Top Stories

Fact Check: ಕಾರವಾರದಲ್ಲಿ ಬೀದಿ ದನಗಳಿಂದ ವ್ಯಕ್ತಿಯೋರ್ವನ ಮೇಲೆ ದಾಳಿ ಎಂದು ಮಹಾರಾಷ್ಟ್ರದ ವೀಡಿಯೊ ವೈರಲ್

ಸುಮಾರು 1.30 ನಿಮಿಷಗಳ ಈ ವೀಡಿಯೊದಲ್ಲಿ ಹಸು ಆ ವ್ಯಕ್ತಿ ಮೇಲೆ ಮನಬಂದಂತೆ ಕೊಂಬಿನಿಂದ ದಾಳಿ ಮಾಡುತ್ತದೆ. ಬಳಿಕ ಹತ್ತಿರದಲ್ಲಿದ್ದ ಜನರು ಹಸುವಿಗೆ ಕೋಲಿನಲ್ಲಿ ಹೊಡೆದು ಓಡಿಸುತ್ತಾರೆ.

vinay bhat

ಬೀದಿಯಲ್ಲಿ ವೃದ್ದ ವ್ಯಕ್ತಿಯೊಬ್ಬ ಬೈಕ್​ನಿಂದ ಇಳಿದ ತಕ್ಷಣ ಹಸುವೊಂದು ಅವರ ಮೇಲೆ ದಾಳಿ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಸುಮಾರು 1.30 ನಿಮಿಷಗಳ ಈ ವೀಡಿಯೊದಲ್ಲಿ ಹಸು ಆ ವ್ಯಕ್ತಿ ಮೇಲೆ ಮನಬಂದಂತೆ ಕೊಂಬಿನಿಂದ ದಾಳಿ ಮಾಡುತ್ತದೆ. ಬಳಿಕ ಹತ್ತಿರದಲ್ಲಿದ್ದ ಜನರು ಹಸುವಿಗೆ ಕೋಲಿನಲ್ಲಿ ಹೊಡೆದು ಓಡಿಸುತ್ತಾರೆ. ದಾಳಿಗೆ ಒಳಗಾದ ವೃದ್ದನ ಮುಖದಲ್ಲಿ ರಕ್ತ ಬರುತ್ತಿರುವುದನ್ನು ಕಾಣಬಹುದು. ಈ ಭಯಾನಕ ಘಟನೆ ಕಾರವಾರದಲ್ಲಿ ನಡೆದಿದೆ ಎಂದು ಅನೇಕ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬೀದಿ ದನಗಳಿಂದ ಹುಷಾರಾಗಿರಿ.. ಕಾರವಾರದಲ್ಲಿ ವ್ಯಕ್ತಿಯೋರ್ವನ ಮೇಲೆ ಬೀದಿ ದನಗಳ ದಾಳಿ’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಕಾರವಾರದಲ್ಲಿ ನಡೆದ ಘಟನೆ ಅಲ್ಲ, ಬದಲಾಗಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕಲ್ವಾನ್ ಪಟ್ಟಣದಲ್ಲಿ ನಡೆದ ಘಟನೆ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಕೆಲ ಮಾಧ್ಯಮಗಳು ಸುದ್ದಿ ಬಿತ್ತರಿಸಿರುವುದು ಕಂಡುಬಂತು. ಮಹಾರಾಷ್ಟ್ರದ ಸುದ್ದಿ ವೆಬ್​ಸೈಟ್ saamtv.esakal.com ಜೂನ್ 23 ರಂದು ಪ್ರಕಟಿಸಿದ ಸುದ್ದಿಯ ಪ್ರಕಾರ, ನಾಸಿಕ್ ಜಿಲ್ಲೆಯ ಕಲ್ವಾನ್ ಪಟ್ಟಣದ ಓಲ್ಡ್ ಓತೂರ್ ರಸ್ತೆಯಲ್ಲಿರುವ ಕಲ್ವಾನ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್ ಮುಂದೆ ಈ ಘಟನೆ ನಡೆದಿದೆ.

‘‘ಕಲ್ವಾನ್‌ನ ಛತ್ರಪತಿ ಶಿವಾಜಿ ನಗರದ ನಿವಾಸಿ ಭಾಲಚಂದ್ರ ರಘುನಾಥ್ ಮಲ್ಪುರೆ (85) ತನ್ನ ದ್ವಿಚಕ್ರ ವಾಹನದಿಂದ ಇಳಿದ ತಕ್ಷಣ, ಎರಡು ಹಸುಗಳು ಇದ್ದಕ್ಕಿದ್ದಂತೆ ಅವರ ಮೇಲೆ ದಾಳಿ ಮಾಡಿ ನೆಲದ ಮೇಲೆ ಎಸೆದು, ಕೊಂಬುಗಳಿಂದ ತಿವಿದು, ಕಾಲಿನಿಂದ ಒದ್ದವು. ಹತ್ತಿರದ ಜನರು ಕೋಲುಗಳು ಮತ್ತು ಕಲ್ಲುಗಳಿಂದ ಹಸುಗಳನ್ನು ಓಡಿಸಲು ಪ್ರಯತ್ನಿಸಿದರು, ಆದರೆ ಹಸುಗಳು ಅವರ ಮೇಲೆ ದಾಳಿ ಮಾಡುತ್ತಲೇ ಇದ್ದವು. ಕೊನೆಗೆ, ಅವರೆಲ್ಲರೂ ಹೇಗೋ ವೃದ್ಧನನ್ನು ಪಕ್ಕಕ್ಕೆ ಎಳೆಯುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಲ್ಪುರೆ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಕಲ್ವಾನ್ ಗ್ರಾಮೀಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಸಾವನ್ನಪ್ಪಿದರು’’ ಎಂಬ ಮಾಹಿತಿ ಇದರಲ್ಲಿದೆ.

