಿಗೆ ಅಸ್ಸಾಂನಲ್ಲಿ ಮುಸ್ಲಿಮರು ಪ್ರಾರ್ಥಿಸುತ್ತಿದ್ದಾರೆ ಎಂದು ಬಾಂಗ್ಲಾದೇಶದ ವೀಡಿಯೊ ವೈರಲ್

Fact Check: శ్రీలంక వరదల్లో ఏనుగు కుక్కని కాపాడుతున్న నిజమైన దృశ్యాలా? కాదు, ఇది AI-జనరేటెడ్ వీడియో