Kannada

Fact Check: ಬಾಂಗ್ಲಾದೇಶದಲ್ಲಿ ಜಮಾಅತ್‌ನ ಮಹಿಳಾ ಸಂಘಟನೆಯ ನಾಯಕಿಯನ್ನು ಬಿಎನ್​ಪಿ ಬೆಂಬಲಿಗರು ಅವಮಾನಿಸುತ್ತಿದ್ದಾರೆಯೇ?, ಸತ್ಯ ಇಲ್ಲಿದೆ

ಚುನಾವಣಾ ಪ್ರಚಾರದ ಸಮಯದಲ್ಲಿ ಬಿಎನ್‌ಪಿ ಬೆಂಬಲಿಗರು ಮಹಿಳಾ ಜಮಾತೆ-ಇ-ಇಸ್ಲಾಮಿ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Vinay Bhat

ಬಾಂಗ್ಲಾದೇಶದಲ್ಲಿ ಈ ಬಾರಿ ನಡೆದ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಗೆಲುವು ಕಂಡಿತು. ಇದರ ನಡುವೆ ಇತ್ತೀಚೆಗೆ, ಚುನಾವಣಾ ಪ್ರಚಾರದ ಸಮಯದಲ್ಲಿ ಬಿಎನ್‌ಪಿ ಬೆಂಬಲಿಗರು ಮಹಿಳಾ ಜಮಾತೆ-ಇ-ಇಸ್ಲಾಮಿ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಕೆಲ ಮಹಿಳೆಯರು ಮತ್ತೋರ್ವ ಮಹಿಳೆಗೆ ಹೊಡೆಯುತ್ತಿರುವುದು ಕಾಣಬಹುದು. ಜೊತೆಗೆ ಆಕೆಯ ತಲೆ ಕೂದಲನ್ನು ಕತ್ತರಿಯಿಂದ ಕತ್ತರಿಸುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶದಲ್ಲಿ ಚುನಾವಣಾ ಪರಿಸ್ಥಿತಿ ಭಯಾನಕ ಸ್ಥಿತಿಯಲ್ಲಿದೆ, ಸ್ವರ್ಗಕ್ಕೆ ಹೋಗುವ ಟಿಕೆಟ್‌ನ ಉಡುಗೊರೆಯನ್ನು ತಲುಪಿಸಲಾಗುತ್ತಿದೆ. ಜಮಾಅತ್‌ನ ಮಹಿಳಾ ಸಂಘಟನೆಯ ನಾಯಕಿಯನ್ನು BNP ಬೆಂಬಲಿಗರು ಕಿರುಕುಳ ಮತ್ತು ಅವಮಾನಿಸುತ್ತಿದ್ದಾರೆ!’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಬಾಂಗ್ಲಾದೇಶದಲ್ಲಿ ಮೊಬೈಲ್ ಫೋನ್ ಕದ್ದ ಆರೋಪದ ಮೇಲೆ ತಂಗೈಲ್ ಜನರಲ್ ಆಸ್ಪತ್ರೆಯಲ್ಲಿ ಬಂಧನಕ್ಕೊಳಗಾದ ಮಹಿಳೆಯೊಬ್ಬರಿಗೆ ಥಳಿಸುತ್ತಿರುವ ವೀಡಿಯೊ ಇದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಫೆಬ್ರವರಿ 10 ರಂದು ಬಾಂಗ್ಲಾದ ಸ್ಥಳೀಯ ಮಾಧ್ಯಮ ಡೈಲಿ ಖಬರೇರ್ ಕಾಗೋಜ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ  ವೀಡಿಯೊ ಕಂಡುಬಂದಿದೆ. ಇದು ವೈರಲ್ ವೀಡಿಯೊಗೆ ಹೋಲಿಕೆಗಳನ್ನು ಹೊಂದಿದೆ.

ವೀಡಿಯೊ ವಿವರಣೆಯಲ್ಲಿ ತಂಗೈಲ್ ಜನರಲ್ ಆಸ್ಪತ್ರೆಯಲ್ಲಿ ಮಹಿಳಾ ಮೊಬೈಲ್ ಫೋನ್ ಕಳ್ಳಿಯನ್ನು ಬಂಧಿಸಿ ಸಾಮೂಹಿಕವಾಗಿ ಥಳಿಸುವುದನ್ನು ತೋರಿಸುತ್ತದೆ.