ದಿ ಫ್ರೀ ಪ್ರೆಸ್‌ ಜರ್ನಲ್‌ ವೆಬ್‌ಸೈಟ್‌ನಲ್ಲಿ ಕೂಡ ಜೂನ್‌ 24 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟ ಆಗಿರುವುದು ನಮಗೆ ಸಿಕ್ಕಿದೆ. ಇದರಲ್ಲಿ ಕೂಡ, ‘‘ಕಲ್ವಾನ್ ನಗರದ ಓಲ್ಡ್ ಓತೂರ್ ರಸ್ತೆಯಲ್ಲಿರುವ ಕಲ್ವಾನ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್ ಮುಂಭಾಗದಲ್ಲಿರುವ ಶ್ರೀ ಸೈಬರ್ ಕೆಫೆ ಬಳಿ ಎರಡು ಬೀದಿ ಹಸುಗಳು ವೃದ್ದ ವ್ಯಕ್ತಿಯೋರ್ವನ ಮೇಲೆ ದಾಳಿ ಮಾಡಿದೆ. ಕಲ್ವಾನ್‌ನ ಛತ್ರಪತಿ ಶಿವಾಜಿ ನಗರದ ನಿವಾಸಿ ಭಾಲಚಂದ್ರ ರಘುನಾಥ್ ಮಲ್ಪುರೆ (85) ದ್ವಿಚಕ್ರ ವಾಹನದ ಹಿಂಬದಿ ಸವಾರಿ ಮಾಡುತ್ತಿದ್ದರು. ಅವರು ಬೈಕ್‌ನಿಂದ ಇಳಿಯುತ್ತಿದ್ದಂತೆ, ಹಸುಗಳು ತಮ್ಮ ಕೊಂಬುಗಳಿಂದ ಮಲ್ಪುರೆಯನ್ನು ಎತ್ತಿ ರಸ್ತೆಯಲ್ಲಿ ದಾಳಿ ಮಾಡಿದವು. ಅವರು ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದರು. ಈ ಘಟನೆಯು ಕಲ್ವಾನ್ ನಗರದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು, ಬೀದಿ ದನಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಗಳು ಬಲಗೊಳ್ಳುತ್ತಿವೆ’’ ಎಂದು ಬರೆಯಲಾಗಿದೆ.

ವೈರಲ್ ವೀಡಿಯೊವನ್ನು ಹಂಚಿಕೊಂಡು ಇದು ಮಹಾರಾಷ್ಟ್ರದ ನಾಸಿಕ್​ ಜಿಲ್ಲೆಯಲ್ಲಿ ನಡೆದ ಘಟನೆ ಎಂದು ಯೂಟ್ಯೂಬ್​ನಲ್ಲಿ Loksatta ಸೇರಿದಂತೆ ಕೆಲ ಮಾಧ್ಯಮ ವರದಿ ಮಾಡಿರುವುದನ್ನು ಇಲ್ಲಿ, ಇಲ್ಲಿ ನೋಡಬಹುದು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೃದ್ಧ ವ್ಯಕ್ತಿಯೊಬ್ಬರ ಮೇಲೆ ಹಸುಗಳು ದಾಳಿ ಮಾಡಿರುವ ಘಟನೆ ನಡೆದಿರುವುದು ಕಾರವಾರದಲ್ಲಿ ಅಲ್ಲ, ಇದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕಲ್ವಾನ್ ಪಟ್ಟಣದಲ್ಲಿ ನಡೆದಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Israeli building destroyed by Iranian drone? No, video is from Gaza

Fact Check: தாயின் கண் முன்னே மகனை தாக்கிய காவல்துறையினர்? இச்சம்பவம் திமுக ஆட்சியில் நடைபெற்றதா

Fact Check : 'ట్రంప్‌ను తన్నండి, ఇరాన్ చమురు కొనండి' ఒవైసీ వ్యాఖ్యలపై మోడీ, అమిత్ షా రియాక్షన్? లేదు, నిజం ఇక్కడ తెలుసుకోండి

Fact Check: സര്‍ക്കാര്‍ സ്കൂളില്‍ ഹജ്ജ് കര്‍മങ്ങള്‍ പരിശീലിപ്പിച്ചോ? വീഡിയോയുടെ വാസ്തവം

Fact Check: ஒருவரை இரண்டு மாடுகள் தாக்கியதாக வைரலாகும் காணொலி? தமிழ்நாட்டில் நடைபெற்றதா