ಬಾಂಗ್ಲಾದ ಮತ್ತೊಂದು ಸ್ಥಳೀಯ ಮಾಧ್ಯಮ Tangail News24 ಕೂಡ ಫೆಬ್ರವರಿ 10 ರಂದು, ‘‘ತಂಗೈಲ್ ಸದರ್ ಆಸ್ಪತ್ರೆಯಲ್ಲಿ ಸ್ಥಳೀಯ ಜನರು ಮಹಿಳಾ ಮೊಬೈಲ್ ಕಳ್ಳಿಯನ್ನು ಹಿಡಿದು ಆಕೆಯ ಕೂದಲನ್ನು ಕತ್ತರಿಸಿದ್ದಾರೆ!!’’ ಎಂಬ ಶೀರ್ಷಿಕೆಯೊಂದಿಗೆ ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡಿದೆ.

ಬಾಂಗ್ಲಾದೇಶದ ಇತರೆ ಮಾಧ್ಯಮ ಕೂಡ, ಮೊಬೈಲ್ ಕಳ್ಳಿಯನ್ನು ಹಿಡಿದು ಥಳಿಸುತ್ತಿರುವ ಬಗ್ಗೆ ವೀಡಿಯೊ ವರದಿ ಮಾಡಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

ಇನ್ನು ನಮ್ಮ ಹುಡುಕಾಟದ ಸಂದರ್ಭ ಬಾಂಗ್ಲಾದೇಶದ ಮಾಧ್ಯಮ ಸಂಸ್ಥೆ, DU News ವೈರಲ್ ಹಕ್ಕನ್ನು ಸುಳ್ಳು ಎಂದು ತನ್ನ ಫೇಸ್​ಬುಕ್ ಪೇಜ್​ನಲ್ಲಿ ಬರೆದುಕೊಂಡಿದೆ. ‘‘ಮಹಿಳಾ ಜಮಾತ್ ಕಾರ್ಯಕರ್ತೆಯೊಬ್ಬರನ್ನು ಥಳಿಸಲಾಗಿದೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಆದರೆ ಪರಿಶೀಲನೆಯು ಈ ಹೇಳಿಕೆ ನಿಜವಲ್ಲ ಎಂದು ತೋರಿಸಿದೆ. ಮೊಬೈಲ್ ಫೋನ್ ಕದ್ದ ಆರೋಪದ ಮೇಲೆ ಅವರನ್ನು ವಾಸ್ತವವಾಗಿ ತಂಗೈಲ್ ಜನರಲ್ ಆಸ್ಪತ್ರೆಯಲ್ಲಿ ಬಂಧಿಸಲಾಗಿದೆ.’’ ಎಂದು ಬರೆಯಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬಾಂಗ್ಲಾದೇಶದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಬಿಎನ್‌ಪಿ ಬೆಂಬಲಿಗರಿಂದ ಮಹಿಳಾ ಜಮಾತೆ-ಇ-ಇಸ್ಲಾಮಿ ಕಾರ್ಯಕರ್ತೆಯೊಬ್ಬರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Iranian missile strikes a US base in Kuwait? No, here are the facts

Fact Check: ബംഗ്ലാദേശ് കുടിയേറ്റക്കാര്‍ക്കെതിരെ വെടിയുതിര്‍ത്ത് ബിഎസ്എഫ് സൈനികര്‍? വീഡിയോയുടെ സത്യമറിയാം

Fact Check: திருமாவளவன், திருப்பதியில் காவி உடை அணிந்து சாமி தரிசனம் செய்தாரா? உண்மை என்ன

Fact Check: ಆರ್​ಬಿಐ 500 ರೂ. ನೋಟಿನ ಮೇಲೆ ಗಾಂಧೀಜಿ ಫೋಟೋ ತೆಗೆದು ಹಾಕುತ್ತಿದೆಯೇ?

Fact Check: వైరల్ అవుతున్న వీడియో గాజియాబాద్ ఘటనకు సంబంధించినది కాదు